ರೈತ ಸಂಪರ್ಕ ಕೇಂದ್ರದಲ್ಲಿ ಬಿಜ ವಿತರಣೆ,ಸಕಾಲಕ್ಕೆ ಮಳೆ,ರೈತ ಸಂತಸ

ಮಸ್ಕಿ  : ತಾಲ್ಲೂಕಿನ ಹಾಲಾಪೂರ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜಗಳನ್ನು ಗುರುವಾರ ಮತ್ತು ಶುಕ್ರವಾರ ರೈತರಿಗೆ ವಿತರಿಸಲಾಯಿತು. 

ಈ ವರ್ಷ ಮುಂಗಾರು ಮಳೆ ಸುರಿದ ಪರಿಣಾಮವಾಗಿ ರೈತ ಭಾಂದವರು ಬಹಳಷ್ಟು ಸಂತಸವಾಗಿದ್ದು ಅದಕ್ಕಾಗಿ ರೈತರು ಬಿಡುವಿಲ್ಲದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಹಾಲಾಪೂರ ಹೋಬಳಿಗೆ ಸಂಬಂಧಿಸಿದ ಎಲ್ಲಾ ಹಳ್ಳಿಗಳ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಬೀಜಗಳ ಖರೀದಿಯಲ್ಲಿ ನಿರತರಾಗಿದ್ದಾರೆ, ಒಟ್ಟು 30 ಕ್ವಿಂಟಾಲ್ ತೊಗರಿ ಬೀಜಗಳು ಬಂದಿದ್ದು, ಐದು ಕೆಜಿ ಒಂದು ಪಾಕಿಟ್ ತೊಗರಿ ಬೀಜದ ಬೆಲೆ ಸಾಮಾನ್ಯ ರೈತರಿಗೆ ₹765 ರೂಪಾಯಿ, ಎಸ್ ಸಿ , ಎಸ್ ಟಿ ರೈತರಿಗೆ ₹703 ದರ ಇದೆ, ರೈತರು ಈ ವರ್ಷ ಮುಂಗಾರು ಮಳೆ ಈಗಾಗಲೇ ಎರಡು ಮೂರು ಸಲ ಆಗಿದೆ ಇನ್ನೂ ಮಳೆ ಬರುವಂತಹ ಲಕ್ಷಣಗಳು ಇರುವುದರಿಂದ  ರೈತರು ಚುರುಕಿನಿಂದ ಬಿತ್ತನೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವುದು ಸಂತೋಷಕರ ವಾತಾವರಣ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಪ್ರವೀಣಕುಮಾರ ಮೇಟಿ, ಮಂಜುನಾಥಸ್ವಾಮಿ ಅನುವುಗಾರ ಮುದಕಪ್ಪ ರೈತರಾದ ಆದಪ್ಪ ಹಾಲಾಪೂರ,    ಸಣ್ಣಯಂಕಪ್ಪ ರಾಮಲದಿನ್ನಿ,ಮಲ್ಲಯ್ಯ ಹಾಲಾಪೂರ,ಯಂಕನಗೌಡ,  ಸಿದ್ದನಗೌಡ ತುಗ್ಗಲದಿನ್ನಿ ಸೇರಿದಂತೆ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ