ಕಳಪೆ ಬೀಜ, ಗೊಬ್ಬರ ಮಾರಾಟ ಮಾಡದಂತೆ ರೈತ ಸಂಘದಿಂದ ಒತ್ತಾಯ.

ಕೊಟ್ಟೂರು : ತಾಲೂಕಿನಲ್ಲಿ ಕಳಪೆ ಬೀಜ, ಗೊಬ್ಬರವನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರ ಸಭೆ ಕರೆದು ಸೂಚಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿ ಈ ಸಂಬAದ ಇಲ್ಲಿನ ತಹಶೀಲ್ದಾರ್ ಅಮರೇಶ್ ಜಿ.ಕೆ ಅವರಿಗೆ ಮನವಿ ಪತ್ರ ಶುಕ್ರವಾರದಂದು ಸಲ್ಲಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಣ್ಣ ಮಾತನಾಡಿ ಗೊಬ್ಬರ ಅಂಗಡಿ ಮಾಲೀಕರಿಗೆ ಎಂ.ಅರ್.ಪಿ. ದರಕ್ಕಿಂತ ಹೆಚ್ಚಿನ ಧರಕ್ಕೆ ಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ಕ್ರಮವಹಿಸಲಬೇಕು. ಮತ್ತು ತಾಲೂಕಿನಾದ್ಯಂತ ರೈತರಿಗೆ ಬೆಳೆ ಪರಿಹಾರ ಸಿಗದೇ ಇರುವ ರೈತರಿಗೆ  ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿ ರೈತರ ನೆರವಿಗೆ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಮೂಲಕ ಒತ್ತಾಯಿಸಿದರು.

ರೈತರ ಮನವಿಯನ್ನು ಉದ್ದೇಶಿಸಿ ತಹಸಿಲ್ದಾರ್ ಅಮರೇಶ್ ಜಿ.ಕೆ. ಅವರು ಮಾತನಾಡಿ ನಿಯಮನುಸಾರವಾಗಿ ತಮ್ಮ ಮನವಿ ಪರಿಶೀಲಿಸಿನೆ ಮಾಡಿ ಬಿತ್ತನೆ ಬೀಜ,ಗೊಬ್ಬರ, ಸರ್ಕಾರದ್ದೆ ಅಗಲಿ ಖಾಸಗಿಯವರೇ ಆಗಲಿ ಹೆಚ್ಚಿನ ದರದಲ್ಲಿ ಕೊಟ್ಟಿದ್ದೆ ಆದರೆ ಸೂಕ್ತ ಕ್ರಮ ವಹಿಸುತ್ತೇನೆ.

ಸಂಬAಧಿಸಿದ ಇಲಾಖೆ ಹಾಗೂ ಖಾಸಗಿ ಗೊಬ್ಬರ ಅಂಗಡಿ ಅವರಿಗೆ ಪೂರ್ವ ಬಾವಿ ಸಭೆಯನ್ನು ಕರೆಯಲಾಗಿತ್ತದೆ ಮತ್ತು ರೈತ ಸಂಘಟನೆಗಳ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತದೆ. ಬೆಳೆ ಪರಿಹಾರಕ್ಕೆ ಸಂಬAಧಿಸಿದAತೆ ಸರ್ಕಾರ ಗಮನಕ್ಕೆ ತರುತ್ತೇನೆ ಉಳಿದಂತೆ ಎಲ್ಲಾ ಬೇಡಿಕೆಗಳನ್ನು ನಿಯಮನುಸಾರವಾಗಿ ಮಾಡುತ್ತೇನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶ್ರೀಧರ್ ಎಸ್ ಒಡೆಯರ್, ಜಿ.ಅಂಜಿನಪ್ಪ, ಎಸ್.ಕೊಟ್ರಬಸಪ್ಪ, ದಡಾರಪ್ಪ, ವೆಂಕಟೇಶ್, ಹುಚ್ಚಪ್ಪ, ಭರಮಣ್ಣ, ಕೊಟ್ರೇಶ್, ನಾಗರಾಜ, ರಾಮಣ್ಣ, ದುರುಗಪ್ಪ, ಪರುಸಪ್ಪ, ಗಿರೀಶ ಮತ್ತಿತರ ರೈತ ಸಂಘದ ಕಾರ್ಯಕರ್ತರು ಮನವಿ ಪತ್ರ ಸಲ್ಲಿಕೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ