ನನಗೆ ಗೊತ್ತಿಲ್ಲ,ನಾನು ಸ್ವೀಪರ್ ಎಂದು ಉಡಾಫೆ ಉತ್ತರ ನೀಡುವ ಮುಖ್ಯ ಶಿಕ್ಷಕ

ವರದಿ : ಗ್ಯಾನಪ್ಪ ದೊಡ್ಡಮನಿ 

ಮಸ್ಕಿ : ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೇಂದ್ರ ಶಾಲೆಯಲ್ಲಿ ವಿದ್ಯಾರ್ಥಿಯ ಧೃಢೀಕರಣ ಪತ್ರ ನೀಡುವಂತೆ ಮುಖ್ಯ ಶಿಕ್ಷಕರಾದ ಬಾಳಪ್ಪ ಎಂ ನಾಗರಾಳ ರವರು ನನಗೆ ಗೊತ್ತಿಲ್ಲ,ನಾನು ಸ್ವೀಪರ್ (ಕಸ ಗೂಡಿಸುವವನು) ಎಂದು ಉಡಾಫೆ ಉತ್ತರ ನೀಡುವ ಘಟನೆ ಮಸ್ಕಿ ಪಟ್ಟಣದಲ್ಲಿ ಜರುಗಿದೆ.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೇಂದ್ರ ಶಾಲೆಯಲ್ಲಿ ಬಾಳಪ್ಪ ಎಂ ನಾಗರಾಳ ಎಂಬ ಮುಖ್ಯ ಶಿಕ್ಷಕ ಶಾಲೆಯ ವಿದ್ಯಾರ್ಥಿಗಳ ಅಂಕಪಟ್ಟಿಯ, ಧೃಢೀಕರಣ ಪತ್ರ ಸೇರಿ ಇನ್ನಿತರೇ ವಿಷಯಕ್ಕೆ ಸಂಬಂಧಿಸಿದಂತೆ ಪಾಲಕರು ಶಾಲೆಗೆ ಬರುವ ಎಲ್ಲಾ ಪಾಲಕರ ಜೊತೆ ಉಡಾಫೆ ಉತ್ತರ ನೀಡುವ ಕೆಲಸ ಮಾಡುವರು. ಹಾಗೆಯೇ ಶಾಲೆಯ ಶಿಕ್ಷಕ ಶಿಕ್ಷಕಿಯರ ಬಳಿಯೂ ವರ್ತನೆ ಸರೀ ಇಲ್ಲ ಎಂದು ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆ ಆಗುತ್ತಿದೆ.ಇಂತಹ ಶಿಕ್ಷಕರು ಶಾಲೆಯಲ್ಲಿ ಇದ್ದರು ಅಷ್ಟೇ ಬಿಟ್ಟರೂ ಅಷ್ಟೇ ಎಂಬ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಇಂತಹ ಉಡಾಫೆ ಉತ್ತರ ನೀಡುವ ಮುಖ್ಯ ಶಿಕ್ಷಕರ ಮೇಲೆ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.

ಹೇಳಿಕೆ -೧

ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಮರ್ಯಾದೆ ಕೊಡದೇ ಇರುವ ಬಾಳಪ್ಪ ಎಂ ನಾಗರಾಳ ರವರನ್ನೂ ಈ ಕೂಡಲೇ ಅಮಾನತು ಮಾಡಿ. ಇಂತಹ ಶಿಕ್ಷಕರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಂಭವ ಹೆಚ್ಚೂ. 

ಬಸವಂತ ಹಿರೇ ಕಡಬೂರು 

ಎಸ್ ಎಫ್ ಐ ತಾಲೂಕಾ ಅಧ್ಯಕ್ಷರು ಮಸ್ಕಿ 


ಹೇಳಿಕೆ -೨

ನನ್ನ ತಂಗಿಯ ಧೃಢೀಕರಣ ಬರೆದು ಕೊಡಿ ಎಂದು ಮುಖ್ಯ ಶಿಕ್ಷಕರ ಬಳಿ ಕೇಳಿದರೇ ಯಾರು ನೀವು ?ಯಾಕೆ ಬಂದ್ರಿ ? ಏನು ಬೇಕಾಗಿತ್ತು ಎನ್ನುವರು. ಹಾಗೆಯೇ ಮುಖ್ಯ ಶಿಕ್ಷಕರು ಯಾರು ? ಅಂದ್ರೆ ಗೊತ್ತಿಲ್ಲ,ಅವರ ಮೊಬೈಲ್ ನಂಬರ್ ಕೊಡಿ ಎಂದರೆ ಗೊತ್ತಿಲ್ಲ,ನಿಮ್ಮ ಹೆಸರು ಏನು ಎಂದರೆ ನನ್ನ ಹೆಸರು ಸ್ವೀಪರ್,ನಿಮ್ಮ ಕೆಲಸ ಏನು ಎಂದರೆ ನಾನು ಸ್ವೀಪರ್ ಎಂದು ಉಡಾಫೆ ಉತ್ತರ ನೀಡುವರು.

ದುರುಗಪ್ಪ ಬೆನಕನಾಳ ವಿದ್ಯಾರ್ಥಿನಿ ಸಹೋದರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ