ಮಸ್ಕಿ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳ ಕಲರವ 5 ಮಾದರಿಯಲ್ಲಿ 9 ವಿಶಿಷ್ಟ ಬೂತ್‌ ಗಳ ಸ್ಥಾಪನೆ | ಭರದಿಂದ ಸಾಗಿದ ಸಿದ್ಧತೆ

ಮಸ್ಕಿ : 2024 ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಸೆಳೆಯಲು ತಾಲೂಕು ಸ್ವೀಪ್‌ ಸಮಿತಿ ಮುಂದಾಗಿದೆ.

ಮತದಾನಕ್ಕೆ (ಮೇ 7) ದಿನಗಣನೆ ನಡೆದಿದ್ದು, ಮುಖ್ಯ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಒಟ್ಟು 5 ವಿವಿಧ ಮಾದರಿಯಲ್ಲಿ 9 ವಿಶೇಷ ಮತಗಟ್ಟೆ ಸ್ಥಾಪನೆಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಮಹಿಳಾ ನಿರ್ವಹಣೆಯ ಮತಗಟ್ಟೆ (ಸಖಿ), ವಿಶೇಷ ಚೇತನರ ನಿರ್ವಹಣೆಯ ಮತಗಟ್ಟೆ, ಯುವ ಜನ ನಿರ್ವಹಣೆಯ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ ಹಾಗೂ ಸಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 

ಎಲ್ಲೆಲ್ಲಿ ಸಖಿ ಮತಗಟ್ಟೆ : ಇಡೀ ಮತಗಟ್ಟೆಯನ್ನು ಮಹಿಳೆಯರೇ ನಿರ್ವಹಿಸುವ ಸಖಿ ಮತಗಟ್ಟೆಯನ್ನು ಮಟ್ಟೂರು ಗ್ರಾಪಂಯ ಕುಣಿಕಲ್ಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬೂತ್‌ ನಂಬರ್‌ 35), ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಮಸ್ಕಿ (ಬೂತ್‌ ನಂಬರ್‌ 85 ಉತ್ತರ̧) ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಸಮಕಲ್‌ (ಬೂತ್‌ ನಂಬರ್‌ 162), ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೀನಸಮುದ್ರ (ಬೂತ್‌ ನಂಬರ್‌ 165), ತುರ್ವಿಹಾಳದ ಕೋಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೂತ್‌ ನಂಬರ್‌ 214) ಸ್ಥಾಪಿಸಲಾಗುತ್ತಿದೆ. 

ಮಟ್ಟೂರು ಗ್ರಾಪಂಯ ಗುಡಿಹಾಳದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೂತ್‌ ನಂಬರ್‌ (34) ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ, ಮಸ್ಕಿ ಪಟ್ಟಣದ ನಾಯಕವಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ (ಬೂತ್‌ ನಂಬರ್‌ 93) ಯಲ್ಲಿ ಯುವ ಜನ ನಿರ್ವಹಣೆಯ ಮತಗಟ್ಟೆ, ಮಸ್ಕಿ ಪುರಸಭೆ ಆವರಣದಲ್ಲಿ (ಬೂತ್‌ ನಂಬರ್‌ 90) ಸ್ಥಳೀಯ ಧ್ಯೇಯ ಆಧಾರಿತ ಬೂತ್‌, ಬಳಗಾನೂರಿನ ಶ್ರೀ ಆಂಜನೇಯ ದೇವಸ್ಥಾನದ ಹತ್ತಿರದ ರೈತರ ಗೋದಾಮಿನಲ್ಲಿ (ಬೂತ್‌ ನಂಬರ್‌ 112) ಸಂಪ್ರದಾಯಿಕ ಮತಗಟ್ಟೆಗಳ ಕಾರ್ಯ ಪ್ರಗತಿಯಲ್ಲಿದೆ.

ಬೂತ್‌ಗಳಲ್ಲಿ ಮೂಲ ಸೌಕರ್ಯ : 2008 ರಲ್ಲಿ ಆಸ್ತಿತ್ವಕ್ಕೆ ಬಂದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ (ಪರಿಶಿಷ್ಟ ಪಂಗಡ ಮೀಸಲು) 231 ಮತಗಟ್ಟೆಗಳಿವೆ. ಪ್ರತಿಯೊಂದು ಬೂತ್‌ ನಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುಚ್ಛಕ್ತಿ ಇತ್ಯಾದಿ ಸೌಕರ್ಯ ಒದಗಿಸಲಾಗಿದೆ. 

ಕೋಟ್‌ 1

ಮಸ್ಕಿ ಕ್ಷೇತ್ರದಲ್ಲಿ 5 ವಿವಿಧ ವಿಷಯ ಆಧಾರಿತ 9 ಕಡೆ ವಿಶೇಷ ಬೂತ್‌ ಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಜಾಗೃತಿಗೆ ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೂತ್‌ಗಳಲ್ಲಿ ವಿಶೇಷ ಟ್ಯಾಬ್ಲೋ ಮೂಲಕ ಜಾಗೃತಿ ಮೂಡಿಸಲಾಗಿದೆ. ಮೇ 7 ರಂದು ಪ್ರತಿಯೊಬ್ಬರು ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲ ಪಡಿಸಬೇಕು.

| ಅಂಬರೀಶ್‌

ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾ.ಪಂ ಮಸ್ಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ