ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಮಸ್ಕಿ : ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್ ಸಾವಂತನನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವ ಹಾಗೂ ಮೃತಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾನ್ಯ ತಹಶೀಲ್ದಾರ್ ಮಸ್ಕಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮಸ್ಕಿ ತಾಲೂಕು ಘಟಕ ಮತ್ತು ನಗರ ಘಟಕ ಗಂಗಾ ಮತಸ್ಥ ಸಮಾಜ ಸೇವಾ ಸಂಘದ ವತಿಯಿಂದ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆಯಲ್ಲಿ ನಾಗಭೂಷಣ ಬಾರಿಕೇರಿ ಮಾತನಾಡಿ ವಿದ್ಯಾರ್ಥಿನಿ ನೇಹಾ ಹೀರೆಮಠ ಹತ್ಯೆ ಪ್ರಕರಣ ನೆನಪು ಮಾಸುವ ಮುನ್ನವೆ, ಪ್ರೀತಿ ನಿರಾಕರಣೆಯ ವಿಷಯವಾಗಿ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ನೆತ್ತರು ಹರಿದಿರುವುದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಾಗಿದೆ, ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ಎಂಬ ಯುವಕ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಬೆಳ್ಳಂ ಬೆಳ್ಳಿಗೆ, ಆಕೆಯ ಮನೆಯಲ್ಲಿ ಹತ್ಯೆ ಮಾಡಿದ್ದಾನೆ, ಅಂಜಲಿ ಕೊಲೆ ನಾಗರಿಕ ಸಮಾಜ ತಲೆ ತಗಿಸು ಕೃತ್ಯವಾಗಿದೆ ಮೃತ ಅಂಜಲಿ ಈಗಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದು ಆಕೆಯ ಕುಟುಂಬದ ಜೀವನೋಪಾಯಕ್ಕೆ ಆಶ್ರಯವಾಗಿದ್ದಳು. ಆದ ಕಾರಣ ಅಂಜಲಿ ಕುಟುಂಬಕ್ಕೆ 50,00,000 ( ಐವತ್ತು ಲಕ್ಷ ರೂಪಾಯಿ ಗಳು ) ಪರಿಹಾರ ಒದಗಿಸಬೇಕು. ಎಂದು ಈ ಮೂಲಕ ಮಸ್ಕಿ, ತಾಲೂಕು ಘಟಕ ಮತ್ತು ನಗರ ಘಟಕ ಗಂಗಾಮತ ಸಮಾಜ ಸೇವಾ ಸಂಘ (ರಿ) ಮಸ್ಕಿ, ವತಿಯಿಂದ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಗಭೂಷಣ ಬಾರಕೇರ, ಬಸವರಾಜ ಚಿತ್ತರಗಿ, ಮೌನೇಶ ಸಾಸಿವೆಹಾಳ, ಬಾಲಪ್ಪ ಮ್ಯಾದರಾಳ, ಯಲ್ಲಪ್ಪ ಪಾಮನಕಲ್ಲೂರು, ದೇವರಾಜ್ ಮ್ಯಾದರಾಳ, ಹನುಮಂತ ಪ್ರಧಾನ ಕಾರ್ಯದರ್ಶಿ, ದೇವಣ್ಣ ನಾಯಕ, ಮಲ್ಲಪ್ಪ ಹೊನ್ನಳ್ಳಿ, ಕುಪ್ಪಣ್ಣ ಬಳ್ಳೂಟಗಿ, ಉಮೇಶ ಕಬ್ಬೇರ, ಯಮನೂರ ಆಯನೂರು, ಮುದುಕಪ್ಪ ಸುಂಕನೂರು, ಹನುಮಂತಪ್ಪ ಸಾನಬಾಳ, ವೆಂಕಟೇಶ ಸುಲ್ತಾನಾಪೂರ, ಮಲ್ಲಪ್ಪ ಕುರುಕುಂದಿ, ನಾಗಪ್ಪ ಬಾರಕೇರ, ಬಸವರಾಜ ಸೋಮಲಾಪುರ, ಲಕ್ಷ್ಮಣ ಹೇರೂರು, ನಾಗಪ್ಪ E ಬಾರಕೇರ, ಕರಿಯಪ್ಪ ವಟಗಲ್, ಚನ್ನಬಸವ ಅಗಸಿಹಾಳ, ಚನ್ನಬಸವ.H ಸೆರಿದಂತೆ ಅನೇಕ ಗಂಗಾಮಸ್ಥ ಸಮಾಜದ ಪ್ರಮುಖ ಮುಖಂಡರು ಹಾಗೂ ಯುವಕರು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ