ಓಪನ್ ಕ್ರಿಕೆಟ್ ಟೂನ್೯ಮೆಂಟ್ ಪಂದ್ಯಾವಳಿಗೆ ಚಾಲನೆ

ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿ ಎಸ್ ಎಸ್ ಕ್ರಿಕೆಟ್ ಕ್ಲಬ್ ವತಿಯಿಂದ ದಿವಂಗತ ಬಸವರಾಜಪ್ಪಗೌಡ ಚೇರಮೆನ್ , ದಿವಂಗತ ಶಿವಶಂಕರಗೌಡ ಯದ್ದಲದಿನ್ನಿ, ದಿವಂಗತ ಅಮರೇಶಪ್ಪಗೌಡ ಹಾಲಾಪೂರ ಇವರ ಸ್ಮರಣಾರ್ಥವಾಗಿ ಓಪನ್ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂನ್೯ಮೆಂಟ್ ಉದ್ಘಾಟನೆಯನ್ನು ವೆಂಕಟರಡ್ಡಿ ಗೌಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ನೆರವೇರಿಸಿದರು .

ನಂತರ ಮಾತನಾಡಿದ ಅವರು ಕ್ರೀಡೆಯನ್ನು ಸಹೋದರ ಮನೋಭಾವದಿಂದ ಕಾಣಬೇಕು, ಸೋಲು ಗೆಲುವು ಸಮಾನತೆಯಿಂದ ಸ್ವೀಕರಿಸಿ ಕ್ರೀಡೆಯನ್ನು ಯಶಸ್ವಿಗೊಳಿಸಬೇಕು, ಹಾಲಾಪೂರದ ಸರಕಾರಿ ಪ್ರೌಢಶಾಲೆಗೆ ನಮ್ಮ ಗ್ರಾಮದ ದಿವಂಗತ ಬಸವರಾಜಪ್ಪಗೌಡ ರು ವಿಶಾಲವಾದ ಆರು ಎಕರೆ ಭೂಮಿಯನ್ನು ದಾನವಾಗಿ ಕೊಟ್ಟು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಅವರನ್ನು ನಾವು ಯಾವಾಗಲೂ ಸ್ಮರಿಸುವ ಕೆಲಸ ಮಾಡಬೇಕು ಎಂದು ವೆಂಕಟರಡ್ಡಿಗೌಡ ಹೇಳಿದರು. 

ನಂತರ ಮಾತನಾಡಿದ ಬಿ.ಕರಿಯಪ್ಪ ಕ್ರೀಡೆಯು ಮನುಷ್ಯನ ಸುಖಕರ ಆರೋಗ್ಯಕ್ಕೆ ಉತ್ತಮ ಶಕ್ತಿಯಾಗಿದ್ದು ಅದಕ್ಕಾಗಿ ನಾವೆಲ್ಲರೂ ಕ್ರೀಡೆಯನ್ನು ಸೌಹಾರ್ದವಾಗಿ ಕಾಣಬೇಕು ಎಂದು ಬಿ ಕರಿಯಪ್ಪ ಹೇಳಿದರು.

ನಂತರ ಮಾತನಾಡಿದ ಸಜ್ಜಲ ಶ್ರೀ ಬ್ಯಾಂಕ್ ನ ವ್ಯವಸ್ಥಾಪಕರಾದ ಮಹಾಂತೇಶ ಪೂಜಾರಿ ಈ ಒಂದು ಕ್ರಿಕೆಟ್ ಟೂನ್೯ಮೆಂಟ್ ಪಂದ್ಯದಲ್ಲಿ ಒಟ್ಟು 32 ಪಂದ್ಯಗಳು ನೊಂದಣಿ ಮಾಡಿಸಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯರಾದ ಕರಿಯಪ್ಪ, ಶಿವಶರಣೆಗೌಡ, ಬಸವರಾಜ ಯಮ್ಮಿಗನೂರು, ಬಸವರಾಜ ಯದ್ದಲದಿನ್ನಿ, ಬಸವರಾಜ ಜಿನ್ನಾಪೂರ, ಕರಿಯಪ್ಪ ಸಜ್ಜಲಶ್ರೀ, ಚಂದಪ್ಪ, ಮೌನೇಶ,ಸುರೇಶ, ಶರಣಬಸವ, ವಿರುಪಾಕ್ಷಿ, ಮಹಾಂತೇಶ, ಬಸವರಾಜ,ಆದೇಶ, ವಿರುಪಾಕ್ಷಿಸ್ವಾಮಿ, ಅನ್ವರ್, ದುರಗೇಶ ಸೇರಿದಂತೆ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ