ಮಾರಲದಿನ್ನಿ ತಾಂಡಾದಲ್ಲಿ ಮನೆ ಮನೆ ಭೇಟಿ ಕರ ಪತ್ರ ಹಂಚಿ ತಾಪಂ ಇಒರಿಂದ ಮತದಾನ ಜಾಗೃತಿ
ಮಸ್ಕಿ : ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಮಾರಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಲದಿನ್ನಿ ತಾಂಡಾದಲ್ಲಿ ಶನಿವಾರ ಮನೆ ಮನೆಗೆ ಭೇಟಿ ನೀಡಿ, ಕರ ಪತ್ರ ಹಂಚುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ತಾಂಡಾದ ಎರಡು ಬೂತ್ ಗಳಲ್ಲಿ ಕಡಿಮೆ ಮತದಾನವಾದ ಹಿನ್ನಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಪವಿತ್ರವಾದದ್ದು. ಇದನ್ನು ಯಾವುದೇ ಆಸೆ ಆಮಿಷಕ್ಕೆ ಮಾರಿಕೊಳ್ಳದೇ ತಮಗೆ ಅರ್ಹ ಎನಿಸುವ ಅಭ್ಯರ್ಥಿಗೆ ಮತ ನೀಡುವಂತೆ ತಿಳಿಸಿದರು. ಪ್ರಮುಖವಾಗಿ ಯುವ ಸಮೂಹ ನೆರೆ ಹೊರೆಯವರಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಮತದಾನದಲ್ಲಿ ಭಾಗವಹಿಸುವಂತೆ ತಿಳಿಸಿದರು. ಮೇ 7 ರ ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮತದಾರರನ್ನು ಆಕರ್ಷಿಸಲು 5 ಮಾದರಿಯಲ್ಲಿ 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಈ ವೇಳೆಯಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಮಂಜುಳಾ, ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕರಾದ ಪ್ರಕಾಶ್, ಟಿಐಇಸಿ ಸತೀಶ್, ಗ್ರಾಪಂ ಸಿಬ್ಬಂದಿ ಮೌನೇಶ್, ವಿಜಯಕುಮಾರ್, ಶಿವಪುತ್ರಪ್ಪ, ಮುಖ್ಯ ಶಿಕ್ಷಕರಾದ ಮಹಾಗುಂಡಪ್ಪ, ಬಿಎಲ್‌ಒ ಜಲಶಾಕ್ಷಿ, ಆಶಾ ಕಾರ್ಯಕರ್ತೆ ಶಾರದಾ, ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ