ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ನಿರುಪಾದಿ ಕೆ. ಗೋಮರ್ಸಿ ಗೆ ಮತ ನೀಡಿ : ರವಿ ಕೃಷ್ಣಾರೆಡ್ಡಿ

ಮಸ್ಕಿ : ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ನಿರುಪಾದಿ ಕೆ ಗೋಮರ್ಸಿ ಪರವಾಗಿ ಮಸ್ಕಿ ಸೇರಿದಂತೆ ಸಿಂಧನೂರು,ಸಿರಗುಪ್ಪ  ವಿವಿಧ ಭಾಗಗಳಲ್ಲಿ ರಾಜ್ಯದ ರವಿ ಕೃಷ್ಣಾರೆಡ್ಡಿ ಯವರು ಮತಯಾಚನೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾ ರೆಡ್ಡಿ ಕಾಂಗ್ರೆಸ್ ಪಕ್ಷ ಸುಮಾರು 60 ವರ್ಷಗಳ ಕಾಲ ಕೇವಲ ಕುಟುಂಬ ರಾಜಕಾರಣ ಮಾಡ್ತಾ ಬಂದಿದ್ದು ಯಾವುದೇ ಬೆಲೆ ಇಲ್ಲ ಹಣ ಇದ್ದರೆ ಮಾತ್ರ ಈ ಪಕ್ಷದಲ್ಲಿ ಬೆಲೆ ಇದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸತ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು ಇವರ ಮಗ ಮಗಳು ಹೆಂಡತಿ ಅಳಿಯ ವ್ಯಕ್ತಿಗಳಿಗೆ ಮಾತ್ರ ಪಕ್ಷದ ಟಿಕೆಟ್ ನೀಡಿತು ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಶಾಲಾ ಕಾಲೇಜು ನಿರ್ಮಿಸಬೇಕು ಹಣದ ಆಮಿಷವಡ್ಡಿ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ, ಸಾಗಿರುವ ಸರ್ಕಾರ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ. ಹಾಗಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನ್ಯಾಯ ಅಕ್ರಮ ಬ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ,ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಯಾದ ನಿರುಪಾದಿ ಕೆ ಗೋಮರ್ಸಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು. 

ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಜೀವನ್ , ಮಹಿಳಾ ಯುವ ಘಟಕದ ರಾಜ್ಯ ಉಪಾಧ್ಯಕ್ಷೆ ಜನನಿ , ರಂಜನಿ,ಪುಷ್ಪ,ಸುನೀತಾ ,ರಮೇಶ್ ಗೌಡ , ಜಿಲ್ಲಾ ಕಾರ್ಯದರ್ಶಿ ಗಂಗಾ,ಕೆ,ಶ್ರೀಕಾಂತ್ ,ಅಯ್ಯಪ್ಪ ಮೇಟಿ, ಅಜೀದ್ ಪಾಶ, ಕೃಷ್ಣ ಸುಕಾಲಪೇಟೆ ಹಾಗು ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ