ನಿಂಬಳಗೇರಿ ಹಾಲು ಒಕ್ಕೂಟದಿಂದ ಮೇವಿನ ಬೀಜ ವಿತರಣೆ
೨೨ ಕೊಟ್ಟೂರು ೦೨
ಹಿಂದಿನ ವರ್ಷ ಮಳೆ ಇಲ್ಲದೆ ಮೇವಿನ ಕೊರತೆ ಎದುರಾಗುತ್ತಿರುವುದರಿಂದ ಹೈನುಗಾರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು ಇದನ್ನು ಮನಗಂಡು ಕೊಟ್ಟೂರು ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಹಾಲು ಉತ್ವಾದಕರಿಗೆ ಸಂಘದ ವತಿಯಿಂದ ಉಚಿತವಾಗಿ ಹಾಲು ಉತ್ಪಾದಕರ ಸಹಕಾರರ ಸಂಘಧ ಸದಸ್ಯರಿಗೆ ಮೆಕ್ಕೆಜೋಳದ ಬೀಜ ಒಂದು ಬಾರಿ ಕಟಾವಿಗೆ ಬಂದರೆ ಅದೆ ಜೋಳದ ಬೀಜ ಮೂರು ಬಾರಿ ಕಟಾವು ಮಾಡಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಗೆ ಉಚಿತವಾಗಿ ಮೇವಿನ ಬೀಜವನ್ನು ವಿತರಣೆ ಮಾಡಲಾಗಿದೆ ಹೈನುಗಾರಿಕೆಯ ರೈತರಿಗೆ ನಷ್ಟವನ್ನು ತುಂಬಲು ಹಸಿರು ಮೇವಿನ ಅವಶ್ಯಕತೆ ಇರುವುದರಿಂದ ಈ ಬೀಜಗಳನ್ನು ರೈತರಿಗೆ ಉಚಿತವಾಗಿ ಕೊಟ್ಟು ಬೀಜವನ್ನು ಬಿತ್ತನೆ ಮಾಡಿ ಬಹು ಬೇಗನೆ ಕಟಾವಿಗೆ ಬರುವುದರಿಂದ ಮತ್ತು ಹಾಲಿನ ಇಳುವರಿಯು ಕೂಡ ಹೆಚ್ಚಾಗುವುದಿಂದ ಈ ಮೇವಿನ ಬೀಜವನ್ನು ವಿತರಿಸಿ ರೈತರಿಗೆ ಅನುಕೂಲಮಾಡಿಕೊಟ್ಟಿದ್ದಾರೆ
ಈ ಒಂದು ಯೋಜನೆ ಜಾರಿಗೆ ತಂದು ಹೈನುಗಾ ಹಿತ ಕಾಪಾಡುವಲ್ಲಿ ನಮ್ಮ ನೆಚ್ಚಿನ ಕೆ ಎಂ ಎಫ್ ಅಧ್ಯಕ್ಷರು ಹಾಗೂ ರಾಯಾಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಎಸ್.ಭೀಮನಾಯ್ಕ್ ಸರ್ ಅವರಿಗೆ ರೈತರು ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ.
ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಎನ್.ಜಿ ಮಲ್ಲಿಕಾರ್ಜುನ ಗೌಡ ಉಪಾಧ್ಯಕ್ಷರಾದ ಎಮ್ ಹನುಮಂತಪ್ಪ ಮತ್ತು ನಿರ್ದೇಶಕು ಕಾರ್ಯದರ್ಶಿ ಇವರು ಎಲ್ಲರೂ ಸೇರಿ ಹಾಲು ಉತ್ಪಾದಕರಿಗೆ ಮೇವಿನ ಬೀಜವನ್ನು ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ