ನರೇಗಾ ಕೂಲಿಕಾರರಿಂದ ವಿಶ್ವ ಕಾರ್ಮಿಕದಿನ ಆಚರಣೆ ಕೇಕ್ ಕತ್ತರಿಸಿ ಸಿಹಿಹಂಚಿ ಶುಭಾಶಯಗಳು ಕೋರಿದ- ಅಮರೇಶ್ ಕಾರ್ಯನಿರ್ವಾಹಕ ಅಧಿಕಾರಿ ಲಿಂಗಸ್ಗೂರು.

ಲಿಂಗಸಗೂರು :ಮೇ 1 ಗೆಜ್ಜಲಗಟ್ಟಿ ಗ್ರಾಮ ಪಂಚಾಯತಿಯ ಮಹಾತ್ಮಗಾಂಧಿ ನರೇಗಾ ಯೋಜನೆಯೂ ಗ್ರಾಮೀಣ ಪ್ರದೇಶದ ಬಡ ಕೂಲಿಕಾರರ ಆರ್ಥಿಕ ಜೀವನದ ಭದ್ರ ಬುನಾದಿಯಾಗಿದೆ. 

ಅಸಂಘಟಿತ ಕೂಲಿಕಾರರೆಂದೆ ಕರೆಸಿಕೊಳ್ಳುವ ನರೇಗಾ ಕೂಲಿಕಾರರು ಪ್ರತಿನಿತ್ಯ ವಿಭಿನ್ನವಾದ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೂ ಸಹ ಗ್ರಾಮಸ್ಥರೆಲ್ಲರೂ ಸೇರಿ ಒಂದು ಕಡೆ ಕೆಲಸ ಮಾಡುವುದರಿಂದ ಗ್ರಾಮೀಣ ಪ್ರದೇಶದ ಸೊಗಡನ್ನು ನಾವು ನರೇಗಾ ಕಾಮಗಾರಿಗಳಲ್ಲಿ ಕಾಣಬಹುದು, ಇದರಿಂದಾಗಿ ಆರ್ಥಿಕ ಸಧೃಡತೆಯ ಜೊತೆಗೆ ಸಾಮಾಜಿಕ ಜೀವನದಲ್ಲಿಯೂ ಸಹ ಬೆರೆಯುತ್ತಾ ಬೆಸರವಿಲ್ಲದೇ ಮಹಾತ್ಮಗಾಂಧಿ ನರೇಗಾ ಕಾಮಗಾರಿಯನ್ನು ಮಾಡುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮ ಪಂಚಾಯತಿಯಲ್ಲಿ ಪ್ರತೀವರ್ಷ ಸಾವಿರಾರು ಕೂಲಿಕಾರರು ಕೆಲಸ ಮಾಡುತ್ತಾ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. 

ಈ ವರ್ಷ ಕೂಲಿಕಾರರೆಲ್ಲ ಒಂದು ಗೂಡಿ ಕೇಕ್ ಕತ್ತರಿಸಿ,ಸಿಹಿ ಹಂಚಿ ಕೂಲಿಕಾರರಿಗೆಲ್ಲ ಒಳ್ಳೆಯದಾಗಲಿ ಎಂದು ಹರಸಿದರು

ವೆಂಕಟೇಶ ದೇಸಾಯಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ )ತಾಲೂಕು ಪಂಚಾಯತ್ ಲಿಂಗಸಗೂರು ಮಾತನಾಡಿ. ಮಹಾತ್ಮಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಕೂಲಿಕಾರರರು ವಲಸೆ ಹೊಗಬಾರದೆಂದು ಜಾರಿಯಾದ ಮಹಾತ್ವಾಕಾಂಕ್ಷಿ ಯೋಜನೆಯಲ್ಲೊಂದು, ಒಂದು ಕುಟುಂಭಕ್ಕೆ 100 ದಿನಗಳ ಖಾತ್ರಿ ಕೆಲಸಬನ್ನು ಗ್ರಾಮ ಪಂಚಾಯತಿಯಿಂದ ನೀಡಲಾಗುತ್ತದೆ,ಅದನ್ನು ಎಲ್ಲರೂ ಪಡೆದುಕೊಳ್ಳಬೇಕು ಅದೇ ರೀತಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ.316 ರಿಂದ ರೂ.349 ಕೂಲಿ ಆಗಿದ್ದು ಇದರಿಂದಾಗಿ ಗ್ರಾಮೀಣ ಪ್ರದೇಶದ ಒಂದು ಕುಟುಂಬ ಅಂದರೆ (ಕನಿಷ್ಟ ಇಬ್ಬರು)ಒಂದು ದಿನ ನರೇಗಾ ಕಾಮಗಾರಿ ನಿರ್ವಹಿಸಿದರೆ ರೂ.698 ಕೂಲಿ ದೊರೆಯುತ್ತದೆ ಅದಕ್ಕಾಗಿ ಗ್ರಾಮೀಣ ಪ್ರದೇಶದ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕಾಮಗಾರಿಯಲ್ಲಿ ತೋಡಗಬೇಕು. ಕೂಲಿಕಾರರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕರೆತರದೇ, 07 ತಿಂಗಳಿಂದ 03 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿಯೇ ಇರಿಸಬೇಕು.ಅಲ್ಲಿ ಪೌಷ್ಠಿಕ ಆಹಾರ, ಆಟೋಪಚಾರ ನೀಡಲಾಗುತ್ತದೆ ಮತ್ತು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು.                       

ಚುನಾವಣಾ ಜಾಗೃತಿ ಭಾರತ ಚುನಾವಣಾ ಆಯೋಗ 2024, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ರಾಯಚೂರು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ ತಾಲೂಕು ಸ್ವಿಪ್ ಸಮಿತಿ 2024 ರ ಲಿಂಗಸಗೂರು ವತಿಯಿಂದ.ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ *ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ* ಮೂಡಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ಮತದಾರರ ಪ್ರತಿಜ್ಞಾ ವಿಧಿ ಭೋಧನೆ ಮಾಡಿದರು

ಈ ಸಂದರ್ಭದಲ್ಲಿ ಗುರುಸಿದ್ದಪ್ಪ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಾಲಪ್ಪ ಟಿಐಇಸಿ. ರಾಘವೇಂದ್ರ ತಾಂತ್ರಿಕ ಸಹಾಯಕರು,ಈರಪ್ಪ 

ಟಿಪಿಎಮ್. 

ಎನ್ ಆರ್ ಎಲ್ ಎಮ್,ಬಸವರಾಜ್. ಕೌಶಲ್ಯ,ಎನ್ ಆರ್ ಎಲ್ ಎಮ್.ಶಿವಪುತ್ರ ಬಿ. ಎಫ್.ಟಿ. ವೆಂಕಪ್ಪ ಕರಾವಸಾಲಿ ಗಾರ ಹಾಗೂ ಮೇಟ್ಸ್ ಮತ್ತು ಕೊಲಿ ಕಾರರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ