" ಇದೇನು ಬಸ್ ನಿಲ್ದಾಣವೋ, ಕೆರೆಯೋ, ಇಲ್ಲ ನರಕವೋ..!!

*ಸಾರಿಗೆ ಇಲಾಖೆ ಅಧಿಕಾರಿಗಳನ್ನು ಈಜಾಡವುದಕ್ಕೆ ಸಾರ್ವಜನಿಕರು ಆಹ್ವಾನ *

"ಸಾರಿಗೆ ಇಲಾಖೆಯು ಕಣ್ಣು ಮುಚ್ಚಿ ಕುಳುತ್ತಿದೆಯೇ..!

ಕೊಟ್ಟೂರು: ಬಸ್ ನಿಲ್ದಾಣ ಮಳೆಗಾಲದ ವೇಳೆಯಲ್ಲಿ  ಕೆರೆ ನಿರ್ಮಾಣ ಮಾರ್ಪಡುತ್ತಿದೆ. ಕಳೆದ ೧೦ ವರ್ಷಗಳಿಂದ ಇದೇ ಪರಿಸ್ಥಿತಿ ಎದುರಾಗಿದೆ.

ಬಸ್ ನಿಲ್ದಾಣವೋ, ಹೊಲಸು ತುಂಬಿರುವ ಕೆರೆಯೋ ಎಂಬಂತಾಗಿದೆ. ಬುಧವಾರ ಸಂಜೆ ವರುಣನ ಅಬ್ಬರಕ್ಕೆ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣದ ಕೊಳಚೆ ನೀರು ತುಂಬಿಕೊಂಡಿದ್ದು,

ಪ್ರಯಾಣಿಕರು ಪರದಾಡುವಂತಾಗಿದೆ ನಿಲ್ದಾಣದಲ್ಲಿ ತುಂಬಿದ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಗಿಲ್ಲ. ಜನರಂತೂ ಬಸ್ ತಲುಪಲು ಕೊಳಚೆ ನೀರಿಗಿಳಿಯದೆ ಬೇರೆ ದಾರಿಯೇ ಇಲ್ಲದಂತಾಗಿದೆ. ಸರಕಾರವನ್ನು ಬೈದುಕೊಳ್ಳುತ್ತ, ಅಧಿಕಾರಿಗಳನ್ನು ಶಪಿಸುತ್ತ ಜನರು ತಾವು ತಲುಪಬೇಕಾದ ಗಮ್ಯಾ ತಲುಪುತ್ತಿದ್ದಾರೆ. 

ನಿರಂತರ ಸುರಿದ ಮಳೆಗೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಹೊಲಸು ನೀರು ತುಂಬಿದ ಕೆರೆಯಂತಾಗಿದೆ. ಪ್ರಯಾಣಿಕರು ಕೆಸರು ನೀರಲ್ಲಿ ಈಜುತ್ತಾ ಈಜುತ್ತಾ ಬಸ್ ಏರಬೇಕಿದೆ. ಯಾರಾದರೂ ಕೊಟ್ಟೂರು ಬಸ್ ನಿಲ್ದಾಣಕ್ಕೆ ಬರುವವರು ಮತ್ತೊಂದು ಜೊತೆ ಬಟ್ಟೆ ತರಲು ಮರೆಯದಿರಿ.

ನಿಲ್ದಾಣದಲ್ಲಿ ಮಳೆ ಬಂದರೆ ಸಾಕು ಕೆರೆ ನಿರ್ಮಾಣವಾಗುತ್ತದೆ.ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು  ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ.ಸಾರ್ವಜನಿಕರಾದ ಕೊಟ್ರೇಶ್ , ನೂರ್ ಮುಹಮ್ಮದ್,ಆಕ್ರೋಶ ವ್ಯಕ್ತಪಡಿಸಿದರು.


ಕೋಟ್-1

ಪ್ರಸ್ತುತ ಕೊಟ್ಟೂರು ಬಸ್ ನಿಲ್ದಾಣವನ್ನು  ಮಾದರಿ ಬಸ್ ನಿಲ್ದಾಣವನ್ನಾಗಿ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿದೆ ಎರಡೂವರೆ ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದ್ದು. ನೀತಿ ಸಂಹಿತೆ ಮುಗಿದ ನಂತರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ  ಪ್ರಾರಂಭವಾಗಲಿದೆ ಎಂದರು ವಿಜಯನಗರ ಕೆಎಸ್ಆರ್ಟಿಸಿ ಡಿಸಿ ಜಗದೀಶ್ ತಿಳಿಸಿದರು.


ಕೋಟ್-2

ಮಳೆ ಬಂದರೆ ಹೀಗೆ. ಇನ್ನು ಇಡೀ ತಿಂಗಳು ಮಳೆ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂದು ಸರಕಾರಿ ಅಧಿಕಾರಿಗಳು ಯೋಚಿಸಬೇಕು. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಸುಖ ಪ್ರಯಾಣ ನೀಡುವಲ್ಲಿ ಸಾರಿಗೆ ಇಲಾಖೆ ಮುಂದಾಗಬೇಕಿದೆ. ಮಳೆಗಾಲದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ  ಅಧಿಕಾರಿಗಳು ಇಲ್ಲಿ ಬರುವ ಕಾರ್ಯಕ್ರಮ ಹಾಕಿಕೊಳ್ಳಲಿ.ಎಂದರು

ದಲಿತ ಸಂಘರ್ಷ ಸಮಿತಿ ಕೊಟ್ಟೂರು ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್( ಕೊಟ್ಟೂರು ನಿವಾಸಿ)

ಕೊಟ್ -2

ಬಸ್ ನಿಲ್ದಾಣವನ್ನು ಎತ್ತರಿಸಿ ನವೀಕರಿಸುವ ಕಾರ್ಯ ಮಾಡದೇ ಸುಮ್ಮನೆ ಕಾಲಹರಣ ಮಾಡಿದ್ದು, ಜನತೆಗೆ ಮಾಡಿದ ದ್ರೋಹ ವಾಗಿದೆ. ಬಸ್ ನಿಲ್ದಾಣದೊಳಕ್ಕೆ ಯಾವುದೇ ಹಂತದಲ್ಲಿ ಮಳೆ ನೀರು ಶೇಖರಣೆಗೊಳ್ಳದಂತೆ ಯೋಜನೆ ರೂಪಿಸಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗ ಬೇಕಾಗಿದೆ.ಎಂದು ಆರ್ ಟಿ ಐ ಕಾರ್ಯಕರ್ತ ಮಂಜುನಾಥ್ ಹೇಳಿದರು.

ಕಾಮೆಂಟ್‌ಗಳು

  1. ಈಗ ಇರುವ ಬಸ್ ನಿಲ್ದಾಣದ ಜಾಗ ಕಡಿಮೆ ಇದೆ. ನವೀಕರಣವಾದರೂ ಎಲ್ಲಾ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಜಾಗವಿಲ್ಲ. ಕಾರಣ ಬೇರೆ ಕಡೆ ವ್ಯವಸ್ಥೆ ಮಾಡುವುದು ಉತ್ತಮ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ