ಹಾಲಾಪೂರ ಬೆಸ್ಟ್ ಪಬ್ಲಿಕ್ ಶಾಲೆಯ ಮೈತ್ರಿ 96%, ಒಟ್ಟು ಶಾಲಾ ಫಲಿತಾಂಶ 90%,ವಿದ್ಯಾರ್ಥಿಗಳಿಗೆ ಅಭಿನಂದನೆಗಳು : ಎಚ್ ಎಮ್ ರವಿಕುಮಾರ

ಮಸ್ಕಿ :  ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ಇರುವ ಬೆಸ್ಟ್ ಪಬ್ಲಿಕ್ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಬಂದಿದೆ ಎಂದು ಶಾಲಾ ಮುಖ್ಯಗುರು ರವಿಕುಮಾರ ತೋರಣದಿನ್ನಿ ಹೇಳಿದರು. 

ಒಟ್ಟು ಪರೀಕ್ಷೆಗೆ ಹಾಜರಾದವರು 51ವಿದ್ಯಾರ್ಥಿಗಳು ,ಇದರಲ್ಲಿ ಶಾಲೆಗೆ ಪ್ರಥಮ ಸ್ಥಾನವನ್ನು ಮೈತ್ರಿ ತಂದೆ ಅಮರೇಶ 96%, ದ್ವಿತೀಯ ಸ್ಥಾನವನ್ನು ಸುಷ್ಮಾ ತಂದೆ ಮಹಾದೇವಪ್ಪ 95% ಶೇಕಡಾ ಅಂಕಗಳನ್ನು ಪಡೆದಿದ್ದು,  ಹಾಗೆ  17ಡಿಸ್ಟಿಕ್ಸನ್, 21 ಪ್ರಥಮ , 7 ದ್ವಿತೀಯ ಸ್ಥಾನದಲ್ಲಿ ಉತ್ತಿರ್ಣರಾಗಿದ್ದಾರೆ , ನಮ್ಮ ಶಾಲೆಗೆ ಉತ್ತಮ ಫಲಿತಾಂಶ ದೊರಕಿಸಿಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ  ಅಭಿನಂದನೆಗಳು, ಜೊತೆಗೆ ನಮ್ಮ ಶಾಲೆಯಲ್ಲಿ 

 ಉತ್ತಮ ಕಲಿಕೆ, ಶಿಸ್ತು, ಬೋಧನೆ ಮಾಡಿ ಒಳ್ಳೆಯ ಫಲಿತಾಂಶ ಬರುವಲ್ಲಿ ಪ್ರಮುಖ ಪಾತ್ರವಹಿಸಿದ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಹಾಗೂ ಸಹಕಾರ ನೀಡಿದ  ಆಡಳಿತ ಮಂಡಳಿಯವರಿಗೆ ಧನ್ಯವಾದಗಳು ಎಂದು ಮುಖ್ಯಶಿಕ್ಷಕ ರವಿಕುಮಾರ್ ತೋರಣದಿನ್ನಿ ಹೇಳಿದರು.

 ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ  ಬಿ ಗದ್ದೆಪ್ಪ , ಉಪಾಧ್ಯಕ್ಷ ಶೇಖರಪ್ಪ ಯದ್ದಲದಿನ್ನಿ, ಕಾರ್ಯದರ್ಶಿ  ಸಿದ್ದಲಿಂಗಪ್ಪ, ಶಿಕ್ಷಕರಾದ ದೇವೆಂದ್ರಕುಮಾರ, ಕುಮಾರ ಮಸ್ಕಿ, ಕುಪ್ಪಣ್ಣ, ಕೃಷ್ಣಕುಮಾರ ಇನ್ನಿತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*