*ಜನಸ್ನೇಹಿ ಕಾರ್ ರೆಂಟಲ್ ಆ್ಯಪ್ ಬಿಡುಗಡೆ*

ಬೆಂಗಳೂರು:  ಬೆಂಗಳೂರಿನವರದ್ದೇ ಆದ ಕಂಪನಿ ಇದೀಗ ಜನಸ್ನೇಹಿ ಆನ್ಲೈನ್ ಕಾರು ಬಾಡಿಗೆ ಸೇವೆ ಆರಂಭಿಸಿದೆ. 

' ರೆಂಟ್ ಎನ್ ಗೋ' ಕಂಪನಿಯ ಆಪ್ಯ ಸದ್ಯ ಸೇವೆ ನೀಡುತ್ತಿರುವ ಕಂಪನಿಗಳಿಗಿಂತ ಹೆಚ್ಚು ಸರಳ ಮತ್ತು ಸುರಕ್ಷಿತವಾಗಿದೆ.   ಕಾರು ಬಾಡಿಗೆಯ ಸೇವೆಯನ್ನು 'ಶೇರಿಂಗ್' ಆಧಾರದ ಮೇಲೆ ಕೂಡ ನೀಡಬಹುದು. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಅವಧೂತರಾದ ವಿನಯ್ ಗುರೂಜಿ ಈ ನೂತನ ಸೇವೆಯನ್ನು ಲೋಕಾರ್ಪಣೆ ಮಾಡಿದರು.

ಕಳೆದ ಹತ್ತು ವರ್ಷಗಳಿಂದ ಸಾರಿಗೆ ಉದ್ಯಮದಲ್ಲಿರುವ 'ಇ-ಟ್ರಾವೆಲ್ ಮೇಟ್' ಕಂಪನಿಯ ಹೊಸ ಸೇವೆ ಇದಾಗಿದ್ದು, ಇದು ಅತ್ಯಂತ ಗ್ರಾಹಕ-ಸ್ನೇಹಿಯಾಗಿದೆ ಎಂದು ವಿನಯ್ ಗುರೂಜಿ ಕಂಪನಿ ಹೇಳಿದರು.

ಬೆಂಗಳೂರಿನ ತೀವ್ರ ಒತ್ತಡದ ಸಂಚಾರ ದಟ್ಟಣೆಗೆ ಈ ಆ್ಯಪ್ ಪರಿಹಾರ ನೀಡುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ವಿನಯ್ ಗುರೂಜಿ ಅಭಿಪ್ರಾಯ ಪಟ್ಟರು.

ವಯಕ್ತಿಕ ಕಾರುಗಳನ್ನು ಆನ್ಲೈನ್ ಮೂಲಕ ಬಾಡಿಗೆ ನೀಡಿದಲ್ಲಿ ಸುರಕ್ಷಿತವಾಗಿ ಹಾಗೂ ಸುಲಭವಾಗಿ ಹಣ ಗಳಿಸಬಹುದು.

ಇದು ನಗರ ಸಾರಿಗೆ ಒತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಗುರೂಜಿ ಅಭಿಪ್ರಾಯ ಪಟ್ಟರು.

'ಇ-ಟ್ರಾವೆಲ್ ಮೇಟ್' ಸಂಸ್ಥೆ ಮುಖ್ಯಸ್ಥ ಸಂತೋಷ್ ಮಾತನಾಡಿ, 'ರೆಂಟ್ ಆಂಡ್ಯ್ ಗೋ' ಆ್ಯಪ್ ಸುಲಭ ಬಳಕೆಯ ಸುರಕ್ಷಿತ ಸಾಧನವಾಗಿದೆ ಎಂದರು. ಚಾಲಕರು ತಮಗೆ ಬೇಕಾದ ರೀತಿಯಲ್ಲಿ ಮಾರ್ಗ ಬದಲಾವಣೆಗೆ ಅವಕಾಶ ಇರುವುದಿಲ್ಲ. ಜೊತೆಗೆ, ಪ್ರಯಾಣಿಕರು ಶುಲ್ಕ ಪಾವತಿಸಿದ ಕೂಡಲೇ ತೆರಿಗೆ ಸಂದಾಯ ಸಹ ಆಗುತ್ತದೆ. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆ ಆಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್ ವಿ ಪ್ರಸಾದ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ. ಜಿ ಸಿ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ