ಪದವಿ ತರಗತಿ ಪ್ರವೇಶಾತಿಗೆ ಸಹಕರಿಸಿ, ಉತ್ತಮ ಶಿಕ್ಷಣಕ್ಕೆ ಬೆಂಬಲಿಸಿ:ಡಾ.ಮಹಾಂತಗೌಡ ಪಾಟೀಲ್

ಮಸ್ಕಿ : ಪಟ್ಟಣದಲ್ಲಿ ಇರುವ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಗಳಿಗಾಗಿ ಪ್ರವೇಶಾತಿಗಳು ಪ್ರಾರಂಭವಾಗಿವೆ ಎಂದು ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್ ಹೇಳಿದರು.

ಅವರು ಹಾಲಾಪೂರದ ಜನನಿ ಪದವಿ ಪೂರ್ವ ಕಾಲೇಜ್ ಗೆ ಬೇಟಿ ನೀಡಿ ನಮ್ಮ ಕಾಲೇಜ್ ಗೆ ವಿದ್ಯಾರ್ಥಿಗಳನ್ನು ಪ್ರವೇಶಾತಿ ಮಾಡಿಸಿ,ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಒಳ್ಳೆಯ ಕಟ್ಟಡ ವ್ಯವಸ್ಥೆ, ಉತ್ತಮ ಮೈದಾನ, ಡಿಜಿಟಲ್‌ ಗ್ರ‌ಂಥಾಲಯ ವ್ಯವಸ್ಥೆ, ನ್ಯಾಕ್ ನಿಂದ ಬಿ ಗ್ರೇಡ್ , ಸ್ಕೌಟ್ ಮತ್ತು ಗೈಡ್ಸ್, ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಶಿಬಿರ, ನೂರಿತ ಅನುಭವಿ ಉಪನ್ಯಾಸಕ ವೃಂದ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳು ಕೊಡಿಸಲಾಗುವುದು ಇಷ್ಟೆಲ್ಲಾ ಸೌಕರ್ಯ ಸೌಲಭ್ಯಗಳನ್ನು ನಮ್ಮ ಕಾಲೇಜ್ ನಲ್ಲಿ ಇವೆ ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಪ್ರವೇಶಾತಿ ಮಾಡಿಸಿರಿ ಎಂದು ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್ ಹೇಳಿದರು. 

ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಮಣ್ಣ ಜುಮ್ಮಾ, ಶ್ರೀನಿವಾಸ ಯಾಳಗಿ, ವಿರೇಶ ಜಂಗಮರಹಳ್ಳಿ, ಶಿವಗ್ಯಾನಪ್ಪ ,ಡಾ.ಪಂಪಾಪತಿ ನಾಯಕ, ಪ್ರಭುದೇವ ಸಾಲಿಮಠ, ಪ್ರಶಾಂತ ಮಸ್ಕಿ, ಜನನಿ ಕಾಲೇಜ್ ಪ್ರಾಚಾರ್ಯ ನಾಗೇಶ ಜಂಗಮರಹಳ್ಳಿ, ಡಾ.ವಿರುಪನಗೌಡ, ಸಿದ್ದಾರ್ಥ ಪಾಟೀಲ್, ಮರಿಸ್ವಾಮಿ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ