ಬಳ್ಳಾರಿ ಲೋಕಸಭಾ ಚುನಾವಣೆ ಕೊಟ್ಟೂರು ಪಟ್ಟಣದಲ್ಲಿ ಶೇಕಡ 72 ರಷ್ಟು ಮತದಾನ

ಕೊಟ್ಟೂರು: ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಬಿರು ಬಿಸಿಲಿನ ತಾಪಮಾನದಲ್ಲಿ ಮಂಗಳವಾರ ಮತದಾನ ಬೆಳಿಗ್ಗೆ ೭ ಗಂಟೆಯಿಂದ ಪ್ರಾರಂಭವಾದ ಬಳ್ಳಾರಿ ಲೋಕಸಭ ಕ್ಷೇತ್ರದ ಚುನಾವಣೆಗೆ ಮತದಾರರು ಆಗಮಸಿ ಮತ ಚಲಾಯಿಸದರು.

ಮತದಾರರಿಗೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಮತ ಕೇಂದ್ರಗಳ ಬಳಿ ಶಾಮಿಯಾನ ಹಾಕಲಾಗಿತ್ತು ಇದರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಪಟ್ಟಣದಲ್ಲಿ ಬಸ್ಟಾಂಡ್ ಹತ್ತಿರ ನಾಗರಾಜ್ ಶಾಲೆ 241,242,244,ಮತ ಕೇಂದ್ರ ಬೂತು ಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತೆ ಎಂದು ಬೆಳಗ್ಗಿನಿಂದಲೇ ಅತಿ ಹೆಚ್ಚಾಗಿ ಸರತಿ ಸಾರಿನಲ್ಲಿ ನಿಂತುಕೊಂಡು ಮಹಿಳೆಯರು ಮತ ಚಲಾಯಿಸಲು ಆಗಮಿಸಿದ್ದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕೊಠಡಿಯಲ್ಲಿ ಆರಂಭಿಸಿರುವ 234 ಮತ ಕೇಂದ್ರ ಸಖಿ ಯರು ಮತ ಚಲಾಯಿಸಲೆಂದೆ ವಿಶೇಷವಾಗಿ ಶೃಂಗರಿಸಲಾಗಿತ್ತು 

ಯುವಕ, ಯುವತಿಯರು ಮತದಾನ ನಂತರ ಸಖಿ ಕೇಂದ್ರ ಬಳಿ ನಿಂತು ಕೊಂಡು ಛಾಯಾಚಿತ್ರ  ತೆಗೆದುಕೊಂಡು ತಮ್ಮ ಹಕ್ಕು ಚಲಾಯಿಸಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದರು.

ಬಳ್ಳಾರಿ ಲೋಕಸಭ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ ತುಕರಾಂ ಕೊಟ್ಟೂರು ಮತ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಮತದಾನ ವಿವರಣೆ ಪಡೆದುಕೊಂಡರು.ತಾಲೂಕಿನಲ್ಲಿ ಮತದಾನ ಯಾವುದೇ ಬಗೆಯ ತೊಂದರೆ ಇಲ್ಲದೆ ಶಾಂತಿಯುತ ಮತದಾನ ನೆಡೆಯಿತು

ಕೊಟ್ -1

ಉಜ್ಜಯಿನಿ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಉಜ್ಜಿನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು.

ಕೊಟ್ -2

ಕೊಟ್ಟೂರಿನ ಅನೇಕ ಬೂತ್ ಗಳಲ್ಲಿ 100 ಮೀಟರ್ ಒಳಗಡೆ ನೂರಾರು  ಗುಂಪುಗಳಾಗಿ ಜನರು ಚುನಾವಣೆ ಆದೇಶ ಉಲ್ಲಂಘನೆ.  ಆಗಿರುವುದು ಕಂಡುಬಂದಿತು. ಎಂದು ಸಾರ್ವಜನಿಕರು ಪತ್ರಿಕೆಗೆ ತಿಳಿಸಿದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ