ಸಿ.ಪಿ.ಐ. (ಎಮ್.ಎಲ್.) ಲಿಬರೇಶನ್ ಪಕ್ಷವು ಇಂಡಿಯಾ ಒಕ್ಕೂಟದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಈ ತುಕಾರಾಮ್ ಇವರಿಗೆ ಬೆಂಬಲ

ಕೊಟ್ಟೂರು : 2024ರ ಲೋಕಸಭಾ ಚುನಾವಣೆ ಭಾರತದ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ನಮ್ಮ ಪ್ರಜಾಸತ್ತಾತ್ಮಕ ಗಣರಾಜ್ಯದ ಸಾಂವಿಧಾನಿಕ ಚೌಕಟ್ಟೆ ಅಪಾಯದಲ್ಲಿದೆ. ಇದು ಎರಡು ಪಕ್ಷಗಳ ನಡುವಿನ ಚುನಾವಣೆಯಲ್ಲ; ಇದು ಜನಪರ ಪ್ರಜಾಪ್ರಭುತ್ವ ಮತ್ತು ಜನವಿರೋಧಿಯಾಗಿರುವ ಕಾರ್ಪೊರೇಟ್, ಕೋಮುವಾದಿ, ಜಾತಿವಾದಿ ಫ್ಯಾಸಿಸಂನ ನಡುವಿನ ಚುನಾವಣೆಯಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ, ಮೋದಿ ಸರ್ಕಾರವು ಭಾರತೀಯರು ಕಷ್ಟಪಟ್ಟು ಗಳಿಸಿದ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂಸ್ಥೆಗಳನ್ನು ನಾಶ ಮಾಡುತ್ತಾ ಬಂದಿದೆ. ಜನರನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆ. ಅಲ್ಲದೇ ಈ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಕಾರ್ಪೊರೇಟ್ ಲೂಟಿ ಅತಿಹೆಚ್ಚಾಗಿರುವುದನ್ನು ನೋಡುತ್ತಿದ್ದೇವೆ.

ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತವನ್ನು ನಿರ್ಮಿಸಲು ನಾವು ಈ ಚುನಾವಣೆಯನ್ನು ಅಸ್ತ್ರವಾಗಿಸೋಣ ಮತ್ತು ಆ ಮೂಲಕ ಸಮಾಜವಾದಿ, ಜ್ಯಾತ್ಯಾತೀತ, ಪ್ರಜಾಪ್ರಭುತ್ವ ಗಣತಂತ್ರವನ್ನು ರಕ್ಷಿಸೋಣ. ಭಗತ್ ಸಿಂಗ್ ಮತ್ತು ಇತರೆ ಸಾವಿರಾರು ಜನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿ ಹುತಾತ್ಮರಾದರು. ಬ್ರಿಟೀಷರನ್ನು ಭಾರತದಿಂದ ತೊಲಗಿಸುವುದಲ್ಲದೆ ಧರ್ಮ-ಜಾತಿ ವಿಭಜನೆಗೆ ಅವಕಾಶ ಮಾಡಿಕೊಡದ ಸಮಾಜವಾದಿ ಸಮಾಜವನ್ನು ನಿರ್ಮಿಸಲು ತಮ್ಮ ಪ್ರಾಣ ತ್ಯಾಗ ಮಾಡಿದರು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಾತಿ ವಿನಾಶಕ್ಕಾಗಿ ಕರೆ ನೀಡಿದ್ದರು. ಸಾರ್ವತ್ರಿಕ ವಯಸ್ಕ ಮತದಾನಾಧಿಕಾರವನ್ನು ನಿರ್ಲಕ್ಷಿಸದೆ ಆರ್ಥಿಕ-ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಲು ತಿಳಿಸಿದರು. ಇದನ್ನು ಹಿಡಿತದಲ್ಲಿಡದಿದ್ದರೆ ಮತ-ಸಮಾನತೆಯನ್ನು ಅರ್ಥರಹಿತವಾಗಿಸುವುದು ಎಂದು ಹೇಳಿದರು. ಇಬ್ಬರೂ ಸಹ ಬಂಡವಾಳಶಾಹಿ ಮತ್ತು ಬ್ರಾಹ್ಮಣವಾದವು ಭಾರತೀಯರ ಶತ್ರು ಎಂದು ಸರಿಯಾಗಿ ಗುರುತಿಸಿದರು ಮತ್ತು ನಿಜವಾದ ಬದಲಾವಣೆ ತರಲು ದುಡಿಯುವ ವರ್ಗದ, ಕೃಷಿಕೂಲಿಕಾರರ ಮತ್ತು ಐತಿಹಾಸಿಕವಾಗಿ ತುಳಿತಕ್ಕೊಳಪಟ್ಟ ಜನರ ಐಕ್ಯ ಹೋರಾಟವೇ ದಾರಿ ಎಂದು ಹೇಳಿದ್ದರು.

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಿ.ಪಿ.ಐ. (ಎಮ್.ಎಲ್.) ಲಿಬರೇಶನ್ ಪಕ್ಷವು ಇಂಡಿಯಾ ಒಕ್ಕೂಟದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ತುಕಾರಾಮ್ ಈ ಇವರನ್ನು ಬೆಂಬಲಿಸುತ್ತದೆ.ಎಂದು ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಜಿಲ್ಲಾ ಸದಸ್ಯ ಟಿ ಅಜ್ಜಪ್ಪ, ಹೆಚ್ ಪರಸಪ್ಪ, ಎಚ್ ಬಿ ಹಾಲಯ್ಯ, ಹಾಗೂ ಕಾರ್ಯಕರ್ತರ ಜೊತೆಯಲ್ಲಿ ಪತ್ರಿಕೆಗೆ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ