ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆಯ ಜಯಂತಿ ಆಚರಣೆ
ಕೊಟ್ಟೂರಿನಲ್ಲಿ ಬಸವ ಜಯಂತಿಯನ್ನು ಎತ್ತಿನ ಬಸವ ಗಾಡಿಗಳನ್ನು ಹಬ್ಬದ ರೀತಿಯಲ್ಲಿ ತಯಾರಿಸಿ ಬಸವಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ಮುಖಾಂತರ ಹಿರೇಮಠ, ತೊಟ್ಟಿಲು ಮಠ ,ಗಚ್ಚಿನ ಮಠ, ಕೇಳಿಗೇರಿ ,ಉಜ್ಜಿನಿ ರಸ್ತೆ ,ಬಸವಣ್ಣನ ದೇವಸ್ಥಾನ, ಬಸವೇಶ್ವರ ದೇವಸ್ಥಾನಗಳಲ್ಲಿ ಈ ಹಬ್ಬವನ್ನು ಹೆಚ್ಚಾಗಿ ಶುಕ್ರವಾರದಂದು ಆಚರಣೆ ಮಾಡಲಾಯಿತು.
ಬಸವೇಶ್ವರ ಜಯಂತಿಯಂದು ಜನರು ಪ್ರಾರ್ಥನೆ ಮತ್ತು ಆಚರಣೆ ಗಳಿಗಾಗಿ ಹತ್ತಿರದ ಬಸವೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಲಿಂಗಾಯತ ಸಮಿತಿಗಳ ಜನರು ಈ ಅದ್ಭುತ ದಿನವನ್ನು ಆಚರಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಎಲ್ಲರೂ ಶುಭಾಶಯಗಳನ್ನು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಮಂದಿರಗಳಲ್ಲಿ ಬಸವಣ್ಣನವರ ಜೀವನ ಕುರಿತು ಉಪನ್ಯಾಸಗಳು ನಡೆಯುತ್ತವೆ, ಬಸವಣ್ಣನವರ ಬೋಧನೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಅನೇಕ ಭಕ್ತರು ಕೂಡಲ ಸಂಗಮಕ್ಕೆ ಭೇಟಿ ನೀಡುತ್ತಾರೆ, ಅಲ್ಲಿ ಈ ಉತ್ಸವವು ಸುಮಾರು ಏಳು ದಿನಗಳವರೆಗೆ ನಡೆಯುತ್ತದೆ. ಬಸವಣ್ಣನ ದೇವಸ್ಥಾನಗಳಲ್ಲಿ ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅನೇಕ ಯುವಕರು ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ