ಹಂಪನಾಳ ಶಾಲೆಯ ಮುಖ್ಯ ಶಿಕ್ಷಕ ಸಾಬಪ್ಪ ಅಮಾನತು
ಮಸ್ಕಿ : ತಾಲೂಕಿನ ಹಂಪನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸಾಬಪ್ಪ ಅವರನ್ನು ಅಮಾನತ್ತು ಮಾಡಲಾಗಿದೆ. ಕರ್ತವ್ಯ ಲೋಪ, ದೋಷಗಳನ್ನು ಆಲಿಸಿ ಶಾಲೆಗೆ ಚಕ್ಕರ್ ಹಾಕಿ ಸರಕಾರಿ ಸಂಬಳ ಪಡೆಯುತ್ತಿರುವ ಹಂಪನಾಳ ಶಾಲೆಯ ಮುಖ್ಯ ಶಿಕ್ಷಕ ಬಿಸಿ ಊಟದ ಹಣ ದುರ್ಬಳಕೆ ಆರೋಪ ಎಂಬ ಶೀರ್ಷಿಕೆಯಡಿಯಲ್ಲಿ ಅಧಿಕಾರಿಗಳು ಅಕ್ಷರ ದಾಸೋಹ ದಾಸ್ತಾನು ಹಣ ದುರ್ಬಳಕೆ, ಶೂ- ಸಾಕ್ಸ್ ಹಣ ದುರುಪಯೋಗ, ಎಸ್, ಎ, ಟಿ, ಎಸ್ ವೆಬ್ ಸೈಟ್ ನಲ್ಲಿ ಮಾಹಿತಿಯನ್ನು ತುಂಬದೆ ಇರುವುದು ಹಾಗೂ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು 40 ದಿನಗಳಿಗೆ ವಿತರಿಸುವ ಬದಲಾಗಿ ಕೇವಲ 10 ದಿನಗಳಿಗೆ ಮಾತ್ರ ವಿತರಣೆ ಮಾಡಿರುವುದರ ಮೂಲಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಉಲ್ಲಂಘನೆ ಮಾಡುವ ಮೂಲಕ ಕರ್ತವ್ಯ ಲೋಪ ಮಾಡಿರುತ್ತಾರೆಂದು ತಿಳಿದು ಬಂದಿದ್ದರಿಂದ.ಶಿಸ್ತು ಕ್ರಮ ಜರಗಿಸಲು ಸಂಬಂಧಪಟ್ಟ ದಾಖಲೆಗಳ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂಧನೂರು , ಅಕ್ಷರ ದಾಸೋಹ ಕಾರ್ಯಕ್ರಮ ಜಿಲ್ಲಾ ಪಂಚಾಯತ್ ರಾಯಚೂರು ಅವರು ದಾಖಲೆಗಳೊಂದಿಗೆ ವರದಿ ನೀಡಿದ್ದರಿಂದ, ಜಿಲ್ಲಾ ಉಪ ನಿರ್ದೇಶಕರು ಪರಿಶೀಲಿಸಿದಾಗ ಹಣ ದುರುಪಯೋಗ, ಸರ್ಕಾರದ ಮತ್ತು ಇಲಾಖೆ ಮೇಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡದೆ ಕರ್ತವ್ಯದ ನಿರ್ಲಕ್ಷತೆ, ದುರ್ನಡತೆ ಹಿನ್ನೆಲೆಯಲ್ಲಿ ಉಪ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಯಚೂರು ನಿರ್ದೇಶಕರಾದ ಕಾ