"ಮತ ಕೇಂದ್ರಕ್ಕೆ ಅನಾರೋಗ್ಯದ ಸ್ಥಿತಿಯಲ್ಲಿರುವ ಅನೇಕ ವೃದ್ದರು ತೆರಳಿ ಮತದಾನ"
ಕೊಟ್ಟೂರು : ಈ ಬಾರಿಯ ಲೋಕಸಭ ಚುನಾವಣೆಗೆ ವೃದ್ಧರು ಅಂಗವಿಕಲರು ಮತ್ತಿತರರು ಮನೆಯಿಂದಲೇ ಮತ ಚಲಾಯಿಸಲು ಕ್ರಮ ಕೈಗೊಂಡ ಬಗ್ಗೆ ಚುನಾವಣೆ ಅಯೋಗ ಹೆಚ್ಚಾಗಿ ಪ್ರಚಾರ ಕೈಗೊಂಡಿತ್ತು ಆದರೆ ಪಟ್ಟಣದಲ್ಲಿನ ಲಕ್ಷ್ಮೀದೇವಮ್ಮ ವಯೋ ವೃದ್ಧೆ ರಿಗೆ ಈ ಬಗೆಯ ಸೌಲಭ್ಯ ವನ್ನು ಚುನಾವಣಾಧಿಕಾರಿಗಳು ಕೈಗೊಳ್ಳದ ಹಿನ್ನಲೆಯಲ್ಲಿ ಮಂಗಳವಾರ ಅವರು ತಾವು ವಾಸಿಸುವ 4 ನೇ ವಾರ್ಡ್ ಮುದುಕನ ಕಟ್ಟೆ ಯಿಂದ 241,242,244,ಮತ ಕೇಂದ್ರವಿರುವ ಸ್ಥಳಕ್ಕೆ ಕುಟುಂಬ ಸದಸ್ಯರ ಸಹಾಯ ಪಡೆದು ಮತ ಚಲಾಯಿಸಿ ತಮ್ಮ ಹಕ್ಕು ಪ್ರತಿಪಾದಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ವಯೋ ವೃದ್ಧೆ ರಿಗೆ ಮತ್ತು ಅನಾರೋಗ್ಯದ ಸ್ಥಿತಿಯಲ್ಲಿರುವ ಅನೇಕ ವೃದ್ದರು ಈ ರೀತಿ ಬಹು ಕಷ್ಟ ಪಟ್ಟು ಮತ ಚಲಾಯಿಸಲು ಬಂದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಳಿದ ಮತದಾರರು ವೃದ್ಧ ರ ಬಗ್ಗೆ ಚುನಾವಣಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ನಿಜಕ್ಕೂ ಖಂಡನೀಯ ಎಂದರು.
ಈ ಸಂಬAದ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಸಿದರು ಪಟ್ಟಣದಲ್ಲಿ ಮನೆ ಮತ ಚಲಾಯಿಸುವ ಅರ್ಹತೆ ಸಿಗದ ಕಾರಣಕ್ಕಾಗಿ ಇನ್ನೂ ಕೆಲ ವೃದ್ದರು ಅವರಿವರ ಸಹಾಯ ಪಡೆದ ಮತ ಕೇಂದ್ರಗಳಿಗೆ ಆಗಮಿಸಿ ಮತ ಚಲಾಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ