ಜಗಜ್ಯೋತಿ ಬಸವೇಶ್ವರ ಹಾಗೂ ಮಹಾಶರಣಿ ಹೇಮರೆಡ್ಡಿ ಮಲ್ಲಮ ಜಯಂತಿ ಆಚರಣೆ
ಕೊಟ್ಟೂರು 10.05.2024 ಮಹಾತ್ಮ ಗಾಂಧೀಜಿ ಸಭಾಂಗಣ, ಕೊಟ್ಟೂರುತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಮಹಾಶರಣಿ ಹೇಮರೆಡ್ಡಿ ಮಲ್ಲಮ ಜಯಂತಿ ಕಾರ್ಯಕ್ರಮವನ್ನು ನಡೆಸಲಾಗಿದ್ದು, ತಹಶೀಲ್ದಾರರು ಹಾಗೂ ಸಮಾಜದ ಮುಖಂಡರ ಈರ್ವರ ಭಾವಚಿತ್ರಗಳಿಗೆ ಪುಪ್ಪಾರ್ಚನೆ ಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿ ಚಾಲನೆ ನೀಡಿದರು.
ಕೆ ರಾಮನಗೌಡ ತಾಲೂಕು ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಿವೃತ್ತ ಶಿಕ್ಷಕರು ಮಲಮ್ಮನ ಬದುಕು ಮತ್ತು ಜೀವನ ಸಾಧನೆ ಬಗ್ಗೆ ವಿವರಿಸಿದರು. ಇಂದಿನ ದಿನಗಳಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ವಿಚ್ಛೇದನವಾಗುತ್ತಿರುವ ದಿನಗಳಲ್ಲಿ ಮಲ್ಲಮ್ಮ ಆದರ್ಶ ವ್ಯಕ್ತಿಯಾಗಿ ಕಾಣುತ್ತಾಳೆ. ಹುಚ್ಚ ಪತಿ, ಅತ್ತೆ ಮತ್ತು ನಾದಿನಿಯರ ನಿತ್ಯ ಕಿರುಕುಳಗಳ ಮಧ್ಯೆ ಬದುಕನ್ನು ಸಾರ್ಧಕಪಡಿಸಿಕೊಂಡು, ಮಲ್ಲಿಕಾರ್ಜುನನಲ್ಲಿ ಅನನ್ಯ ಭಕ್ತಿಯನ್ನು ಹೊಂದಿದ್ದು, ಅಪಾರ ಶಕ್ತಿವಂತಳಾಗಿ ಕಾಣುತ್ತಾರೆ. ಮಲ್ಲಿಕಾರ್ಜುನ ಪ್ರತ್ಯಕ್ಷವಾಗಿ ವರಗಳನ್ನು ಕೇಳಿದಾಗ ವಯಕ್ತಿಯವಾಗಿ ಏನನ್ನೂ ಕೇಳದೇ ತನಗೆ ತೊಂದರೆ ನಿಡಿದರ ತಪ್ಪನ್ನು ಕ್ಷಮಿಸುವ ಕ್ಷಮಾಧರಿತ್ರಿಯಾಗಿ ರೆಡ್ಡಿ ಸಮುದಾಯಕ್ಕೆ ಯಾವತ್ತೂ ಬಡತನ ಬಾರದಂತೆ ಕಾಪಾಡು ಎಂದು ವಿನಂತಿಸಿಕೊಳ್ಳುವ ಮೂಲಕ ವ್ಯಕ್ತಿಗಿಂತ ಸಮಷ್ಟಿ ಮುಖ್ಯ ಎಂದು ತೋರಿಸಿ ಕೊಟ್ಟು ಇಂದಿಗೂ ಪೂಜ್ಯಳಾಗಿದ್ದಾಳೆ ಎಂದರು.
ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಮಾತನಾಡುತ್ತಾ, ಕರ್ನಾಟಕ ಸಾಂಸ್ಕೃತಿಕ ರಾಯಭಾರಿಯಾದ ಬಸವಣ್ಣನವರು ವಿಶ್ವಕ್ಕೆ ಮೊಟ್ಟಮೊದಲ ಪಾರ್ಲಿಮೆಂಟನ್ನು ಪರಿಚಯಿಸ ವ್ಯಕ್ತಿಯಾಗಿದ್ದಾರೆ. ನೊಂದವರ ಬಾಳಿಗೆ ಬೆಳಕಾಗಿ, ಮಹಿಳೆಯರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿ ಶರಣರಾಗಿ ಪ್ರಸಿದ್ದರಾಗುವಂತೆ ಮಾಡಿದ್ದಾರೆ. ಅವರ ಸಮಸಮಾಜದ ಕನಸು ಇಂದಿಗೂ ಪ್ರಸ್ತುತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಕಾಯಕವನ್ನು ಮಾಡಬೇಕು, ಕಾಯದಲ್ಲಿ ಸ್ವಲ್ಪನ್ನು ಸಮಾಜಕ್ಕೆ ದಾಸೋಹದ ಮೂಲಕ ಹಂಚಿ ತಿನ್ನುವ ಪದ್ದತಿಯನ್ನು ಕಲಿಸಿದ ಬಸವಣ್ಣನವರ ಆದರ್ಶ ಬದುಕು ನಮ್ಮದಾಗಬೇಕು. ಪ್ರತಿಯೊಬ್ಬರನ್ನು ಇವನಾರವ ಎನ್ನದೇ ಇವ ನಮ್ಮವ ಎಂದು ಭಾವಿಸಬೇಕು. ಎಲ್ಲರಿಗೂ ಈ ದಿನ ಸಮಾಜಕ್ಕೆ ಬೆಳಕನ್ನು ನೀಡಿದ ಬಸವಣ್ಣನವರು ಹಾಗೂ ರೆಡ್ಡಿ ಸಮಾಜದ ಮಾಣಿಕ್ಯವಾದ ತಾಯಿ ಹೇಮರೆಡ್ಡಿ ಮಲ್ಲಮ್ಮರ ಜಯಂತಿಯ ಶುಭಾಷಯಗಳು.
ಈ ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಮುಖಂಡರಾದ ಕೆ.ಭರಮರೆಡ್ಡಿ, ಪಿ ದೇವೇಂದ್ರಗೌಡ, ಜಿ.ಮಲ್ಲಿಕಾರ್ಜುನ, ಎಸ್ ಕೊಟ್ರೇಶ್, ಕೋಡಿಹಳ್ಳಿ ಮಂಜು, ಸಕ್ರಪ್ಪರೆಡ್ಡಿ ಉಪನ್ಯಾಶಕರು, ಎಂ ಕೊಟ್ರೇಶ್ ಬಿಡಿಸಿಸಿ ಬ್ಯಾಂಕ್ ಹಾಗೂ ಮೈದೂರು ಶಶಿಧರ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರು, ಸಿ ನಿಂಗಪ್ಪ ಶಿಕ್ಷಣ ಇಲಾಖೆಯ ಇಸಿಒ, ಕೊಟ್ರೇಶ್ ಆರ್ ಐ ಪಟ್ಟಣ ಪಂಚಾಯಿತಿ, ಹಾಲಸ್ವಾಮಿ ಕಂದಾಯ ನಿರೀಕ್ಷಕರು, ಹರೀಶ ಗ್ರಾ ಆ ಅ, ವಿಜಯಕುಮಾರ ಪುಟಾಣಿ, ದೇವರಾಜ ಅರಸು, ನಿಂಗನಗೌಡ ಗ್ರಾಮ ಸಹಾಯಕ ಹಾಗೂ ಇತರರು ಇದ್ದದರು. ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ