ಕೊಟ್ಟೂರು ಪಟ್ಟಣದಲ್ಲಿ "ಕಲುಷಿತ ನೀರು ಪೂರೈಕೆ ಜನರಿಗೆ ಆತಂಕ"
ಕೊಟ್ಟೂರು: ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ ಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಹತ್ತಿರದ ತುಂಗ ಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಸರಿ ಸುಮಾರು 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.
ಕೆಲವು ಬಡಾವಣೆ ಹೊರತುಪಡಿಸಿ ಉಳಿದ ಎಲ್ಲಾ ವಾರ್ಡ್‌ಗಳಿಗೆ ತುಂಗ ಭದ್ರಾ ನದಿ ನೀರೇ,ಆಸರೆ. ಬೇಸಿಗೆ ಸಂದರ್ಭದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದಾಗಲೂ ಕಲುಷಿತ ನೀರು ಪೂರೈಕೆಯಾಗಿರಲಿಲ್ಲ. ಕಳೆದ 10 ದಿನಗಳಿಂದ ಮಾತ್ರ ಪಟ್ಟಣಕ್ಕೆ ನಿತ್ಯ ಕಲುಷಿತಗೊಂಡ ನೀರು ಪೂರೈಕೆಯಾಗುತ್ತಿದೆ.
ಇದರಿಂದ ಸಾರ್ವಜನಿಕರು ಆತಂಕಪಡುವಂತಾಗಿದೆ. ಹಗರಿಬೊಮ್ಮನಹಳ್ಳಿ ಶುದ್ಧೀಕರಿಸಿದ ಘಟಕ ಬಳಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಜನರು ನಿತ್ಯ ಕಲುಷಿತ ನೀರೇ ಕುಡಿಯುವಂತಾಗಿದೆ. ಪಟ್ಟಣದಲ್ಲಿ ಬಹುತೇಕ ಕಡೆ ನೀರಿನ ಪೈಪ್ ಒಡೆದು ಮಳೆ ನೀರು, ಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕಳೆದ ಇಂದಿನ ವಾರ ರಾತ್ರಿ ಮುದುಕನ ಕಟ್ಟೆ, ವಾಲ್ಮೀಕಿ ನಗರ ,ರಾಜೀವ್ ನಗರ ಬಡಾವಣೆಯಲ್ಲಿ , ಇನ್ನು ಅನೇಕ ಕಡೆ ವಾರ್ಡ್ಗಳಲ್ಲಿ ನೀರು ಪೂರೈಕೆ ಮಾಡುವ ನಳಗಳಲ್ಲಿ ನೊರೆ ಬಂದಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಪಟ್ಟಣದ ಜನರು ಶುದ್ಧ ನೀರು ಖರೀದಿಸುವಂತಹ ಅನಿವಾರ್ಯತೆ ಎದುರಾಗಿದೆ. ಪ್ರತಿ ಕ್ಯಾನ್ ನೀರಿಗೆ 30-40 ರೂ. ದರ ನಿಗದಿ ಮಾಡಲಾಗಿದೆ. ತುಂಗ ಭದ್ರಾ ನದಿ ನೀರು ಕೇವಲ ಬಟ್ಟೆಬರೆ ತೊಳೆಯಲು ಬಳಸಲಾಗುತ್ತಿದೆ. ಆದ್ದರಿಂದ ಎಲ್ಲಾ ವಾರ್ಡ್ ಗಳಲ್ಲಿ ನೀರಿನ ಪೈಪ್ ಲೈನ್ ದುರಸ್ತಿ ಸರಿಪಡಿಸಿ ಹಾಗೂ ಸರಿಯಾಗಿ ನೀರು ಶುದ್ಧೀಕರಿಸಿ ಪೂರೈಸಬೇಕು ಎಂದು ನಾಗರಿಕರಾದ ಕೊಟ್ರೇಶ್, ದುರ್ಗೇಶ್, ಡಿಎಸ್ಎಸ್ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್, ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ -1
ತುಂಗಭದ್ರಾ ನದಿಯಿಂದ ಒಂದು ತಿಂಗಳ ನಿಂತಿರುವ ನೀರನ್ನು ಕಳಿಸಿರುವುದನ್ನು ಹಗರಿಬೊಮ್ಮನಹಳ್ಳಿ ಶುದ್ದೀಕರಿಸುವ ಘಟಕದಲ್ಲಿ ಶುದ್ಧೀಕರಿಸಿ ಕಳಿಸಲಾಗುತ್ತದೆ. ಕುಡಿಯಲಿಕ್ಕೆ ಯೋಗ್ಯವಿದೆ ನೀರನ್ನು ಪರೀಕ್ಷಿಸಿ ಮಾಡಲಾಗಿದೆ ಆದರೂ ಕುಡಿಯುವ ನೀರು ಹಸಿರು ಬಣ್ಣ ಹಾಗೂ ದುರ್ವಾಸನೆ ಇರುವುದರಿಂದ ನೀರನ್ನು ಕುದಿಸಿದ ನೀರನ್ನು ಕುಡಿಯುವಂತೆ ಪ್ರತಿದಿನ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.ಎಂದು
ಕೊಟ್ಟೂರು ಪಟ್ಟಣ ಪಂಚಾಯಿತಿ ಇಂಜಿನಿಯರ್ ಸಲೋಮಿ ನಿಹಾರಿಕ
ಕೊಟ್ -2
ಜನರು ನಿತ್ಯ ಕಲುಷಿತ ನೀರೇ ಕುಡಿಯುವಂತಾಗಿದೆ. ಪಟ್ಟಣದಲ್ಲಿ ಬಹುತೇಕ ಕಡೆ ನೀರು,ಬಾಲಾಜಿ ಕಲ್ಯಾಣ ಮಂಟಪದ ಹತ್ತಿರ ಇರುವ ದರಿತ ಕಾಲೋನಿಯಲ್ಲಿ ಚರಂಡಿ ನೀರು ಸೇರಿ ಕಲುಷಿತ ಗೊಳ್ಳುತ್ತಿದೆ. ಮತ್ತು ಸಣ್ಣ ಮಕ್ಕಳ ಅಂಗನವಾಡಿ ಕೇಂದ್ರವು ಬಳಿ ಗಬ್ಬು ನಾರುತ್ತಿರುವ ಚರಂಡಿಯ ವಾಸನೆ ಇದೆ ಈ ವಾರ್ಡಿನ ಜನ ಪ್ರತಿನಿಧಿಗೆ ತಿಳಿಸಿದರೆ ನೀನು ನನಗೇನು ಓಟು ಹಾಕಿಲ್ಲ ಎಂದು ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ . ಎಂದು ಸಿಪಿಐ ತಾಲೂಕು ಕಾರ್ಯಕರ್ತ ಅಂಜಿನಿ, ಆರೋಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ