"ಸಂತೋಷ್ ಲಾಡ್ ಭಾಷಣಕ್ಕೆ ಕೊಟ್ಟೂರಿನ ಜನರು ಫುಲ್ ಖುಷ್ "

ಕೊಟ್ಟೂರು ಪಟ್ಟಣದ ತೆರು ಬಯಲು ನಲ್ಲಿ ಬಳ್ಳಾರಿ ವಿಜಯನಗರ ಲೋಕಸಭಾ ಅಭ್ಯರ್ಥಿ ಈ ತುಕಾರಾಂ ಅವರು ಕಾಂಗ್ರೆಸ್ ಬೃಹತ್ ಸಮಾವೇಶ ಶನಿವಾರ ದಂದು ಏರ್ಪಡಿಸಲಾಗಿತ್ತು.

ನಂತರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ್ ಲಾಡ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಹೇಳಲಿ ಏನೆಂಬುದನ್ನು ಜನರ ಮುಂದಿಡಲಿ. ಬಾಂಗ್ಲಾದೇಶದ ಜಿಡಿಪಿ, ತಲಾ ಆದಾಯ ನಮಗಿಂತ ಹೆಚ್ಚಿಗೆಯಿದೆ ಇದರ ಬಗ್ಗೆ ಪ್ರಧಾನಿ ಮಾತನಾಡಲಿ.

ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಬರಲಿ. ಸುದ್ದಿಗೋಷ್ಠಿ ನಡೆಸಲು ಪ್ರಧಾನಿ ಹಿಂದೇಟು ಹಾಕುವುದು ಯಾಕೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಕಾಂಗ್ರೆಸ್ ಏನೂ ಮಾಡಿಲ್ಲ ಅಂತ ಅಧಿಕಾರಕ್ಕೆ ಬಂದು 10 ವರ್ಷ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಅಂಬಾನಿ, ಅದಾನಿಗೆ ಹಣ ಮಾಡಿಕೊಡಲು ಜನರಿಗೆ ಬರೆ ಹಾಕಿದ್ದಾರೆ. 

ಪ್ರತಿ ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ಸುಳ್ಳು ಭಾಷಣ ಬಿಟ್ಟರೆ ಬೇರೇನೂ ಮಾಡಿಲ್ಲ. 

ಬಿಜೆಪಿಯವರಿಗೆ ರಾಮ ಮಂದಿರ, ಹಿಂದುತ್ವ, ಪಾಕಿಸ್ತಾನ, ಮುಸ್ಲಿಂ ಮಾತ್ರ, ಇವುಗಳನ್ನ ಬಿಟ್ಟರೆ ಯಾವುದರ ಬಗ್ಗೆಯೂ ಅವರು ಮಾತನಾಡಲ್ಲ. ಪ್ರಧಾನಿ ಬರೀ ಭಾಷಣ ಮಾಡುತ್ತಾರೆ. ಆದ್ರೆ ಯಾವುದಕ್ಕು ಉತ್ತರ ಕೊಡಲ್ಲ. ಈ ದೇಶ ಯಾರನ್ನ ಪ್ರಶ್ನೆ ಕೇಳಬೇಕು. ಚುನಾವಣೆಯಲ್ಲಿ ಅದು ಒಂದು‌ ಅಜಂಡಾ ಆಗಬೇಕು 

ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅವ್ಯವ್ಯಹಾರ ಆಗಿದೆ. ಅಯೋಧ್ಯ ರಾಮ ಮಂದಿರ ನಿರ್ಮಾಣದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ

ಕಪ್ಪು ಹಣ ತರ್ತಿವಿ ಅಂತ ಹೇಳಿದ್ದರು ಅದು ಕೂಡ ಆಗಿಲ್ಲ. ಪ್ರಧಾನಿಯವರ ಹೇಳಿಕೆಗಳನ್ನ ಪಟ್ಟಿ ಮಾಡಿಕೊಂಡು ಪ್ರಶ್ನೆ ಕೇಳಬೇಕು. ಮೊದಲು ಕೇಂದ್ರದಲ್ಲಿ ಆದ ಅವ್ಯವ್ಯಹಾರದ ಬಗ್ಗೆ ಚರ್ಚೆ ಆಗಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು

*ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ: ಮಾಜಿ ಶಾಸಕರು ಭೀಮ ನಾಯಕ್*

ಮಾಜಿ ಶಾಸಕರು ಭೀಮ ನಾಯಕ್ ಅವರು ಮಾತನಾಡಿ ಕೆಂದ್ರ ಸರ್ಕಾರ ಸಾಮಾನ್ಯ ಜನಗಳ ಮೇಲೆ ಪೆಟ್ರೋಲ್ ಬೆಲೆ ಮತ್ತು ನಿರೊದ್ಯಗ, ಗ್ಯಾಸ್ ಸಿಲಿಂಡರ್ ದರ ಏರಿಕೆ, ಜನಸಾಮಾನ್ಯರು ಬಿಜೆಪಿ ಯನ್ನು ತಿರುಗಿಸುತ್ತಾರೆ.

ಕಾಂಗ್ರೆಸ್ ಸರ್ಕಾರ ರೈತರ 72 ಸಾವಿರ ಸಾಲ ಮನ್ನಾ ಮಾಡಿದರು ಅಂದ್ರೆ  ಪ್ರಧಾನಿ ನರೇಂದ್ರ ಮೋದಿ ಅವರು ಎಂದೂ ರೈತರ ಸಾಲ ಮನ್ನಾ ಮಾಡಿಲ್ಲ 16 ಲಕ್ಷ ಸಾವಿರ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಪ್ರತಿಯೊಬ್ಬ ಪ್ರಜಾ ಗಳಿಗೆ ಚಂಬು ಕೊಟ್ಟಿದ್ದಾರೆ.ಅದರೆ  ನುಡಿದಂತೆ ನಡೆದಿರುವ ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪಾಸ್,ನಿರೂದ್ಯಗವರಿಗೆ 3000,10 ಕೆಜಿ ಅಕ್ಕಿ ಅಕೌಂಟ್ ನಲ್ಲಿ ಜಮ ಮಾಡುತ್ತವೆ, ಉಚಿತ 200 ವಿನಿಟ್ ಪ್ರೀ, ಮಹಿಳಾ ಅಕೌಂಟ್ ಗೆ 2000 ಫ್ರೀ, ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ ಎಂದರು.

ಬಳ್ಳಾರಿ -ವಿಜಯನಗರ ಲೋಕಸಭಾ ಅಭ್ಯರ್ಥಿ ಈ ತುಕಾರಾಂ ಮಾತನಾಡಿ ಈ ಹಿಂದೆ ಇರುವ ಬಿಜೆಪಿ ಯ ಎಂಪಿ ಸಾಹೇಬರು ಒಂದು ಅಭಿವೃದ್ಧಿ ಕೆಲಸ ಇಲ್ಲ.

ಈ ಬಾರಿ ಚುನಾವಣೆಯಲ್ಲಿ ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತವೆ ಅದಕ್ಕಾಗಿ ದೇಶದ ರಕ್ಷಣೆ ಪ್ರತಿಯೊಬ್ಬರ ಘೋಷಣೆ ಆಗಬೇಕು . ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು 

ಈ ಸಂದರ್ಭದಲ್ಲಿ ಜೆಡಿಎಸ್ ತೊರೆದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯಕ್ ಅವರು ಕಾಂಗ್ರೆಸ್  ಸೇರ್ಪಡೆಗೊಂಡರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಡಿಕಿ ಮಂಜುನಾಥ್ , ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ ದ್ವಾರಕೇಶ್ ,ಎಂ ಎಂ ಜೆ ಸತ್ಯ ಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಮಾಜಿ ಶಾಸಕರು ನಬಿಸಾಬ್ ,ವಿಟಿಎಸ್ ತಿಪ್ಪೇಸ್ವಾಮಿ, ತೋಟದ ರಾಮಣ್ಣ, ಶಿರಿಬಿ ಕೊಟ್ರೇಶ್,ಎಂ ಶ್ರೀನಿವಾಸ್, ಶಿವುಕುಮಾರ ಗೌಡ,ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯರು, ಕೆ ಶಫಿ,ತಗ್ಗಿನಕೇರಿ ಜಗದೀಶ್,ಬದ್ದಿ ಮರಿಸ್ವಾಮಿ, ತೆಗ್ಗಿನಕೇರಿ ಹನುಮಂತಪ್ಪ ವಕೀಲರು ಇನ್ನು ಪ್ರಮುಖ ಮುಖಂಡರು ಉಪಸ್ಥಿತರಿದ್ದರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ