"ಜಾತ್ಯಾತೀತ ಸಮಾನತೆ ಸಮಾಜವಾದ ಬದುಕಿಗಾಗಿ ನಾವೆಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ :ಬದ್ದಿಮರಿಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು"
*ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಮುಖಂಡರು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಈ ತುಕಾರಾಂ ಅವರಿಗೆ ಬೆಂಬಲ ಘೋಷಿಸಿದರು*
ಕೊಟ್ಟೂರು: 2024ರ ಲೋಕಸಭಾ ಚುನಾವಣೆ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ರಾಜ್ಯ ಸಮಿತಿ ಹಾಗೂ ವಿಜಯನಗರ ಜಿಲ್ಲಾ ಸಮಿತಿಯ ತೀರ್ಮಾನದಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಈ ತುಕರಾಂ ರವರಿಗೆ ಬೆಂಬಲಿಸಲು ತೀರ್ಮಾನಿಸಲಾಗಿರುತ್ತೇವೆ. ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳಿಕೊಂಡು ಆಡಳಿತ ನಡೆಸುತ್ತಿದ್ದು ಸಂವಿಧಾನ ಬದಲಾಯಿಸುವ ಮಾತನ್ನಾಡುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಕ್ಕೆ ದಕ್ಕೆಯಾಗಿರುತ್ತದೆ. ಹಾಗಾಗಿ ಸಂವಿದಾನದ ಉಳುವಿಗಾಗಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೇಸ್ ನ್ನು ಬೆಂಬಲಿಸಲು ತೀರ್ಮಾನಿಸಲಾಗಿರುತ್ತೇವೆ.
ಬೆಲೆ ಏರಿಕೆ ಹಾಗೂ ಜಿಡಿಪಿ ಕಡಿಮೆಯಾಗಿದ್ದರೂ ಕೂಡಾ ದೇಶದ ಜನರ ಅಭಿವೃದ್ದಿ ಮಾಡದೇ ಕೇವಲ ಒಂದು ಧರ್ಮದ ಒಲೈಕೆ ಮಾಡಿ ಕೋಮುವಾದ ಸೃಷ್ಟಿಸುವ ಕೆಲಸ ಮಾಡುವ ಬಿಜೆಪಿಯನ್ನು ಹಿಮ್ಮೆಟ್ಟಿಸಿ ಎಲ್ಲಾ ಜಾತಿ ಧರ್ಮಗಳನ್ನು ಒಳಗೊಂಡ ಸಂವಿದಾನದ ರಕ್ಷಣೆಗಾಗಿ ನಾವು ಮತ ಚಲಾಯಿಸುವ ಅನಿವಾರ್ಯತೆ ಇರುವುದರಿಂದ ಈ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೇಸ್‌ನ್ನು ಬೆಂಬಲಿಸುತ್ತಿದ್ದೇವೆ.
ಎಂದು ಶುಕ್ರವಾರ ರಂದು ಕೊಟ್ಟೂರಿನ ಹ್ಯಾಳ್ಯ ರಸ್ತೆಯಲ್ಲಿ ಬರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಬದ್ದಿಮರಿಸ್ವಾಮಿ ಜಿಲ್ಲಾ ಸಂಚಾಲಕರು ಡಿ.ಎಸ್.ಎಸ್. ವಿಜಯನಗರ ಜಿಲ್ಲೆ.,ಪೂಜಾರಿ ಪರುಸಪ್ಪ, ಎಲ್.ಕುಬೇರಪ್ಪ, ಬದ್ದಿ ಪ್ರಭಾಕರ,ಕನ್ನಾಕಟ್ಟಿ ಶಿವರಾಜ್, ಗುಡ್ಡ ಕೊಟ್ರೇಶ, ಅಜ್ಜಯ್ಯ, ಬೇವೂರು ಶಂಕ್ರಪ್ಪ, ಗುಲಾಲಿ ದುರುಗೇಶ್, ಕೆಂಚಪ್ಪ ಬಿ, ಬಸವನಾಳ್ ಸುರೇಶ, ಜೊಳ್ಳಿ ಪರಶುರಾಮ, ಮುದ್ದಪ್ಪ ಇತರರು ಇದ್ದರು.
ಕೊಟ್ -1
ಬದ್ದಿಮರಿಸ್ವಾಮಿ ಜಿಲ್ಲಾ ಸಂಚಾಲಕರು ಡಿ.ಎಸ್.ಎಸ್. ವಿಜಯನಗರ ಜಿಲ್ಲೆ. ಇವರು ಮಾತನಾಡಿ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲಾ ದಲಿತ ಹಿಂದುಳಿದ ಪ್ರಗತಿಪರ ಚಿಂತಕರು ದೇಶದ ಅಭಿವೃದ್ಧಿಯ ಚಿಂತಕರು ಜಾತ್ಯಾತೀತ ವ್ಯಕ್ತಿಗಳು ಕೋಮು ಸೌಹಾರ್ಧತೆ ಗಾಗಿ ಜಾತ್ಯಾತೀತ ಸಮಾನತೆ ಸಮಾಜವಾದ ಬದುಕಿಗಾಗಿ ನಾವೆಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ದೇಶ ಮತ್ತು ಸಂವಿಧಾನ ಉಳಿಸೋಣ ಎಂದು ಎಲ್ಲಾ ವರ್ಗದ ಜನರಲ್ಲಿ ವಿನಂತಿಸಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ