ಕಿಷ್ಕಿಂದ ಜಿಲ್ಲಾ ಹೋರಾಟಕ್ಕೆ ಬೆಂಬಲಿಸಿ : ಹುಸೇನಪ್ಪ ಮಾದಿಗ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ : - ಗಂಗಾವತಿ ನಗರವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಕಳೆದ ಒಂದುವರೆ ವರ್ಷದಿಂದ ನಡೆಸುತ್ತಿರುವ ಕಿಷ್ಕಿಂದ ಜಿಲ್ಲಾ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಕಿಷ್ಕಿಂದ ಹೋರಾಟ ಸಮಿತಿ ಸದಸ್ಯರು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾ ವಟರ್ ಅವರಿಗೆ ತಮ್ಮ ಕಚೇರಿಯಲ್ಲಿ ಕಿಸ್ಕಿಂದ ಜಿಲ್ಲಾ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಮುಖಂಡರಾದ ಹುಸೇನಪ್ಪ ಮಾದಿಗ ಮಾತನಾಡಿ ಲೋಕಸಭೆ ಚುನಾವಣೆ ಫಲಿತಾಂಶ ಸಕಾರಾತ್ಮಕವಾಗಿ ಇಲ್ಲವೇ ನಕರಾತ್ಮಕವಾಗಿ ಬರಲಿ ನಮ್ಮ ಹೋರಾಟಕ್ಕೆ ನಿಮ್ಮ ಬೆಂಬಲ ಯಾವತ್ತಿಗೂ ಇರಬೇಕು. ಜಿಲ್ಲಾ ಹೋರಾಟಕ್ಕೆ ಅನೇಕ ಪಕ್ಷ ಸಂಘಟನೆಗಳು ಬೆಂಬಲ ನೀಡಿದೆ ಎಂದು ಹೇಳಿದರು. ಮನವಿ ಸ್ವೀಕರಿಸಿ ಡಾ. ಬಸವರಾಜ್ ಕ್ಯಾವೆಟರ್ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ನಾನು ಗೆಲ್ಲಲಿ - ಸೋಲಲಿ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿರುತ್ತದೆ . ಒಂದು ವೇಳೆ ಮತದಾರರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾದರೆ ಇನ್ನೂ ಹೆಚ್ಚಿನ ಖುಷಿಯಿಂದ ನಾನು ಕೆಲಸ ಮಾಡುವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಂಜುನಾಥ ಕಟ್ಟಿಮನಿ, ವಿನಯ್ ಪಾಟೀಲ್ , ರಾಜು ಮುದಲ, ಮಲ್ಲಿಕಾರ್ಜುನ ಹೊಸಳ್ಳಿ ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ