*ಅದ್ದೂರಿಯಾಗಿ ಜರುಗಿದ ಮರುಳಸಿದ್ಧೇಶ್ವರ ಜಾತ್ರೆ*

 

" ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವ"

ಕೊಟ್ಟೂರು: ಪಂಚಪೀಠಗಳಲ್ಲಿ ಒಂದಾಗಿರವ ನಾಡಿನ ಪ್ರಸಿದ್ಧ ಉಜ್ಜಯಿನಿ ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವಮಂಗಳವಾರ ಸಂಜೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭಾನುವಾರ  ಅದ್ದೂರಿಯಾಗಿ ನಡೆಯಿತು.

ಸ್ವಾಮಿಯ ಪಟಾಕ್ಷಿಯನ್ನು 2.01 ಲಕ್ಷ ರೂ.ಗೆ  ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ ಪ್ರವೀಣ್ ಸವಾಲಿನಲ್ಲಿ ಪಡೆದುಕೊಂಡರು. ಪಟಾಕ್ಷಿ ಸವಾಲು ಮುಗಿಯುತ್ತಿದ್ದಂತೆ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಳೆ ಬೆಳೆ ಸಮೃದ್ಧವಾಗಿ ಆಗಿ ರೈತರು ಬದುಕು ಹಸನಾಗಲಿ. ನಾಡಿನ ಭಕ್ತರಿಗೆ ಮರುಳಸಿದ್ದೇಶ್ವರ ಸ್ವಾಮಿ ಸರ್ವವನ್ನು ಕಲ್ಪಿಸಿ ಸನ್ಮಂಗಲ ನಿರ್ಮಾಣಮಾಡಲಿ ಎಂದು ಆಶೀರ್ವಚನ ನೀಡಿ ವೈಭವದ ರಥೋತ್ಸವಕ್ಕೆ ಸಂಜೆ 6 ಗಂಟೆಗೆ ಚಾಲನೆ ನೀಡಿದರು.

ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು 

ಹರ್ಷೋದ್ದಾದಿಂದ ಜಯಘೋಷ ಕೂಗುತ್ತ ರಥವನ್ನು ಎಳೆದೊಯ್ದರು. ರಥವನ್ನು ಪಾದಗಟ್ಟಿಯವರೆಗೆ ಎಳೆದೊಯ್ದರು. ಮತ್ತೆ ಮರಳಿ ಮೂಲಸ್ಥಾನಕ್ಕೆ ಎಳೆತೆಂದು ಉತ್ಸವ ಮೂರ್ತಿಯನ್ನು

ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಶ್ರೀಮಠಕ್ಕೆ ತಂದು ಮಠದಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ಮಂಗಳಾರತಿ ಬೆಳಗಿ ಉತ್ಸವದ ಸಂಭ್ರಮಕ್ಕೆ ವಿರಾಮ ನೀಡಲಾಯಿತು. ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಧನ್ಯತೆ ಪಡೆದರು. ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ರಥೋತ್ಸವದ ಕಾರ್ಯಕ್ರಮದಲ್ಲಿ ಮೊದಲು

ಕೊಟ್ಟೂರಿನಲ್ಲಿ ಜರುಗಿದ ನಾಡಿನ ಪ್ರಸಿದ್ಧ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ

ಸ್ವಾಮಿಯ ಉತ್ಸವ ಮೂರ್ತಿಯನ್ನು ಕರೆತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾನ ಮಾಡಲಾಯಿತು. ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನೆರೆದಿದ್ದ ಲಕ್ಷಾಂತರ ಭಕ್ತರು ಜಯಘೋಷಣೆ ಕೂಗುತ್ತ ರಥವನ್ನು ಮುಂದೆ ಎಳೆದುಕೊಂಡು ಹೋದರು. ನಂತರ ಪಾದಗಟ್ಟೆ ಮುಟ್ಟಿ ಸ್ವಾಮಿಯ ಪೂಜೆ ಸಲ್ಲಿಸಿ ಮತ್ತೆ ಮರಳಿ ಬಂದು ನೆಲೆ ನಿಲ್ಲಿಸಲಾಯಿತು.

ಉಜ್ಜಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ.ಭಕ್ತರಿಗೆ ತಯಾರಿ

ಭಕ್ತಾದಿಗಳಿಗೆ ಶ್ರೀಪೀಠದಿಂದ ತಯಾರಿ ಜೋರಾಗಿದೆ. ರಥೋತ್ಸವಕ್ಕೆ ಬರುವ ಭಕ್ತರಿಗೆ ಶ್ರೀ ಪೀಠದ ಪ್ರೌಢ ಶಾಲಾ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ವಿವಿಧೆಡೆ ಕುಡಿವ ನೀರಿಗಾಗಿ ನಳಗಳನ್ನು ಅಳವಡಿಸಲಾಗಿದೆ. ಭಾನುವಾರ ನಡೆದ ರಥೋತ್ಸವದ ರಥಕ್ಕೆ ಬಣ್ಣ ಬಣ್ಣದ ಬಟ್ಟೆ, ಪಟಗಳನ್ನು ಹಚ್ಚುವ  ಮೂಲಕ ಮೆರುಗು ಕಂಡುಬಂದಿತ್ತು.

ಉಜ್ಜಿನಿ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವಕ್ಕೆ ಬರುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮತ್ತು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ