ಹಟ್ಟಿ ಸಂತೆ ಮಾರುಕಟ್ಟೆಗೆ ಲಕ್ಷಾಂತರ ರೂಪಾಯಿ ಆದಾಯ ಬಂದರು ರೈತ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸ್ಥಳವಿಲ್ಲ.
ಲಿಂಗಸ್ಗೂರು : ತಾಲ್ಲೂಕಿನ ಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಸಂತೆ ಬಜಾರ್ ಪ್ರತಿ ಭಾನುವಾರ ನಡೆಯುವ ಸಂತೆಗೆ ಹಟ್ಟಿ ಸುತ್ತಮುತ್ತಲಿನ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳು ವ್ಯಾಪಾರ ಆಗು ವೈವಾಟು ಮಾಡುವುದಕ್ಕೆ ಪ್ರತಿ ಭಾನುವಾರ ಹಟ್ಟಿಗೆ ಬರುತ್ತಾರೆ.ಆದರೆ ಹಟ್ಟಿ ಪಟ್ಟಣ ಪಂಚಾಯತಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹರಾಜಿನ ರೂಪದಲ್ಲಿ ಆದಾಯ ಬರುತ್ತಿದ್ದರು ರೈತರು ಬೆಳೆದ ಬೆಳೆಯನ್ನು ತಂದು ಮಾರಾಟ ಮಾಡಲು ಭಾನುವಾರದಂದು ಹಟ್ಟಿ ಪಟ್ಟಣದ ಸಂತೆಯಲ್ಲಿ ಕುಳಿತು ವ್ಯಾಪಾರ ಮಾಡಲು ಸ್ಥಳವಿಲ್ಲದ ಪರಿಸ್ಥಿತಿಯಾಗಿದೆ.
ಮಾರುಕಟ್ಟೆ ವಿಶಾಲವಾದ ಜಾಗವನ್ನು ಹೊಂದಿದ್ದರು ಮಾರುಕಟ್ಟೆಯ ಸುತ್ತಮುತ್ತ ಇರುವ ಮನೆಗಳ ಒತ್ತುವರಿ ಮತ್ತು ಎಪಿಎಂಸಿ ನಿರ್ಮಾಣ ಮಾಡಿದ ಸೆಡ್ ಅನ್ನು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ರೈತರು ವ್ಯಾಪಾರ ಮಾಡಲು ಬಂದು ಕೂಡಬೇಕಾದ ಸ್ಥಳದಲ್ಲಿ ಸುತ್ತಮುತ್ತಲಿನ ಕಾಲುವೆಯ ನೀರು ಹರಿದು ಮಾರುಕಟ್ಟೆ ಮಧ್ಯದಲ್ಲಿ ಆಯ್ದು ಹೋಗುತ್ತಿರುವುದರಿಂದ,
ಮಳೆ ಬಂದರೆ ಮಾರುಕಟ್ಟೆಯಲ್ಲಿ ನಿಲ್ಲುವಂತ ಮಳೆ ನೀರುನಿಂದ ಕೆಸರುಗದ್ದೆಯಂತೆ ಆಗುತ್ತಿರುವ ಮಾರುಕಟ್ಟೆ,ಇಷ್ಟೊಂದು ಸಮಸ್ಯೆ ಇದ್ದರೂ ಹಟ್ಟಿ ಪಟ್ಟಣ ಪಂಚಾಯತಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರು ಹಟ್ಟಿ ಪಟ್ಟಣ ಪಂಚಾಯತಿಗೆ ಸಂಬಂಧಿಸಿದ ಮಾರುಕಟ್ಟೆಯ ಸ್ಥಳ ಅಭಿವೃದ್ಧಿ ಕಾಣದೆ ಹಾಗೆ ಉಳಿದಿರುವುದು ಅಧಿಕಾರಿಗಳ ಮತ್ತು ಸ್ಥಳೀಯ ಪಟ್ಟಣ ಪಂಚಾಯತಿಯ ಸದಸ್ಯರ ನಿರ್ಲಕ್ಷವಾಗಿದೆ,
ರೈತರು ಬೆಳೆದ ಕಾಯಿ ಪಲ್ಯ ಪದಾರ್ಥವನ್ನು ತಂದು ಮಾರಲು ಸ್ಥಳವಿಲ್ಲದೆ ಹಟ್ಟಿ ಪಟ್ಟಣದ ಮುಖ್ಯರಸ್ತೆ ಮತ್ತು ಬಸ್ ನಿಲ್ದಾಣದ ರಸ್ತೆ ಬದಿ ಕುಳಿತು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆ ಟೆಂಡರ್ ಪಡೆದ ಟೆಂಡರ್ದಾರರು ಎಷ್ಟು ಸಲ ಮುಖ್ಯ ಅಧಿಕಾರಿಗಳಿಗೆ ಮಾರುಕಟ್ಟೆಯನ್ನು ಸ್ವಚ್ಛ ಮಾಡಿಕೊಡಿ ಎಂದು ಹೇಳಿದರು ಕ್ಯಾರೇ ಅನ್ನದೆ,ನಿರ್ಲಕ್ಷ ತೂರುತ್ತಿರುವ ಅಧಿಕಾರಿಗಳು ಸುತ್ತಮುತ್ತಲಿನ ನಿವಾಸಿಗಳು ಮಾರುಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ಮುರುಕಲಾದ ಡಬ್ಬಗಳು,ಕಟ್ಟಿಗೆಗಳು, ಮಾರುಕಟ್ಟೆಯನ್ನು ಕಬ್ಜ ಮಾಡಿಕೊಂಡು ಉಸುಗನ್ನು ಹಾಕಿರುವುದು ಆ ಸ್ಥಳದಲ್ಲಿ ಕಾಣಬಹುದು
ಮಾರುಕಟ್ಟೆ ಒತ್ತುವರಿಯದ ಕಾರಣ ರಸ್ತೆ ಬದಿಯಲ್ಲಿ ಕುಂತು ವ್ಯಾಪಾರ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಇಲ್ಲಿಯ ವ್ಯಾಪಾರಸ್ಥರು ಹೇಳುತ್ತಾರೆ.
ಮಾರುಕಟ್ಟೆಗೆ ಖರೀದಿಗೆ ಬರುವ ಗ್ರಾಹಕರು,ವ್ಯಾಪಾರಸ್ಥರು ಕಸದಿಂದ ತುಂಬಿರುವ ಕಾಲುವೆ ನೀರಿನ ದುರ್ವಾಸನೆಯಿಂದ ಪ್ರತಿ ಭಾನುವಾರ ವ್ಯಾಪಾರ ಮಾಡುವ ಅನಿವಾರ್ಯತೆ ಎದುರಾಗಿದೆ.
ಹಟ್ಟಿ ಪಟ್ಟಣ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷತನ ದಿಂದ ವ್ಯಾಪಾರಸ್ಥರು ಖರೀದಿದಾರರಿಗೆ ಪ್ರತಿ ಭಾನುವಾರ ತಪ್ಪದ ಗೋಳಾಗಿದೆ.
ವ್ಯಾಪಾರ ಮಾಡಲು ಬಂದಂತ ರೈತರಿಗೆ ಮತ್ತು ಗ್ರಾಹಕರಿಗೆ ಕುಡಿಯೋ ನೀರು ಶೌಚಾಲಯದ ವ್ಯವಸ್ಥೆಯೇ ಇಲ್ಲಿಯವರೆಗೆ ಹಟ್ಟಿ ಪಟ್ಟಣ ಪಂಚಾಯತಿಯು ಮಾಡದೆ ನಿರ್ಲಕ್ಷ ತೂರುತ್ತಿರುವುದು ಏಕೆ..?
ಪಟ್ಟಣ ಪಂಚಾಯತಿಯ ಲಿಂಗಸ್ಗೂರು ಆಡಳಿತ ಅಧಿಕಾರಿಗಳಾದ ತಹಸಿಲ್ದಾರ್ ಇವರು ಹಟ್ಟಿ ಪಟ್ಟಣ ಪಂಚಾಯತಿಯ ಸಂತೆ ಬಜಾರ್ ಗೆ ಭೇಟಿ ನೀಡಿ ಒತ್ತುವರಿಯಾದ ಮಾರುಕಟ್ಟೆಯ ಜಾಗ, ಮಾರುಕಟ್ಟೆಯಲ್ಲಿ ಹಾಕಿರುವ ಕಟ್ಟಿಗೆಗಳು,ಮುರುಕಲಾದ ಡಬ್ಬಅಂಗಡಿ, ಎಪಿಎಂಸಿ ನಿರ್ಮಾಣ ಮಾಡಿರುವ ಶೆಡ್ಡಿನಲ್ಲಿ ಅತಿಕ್ರಮಣ ಮಾಡಿ ಹಾಕಿರುವ ವಸ್ತುಗಳನ್ನು ತೆರುಗೊಳಿಸಿ ವ್ಯಾಪಾರಸ್ಥರಿಗೆ ಮತ್ತು ಖರೀದಿದಾರರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವವರಿಗೆ ಮಾರುಕಟ್ಟೆಯಲ್ಲಿ ಕುಂತು ವ್ಯಾಪಾರ ಮಾಡಲು ಅನುಕೂಲ ಮಾಡುವ ರೀತಿಯಲ್ಲಿ ತಾವುಗಳು ಗಮನಹರಿಸಬೇಕೆಂದು ಇಲ್ಲಿಯ ಮಾರುಕಟ್ಟೆಗೆ ಬರುವ ರೈತ ವ್ಯಾಪಾರಸ್ಥರ ಮತ್ತು ಖರೀದಿದಾರರ ಒತ್ತಾಯವಾಗಿದೆ
ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಬಂದರೂ ಮಾರುಕಟ್ಟೆ ಅಭಿವೃದ್ಧಿ ಕಾಣದೆ ಬಂದಿರುವ ಹಣ ಎಲ್ಲಿಗೆ ಹೋಯಿತು ಅನ್ನುವದೆ ಯಕ್ಷ ಪ್ರಶ್ನೆಯಾಗಿದೆ...?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ