ಏರ್ಟೆಲ್ ಟವರ್ ನಿರ್ಮಾಣದಿಂದ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ

"ಕೈಬಿಡುವಂತೆ ನಿವಾಸಿಗಳಿಂದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ  ಮನವಿ"

ಕೊಟ್ಟೂರು: ಟವರ್ ನಿರ್ಮಾಣ ಕೈಬಿಡುವಂತೆ ಸಂಬಂಧಿಸಿದ ಅಧಿಕಾರಿ ಗಳಿಗೆ ಸ್ಥಳ ಪರಿಶೀಲಿಸಲು ಸೂಚಿಸಿದ್ದೇನೆ. ನಂತರ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

-ಪಪಂ. ಮುಖ್ಯಾಧಿಕಾರಿ ಮನವಿ ಸಲ್ಲಿಸಿದರು. ಗುರುವಾರದಂದು ಬಡಾವಣೆಯ ನಿವಾಸಿಗಳು ಸಲ್ಲಿಸಿದ ಮನವಿ ಪತ್ರದಲ್ಲಿ ಪ.ಪಂ ವ್ಯಾಪ್ತಿಯ ವಿದ್ಯಾನಗರದ 7ನೇ ವಾರ್ಡಿನಲ್ಲಿ ಏರ್ಟೆಲ್ ಮೊಬೈಲ್ ಟವ‌ರ್ ನಿರ್ಮಾಣದಿಂದ ವಾಸ ಮಾಡುತ್ತಿರುವ  ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತದೆ ಮತ್ತು  ಮಕ್ಕಳ ಹಾಗೂ ಪಕ್ಷಿ ಸಂಕುಲಗಳ ಜೀವಗಳಿಗೆ ಹಾನಿಯಾಗುವ ಆತಂಕ ಮತ್ತು ಅಪಾಯವಾಗುವ ಸಾಧ್ಯತೆ ಇರುವುದರಿಂದ ತಾವುಗಳು ಕೂಡಲೇ ಟವರ್ ನಿರ್ಮಾಣ ಕೈಬಿಡುವಂತೆ ಕ್ರಮ ಕೈಗೊಳ್ಳಲು ನಿವಾಸಿಗಳಾದ ದುರುಗಪ್ಪ, ಕೆ ದೇವೇಂದ್ರಪ್ಪ ಮಹೇಶ ಎಚ್‌ಎನ್ ವೀರಭದ್ರಪ್ಪ ಅರುಣ್ ಕುಮಾರ ರೇಣುಕಸ್ವಾಮಿ ಕೆಎಂ ಹಾಗೂ ಇತರ ಹಲವು ನಿವಾಸಿಗಳು ಪ.ಪಂ ಮುಖ್ಯಾಧಿಕಾರಿಗಳಾದ ತುಕಾರಾಂ ವೈ ಎಂ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ