"ಅಪರೂಪದ ಕಲಾಸಂಪತ್ತು ಉಜ್ಜಿನಿಯ ಶಿಖರ "

 *ಬಳಪದ ಕಲ್ಲಿನ ಗೋಪುರಕ್ಕೆ ಭಕ್ತರಿಂದ ತೈಲಾಭಿಷೇಕ*

ಕೊಟ್ಟೂರು: ತಾಲೂಕಿನ ಉಜ್ಜಯಿನಿ ಮರುಳಾರಾಧ್ಯ ಪೀಠದ ವಿಶಿಷ್ಟ ಆಚರಣೆ ಆಗಿರುವ ಸ್ವಾಮಿಯ ಗೋಪುರದ ಶಿಖರಕ್ಕೆ ಗೋಧೂಳಿ ಲಗ್ನದಲ್ಲಿ ತೈಲಾಭಿಷೇಕ ಮಾಡುವ ಸಂಪ್ರದಾಯದ ಉತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.

ಜಗದ್ಗುರು ಮರುಳಸಿದ್ಧ ರಾಜ ದೇಶೀಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತ ಸಮೂಹ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಪಾಲ್ಗೊಂಡು ವಿಜೃಂಭಿಸಿದರು. 

ಪ್ರತಿವರ್ಷ ವೈಶಾಖ ಶುದ್ಧ ಷಷ್ಠಿಯಂದು ನಡೆಯುವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕವು ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿದೆ. ಜರಿಮಲೆಯ ಪಾಳೆಗಾರರ ವಂಶಸ್ಥರು ಪ್ರತಿವರ್ಷವೂ ಶಿಖರದ ತೈಲಾಭಿಷೇಕಕ್ಕೆ ತೈಲವನ್ನು ಕಳಿಸುವುದು ಸಂಪ್ರದಾಯ. ಅವರ ಕಳಿಸಿದ ತೈಲವನ್ನು ಮೊದಲಿಗೆ ಸ್ವಾಮಿಯ ಶಿಖರಕ್ಕೆ ಮೊದಲು ಎರೆದ ನಂತರ ಉಳಿದ ಭಕ್ತರ ತೈಲವನ್ನು ಶಿಖರಕ್ಕೆ ಎರೆಯಲಾಗುವುದು.

ಪ್ರತಿವರ್ಷ ಜರ್ಮಲಿ ರಾಜರ ವಂಶಸ್ಥರು ನೆಮ ನಿಷ್ಠೆ ವೃತ, ಉಪವಾಸದಿಂದ ನಡೆದುಬಂದು ತಂದ ತೈಲವನ್ನು ಶಿಖರಕ್ಕೆ ಸುರಿದ ಅನಂತರವೇ ಭಕ್ತರು ಹರಕೆಯಂತೆ ನೀಡಿದ ತೈಲವನ್ನು ಶಿಖರದ ಮೇಲೆ ಸುರಿಯುತ್ತಾರೆ. 

ಇದು ಬಳಪದ ಕಲ್ಲಿನ ಗೋಪುರವಾಗಿದ್ದು, ಸೂಕ್ಷ್ಮ ಕೆತ್ತನೆಗಳ ಕಲೆ ಇದೆ. ಈ ಕಲೆ ಬಿಸಿಲು, ಮಳೆ ಗಾಳಿಗೆ ಹಾಳಾಗಬಾರದೆಂಬ ಉದ್ದೇಶದಿಂದ ಪ್ರತಿವರ್ಷ ಶಿಖರಕ್ಕೆ ತೈಲ ಮಜ್ಜನ ಮಾಡುವ ಮೂಲಕ ಅಪರೂಪದ ಕಲಾಸಂಪತ್ತು ಉಳಿಸುವ ಉದ್ದೇಶ ಇದಾಗಿದೆ ಎಂಬುದು ವಿಚಾರವಂತರು, ಕೆಲವು ಇತಿಹಾಸಕಾರರು ಅಭಿಪ್ರಾಯ. ಶಿಖರ ತೈಲಾಭಿಷೇಕ ಕಣ್ಣುಂಬಿಸಿಕೊಳ್ಳಲು ಪ್ರತಿವರ್ಷ ಲಕ್ಷಗಟ್ಟಲೇ ಭಕ್ತರು ಆ ಆಚರಣೆ ನೋಡಲು ಬರುತ್ತಾರೆ. 

ನೆರೆದ ಭಕ್ತ ಸಮೂಹವು ಕಣ್ತುಂಬಿಕೊಂಡು ಭಕ್ತಿಯಿಂದ ನಮಿಸಿದರು.ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*