ವಿವಿಧ ಬೇಡಿಕೆ ಈಡೇರಿಕೆಗೆ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಒತ್ತಾಯ
ಮಸ್ಕಿ : ತಾಲೂಕಿನ ಗೌಡನಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಿಗಾನೂರು ಗ್ರಾಮದ (ಹೊಸ ಏರಿಯಾದಲ್ಲಿ) ಕುಡಿಯುವ ನೀರು ತಕ್ಷಣವೇ ಒದಗಿಸಿ ಹಾಗೂ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (AIARLA) ಪ್ರತಿಭಟನಾ ಮೆರವಣಿಗೆ ಮೂಲಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಮಸ್ಕಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.
ಮಸ್ಕಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಬರಗಾಲದ ಕರಿಛಾಯೆ ಆವರಿಸಿದೆ. ಈಗಾಗಲೇ ಸರ್ಕಾರ ಮಸ್ಕಿ ತಾಲೂಕು ಬರಪೀಡಿತ ಪ್ರದೇಶಎಂದು ಸರ್ಕಾರವೇ ಘೋಷಿಸಿದೆ. ಮಸ್ಕಿ ತಾಲ್ಲೂಕು ಭಾಗಶಃ ಬರ ಎಂದು ಗುರುತಿಸಲಾಗಿದೆ.
ಈಗಾಗಲೇ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ.ಈ ಭಾಗದ ಜನರು ಉದ್ಯೋಗವಿಲ್ಲದೇ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ದಿನ ನಿತ್ಯವೂ ಗುಳೆ ಹೋಗುತ್ತಿದ್ದಾರೆ.
ಈ ಬಾರಿಯ ಬರ ಘನ-ಘೋರವಾಗಿದ್ದು, ಸರ್ಕಾರ ಈ ಕೂಡಲೇ ರೈತರ ಹಾಗೂ ಜನಸಾಮಾನ್ಯರ ನೆರವಿಗೆ ಬರಬೇಕಿದೆ.
ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದ ಕರ್ತವ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳದ್ದು. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಕಾರ್ಯದರ್ಶಿಗಳ ಜತೆಗೂಡಿ ಬರಪರಿಹಾರ ಮಾರ್ಗೋಪಾಯಗಳ ಯೋಜನೆಯನ್ನು ರೂಪಿಸಬೇಕಿದೆ. ಈ ಯೋಜನೆಯನ್ವಯ ಬಹುತೇಕ ಜಿಲ್ಲೆಗಳಲ್ಲಿ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ಸಮಿತಿಗಳು ಸಭೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸಲು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಇದ್ಯಾವುದೂ ಆಗಿಲ್ಲ ಎನ್ನುವುದು ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನಷ್ಟೇ ತೋರುತ್ತಿದೆ.
ಗೌಡನಭಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಗನೂರು ಗ್ರಾಮದಲ್ಲಿ (ಹೊಸ ಏರಿಯಾ, ) ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿದ್ದು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಕುಡಿಯುವ ನೀರಿನ ಅಭಾವ ಬಾರದಂತೆ
ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಂಡು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಆದ್ದರಿಂದ ಇಲ್ಲಿನ ಸ್ಥಳಿಯ ಅಧಿಕಾರಿಗಳು ನಿರ್ಲಕ್ಷ ತೋರಿರುವ ಪರಿಣಾಮವಾಗಿ
ಹಲವು ತಿಂಗಳಿಂದ ಗ್ರಾಮಸ್ಥರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಜಾನುವಾರಗಳು ಸಾರ್ವಜನಿಕರು ಈ ಬಾರಿ ಬಿಸಿಲ ತಾಪಮಾನದಲ್ಲಿ ಬದುಕಲು ಸಾಧ್ಯವಿಲ್ಲ ಇದರ ಕನಿಷ್ಠ ಪ್ರಜ್ಞೆಯು ಇರದ ನಿಮ್ಮ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಅನೇಕ ಬಾರಿ ಕುಡಿಯುವ ನೀರಿನ ವಿಷಯವನ್ನು ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಆದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಕೂಡಲೇ ಮಾಡಬೇಕು ಅಲ್ಲದೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕಡಿಮೆ ಹಣ ಪಾವತಿಸಿದ ಜೆಇ ಯನ್ನು ಅಮಾನತು ಮಾಡಬೇಕು. ಈ ಮೇಲೆ ಪ್ರಸ್ಥಾಪಿಸಲಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಮಸ್ಕಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗಂಗಪ್ಪ ತೋರಣದಿನ್ನಿ ಜಿಲ್ಲಾಧ್ಯಕ್ಷರು (AIARLA), ದೇವರಾಜ ಮಡಿವಾಳ ಮಸ್ಕಿ ತಾಲೂಕಅಧ್ಯಕ್ಷರು(AIARLA), ಚಾಂದ್ ಸಾಬ್ ಬೆಳ್ಳಿಗನೂರು ತಾಲೂಕ ಅಧ್ಯಕ್ಷರು ( AICCTU),ಬಸವರಾಜ ಹಿರೇದಿನ್ನಿ,ಹನುಮಂತ ದಿನಸಮುದ್ರ,ರಾಮಣ್ಣ ಮಸ್ಕಿ,
ಪವನ ಕುಮಾರ, ಸುರೇಶ, ಶರಣಬಸವ,ಶಿವಪ್ಪ, ಲಚುಮಮ್ಮ, ಗೌರಮ್ಮ ಸೇರಿದಂತೆ ಭದ್ರತೆಗಾಗಿ ಪೋಲೀಸ್ ಇಲಾಖೆಯ ಮಹಾಂತೇಶ್ ಎಎಸ್ಐ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ