*ಬಿರು ಬಿಸಿಲಿಗೆ ತತ್ತರಿಸುತ್ತಿರುವ ಜಾನುವಾರುಗಳಿಗೆ ನೆರಳಿನ ಶೇಡ್ ವ್ಯವಸ್ಥೆಗೆ ರೈತರ ಮನವಿ*

ಕೂಡ್ಲಿಗಿ: ಬರಗಾಲ ಪೀಡಿತ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸೌಲಭ್ಯ ದೊರಕಿಸುವಂತೆ ಈಗಾಗಲೇ ರಾಜ್ಯಸರ್ಕಾರ ಆದೇಶಿಸಿದೆ. ಅದರಂತೆ ಕೂಡ್ಲಿಗಿ ತಾಲೂಕಿನ ಗಂಡ ಬೊಮ್ಮನಹಳ್ಳಿ ಗೊಶಾಲೆಗಳಲ್ಲಿ ಗೋವುಗಳಿಗೆ ಮೇವು ನೀರು ಕೊಡುತ್ತಾರೆ ಆದರೆ ಕೆಲವು ಹಸುಗಳಿಗೆ ನೆರಳಿನ ವ್ಯವಸ್ಥೆ ಮಾತ್ರ ಇಲ್ಲವಾಗಿದೆ. ಆದರೆ ಈ ಬಾರೀಯ ಬಿಸಿಲು ಹೆಚ್ಚಾಗಿದೆ ಸರಿಸುಮಾರು 38 ರಿಂದ 44 ಡಿಗ್ರಿ ಸೆಲ್ಸಿಯಸ್ ಗೆ ತಲುಪುತ್ತಿದೆ. ಪ್ರತಿ ದಿನ ಇಲ್ಲಿಗೆ 2000ಕ್ಕೂ ಹೆಚ್ಚು ಜಾನುವಾರುಗಳು ಆಗಮಿಸುತ್ತವೆ. ಇಲ್ಲಿ ಕಡಿಮೆ ಶೆಡ್‌ಗಳನ್ನು ನಿರ್ಮಿಸಲಾಗಿದ್ದು ಒಂದರಲ್ಲಿ ಗರಿಷ್ಠ 80 ದನ ಆಶ್ರಯ ಪಡೆಯಬಹುದು. ಉಳಿದ ಜಾನುವಾರುಗಳು ಸುಡು ಬಿಸಿಲಲ್ಲಿರುವಂತಾಗಿದೆ. ಜಾನುವಾರು ಮಾಲೀಕರು ಶೆಡ್ ಕೊರತೆ ಕಂಡು ತೆಂಗಿನ ಗರಿಯಿಂದ, ಮುಳ್ಳಿನ ಗಿಡಗಳಿಗೆ ಹುಲ್ಲು ಹೊದಿಸಿ ನೆರಳಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗೋಶಾಲೆಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ. 

ಇನ್ ಕೆಲವು ಜಾನುವಾರುಗಳಿಗೆ ನೆರಳು ಕಲ್ಪಿಸುವ ಕಾರ್ಯ ಇಂದಿಗೂ ಸಮರ್ಪಕವಾಗಿ ಮಾಡಿಲ್ಲ. ಇಲ್ಲಿ ನೀರಿನ, ಮೇವಿನ ವ್ಯವಸ್ಥೆ ಸರಿಯಾಗಿ ಇದೆ, ತುಂಬಾ ಬಿಸಿಲು ಇರುವುದರಿಂದ ರೈತರೇ ಇಲ್ಲಿ ತೆಂಗಿನ ಗರಿ ಇಂದ ದನಗಳಿಗೆ ನೆರಳಿನ ವ್ಯವಸ್ಥೆ ಮಾಡಿಕೊಂಡಿರುತ್ತಾರೆ‌. ಇನ್ನು ಕೆಲವು ರೈತರು ಮರದ ನೆರಳಿಗೆ ದನಗಳನ್ನು ಕಟ್ಟಿಕೊಂಡಿರುತ್ತಾರೆ ತಾಲೂಕು ಅಧಿಕಾರಿಗಳು ದನಗಳಿಗೆ ನೆರಳು ವ್ಯವಸ್ಥೆ ಮಾಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.

ಪಕ್ಕದ ಜಿಲ್ಲೆಯಿಂದ ಹಸುಗಳು ಬರುತ್ತವೆ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಳವಾರಳ್ಳಿ ಗ್ರಾಮದಿಂದ 200 ಜಾನುವಾರಗಳು ಗಂಡ ಬೊಮ್ಮನಹಳ್ಳಿ ಗೋಶಾಲೆಗೆ ಬಂದಿರುತ್ತವೆ. ಹಲವು ವರ್ಷಗಳಿಂದ ಗಂಡ ಬೊಮ್ಮನಹಳ್ಳಿ ಗೋಶಾಲೆಗೆ ಬಂದಿರುತ್ತಾರೆ. ತಳವಾರಳ್ಳಿ ಗ್ರಾಮದ ನಿವಾಸಿಯಾದ ರೈತ ಕರಿಬಸಪ್ಪ, ನಾಗೇಶ ಮಾತನಾಡಿ. ಗಂಡ ಬೊಮ್ಮನಹಳ್ಳಿ ಗೋಶಾಲೆಗೆ ಮೊದಲು ನಿಂದಲೂ ಕೂಡ ನಾವು ಬರಗಾಲದಲ್ಲಿ ಗಂಡ ಬೊಮ್ಮನಹಳ್ಳಿ ಗೋಶಾಲೆಗೆ ಬಂದಿರುತ್ತೇವೆ. ಇಲ್ಲಿ ನೀರಿನ ವ್ಯವಸ್ಥೆ ಇದೆ. ನಮ್ಮ ಮೊಳಕಾಲ್ಮೂರು ತಾಲೂಕಿನಲ್ಲಿ ನಾವು ಗೋಶಾಲೆಗೆ ಹೋಗಬೇಕೆಂದರೆ ದೂರ ಹೋಗಬೇಕಾಗುತ್ತದೆ ಅಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇರುವುದಿಲ್ಲ ಹಾಗಾಗಿ ನಾವು ಗಂಡ ಬೊಮ್ಮನಹಳ್ಳಿ ಗೋಶಾಲೆಗೆ ಬಂದಿರುತ್ತೇವೆ ಎಂದು ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ