"ಅಂಗನವಾಡಿ ಕೇಂದ್ರದ ಬಳಿ| ಗಬ್ಬು ನಾರುತ್ತಿರುವ ದುರ್ವಾಸನೆ |ಸಾಂಕ್ರಾಮಿಕ ರೋಗ ಹರಡುವ ಭೀತಿ"

ಪಟ್ಟಣ ಪಂಚಾಯಿತಿ  ಅಧಿಕಾರಿಗಳು ಕಣ್ಣು ಮುಚ್ಚಿ ಕೊಳ್ಳುತಿದೇ..!

ಕೊಟ್ಟೂರು: ಬಾಲಾಜಿ ಕಲ್ಯಾಣ ಮಂಟಪದ ಹತ್ತಿರ ಇರುವ ದಲಿತ ಕಾಲೋನಿಯಲ್ಲಿ  ಇಲ್ಲಿಯ ಚರಂಡಿ ಎಷ್ಟೋ ತಿಂಗಳು ಸ್ವಚ್ಚತೆ ಇಲ್ಲದೆ ಕೊಳಕು ನೀರಿನ ದುರ್ವಾಸನೆವಾಗಿದೆ.

ಮಕ್ಕಳಿಗೆ ಕಾಡುತ್ತಿದೆ ಸಾಂಕ್ರಾಮಿಕ ರೋಗದ ಭೀತಿ ಸುತ್ತಲು ಕಸ ಕಡ್ಡಿ ತುಂಬಿಕೊಂಡಿರುವ ತಿಪ್ಪೆಗುಂಡಿ, ಕೊಳಕು ನೀರಿನ ಗಬ್ಬು ನಾರುತ್ತಿರುವ ವಾಸನೆ.

ಇದರ ನಡುವೆ ಅಂಗನವಾಡಿ ಕೇಂದ್ರ ಇದರಲ್ಲಿ ಪ್ರತಿದಿನ ಪುಟಾಣಿ ಮಕ್ಕಳಿಗೆ ಅನ್ನ, ಪಾಠ ಎನ್ನುವಂತಹ ಪರಿಸ್ಥಿತಿ ಇದು ತಾಲೂಕಿನ ಪಟ್ಟಣದ ಹರಪನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರದ ದುಸ್ತುತಿ ಉಂಟಾಗಿತ್ತು ಈಗ ನೂತನವಾಗಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ವಾಗಿದೆ.

*ಚರಂಡಿ ಸ್ವಚ್ಚತೆ ಇಲ್ಲದೆ ಗಬ್ಬು ನಾರುತ್ತಿರುವ ವಾಸನೆ*

ಅಂಗನವಾಡಿ ಕೇಂದ್ರದ ಸುತ್ತಲು ತಿಪ್ಪೆಗುಂಡಿ ನಿರ್ಮಾಣ ಮಾಡಿಕೊಂಡಿರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ತೆರಳುವ ಮುಂಚನೇ ದುರ್ವಾಸನೆ ಸ್ವಾಗತ ಕೊರುತ್ತಿದೆ.

ಸಣ್ಣ ಮಕ್ಕಳ ಅಂಗನವಾಡಿ ಕೇಂದ್ರವು ಬಳಿ ಗಬ್ಬು ನಾರುತ್ತಿರುವ ಚರಂಡಿಯ ವಾಸನೆ ಸಣ್ಣ ಮಕ್ಕಳ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ .ಎಂದು ಪೊಷಕರಿಗೆ ಆತಂಕ ವ್ಯಕ್ತಪಡಿಸಿದರು 

ಈ ವಾರ್ಡಿನ ಜನ ಪ್ರತಿನಿಧಿಗೆ ತಿಳಿಸಿದರೆ ನೀನು ನನಗೇನು ಓಟು ಹಾಕಿಲ್ಲ ಎಂದು ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ.ಎಂದು ಅಂಜಿನಿ,ದುರುಗೇಶ, ಮಂಜು, ಪತ್ರಿಕೆಗೆ ತಿಳಿಸಿದರು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ