ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಸಾಮೂಹಿಕ ವಿವಾಹ

ಕೊಟ್ಟೂರು : ದಾಂಪತ್ಯ ಎನ್ನುವುದು ಗಂಡು ಹೆಣ್ಣಿನ ಬೆಸುಗೆ ಮಾತ್ರವಲ್ಲದೇ ಎರಡು ಕುಟುಂಬಗಳ ಬಾಂಧವ್ಯ ಬೆಳೆಸುವುದಾಗಿದೆ. ಗಂಡು ಹೆಣ್ಣು ಸಮನಾಗಿ ನಡೆದುಕೊಂಡು ಬಾಳಿನಲ್ಲಿ ಬೆಳಕು ಕಾಣಬೇಕು ಎಂದು ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಹೇಳಿದರು.

ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವದ ೫ನೇ ದಿನದ ಕಾರ್ಯಕ್ರವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಶುಕ್ರವಾರ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಗಳ ಮೂಲಕ ಮನೆಯಲ್ಲಿ ಮದುವೆ ಮಾಡುವುದಕ್ಕಾಗಿ ವ್ಯಯ ಮಾಡುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು. ತಮ್ಮ ಪೀಠ ಸೇರಿದಂತೆ ಅನೇಕ ಮಠಗಳು ಸಾಮೂಹಿಕ ವಿವಾಹ ಕಾರ್ಯಗಳನ್ನು ನಡೆಸುತ್ತಲಿವೆ. ಇಂತಹ ಕಾರ್ಯಗಳಲ್ಲಿ ದಾಂಪತ್ಯಕ್ಕೆ ಕಾಲಿರಿಸುವವರಿಗೆ ಅನೇಕ ಸ್ವಾಮೀಜಿಗಳ ಮುಖಂಡರ ಆರ್ಶೀವಾದ ಸಿಗುತ್ತದೆ ಎಂದರು.

ಸಾಮೂಹಿಕ ವಿವಾಹ ಕೇವಲ ಬಡ ಹಾಗೂ ಮಧ್ಯಮ ವರ್ಗದವರಿಗೆ ಸೀಮಿತ ಎಂಬ ಭಾವನೆ ತೊಡೆದು ಹಾಕಬೇಕು. ಆಯೋಜನೆಗೊಳ್ಳುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಉಳ್ಳವರ ಮನೆಯವರೂ ಮದುವೆಯಾಗಿ ಉಳಿದವರಿಗೆ ಮಾದರಿಯಾಗಬೇಕು. ತಮ್ಮ ಪೀಠದಿಂದ ಪ್ರತಿ ವರ್ಷದ ಕಾರ್ತಿಕೋತ್ಸವ, ರಥೋತ್ಸವ ಸಂದರ್ಭಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಅನೇಕ ಮುಖಂಡರು ಸಹಕಾರ ನೀಡುತ್ತಿದ್ದಾರೆ. 

ಈ ವರ್ಷದಲ್ಲಿ ಅನೇಕ ಭಾಗಗಳ ೧೬ ಜೋಡಿಗಳು ಮದುವೆಯಾಗಿದ್ದಾರೆ ಎಂದು ಹೇಳಿದರು.

 ಕೂಡ್ಲಿಗಿ ಕ್ಷೇತ್ರ ಶಾಸಕ ಎನ್.ಟಿ. ಶ್ರೀನಿವಾಸ್ ಮಾತನಾಡಿ ಪಂಚ ಪೀಠದಲ್ಲಿ ಒಂದಾದ ಉಜ್ಜಯಿನಿ ಪೀಠದಲ್ಲಿ ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವ ಮೂಲಕ ವರದಕ್ಷಣೆ ಪಿಡುಗನ್ನು ತಡೆಗಟ್ಟಬಹುದು ಮತ್ತು ಆರ್ಥಿಕ ದುಂದು ವೆಚ್ಚವನ್ನು ನಿಲ್ಲುತ್ತದೆ. ನಾನೂ ಕೂಡ ಸಾಮೂಹಿಕ ವಿವಾಹ ದಲ್ಲಿ ಮದುವೆ ಆಗುವ ಆಶಯ ಹೊಂದಿದ್ದೆ. ಕೂಡ್ಲಿಗಿ ಕ್ಷೇತ್ರದ ಎಲ್ಲಾ ಕರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ ನೀತಿ ಸಂಹಿತೆ ಮುಗಿದ ನಂತರ ತ್ವರಿತವಾಗಿ ಕೆಲಸ ಆರಂಭ ಮಾಡುತ್ತೇನೆ ಉಜ್ಜಯಿನಿ ಪೀಠಕ್ಕೆ ಯಾವಾಗಲೂ ಶ್ರಮಿಸುತ್ತೇನೆ ಎಂದರು

ಸದ್ಧರ್ಮ ಪೀಠ ಹೊಂದಿರುವ ಉಜ್ಜಯಿನಿಗೆ ಸಾಕಷ್ಟು ಸಂಖ್ಯೆಯ ಭಕ್ತರು, ಪ್ರವಾಸಿಗರು ಆಗಮಿಸುವ ಹಿನ್ನಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ವಿಶೇಷ ಯೋಜನೆ ಮಾಡಲಾಗಿದೆ. ರಸ್ತೆ, ಚರಂಡಿ, ನೀರು, ಶೌಚಾಲಯ, ಸಭಾ ಭವನ, ವಸತಿ ಕೊಠಡಿಗಳ ನಿರ್ಮಾಣಕ್ಕೆ ಸರಕಾರದ ವಿವಿಧ ಯೋಜನೆಗಳಡಿ ಅನುದಾನ ಮಂಜೂರು ಮಾಡಿಸಿ ಸರ್ವ ರೀತಿಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಡೋಣೂರು ಚಾನುಕೋಟಿ ಮಠ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ಅಮರೇಶ್ ಜಿ.ಕೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಆಧಿಕಾರಿ ರವಿಕುಮಾರ್,ಡಿವೈಎಸ್‌ಪಿ ಕೂಡ್ಲಿಗಿ ,ಸಿಪಿಐ ಕೊಟ್ಟೂರು, ಪಿಏಸ್‌ಐ ಕೊಟ್ಟೂರು, ಬಿಇಓ ಪದ್ಮನಾಭ ಕರ್ಣಂ, ಎಇಇ ಮಲ್ಲಿಕಾರ್ಜುನ,  ಪಿಡಿಓ ಜಯಮ್ಮ, ವಿ.ಎ. ಶರಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ದೇವಸ್ಥಾನದ ವ್ಯವಸ್ಥಾಪಕ ವೀರೇಶ್, ಮುಖಂಡರಾದ ರ‍್ರಿಸ್ವಾಮಿ, ಮರುಳಸಿದ್ದಪ್ಪ, ಲೋಕೇಶ್, ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ