ವಿಜಯನಗರ ಜಿಲ್ಲೆಗೆ ಪ್ರಥಮ ಸ್ಥಾನ ಆದಿತ್ಯ


"ವಿಧ್ಯಾರ್ಥಿ ಜೊತೆ ತಾಯಿ ಸಹೋದರ ಸಿಹಿ ಹಚಿ  ಸಂತೋಷಸಿದರು "

ಕೊಟ್ಟೂರು: ಪಟ್ಟಣದ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಯಲ್ಲಿ ವಿದ್ಯಾರ್ಥಿ ಆದಿತ್ಯ ಎಸ್.ಎಂ. 625ಕ್ಕೆ 621 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿ ಆದಿತ್ಯ ಮಾತನಾಡಿ, ಓದುವಲ್ಲಿ ಶ್ರದ್ದೆ ಹಾಗೂ ನಿರಂತರ ಪರಿಶ್ರಮದ ಫಲವಾಗಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 621 ಅಂಕಗಳನ್ನು ಪಡೆದಿರುವ ಇದು ನನಗೆ ಹೆಮ್ಮೆ ಎನ್ನಿಸುತ್ತದೆ. ನೀಟ್ ಪರೀಕ್ಷೆಯ ಫಲಿತಾಂಶದ ನಂತರ ಮುಂದಿನ ವಿದ್ಯಾಭ್ಯಾಸ ಬಗ್ಗೆ ನಿರ್ಧರಿಸುವೆ ಎಂದು ಹೇಳಿದರು.

ಪ್ರಾರಂಭದಲ್ಲಿ ಸುಮಾರು ತಾಸು ನಿತ್ಯ ಅಧ್ಯಯನ ಮಾಡುತ್ತಿದ್ದೆ, ಅಂದಿನ ಪಾಠಗಳನ್ನು ಅಂದೇ ಓದಿ ಮುಗಿಸುತ್ತಿದ್ದೆ, ಜೊತೆಗೆ ಮೂರುದಿನಕ್ಕೊಮ್ಮೆ ಮತ್ತೆ ಆ ಪಾಠಗಳನ್ನು ಪುನರಾವರ್ತನೆ ಮಾಡುತ್ತಿದ್ದೆ ಎಂದು ಹೇಳಿದರು.

ನನ್ನ ತಂದೆ ಚಿತ್ರಕಲಾ ಶಿಕ್ಷಕರು ಕೊಟ್ರುಸ್ವಾಮಿ, ತಾಯಿ ರೂಪಾ ಅವರ ಪ್ರೋತ್ಸಾಹ ಹಾಗೂ ಶಿಕ್ಷಕರ ಉತ್ತಮ ಭೋದನೆ ಮತ್ತು ಮಾರ್ಗದರ್ಶನದಿಂದ ನಾನು ಇಷ್ಟೊಂದು ಅಂಕ ಪಡೆಯಲು ಕಾರಣವಾಯಿತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಆದಿತ್ಯನ ಉತ್ತಮ ಸಾಧನೆ ಶಿಕ್ಷಕರು ಹಾಗೂ ಪೋಷಕರು,ಸ್ನೇಹಿತರು ಹರ್ಷವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ