ಕಾಮಗಾರಿ ಹಂತದಲ್ಲೇ ಬೀಳುತ್ತಿರುವ ಚರಂಡಿ ಸ್ಲಾಬ್ : ಸಾರ್ವಜನಿಕರ ಆಕ್ರೋಶ
ವಿಶೇಷ ವರದಿ
*ಮಸ್ಕಿ:-* ಪಟ್ಟಣದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 150 ಎ ರ ಡಿವೈಡರ್ ರಸ್ತೆ ಅಗಲೀಕರಣ ವಿಭಜಕ ನಿರ್ಮಾಣ ಕಾಮಗಾರಿಯನ್ನು ಅಮ್ಮಾಪುರ ಇನ್ಪ್ರಾಸ್ಟ್ರಕ್ಚರ್ ರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುತ್ತಿಗೆ ಪಡೆದು ರಸ್ತೆ ಅಗಲೀಕರಣ, ಪಾದಚಾರಿ, ಚರಂಡಿ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿದ್ದು ಈ ಕಾಮಗಾರಿಯು ಪೂರ್ಣ ಪ್ರಮಾಣದ ಕಳಪೆ ಮಟ್ಟದ ಕಾಮಗಾರಿಯಾಗಿದೆ ಹಾಗೂ ಕಾಮಗಾರಿ ಹಂತದಲ್ಲೇ ಚರಂಡಿ ಸ್ಲಾಬ್ ಬೀಳುತ್ತಿದೆ ಎತ್ತ ಸಾಗುತ್ತಿದೆ ಕಾಮಗಾರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೂ ಅನೇಕ ಸಂಘಟನಾಕಾರರು ಹಾಗೂ ಸಾರ್ವಜನಿಕರು ಸೇರಿದಂತೆ ಈ ಹಿಂದೆ ಅನೇಕ ಬಾರಿ ಹೋರಾಟ ಮಾಡಿದರೂ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯೂ ಸಮರ್ಪಕವಾಗಿ ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಹಿರಿಯ ಅಧಿಕಾರಿ ಎ.ಜಿ ಹಾವಿನಾಳ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟ ನಿಯಂತ್ರಣ ಉಪ ವಿಭಾಗ ಹುಬ್ಬಳ್ಳಿ ಅವರು ಕಳೆದ ಅ.8 2023 ರಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಹುನಗುಂದ, ವಿಜಯಪುರ ಎನ್‌ಎಚ್ 150 A ವಿಭಾಗದ ತಪಾಸಣೆ ನಡೆಸಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಆದೇಶ ಹೊರಡಿಸಿದ್ದರು.ಆದರೆ ಸ್ಥಳೀಯ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಆದರೆ ಕಾಮಗಾರಿ ಕುರಿತು ಪ್ರಶ್ನಿಸಲು ಅಧಿಕಾರಿಗಳ ಬಳಿ ಸಾರ್ವಜನಿಕರು ಹಾಗೂ ಸಂಘಟನೆಕಾರರು ಹೋದರೆ ಉಡಾಫೆ ಉತ್ತರಗಳನ್ನು ಕೊಡುತ್ತಲೇ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು. ಇನ್ನೂ ಈ ರಸ್ತೆಯು ಚಾಮರಾಜನಗರ ದಿಂದ ಬೀದರ್ ತಲುಪುವಂತಹ 150 ಎ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದ ನಂತರ ಮತ್ತು ಈಗಲೂ ಅನೇಕ ಹೆಚ್ಚು ತೂಕವಿರುವ ಲಾರಿ, ಬಸ್ , ಸೇರಿದಂತೆ ದಿನಕ್ಕೆ ಸಾವಿರಾರು ವಾಹನಗಳು ಓಡಾಡುವಂತಹ ರಸ್ತೆಯಾಗಿದ್ದು ಈ ರಸ್ತೆಯ ಗುಣಮಟ್ಟದ ಕಾಮಗಾರಿಯನ್ನು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಲಯನ್ಸ್ ಕ್ಲಬ್ ಶಾಲೆಯ ಮುಂದೆ ಹಾಗೂ ಸೋಮನಾಥ ನಗರಕ್ಕೆ ಹೋಗುವಂತ ಅಡ್ಡರಸ್ತೆಯ ಮುಂದೆ ಸೇರಿದಂತೆ ಅನೇಕ ಕಡೆ ಚರಂಡಿ ಸ್ಲಾಬ್ ಗಳು ಕ್ರ್ಯಾಕ್ ಬಂದು ಮುರಿದು ಬಿದ್ದಿರುವಂತಹ ದ್ದು ಕಂಡುಬರುತ್ತವೆ.
ಕಾಮಗಾರಿ ಹಂತದಲ್ಲೇ ಪೋಲಿಸ್ ಕ್ವಾಟ್ರಸ್ ಬಳಿ ಹಾಗೂ ಪುರಸಭೆ ಕಚೇರಿ ದಿಬ್ಬಿಯ ಬಳಿಯ ಚರಂಡಿಯೂ ದೊಪ್ಪನೆ ಬಿದ್ದಿರುವುದನ್ನು ನೋಡಬಹುದು.
ದಿನ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಎರಡೂ ಬದಿಯ ಚರಂಡಿ ಕಾಮಗಾರಿಯನ್ನು ಅಗೆದು ಕೆಲಸ ಮಾಡುತ್ತಿರುವುದರಿಂದ ಅನೇಕ ಬಾರಿ ತುರ್ತು ಚಿಕಿತ್ಸಾ ವಾಹನ (ಆಂಬುಲೆನ್ಸ್ ) ವಾಹನಗಳ ಮದ್ಯೇ ಸಿಲುಕಿರುವುದು ಗಮನಿಸಬಹುದು.ಇದರಿಂದ ದಿನ ನಿತ್ಯವೂ ಸಾವಿರಾರು ವಿದ್ಯಾರ್ಥಿಗಳ,ಸಾರ್ವಜನಿಕರ, ಶಿಕ್ಷಕರು ರಸ್ತೆ ದಾಟಲು ಹರಸಾಹಸವೇ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಅಂದಾಜು ಪಟ್ಟಿಯಲ್ಲಿನ ನಿಯಮಗಳಂತೆ ಪರ್ಯಾಯ ಮಾರ್ಗ (ರಸ್ತೆ) ನಿರ್ಮಿಸಿ ನಂತರ ಕಾಮಗಾರಿ ಚಾಲನೆ ಮಾಡಬೇಕು ಎಂಬುವ ನಿಯಮ ಇದ್ದರೂ ಎಲ್ಲವನ್ನೂ ಗಾಳಿಗೆ ತೂರಲಾಗಿದೆ.
ಈ ಕಾಮಗಾರಿಗೆ ಸಂಬಂಧಪಟ್ಟಂತೆ ಒಬ್ಬ ಅಧಿಕಾರಿಯು ಕಾಮಗಾರಿಯ ಸ್ಥಳದಲ್ಲಿ ಇಲ್ಲದಿರುವುದು ಹಾಗೂ ಅಧಿಕಾರಿಗಳು ತಮ್ಮ ಮನ ಬಂದಂತೆ ಕಾಮಗಾರಿಯನ್ನು ನಡೆಸುತ್ತಿದ್ದು ಕಾಮಗಾರಿಯ ಅಂದಾಜು ಪಟ್ಟಿಯಲ್ಲಿನ ಆದೇಶದಂತೆ ಯಾವೊಂದು ಕೆಲಸವೂ ಗುಣಮಟ್ಟದ ಕಾಮಗಾರಿ ಆಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಕಾಮಗಾರಿಯ ಬಗ್ಗೆ ಅನೇಕ ಬಾರಿ ಪತ್ರಿಕೆಯಲ್ಲಿ ಸುದ್ದಿ ಮಾಡಿದರು ಇಲ್ಲಿಯವರೆಗೂ ಅಧಿಕಾರಿಗಳು ಕಣ್ಣಿದ್ದು ಜಾಣ ಕುರುಡರಂತೆ ಇರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
*(Box)*
ಕಾಮಗಾರಿಯ ವರದಿಯನ್ನು ಬೆಂಗಳೂರುನ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕಳಿಸಲಾಗಿದೆ ಆ ವರದಿ ಬಂದ ತಕ್ಷಣ ಆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
*ಚಂದ್ರಶೇಖರ್ ನಾಯಕ ಜಿಲ್ಲಾಧಿಕಾರಿ ರಾಯಚೂರು*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ