ಕಾಂಗ್ರೆಸ್- ಬಿಜೆಪಿಗೆ ಬುದ್ಧಿ ಕಲಿಸಿ : ಎಂ. ಕೃಷ್ಣಮೂರ್ತಿ
ವರದಿ - ಮಂಜುನಾಥ ಕೊಳೂರು ಕೊಪ್ಪಳ
ಕೊಪ್ಪಳ : - ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಿ ಬಿಎಸ್ ಪಿ ಪಕ್ಷವನ್ನು ಬೆಂಬಲಿಸುವಂತೆ ಬಹುಜನ ಸಮಾಜ ಪಾರ್ಟಿ ( ಬಿಎಸ್ಪಿ) ಪಕ್ಷದ ಕರ್ನಾಟಕ ಉಸ್ತುವಾರಿ ಹಾಗೂ ಸಂಯೋಜಕ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ಯೆಶಿಸಿ ಮಾತನಾಡಿ ಈ ದೇಶದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಆಡಳಿತ ನಡೆಸಿದ್ದು,ಬಿಎಸ್ಪಿ ಪಕ್ಷಕ್ಕೆ ಒಂದು ಅವಕಾಶ ನೀಡಿ, ಬಿಎಸ್ಪಿ ಪಕ್ಷವು ದೇಶದ ಅತಿ ದೊಡ್ಡ ರಾಷ್ಟ್ರೀಯ ಮೂರನೇ ಪಕ್ಷವಾಗಿದೆ,ಎಂದ ಅವರು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ,ಉದ್ಯೋಗ ಖಾತ್ರಿಯಲ್ಲಿ ಅಕ್ರಮವಾಗಿದೆ,ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡವಿಲ್ಲದಾಗಿದೆ, ಪ್ರಾಮಾಣಿಕ ಹೋರಾಟಕ್ಕೆ ಬಿಎಸ್ಪಿ ಯನ್ನು ಬೆಂಬಲಿಸಿ, ಜೆಡಿಎಸ್ ಪಕ್ಷದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ನ್ಯಾಯಯುತವಾದ ತನಿಖೆಯಾಗುತ್ತಿಲ್ಲ ಅವರ ವಿರುದ್ಧ ನ್ಯಾಯಯುತ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಪಕ್ಷದ ಅಭ್ಯರ್ಥಿ ಶಂಕರ್ ಸಿದ್ದಾಪುರ ಮಾತನಾಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ ) ಬೆಂಬಲಿಸಿ, ಗಂಗಾವತಿಯನ್ನು ನೂತನ ಕಿಷ್ಕಿಂದ ಜಿಲ್ಲಾ ಕೇಂದ್ರವಾಗಿಸುವುದು, ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಲು ಇಲ್ಲಿನ ಜನಪ್ರತಿನಿಧಿಗಳು ಮತ್ತು ಸರ್ಕಾರ ವಿಫಲವಾಗಿವೆ,ಸೇರಿದಂತೆ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಈ ಬಾರಿ ಬಿಎಸ್ಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಮುಖಂಡರಾದ ಕೆ.ಎಸ್ ಮೈಲಾರಪ್ಪ, ಬಿ ಎಸ್ ಪಿ ಪಕ್ಷದ ಕಾರ್ಯದರ್ಶಿಗಳಾದ ಶಿವಪುತ್ರಪ್ಪ ಗುಮಗೇರಿ, ಎಂ. ಕೆ ಜಗ್ಗೇಶ್ ಮೌರ್ಯ , ಬಿ. ಎಸ್. ಪಿ ಜಿಲ್ಲಾ ಸಂಯೋಜಕ ಹುಲಿಗೇಶ್ ದೇವರಮನಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ