ಸಾಮಾಜಿಕ ಪರಿಶೋಧನೆ ಗ್ರಾಮಸಭೆ ಯಶಸ್ವಿ

ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ 2023-24 ರ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.

ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ 2023-24 ರ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ಗ್ರಾಮದ ಶ್ರೀ ಕರಿಯಪ್ಪ ತಾತನ ದೇವಸ್ಥಾನದ ಪಕ್ಕದಲ್ಲಿ ನಡೆಯಿತು, ಅಧ್ಯಕ್ಷತೆಯನ್ನು ಶಿವಗಂಗಮ್ಮ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾನ್ವಿ ಇವರು ವಹಿಸಿದ್ದರು. ನಂತರ ಲೆಕ್ಕ ಪರಿಶೋಧನೆ ಮಾಹಿತಿಯನ್ನು ಚಂದ್ರು ಪವಾರ ತಾಲ್ಲೂಕ ಕಾರ್ಯಕ್ರಮ ವ್ಯವಸ್ಥಾಪಕರು ಸಭೆಯಲ್ಲಿ ಮಾಹಿತಿಯನ್ನು ತಿಳಿಸಿದರು . 

ಈ ಸಭೆಯಲ್ಲಿ ಬಸವರಾಜ ನಾಗೇಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಶೇಖ ಹುಸೇನ ಶರೀಫ್ ತಾಲ್ಲೂಕ ಕಾರ್ಯಕ್ರಮ ವ್ಯವಸ್ಥಾಪಕರು, ಅದ್ಯಕ್ಷೆ ಮಂಜಮ್ಮ ಗಂಡ ಮೌನೇಶ ತುಗ್ಗಲದಿನ್ನ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಎನ್ , ಗ್ರಾಮ ಸಂಪನ್ಮೂಲ ವ್ಯಕ್ತಿ ಹುಸೇನಪ್ಪ, ಮಾಜಿ ಅದ್ಯಕ್ಷ ರವಿ ದೇಸಾಯಿ, ಶಂಕರಗೌಡ ಯದ್ದಲದಿನ್ನಿ, ಉಮೇಶ ದೊಡ್ಡಮನಿ,ಚಂದಪ್ಪ, ಏಬಲ್ ರಾಜ್, ಗ್ರಾಮಸ್ಥರಾದ ಬಸನಗೌಡ, ಅಮರಪ್ಪಗೌಡ,ಚನ್ನಯ್ಯಸ್ವಾಮಿ, ಚನ್ನಪ್ಪಗೌಡ, ಬಸೆಟಪ್ಪ,ಬಸಪ್ಪ ನಾಯಕ ತುಗ್ಗಲದಿನ್ನಿ,ಗೂಳಯ್ಯಸ್ವಾಮಿ,ಮಹಾಂತೇಶ, ವಿರಪಾಕ್ಷಿ,ಮೌನೇಶ, ಪಂಚಾಯತಿ ಸಿಬ್ಬಂದಿಗಳಾದ ಪರಮಣ್ಣ, ರಂಗನಾಥ, ಗ್ಯಾನಪ್ಪ, ಶ್ರೀದೇವಿ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ