ಪೋಸ್ಟ್‌ಗಳು

ಅಕ್ಟೋಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*DSS ಗ್ರಾಮ ಶಾಖೆ ಉದ್ಘಾಟನೆ,ಶಿಕ್ಷಣಕ್ಕೆ ಒತ್ತು ಕೊಡಿ ಮನೆ ಮನೆಗಳಲ್ಲಿ ಉನ್ನತ ಶಿಕ್ಷಣ ಕಲಿತು ಅಧಿಕಾರಿಗಳಾಗಲಿ. ಬಿ. ಮರಿಸ್ವಾಮಿ*

ಇಮೇಜ್
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸೂಲದಳ್ಳಿ ಗ್ರಾಮದಲ್ಲಿ ಸೋಮವಾರ ದಂದು ಕರ್ನಾಟಕ ರಾಜ್ಯ ದಲಿತ ಸಂಘ ಸಮಿತಿ ಸಂಘಟನೆಯನ್ನು ಸೂಲದಹಳ್ಳಿ ಗ್ರಾಮದಲ್ಲಿ ಗ್ರಾಮ ಘಟಕ ನಾಮಫಲಕ ಉದ್ಘಾಟನೆಯನ್ನು ವಿಜಯ ನಗರ ಜಿಲ್ಲೆಯ ಡಿಎಸ್ಎಸ್ ನಾ ಜಿಲ್ಲಾ ಸಂಚಲಕರಾದ ಮರಿಸ್ವಾಮಿಯವರು ಹಾಗೂ ಕೂಡ್ಲಿಗಿ ತಾಲೂಕು ಡಿ ಎಸ್ ಎಸ್ ಸಂಚಾಲಕರಾದ ಡಿ. ಎಚ್ ದುರ್ಗೇಶ್ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಸಿದ್ದಪ್ಪ ವಿಎಸ್ಎಸ್ ಅಧ್ಯಕ್ಷರವರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು. ಈ ಸಂರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಲಕರಾದ ಮರಿಸ್ವಾಮಿ ಯವರು ಕೇರಿಯ ಎಲ್ಲಾ ಯುವಕರಿಗೆ ಮತ್ತು ಕೇರಿಯ ಎಲ್ಲಾ ಮಹಿಳೆಯರಿಗೂ ಮುಖಂಡರಗಳಿಗೂ ಡಾ. ಬಿ ಆರ್ ಅಂಬೇಡ್ಕರ್ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಗ್ರಾಮದ ಎಲ್ಲಾ ಜಾತಿ ಜನಾಂಗದವರ ಜೊತೆಗೆ ಉತ್ತಮ ಬಾಂದವ್ಯ ವನ್ನು ಬೆಳಿಸಿಕೊಳ್ಳಬೇಕು ಎಂದು ತಿಳಿಸಿ, ಹಾಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳನ್ನು ಉತ್ತಮವಾದ ಶಿಕ್ಷಣ ವನ್ನು ಕೊಡಿಸುವುದರೊಂದಿಗೆ ನಮ್ಮ ಕೇರಿಯ ಎಲ್ಲಾ ಮನೆ ಮನೆಗಳಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಆಗುವಂತೆ ಶಿಕ್ಷಣವನ್ನು ನಿಮ್ಮ ಮಕ್ಕಳಿಗೆ ಕೊಡಿಸಿ ಎಂದು ಕರೆ ನೀಡಿದರು. ನಂತರ ಮಾತನಾಡಿದ ದುರುಗೇಶ್ ವಕೀಲರು ಇವರು ಸಂಘಟನೆ ಒಗ್ಗೂಡಿಸಿ ಎಲ್ಲಾ ಯುವಕರಗಳಿಗೆ ಡಿ ಎಸ್ ಎಸ್ ಸಂಘಟನೆ ಬಗ್ಗೆ ಸಂಘದ ನಿಯಮಗಳನ್ನು ಮಿರದೇ ಅಂಬೇಡ್ಕರ್ ರವರ

ಬೆಳೆಗಳಿಗೆ ನೀರು ಬಿಡಿ ಇಲ್ಲ ರಾಜೀನಾಮೆ ನೀಡಿ ಕೆ ಆರ್ ಎಸ್ ಪಕ್ಷದ ನಿರುಪಾದಿ ಕೆ ಗೊಮರ್ಸಿ ಒತ್ತಾಯ

ಇಮೇಜ್
ಸಿಂಧನೂರು : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸಿಂಧನೂರು ತಾಲೂಕ ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕವ ಯತ್ನ ನಡೆಯಿತು. ಶಾಸಕರು ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೊಮರ್ಸಿ ಮಾತನಾಡಿ ತಾಲೂಕಿನಲ್ಲಿ ಪ್ರಸ್ತುತ 2023-24 ನೇ ಸಾಲಿನಲ್ಲಿ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜೋಳ ಹತ್ತಿ ಕಡಲೆ ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಒಣಗಿದ್ದು ಸಾಗುವಳಿದಾರರಿಗೆ ಖರ್ಚು ಮಾಡಿದ ಮೊತ್ತ ಕೂಡ ರೈತರಿಗೆ ಹಿಂದಕ್ಕೆ ಬಾರದಂತ ಸ್ಥಿತಿ ಉಂಟಾಗಿದೆ. ಇನ್ನು ಕಾಲುವೆ ವಿಷಯವಾಗಿ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲುವೆಯಲ್ಲಿ ನೀರಿನ ಹರಿವು ಸಮರ್ಪಕವಾಗಿರುವುದಿಲ್ಲ, ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಗೇಜ್ ಸರಿಯಾಗಿ ಇರುವುದಿಲ್ಲ, ಅಲ್ಲದೆ ನೀರನ್ನು ಮಾರಾಟ ಮಾಡಿಕೊಳ್ಳುತ್ತಿರುವ ವಿಷಯಗಳು ಕೂಡ ಕೇಳಿ ಬರುತ್ತವೆ. ನಮಗೆ ತಿಳಿದ ಪ್ರಕಾರ ಕಾಲುವೆ ಮಧ್ಯ ಮತ್ತು ಕೊನೆಯ ಭಾಗದ ಜಮೀನುಗಳಿಗೆ ಕಳೆದ ದಶಕದಿಂದಲೂ ಕಾಲುವೆ ನೀರು ಹೋಗುತ್ತಿಲ್ಲ ಈ ಕುರಿತಂತೆ ಕೆಳಭಾಗದ ರೈತರು ಹಲವಾರು ಹೋರಾಟಗಳನ್ನ ಮಾಡಿದರು ಪ್ರಯೋಜನವಾಗಿರುವುದಿಲ್ಲ. ತಾಲೂಕಿನಲ್ಲಿ ನಕಲಿ ಬೀಜಗಳ ಪೂರೈಕೆಯಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ಇಲ್ಲ ರಾಸಾಯನಿಕ ಕ್ರಿಮಿ ನಾಶಕಗಳ ಬೆಲೆ ಗಗನಕ್ಕೆರಿದ್ದು ಈ ಸಾಲಿನಲ್ಲಿ ಇಳುವರಿ ಕೂಡ ಬಂದಿರುವುದ

ದೇಶದ ಏಕತೆಗೆ ಸರ್ದಾರ್ ವಲ್ಲಭಭಾಯಿ ಪಟೇಲರ್ ಪಾತ್ರ ದೊಡ್ಡದು: ಸಿದ್ಧಾರ್ಥ ಪಾಟೀಲ್

ಇಮೇಜ್
ಮಸ್ಕಿ : ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರ ಸೇವೆ ದೊಡ್ಡದಾಗಿದೆ,ಅಖಂಡ ಭಾರತದ ಕನಸ್ಸನ್ನು ಕಂಡವರಲ್ಲಿ ಮೊದಲಿಗರಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಿಗೆ ಕೀರ್ತಿ ಸಲ್ಲುತ್ತದೆ ಎಂದು ಉಪ ಪ್ರಾಚಾರ್ಯರಾದ ಸಿದ್ದಾರ್ಥ ಪೊ.ಪಾಟೀಲ್ ಹೇಳಿದರು.  ಜನನಿ ಪೂರ್ವ ಕಾಲೇಜ್ ನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಏಕತಾ ದಿನಾಚರಣೆಯೂ ದೇಶದ ಪ್ರಥಮ ಉಪ ಪ್ರಧಾನಮಂತ್ರಿ ಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಹುಟ್ಟಿದ ದಿನವಾಗಿದ್ದು ಅವರು ಭಾರತವನ್ನು ಒಗ್ಗೂಡಿಸುವ,ವಿಲೀನಗೊಳಿಸುವ ಮಹತ್ತರವಾದ ಶ್ರೇಯಸ್ಸು ಅವರ ಸೇವೆ ಶ್ರೇಷ್ಠವಾಗಿದೆ ಹೀಗಾಗಿ 2014 ರಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಏಕತಾ ದಿನ ಎಂದು ಘೋಷಿಸಿದರು ಎಂದು ಜನನಿ ಪದವಿ ಪೂರ್ವ ಕಾಲೇಜು ನ ಉಪ ಪ್ರಾರ್ಚಾಯರಾದ ಸಿದ್ದಾರ್ಥ ಪೊ.ಪಾಟೀಲ್ ಹೇಳಿದರು.  ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿರೇಶ ಜಂಗಮರಹಳ್ಳಿ, ದಿವ್ಯಾ ಕುಮಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಹೂವಿನ ಹಡಗಲಿ ರೈತರಿಂದ ಪೈಪ್ ಲೈನ್ ಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಯಶಸ್ವಿಯಾದ ಶಾಸಕ- ಡಾ. ಶ್ರೀನಿವಾಸ್ ಎನ್. ಟಿ.‌

ಇಮೇಜ್
ಕೂಡ್ಲಿಗಿ  74 ಕೆರೆಗಳಿಗೆ ನೀರು ತುಂಬಿಸಲು ದಿ. 30-10-23 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಗಣ್ಯಮಾನ್ಯರೊಂದಿಗೆ ತೆರಳಿ ಹೂವಿನ ಹಡಗಲಿ ಸಿಂಗಟಲೂರು ಏತಾ ನೀರಾವರಿ  ಮತ್ತು  ರಾಜವಾಳ ಗ್ರಾಮದ " ಕೂಡ್ಲಿಗಿ ಜಾಕ್ ವಾಲ್ " ( ಕೂಡ್ಲಿಗಿ  74 ಕೆರೆಗಳಿಗೆ ನೀರು ತುಂಬಿಸುವ ಪಂಪ್ ಸೆಟ್ ) ಗೆ ಭೇಟಿ ನೀಡಿ ವಿಸ್ತೃತವಾದ ವರದಿ ಗಮನಿಸಿ ಇಂಜಿನಿಯರ್ ಗಳಾದ ಐಗಳ ಪ್ರಕಾಶ ಇಇ , ಶಿವಮೂರ್ತಿ ಇಇ, ರಾಘವೇಂದ್ರ ಎ ಇಇ , ರಾಜ ಡಿ.ಎನ್ ಗಳೊಂದಿಗೆ  ಪರಿಶೀಲಿಸಿದರು. ಒಂಬತ್ತು ಕಿ. ಮೀ. ಪೈಪ್ ಲೈನ್ ಸಮಸ್ಯೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುಂಠಿತವಾಗಿತ್ತು. ನ್ಯಾಯಯುತ  ಪರಿಹಾರಕ್ಕಾಗಿ ಆಗ್ರಹಿಸಿ ಹೂವಿನ ಹಡಗಲಿ  ಹಳ್ಳಿಗಳ  ರೈತರು ತಡೆ ಇಡಿದಿದ್ದರು. ಭೂಮಿ ಸ್ವಾಧೀನ ಪಡಿಸಿಕೊಳ್ಳಲು  ಕೂಡ್ಲಿಗಿ ಭಾಗದ ಜನರ ಒಳಿತಿಗಾಗಿ ಕೆರೆಗಳಿಗೆ ನೀರು ತುಂಬಿಸಲು ಅವಕಾಶ ಮಾಡಿಕೊಡಬೇಕು ಎಂದೂ ಶಾಸಕರು ಒತ್ತಾಯಿಸಿದರು.‌ ಶಾಸಕರು ಮಾತನಾಡಿ,  ಕೂಡ್ಲಿಗಿ ರೈತರು ಸುಖವಾಗಿಲ್ಲ. ಪ್ಲೋರೈಡ್ ನೀರಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಬರಗಾಲದಿಂದ ಜನ ತತ್ತರಿಸಿ ನಿತ್ಯ ಗುಳೇ  ಹೋಗುತ್ತಿದ್ದಾರೆ.  ನಮ್ಮ ಒಳಿತಿಗಾಗಿ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ.  ನೀವು ಒಂದು ಹೆಜ್ಜೆ ನಮಗಾಗಿ ಮುಂದೆ ಇಡಬೇಕು.  ಶಕ್ತಿ ಮೀರಿ ನಿಮ್ಮ ಪರ ನಿಲ್ಲುತ್ತೇವೆ ಎಂದರು.  ಶಾಸಕರ ಮನದಾಳದ ಮಾತಿನಿಂದ ಅನಕನಹಳ್ಳಿ -  ರಾಜ ವಾಳಗ್ರಾಮದ ರೈತರು

ಶಿಕ್ಷಣದೇಶಯಲ್ಲಿ ಸೂಕ್ತ ಕರಾಟೆ ತರಬೇತಿ ನಮ್ಮ ಗ್ರಾಮೀಣ ಮಕ್ಕಳಿಗೆ ಸಿಕ್ಕರೆ ರಾಷ್ಟ್ರೀಯ ಅಂತರಾಷ್ಟ್ರೀಯ ಒಲಂಪಿಕ್ಸ್ ನಲ್ಲಿ ಪದಕ ಪಡೆಯುತ್ತಾರೆ : ರಾಘವೇಂದ್ರ ಹಿಟ್ನಾಳ

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ ನ-30 : - ಈಗಾಗಲೇ ಕರಾಟೆ ಎನ್ನುವುದು ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡೆ ಎನ್ನುವುದು ಸಾಬೀತಾಗಿದೆ. ಮಕ್ಕಳು ಸ್ವರಕ್ಷಣೆಗಾಗಿ ಕರಾಟೆ ತರಬೇತಿಯನ್ನು ಪಡೆಯಬೇಕಿದೆ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮಕ್ಕಳು ವಹಿಸುವಂತೆ ತರಬೇತಿದಾರರು ಮಾಡಬೇಕಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.  ಇತ್ತೀಚಿಗೆ ಕೊಪ್ಪಳದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಸ್ಪಿರಿಟ್ ಕರಾಟೆ ಅಕಾಡೆಮಿ ಕೊಪ್ಪಳ ಸೇವಾ ವಿದ್ಯಾಲಯ ಕಿನ್ನಾಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮಟ್ಟದ 2023 - 24 ನೇ ಸಾಲಿನ ಜಿಲ್ಲಾಮಟ್ಟದ ಕರಾಟೆ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.  ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಹೆಚ್ಚಿನ ಮಟ್ಟದಲ್ಲಿ ಕರಾಟೆ ತರಬೇತಿ ನೀಡುವಂತಾಗಬೇಕು ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ ಆದರೆ ಅವರಿಗೆ ಅವಕಾಶಗಳು ಸಿಗುವುದಿಲ್ಲ. ಅವಕಾಶಗಳನ್ನು ಕಲ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ. ವಿಶ್ವದಲ್ಲಿ ಜನಸಂಖ್ಯೆಯಲ್ಲಿ ನಾವು ಮೊದಲನೇ ಸ್ಥಾನದಲ್ಲಿದ್ದೇವೆ. ಸೂಕ್ತ ತರಬೇತಿ ಸಿಕ್ಕರೆ ನಮ್ಮ ಮಕ್ಕಳು ಸಹ ಒಲಂಪಿಕ್ಸ್ ನಲ್ಲಿ ಪದಕವನ್ನು ಪಡೆಯುತ್ತಾರೆ. ಮಕ್ಕಳಿಗೆ ಪ್ರೋತ್ಸಾಹಿಸಬೇಕು ಮತ್ತು ಕ್ರೀಡಾ ಮನೋಭಾವನೆಯನ್ನು ಬಳಸಬೇಕು ಹೀಗಾದಾಗ ಗ್ರಾಮೀಣ ಮ

ಕನ್ನಡ ರಾಜ್ಯೋತ್ಸವ ಆಚರಣೆಗೆ ಕನ್ನಡ ಪರ ಸಂಘಟನೆಗಳಿಂದ ಅಧಿಕಾರಿಗಳ ವಿರುದ್ಧ ಅಸಮಾಧಾನ..!

ಇಮೇಜ್
ಕೊಟ್ಟೂರು : 17.10.2023 ರಂದು ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿತ್ತು ಈ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕನ್ನಡ ಮಾಧ್ಯಮದ ಮಿತ್ರರು ಬೆರಳೆಣಿಕೆ ಮಾತ್ರ ಜನರು ಭಾಗಿಯಾಗಿದ್ದು. ಈ ಸಭೆಯಲ್ಲಿ ಹಲವಾರು ಸಂಘಟನೆಗಳ ಅಧ್ಯಕ್ಷರು ಮುಖಂಡರುಗಳು ಇರುವುದಿಲ್ಲ ಹಾಗಾಗಿ ಈ ಸಭೆಯನ್ನು ಇನ್ನೊಮ್ಮೆ ಕರೆಯಿರಿ ಎಂದು ಮಾಧ್ಯಮ ಮಿತ್ರರು ಸಲಹೆ ನೀಡಿದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ  ಅಧ್ಯಕ್ಷರಾಗಿರುವ ಮಾನ್ಯ ಕೊಟ್ಟೂರು ಪ್ರಭಾರಿ ತಾಸಿಲ್ದಾರ್ ಸಾಹೇಬರು, ಸಲಹೆಗಳಿಗೆ ಬೆಲೆ ಕೊಡದೆ ಹೊಸ ಹೊಸ ನಿಯಮಗಳನ್ನು ಮಾಡುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎಲ್ಲಾ ಕನ್ನಡಪರ ಸಂಘಟನೆ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡದೆ ಅವರಿಗೆ ತಿಳಿದಂತೆಯೇ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವರಿಗೆ ಸನ್ಮಾನ ಮಾಡುವ ಕುರಿತು ಒಂದು ಕಮಿಟಿ ರಚನೆ ಮಾಡಿ ಅದಕ್ಕೆ ತಾಲೂಕು ಪಂಚಾಯಿತಿ ಇಓ ಸಾಹೇಬ್ರೆ ಅಧ್ಯಕ್ಷತೆಯಲ್ಲಿ, ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು,ಹಾಗೂ ಸಂಘಟನೆಯ ಮುಖಂಡರ ಒಮ್ಮತದ ಮೇರೆಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಹಸಿಲ್ದಾರ್ ಹೇಳಿದ್ದರು.ಆದರೆ ಇಲ್ಲಿಯವರೆಗೂ ಕನ್ನಡಪರ ಯಾವ ಸಂಘಟನೆ ಅಧ್ಯಕ್ಷರನ್ನು ವಿಶ್ವಷಕ್ಕಾದರೂ, ಸೌಜನ್

121 ನೇ ಸಂಡೇ ಫಾರ್ ಸೋಷಿಯಲ್ ವರ್ಕ್ ಕಾರ್ಯ

ಇಮೇಜ್
ಲಿಂಗಸೂಗೂರು : ಸಮೀಪದ ಕಸಬಾ ಲಿಂಗಸೂಗೂರು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದವನ್ನು ಮಸ್ಕಿಯ ಅಭಿನಂದನ್ ಸಂಸ್ಧೆ ವತಿಯಿಂದ ಆರಂಭಿಸಿದ ಸಂಡೇ ಫಾರ್ ಸೋಷಿಯಲ್ ವರ್ಕ್ 121ನೇ ಸೇವಾ ಕಾರ್ಯದಲ್ಲಿ ಸ್ವಚ್ಛತೆ ಗೊಳಿಸಿ ಬಣ್ಣವನ್ನು ಹಚ್ಚಲಾಯಿತು. ಈ ಬಸ್ ನಿಲ್ದಾಣ ಕಳೆದ 70 ವರ್ಷಗಳಿಂದ ಸುಣ್ಣ ಬಣ್ಣವನ್ನು ಕಂಡಿರಲಿಲ್ಲ ಎಂದು ಗ್ರಾಮದ ಯುವಕರಾದ ಕಾರ್ತಿಕ ಹೇಳಿದರು. ನಂತರ ಮಾತನಾಡಿದ ಅಭಿನಂದನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ನಮ್ಮ ಅಭಿನಂದನ್ ಶಿಕ್ಷಣ ಸಂಸ್ಥೆ ಮಸ್ಕಿಯಲ್ಲಿ ಪ್ರಾರಂಭ ಮಾಡಿದ್ದೇವೆ ಪ್ರತಿ ರವಿವಾರ ಸಂಡೇ ಪಾರ್ ಸೋಷಿಯಲ್‌ ವರ್ಕ್ ಮಾಡುವ ಮೂಲಕ ನಮ್ಮ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯುವಕರನ್ನು ಸೇರಿಸಿಕೊಂಡು ಅವರ ಸಹಕಾರದ ಮೂಲಕ ಸರಕಾರಿ ಶಾಲೆಗಳನ್ನ,ದೇವಸ್ಥಾನಗಳನ್ನು, ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಮಾಡಿ,ಸುಣ್ಣಬಣ್ಣ ಹಚ್ಚುವ ಮೂಲಕ ಸುಂದರವಾಗಿ ಕಾಣುವಂತೆ ಮಾಡಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂಬುದನ್ನು ಮನವರಿಕೆ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಸದ್ಯ ಈ 121ನೇ ಆವೃತ್ತಿಯ ಕಾರ್ಯಕ್ರಮವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ,ಮಹೇಶ ಖೇಣೆದ, ಜಾಫರ್ ಮಿಯಾ, ಅಮರೇಶ ಕಿಲ್ಲಾರಹಟ್ಟಿ, ಅಮಿತ್ ಕುಮಾರ್ ಪುಟ್ಟಿ, ಪ್ರಜ್ವಲ,ಕಿಶೋರ,ಕಾರ್ತಿಕ, ಬಂಡೆಪ್ಪ,ಗ್ರ

ನೂತನ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನಾಗೇಶ್ ಜಂಗಮರ ಹಳ್ಳಿ ಆಯ್ಕೆ

ಇಮೇಜ್
ಮಸ್ಕಿ : ಪಟ್ಟಣದ ಹೊರ ವಲಯದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಮಸ್ಕಿ ತಾಲೂಕಿನ ದಲಿತ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಮುಖಂಡರು ಒಮ್ಮತದಿಂದ ನೂತನ ಅಧ್ಯಕ್ಷರನ್ನಾಗಿ ನಾಗೇಶ್ ಜಂಗಮರ ಹಳ್ಳಿ,ಉಪಾಧ್ಯಕ್ಷರಾಗಿ -ಹನುಮಂತ ನಾಯಕ ರಂಗಾಪುರ, ಸಿದ್ದಪ್ಪ ಉದ್ಬಾಳ್ ಉಪನ್ಯಾಸಕರು, ಗೌರವಸಲಹೆಗಾರರಾಗಿ - ನಿಂಗಪ್ಪ ಉಪನ್ಯಾಸಕರು, ಹನುಮಂತ ಶಿಕ್ಷಕರು,  ಕಾರ್ಯಧ್ಯಕ್ಷರಾಗಿ - ಮಂಜುನಾಥ ಮುಖ್ಯ ಗುರುಗಳು ಹಾಲಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಕಡಬೂರು ಉಪನ್ಯಾಸಕರು, ಸಹ ಕಾರ್ಯದರ್ಶಿಗಳಾಗಿ - ಲಕ್ಷ್ಮಣ್ ಮೇಟಿ ಶಿಕ್ಷಕರು ಮಸ್ಕಿ, ಶಿವ ಗ್ಯಾನಪ್ಪ ಉಪನ್ಯಾಸಕರು ಮಸ್ಕಿ, ಖಜಾಂಚಿಯಾಗಿ - ಈಶಪ್ಪ ಶಿಕ್ಷಕರು, ನಿರ್ದೇಶಕರಾಗಿ - ರಾಮನಗೌಡ ಶಿಕ್ಷಕರು ಮಸ್ಕಿ, ಶಿವಪ್ಪ ಹಸಮ ಕಲ್ ಶಿಕ್ಷಕರು, ಪರಪ್ಪ ಭಂಡಾರಿ ಉಪನ್ಯಾಸಕರು, ಅನಿಲ್ ಕುಮಾರ್ ಕೆಇಬಿ ಮಸ್ಕಿ, ಕಾನೂನು ಸಲಹೆಗಾರರಾಗಿ - ಅಜಿತ್ ಜಾಲವಾಡಗಿ, ಪತ್ರಿಕಾ ಸಲಹೆಗಾರರಾಗಿ - ಗ್ಯಾನಪ್ಪ ಮೆದಿಕಿನಾಳ ಪತ್ರಕರ್ತರು, ಸಾಹಿತಿಕ ಸಲಹೆಗಾರರಾಗಿ - ದಾನಪ್ಪ ಸಿ ನಿಲೋಗಲ್, ಬಾಲ ಸ್ವಾಮಿ ಮುಖ್ಯ ಗುರುಗಳು ಮಸ್ಕಿ, ಅಬ್ದುಲ್ ಗನಿ ಸಾಹಿತ್ಯ, ಪ್ರಕಾಶನ ಸಲಹೆಗಾರರು - ದೇವರಾಜ್ ಗಂಟೆ, ಶಾಂತಪ್ಪ ನಗನೂರು, ಜಯಪ್ಪ ಶಿಕ್ಷಕರು,ಮಹಿಳಾ ಪ್ರತಿನಿಧಿ - ಶ್

ಪುನೀತ್ ಅಭಿಮಾನಿ ಬಳಗದಿಂದ ಎರಡನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ: ನೂರಾರು ಜನರಿಗೆ ಅನ್ನದಾನ, ಮಕ್ಕಳಿಗೆ ಪುಸ್ತಕ ವಿತರಣೆ,

ಇಮೇಜ್
ಕೊಟ್ಟೂರು: ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ಭಾನುವಾರ ಕೊಟ್ಟೂರಿನ ಗಾಂಧಿ ಸರ್ಕಲ್ ತೇರು ಗಡ್ಡೆ ಹತ್ತಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ ಅವರ  29 /10/ 2023ರ ಪುಣ್ಯಸ್ಮರಣೆಯ ಅಂಗವಾಗಿ 100 ಸರ್ಕಾರಿ ಶಾಲಾ ಮಕ್ಕಳಿಗೆ ಪೆನ್ನು ಪೆನ್ಸಿಲ್ ರಬ್ಬರ್ ಹಾಗೂ ಪುಸ್ತಕ, ಫ್ಲೆವುಡ್ ಗಳನ್ನು ವಿತರಿಸಲಾಯಿತು. ಈ ಪುಣ್ಯ ಸ್ಮರಣೆಯ ಅಂಗವಾಗಿ ನೂರಾರು ಜನರಿಗೆ ಅನ್ನದಾನವನ್ನು ಏರ್ಪಡಿಸಿದರು ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರುದ್ರಮ್ಮ ಮಂಗಳಮುಖಿ, ಹಾಗೂ ಗೌರಮ್ಮ ಮಂಗಳಮುಖಿ, ಹಾಗೂ ಬಿ ಮುತೇಶ್ ಶಿಕ್ಷಕರು, ಎಮ್ ಶಿವಕುಮಾರ್ ಶಿಕ್ಷಕರು, ಇವರಿಗೆ ಶಾಲುವದಿಸಿ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಪ್ರಕಾಶ್ ರಾಂಪುರದ ಹಾಗೂ ಉಪಾಧ್ಯಕ್ಷರಾದ ಕೆಎಂಎಂ ಗುರುಸ್ವಾಮಿ ಹಾಗೂ ಗಜಾಪುರದ ರಾಜ ಹಾಗೂ ಅಡವಿಹಳ್ಳಿ ರಾಜಪ್ಪ ಆರ್ ಮಂಜುನಾಥ್ ಬಿ ರವಿ ಐ ಮಂಜುನಾಥ್ ಮತ್ತು ನೂರಾರು ಅಭಿಮಾನಿಗಳು ಬಳಗದವರು ಇದ್ದರು. ಕೊಟ್ -1 ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಶಿಕ್ಷಕರು ಹಾಗೂ ಮಂಗಳಮುಖಿ ಯುವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇಂತಹ ಸಮಾಜ ಸೇವೆ ನಡೆಯಬೇಕು. ಎಂದು ಕೊಟ್ರೇಶ

"ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ :ಸಿಪಿಐಎಂಎಲ್ ಪಕ್ಷ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್"

ಇಮೇಜ್
*ಕೊಟ್ಟೂರು ತಾಲೂಕು ಹಲವು ಅಭಿವೃದ್ಧಿಗೆ ಹೆಚ್ಚಿನ ಒತ್ತು : ಸಿಪಿಐ(ಎಂಎಲ್) ಲಿಬರೇಷನ್ ಪಕ್ಷದ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್* *ಕಾರ್ಮಿಕರು, ದೀನ ದಲಿತರು,ಕೃಷಿ ಕೂಲಿ ಕಾರರು ಪರವಾಗಿ |ಸಿಪಿಐಎಂಎಲ್ ಪಕ್ಷ ಕೆಲಸ ಮಾಡಲು ಸದಾ ಸಿದ್ದ |ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ * ಕೊಟ್ಟೂರು : ವಿಜಯನಗರ ಜಿಲ್ಲಾ ಸಮ್ಮೇಳನ ಕಾರ್ಯಕ್ರಮವನ್ನು ತಾಲೂಕಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸಿಪಿಐ (ಎಂಎಲ್) ಲಿಬರೇಷನ್ ಪಕ್ಷವು  ಭಾನುವಾರದಂದು  ಹಮ್ಮಿಕೊಳ್ಳಲಾಗಿತ್ತು. ಪಕ್ಷದ ರಾಜ್ಯಮಟ್ಟದ ಮುಖಂಡರಾದ ಮಣಿ ಕಾಮ್ರೇಡ್ ಮಾತನಾಡಿ ತಾಲೂಕಿಗೆ ಬೇಕಾದ ಮೂಲಭೂತ ಆಡಾಳಿತಾತ್ಮಕ ಕಛೇರಿಗಳು ಇಲ್ಲದೆ ಮೂಲಭೂತವಾಗಿ ಬಿ ಇ ಓ ಆಫೀಸ್ ,ಸರ್ಕಾರಿ ಡಿಗ್ರಿ ಕಾಲೇಜ್,ಕೋರ್ಟ್ , ಎಲ್ಲಾ ಗ್ರಾಮಾಂತರ ಪತ್ರಿಕರ್ತರಿಗೆ ಉಚಿತ ಬಸ್ ಸೌಲಭ್ಯ ಮತ್ತು  ತಿಂಗಳಿಗೆ 15000/ ಪ್ರೋತ್ಸಾಹಧನ  ಸಾಲ ಸೌಲಭ್ಯ ನೀಡಲು ಒತ್ತಯ,ಸಬ್ ರಿಜೆಸ್ಟ್ ಕಛೇರಿಗಳು ,ಖಾಸಗಿ ಶಾಲೆಯ ಡೊನೇಷನ್ ಹಾವಳಿ ತಡೆಗಟ್ಟಿವುದು,ಕೊಟ್ಟೂರಿಗೆ ಶಾಶ್ವತ ನಿರಾವರಿ ಯೋಜನೆಗಳು, ಕೊಟ್ಟೂರು ಹರಪನಹಳ್ಳಿ ಹಗರಿಬೊಮ್ಮನಹಳ್ಳಿ ಸರ್ವಮತ ಕಾಲದ ಕನಿಷ್ಠ 20 ಚಿಕ್ಕ ಡ್ಯಾಮ್ ನಿರ್ಮಿಸಬೇಕು, ಕೊಟ್ಟೂರು -ಮೈಲಾರ -ಉಜ್ಜಿನಿ- ಗಣಗಟ್ಟೆ -ಉಚ್ಚಂಗಿದುರ್ಗ ಗ್ರಾಮಗಳಲ್ಲಿ  ಕೃಷಿ ಕೂಲಿಕಾರ ಭಕ್ತರಿಗೆ ತಂಗುಧಾನ ನೀಡಬೇಕು. ಮತ್ತು ಉಚಿತ ಶೌಚಾಲಯ ಹಾಗೂ ಸ್ನಾನದ ವ್ಯವಸ್ಥೆ ಸೌಲಭ್ಯ ಕಲ್ಪಿಸಬೇಕು, ವಿಜಯನಗರ ಜಿಲ್ಲೆಯ ಹೊಸಪೇಟೆಯನ್ನು ಹೊರತುಪಡಿ

ಅದ್ದೂರಿಯಾಗಿ ಜರುಗಿದ ಭ್ರಮರಾಂಬದೇವಿ ಜಂಬೂ ಸವಾರಿ

ಇಮೇಜ್
ಮಸ್ಕಿ: ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ನಡೆದ ದೇವಿ ಪುರಾಣ ಮುಕ್ತಾಯ ಹಾಗೂ ಜಂಬೂ ಸವಾರಿ ಶನಿವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು. ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಅಂಬಾರಿಗೆ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿದರು. ವೇದಿಕೆಯ ಮೇಲೆ ಶಾಸಕ ಆರ್.ಬಸವನಗೌಡ ತುರುವಿಹಾಳ,ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ, ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ,ತಹಶೀಲ್ದಾರ್‌ ಸುಧಾ ಅರಮನೆ,ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸರ್ಕಲ್ ಪೋಲಿಸ್ ಇನ್‌ಸ್ಪೆಕ್ಟರ್ ಬಾಲಚಂದ್ರ ಡಿ.ಲಕ್ಕಂ, ಪಿ.ಎಸ್.ಐ.ತಾರಾ ಬಾಯಿ, ಮಲ್ಲಯ್ಯ ಮುರಾರಿ,ಪ್ರಧಾನ ಅರ್ಚಕ ರಾದ ಸಿದ್ದಯ್ಯ ಹಿರೇಮಠ ಸೇರಿದಂತೆ ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಗಂಗಾಸ್ಥಳದಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ, ಹಾಗೂ ಕಳಸಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅಶೋಕ ವೃತ್ತದಿಂದ ಆರಂಭವಾದ ಜಂಬೂ ಸವಾರಿ ಹಾಗೂ ಪಲ್ಲಕ್ಕಿ ಮೆರವಣಿಗೆ ಅಗಸಿ, ಮುಖ್ಯ ಬಜಾರ, ದೈವದಕಟ್ಟೆ, ತೇರು ಬೀದಿ, ಕನಕವೃತ್ತದ ಮೂಲಕ ಸಾಗಿ ಭ್ರಮರಾಂಬಾ ದೇವಸ್ಥಾನಕ್ಕೆ ಆಗಮಿಸಿತ್ತು. ಸಂಡೂರಿನ ಚಂದ್ರಶೇಖರಯ್ಯ ಸ್ವಾಮಿಗಳ ವೀರಗಾಸೆ ನೃತ್ಯ, ಡೊಳ್ಳು ಕುಣಿತ,ನಂದಿ ಕೊಲು,ಹಲಗೆ,ಸರಿದಂತೆ ವಿವಿಧ ವಾದ್ಯಗಳು ಪಾಲ್ಗೊಂಡಿದ್ದವು. ಜಂಬೂ ಸವಾರಿಯ ವೇಳೆ ಪೂರ್ಣ ಪ್ರಮಾಣದ ಕುಂಭ ಮೇಳದಲ್ಲಿ ಭಾಗಿಯಾಗಿದ್ದ 751 ಕ್ಕೂ ಹೆಚ್ಚು ಮಹಿಳೆಯರಿಗೆ ಸಜ್ಜನ್ ಕುಟುಂಬದ ರೇಷ

"ಹದಗೆಟ್ಟಿರುವ ಕೊಟ್ಟೂರು ರೈಲ್ವೆ ಸ್ಟೇಷನ್ ರಸ್ತೆ " ಲೋಕೋಪಯೋಗಿ ಇಲಾಖೆ: ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು

ಇಮೇಜ್
ಕೊಟ್ಟೂರು: ನಾಡಿನ ಆರಾಧ್ಯ ದೈವನಾದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪುಣ್ಯ ಕ್ಷೇತ್ರವಾದ ಕೊಟ್ಟೂರಿಗೆ ಪ್ರತಿದಿನ ನೂರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಜನಸಾಮಾನ್ಯರ ಮಧ್ಯಮ ವರ್ಗದ ಜನರ ಜೀವನಾಡಿ ಎಂದರೆ ಅದುವೇ ರೈಲು ಸಂಚಾರವಾಗಿದೆ. ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಬಂದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಕೊಟ್ಟೂರಿಗೆ ರೈಲು ನಿಲ್ದಾಣ ಆಗಬೇಕೆಂದು ಈ ಭಾಗದ ಜನರ ಬಹುದಿನದ ಬೇಡಿಕೆ ಹಾಗೂ ಕೊಟ್ಟೂರು ರೈಲ್ವೆ ಸಮಿತಿ ಹೋರಾಟಗಾರರ ಶ್ರಮದ ಪ್ರತಿಫಲವೇ ಇಂದು ಕೊಟ್ಟೂರಿನಲ್ಲಿ ರೈಲು ನಿಲ್ದಾಣವಾಗಿದೆ. ಕೊಟ್ಟೂರು  ರೈಲು ನಿಲ್ದಾಣಕ್ಕೆ ಬಂದು ಇಳಿದರೆ ಪ್ರಯಾಣಿಕರನ್ನು ಹದಗೆಟ್ಟಿರುವ ರಸ್ತೆಗಳು ಸ್ವಾಗತಿಸುತ್ತದೆ. ಈ ರಸ್ತೆಯಲ್ಲಿ ಬರುವ ಪ್ರಯಾಣಿಕರು ಭಕ್ತರು , ಬೈಕ್ ಸವಾರರು ವಿದ್ಯಾರ್ಥಿಗಳು, ಈ ಮಾರ್ಗದಲ್ಲಿ ಬರುವ ಗ್ರಾಮದ ರೈತರು  ಈ ಹದಗೆಟ್ಟಿರುವ ರಸ್ತೆಗಳ ಗುಂಡಿಗೆ ಬಿದ್ದು ಕೈ ಕಾಲು ಮುರಿದುಕೊಂಡಿರುವ ಎಷ್ಟೋ ಪ್ರಸಂಗಗಳು ನಡೆದಿದೆ ಎಂದು ಬೈಕ್ ಸವಾರ ಗಜಾಪುರ ಹನುಮಂತಪ್ಪ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆ ರೈಲ್ವೆ ಸ್ಟೇಷನ್ ಗೆ ಹೋಗಬೇಕಾದರೆ ಒಂದು ಕ್ಷಣ ಭಯ ಉಂಟಾಗುತ್ತದೆ.  ಯಾಕೆ ಎಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಬರುವ ಭಕ್ತಾದಿಗಳು ಕತ್ತಲನಲ್ಲೇ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತದೆ ಆದರೆ

ಪತ್ರಕರ್ತನ ದೇಹದ ರಕ್ತದಿಂದ ಸಹಿ ಮಾಡಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಸಿದ್ದರಾಮಯ್ಯರಿಗೆ ಪತ್ರ

ಇಮೇಜ್
ಲಿಂಗಸಗೂರು-ಕರ್ನಾಟಕ ರಾಜ್ಯದ ಪತ್ರಿಕೆ ಮಾಧ್ಯಮದಲ್ಲಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರ ಆದೇಶದ ಮೇರೆಗೆ ಪತ್ರಕರ್ತರ ವಿವಿಧ ಬೇಡಿಕೆಗಾಗಿ ಸಾಕಷ್ಟು ಮನವಿ ಪತ್ರ ಹೋರಾಟ ಮಾಡಿದರು ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿಯಲ್ಲಿ ಪತ್ರಕರ್ತರನ್ನು ಉಪಯೋಗಿಸುವಂತಹ ಜನಪ್ರತಿನಿಧಿಗಳು. ಹಾಗಾಗಿ ಮಾಧ್ಯಮ ಲೋಕದಲ್ಲಿ ಪತ್ರಕರ್ತರು ರಕ್ತದ ಮುಖಾಂತರ ಪತ್ರ ಬರೆದು ಸಹಿಗಳನ್ನು ಹಾಕಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರಿಗೆ ಪತ್ರಕರ್ತರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಲಿಂಗಸುಗೂರು ತಾಲೂಕಿನ ಸಹಾಯಕ ಆಯುಕ್ತರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು. ಕರ್ನಾಟಕ ರಾಜ್ಯದ 14 ಬಾರಿ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಧರಣಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ.ನಂತರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪತ್ರಕರ್ತರ ಬೇಡಿಕೆಗಳಿಗಾಗಿ ಪ್ರತಿಭಟನೆ ಧರಣಿ ಮಾಡುತ್ತಾ ಅಲ್ಲಿಯೂ ಸಹ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದುವರೆಗೆ ತಮ್ಮ ಸರಕಾರದಿಂದ ಪತ್ರಕರ್ತರ ಮನವಿಗೆ ಸ್ಪಂದಿಸದ ಮತ್ತು ನಮ್ಮ ಬೇಡಿಗಳನ್ನು ಈಡೇರಿಸಿದ ಕಾರಣ.  ನಮ್ಮ ದೇಹದಿಂದ ರಕ್ತವನ್ನು ತೆಗೆದು ಪತ್ರ ಬರೆದು ಸಹಿ ಹಾಕುವ ಮೂಲಕ ನಿಮಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಇಮೇಜ್
ಮಸ್ಕಿ : ತಾಲೂಕಿನ ಕುಣಿಕೆಲ್ಲೂರ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಾಯಕ ಸಮುದಾಯದ ಮುಖಂಡರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಲಾಯಿತು.  ಇದೇ ಸಂದರ್ಭದಲ್ಲಿ ಊರಿನ ಮುಖಂಡರು ಹಾಗೂ ಯುವಕರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಮಹಿಳೆಯರಿಂದ ಭ್ರಮರಾಂಭ ದೇವಿಯ ರಥೋತ್ಸವ ಯಶಸ್ವಿ

ಇಮೇಜ್
ಮಸ್ಕಿ: ಇಂದು ಶೀಗೆ ಹುಣ್ಣಿಮೆಯ ನಿಮಿತ್ತ ಭ್ರಮರಾಂಭ ದೇವಿಯ ರಥೋತ್ಸವವನ್ನು ಸಕಲ ಸದ್ಭಕ್ತರ ಸಮ್ಮುಖದಲ್ಲಿ ಮಹಿಳೆಯರಿಂದ ಎಳೆಯುವ ಮೂಲಕ ಶಾಂತಿಯುತವಾಗಿ ನೆರವೇರಿತು. ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹುಣ್ಣಿಮೆಯ ಪ್ರಯುಕ್ತ ಮೈಸೂರು ದಸರಾ ಮಾದರಿಯಂತೆಯೇ ನಮ್ಮ ಭ್ರಮರಾಂಭ ದೇವಿಯ ರಥೋತ್ಸವನ್ನು ಮಹಿಳೆಯರು ಮಾತ್ರ ಎಳೆಯುವುದು ಇಲ್ಲಿಯ ವಿಶೇಷತೆ. ಸುಮಾರು ಹದಿಮೂರು ವರ್ಷಗಳಿಂದಲೂ ಮಹಿಳೆಯರೇ ರಥೋತ್ಸವನ್ನು ಎಳೆಯುತ್ತಾ ಬಂದಿರುತ್ತಾರೆ. ಸಾಯಂಕಾಲ ಸಮಯ 5.30 ನಿಮಿಷಕ್ಕೆ ಸರಿಯಾಗಿ ಪ್ರತೀ ವರ್ಷದಂತೆ ಈ ವರ್ಷದ ರಥೋತ್ಸವ ಯಶಸ್ವಿಯಾಗಿ ಜರುಗಿತು. ಈ ರಥೋತ್ಸವವು ಗಚ್ಚಿನಮಠದ ಶ್ರೀಶ್ರೀಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದರಿಂದ ಭ್ರಮರಾಂಭ ದೇವಿಯ ರಥೋತ್ಸವ ಶಾಂತಿಯುತವಾಗಿ ನಡೆಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು,ವಿವಿಧ ಗ್ರಾಮದ ಸಕಲ ಸದ್ಭಕ್ತರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಕೂಡ್ಲಿಗಿ ಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಪಟ್ಟಣದ ಶ್ರೀ ರಾಮಲಿಂಗಶ್ವರ ದೇವಸ್ಥಾನದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ದಲ್ಲಿ ಪೂಜೆಯನ್ನು ಮಾನ್ಯ ಶಾಸಕರಾದ ಎನ್. ಟಿ.ಶ್ರೀನಿವಾಸ್ ಹಾಗೂ ತಾಲೂಕು ತಹಸೀಲ್ದಾರ್ರಾದ ಶ್ರೀಮತಿ ರೇಣುಕಾ, ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿಗಳಾದ ಮೆಹಬೂಬ್ ಬಾಷ, ಡಿವೈಎಸ್ ಪಿ ಮಲ್ಲೇಪ್ಪ ಮಲ್ಲಾಪುರ, ಸಿಪಿಐ.ಸುರೇಶ ತಳವಾರ ಹಾಗೂ ಶ್ರೀ ವಾಲ್ಮೀಕಿ ಮಹಾಸಭಾ ಸಂಘದ ಅಧ್ಯಕ್ಷರು ಎಸ್. ಸುರೇಶ, ವಾಲ್ಮೀಕಿ ಸಮುದಾಯದ ಮುಖಂಡರು ಕಾವಲಿ ಶಿವಪ್ಪ ನಾಯಕ,ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖ ಮುಖಂಡರು ಗಳಿಂದ ಪೂಜೆ ಸಲ್ಲಿಸಿ ಶ್ರೀ ವಾಲ್ಮೀಕಿ ಭಾವಚಿತ್ರದ ಟ್ರಾಕ್ಟರನ್ನು ಮಾನ್ಯ ಶಾಸಕರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಹಾಗೆ ಈ ಸಂರ್ಭದಲ್ಲಿ ಮೆರವಣಿಗೆ ಯಲ್ಲಿ ಭಾವಹಿಸಿದ್ದ ಎಲ್ಲಾ ಯುವಕರು ಹಾಗೂ ಸಮುದಾಯದ ಮುಖಂಡರುಗಳ ಜೊತೆಗೆ ಶಾಸಕರು ಡಿಜೆ ಸಾಂಗ್ ಗೆ ಸ್ಟೆಪ್ ಹಾಕಿ ಎಲ್ಲರಿಗೂ ಜಯಂತಿಯನ್ನು ಉತ್ಸಾಹದಿಂದ ಮೆರವಣಿಗೆ ಸಾಗುವಂತೆ ಮೆರಗು ಬರುವಂತೆ ಶಾಸಕರು ಎಲ್ಲರ ಜೊತೆಗೆ ಸ್ಟೆಪ್ ಹಾಕುವುದರೊಂದಿಗೆ ಪ್ರೋತ್ಸಾಹ ನೀಡಿದರು. ಹಾಗೂ ಕೂಡ್ಲಿಗಿಯ ಪ್ರಮುಖ ಬೀದಿಗಳಲ್ಲಿ ಜಯಂತಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯು ಬಹಳ ವಿಜೃಂಭಣೆ ಯಿಂದ ನೆಡೆಯಿತು. ಪಟ್ಟಣ ಪಂಚಾಯ್ತಿ ಎಲ್ಲಾ ಸದಸ್ಯರು ಕಾರ್ಯಕ್ರಮದ ಮೆರವಣಿಗೆ ಭಾಗವಸಿದ್ದರು.ಈ ಸಂರ್ಭದಲ್ಲಿ ಭೀಮೇಶ್, ದಾಣಿ ರಾಘವೇಂದ್ರ, ಕಡ್ಡಿ ಮಂಜುನಾ

ಕೊಟ್ಟೂರಿನ ಉಜ್ಜಿನಿ ವೃತ್ತದಲ್ಲಿ ಬೃಹತ್ ವಾಲ್ಮೀಕಿ ಪುತ್ಥಳಿ ಪ್ರತಿಮೆ ಸ್ಥಾಪನೆಗೆ ಭರವಸೆ: ಶಾಸಕ ಕೆ ನೇಮಿರಾಜ್ ನಾಯ್ಕ

ಇಮೇಜ್
ಕೊಟ್ಟೂರಿನಲ್ಲಿ ಬೃಹತ್ ವಾಲ್ಮೀಕಿ ಭವನ ನಿರ್ಮಾಣಕ್ಕೆ: ಶಾಸಕ ನೇಮಿರಾಜ್ ನಾಯ್ಕ ಭರವಸೆ. ಕೊಟ್ಟೂರು: ಪಟ್ಟಣದಲ್ಲಿ ನಡೆದ ಬೃಹತ್ ವಾಲ್ಮೀಕಿ ಜಯಂತಿ ಮೆರವಣಿಗೆಯ ನಿಮಿತ್ತ  ಪ್ರಮುಖ ರಸ್ತೆಗಳಲ್ಲಿ ಡೊಳ್ಳು ವಿವಿಧ ವಾಧ್ಯಗಳ ಮೆರವಣಿಗೆಯಲ್ಲಿ ಕೆಲವೊತ್ತು ಶಾಸಕರು ಭಾಗವಹಿಸಿದ್ದರು.  ನಂತರ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ನಿಮಿತ್ತ ಕೊಟ್ಟೂರು ತಾಲೂಕು ವಾಲ್ಮೀಕಿ ಸಂಘ ಆಯೋಜಿಸಿದ್ದ ಮೆರವಣಿಗೆಯಲ್ಲಿದ್ದ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಪಟ್ಟಣದ ಉಜ್ಜಿನಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಪ್ರತಿಮೆಯನ್ನು ನಿರ್ಮಿಸಿ ಅಳವಡಿಸಲು ಸೂಕ್ತ ಕ್ರಮವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ಸಮಾಜ ಬಾಂಧವರು ತಿಳಿಸಿದರು.  ಕೊಟ್ಟೂರು ತಾಲೂಕು ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ನೂತನ ಬೃಹತ್ ಭವನ ನಿರ್ಮಾಣಕ್ಕೆ ಸೂಕ್ತ ಬಗೆಯ ಅನುದಾನ ಒದಗಿಸಿಕೊಡುತ್ತ ಎಲ್ಲಾ ಬಗೆಯ ನೆರವು ನೀಡುವೆ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಭರವಸೆ ವ್ಯಕ್ತಪಡಿಸಿದರು.  ಈ ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ತಹಶೀಲ್ದಾರ್ ವಿ.ಕಾರ್ತಿಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸುರುಲ್ಲಾ ಮತ್ತಿತರರು ಅವರೊಂದಿಗೆ ಇದ್ದರು. ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಕೆ.ಮಂಜುನಾಥ ಕಾರ್ಯದರ್ಶಿ ನಾಗರಾಜ ಸುಂಕದಕಲ್ಲು, ಉಪಾಧ್ಯಕ್ಷ ಶಶಿಧರ ಕನ್ನಾಕಟ್ಟಿ, ಖಜಾಂಚಿ, ದೀಪಾ ಪ್ರಕಾಶ

"ಇತಿಹಾಸದಲ್ಲಿ ಮಹತ್ವ, ಪ್ರಾಮುಖ್ಯತೆ |ಮಹರ್ಷಿ ವಾಲ್ಮೀಕಿ ರಾಮಾಯಣಕ್ಕೆ|ಕಾರ್ತಿಕ್ ವಿ ತಹಶೀಲ್ದಾರ್ "

ಇಮೇಜ್
ಕೊಟ್ಟೂರು ತಾಲೂಕು ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ  ಇಲಾಖೆ, ಕೂಡ್ಲಿಗಿ ಇವರ ಸಹಕಾರದೊಂದಿಗೆ ತಾಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ವೀರಭದ್ರಪ್ಪ ಕೋಡಿಹಳ್ಳಿ ಶಿಕ್ಷಕರು ಮಹರ್ಷಿ ವಾಲ್ಮೀಕಿ ಹಾಗೂ ನಾಯಕ ಸಮುದಾಯ ದೇಶಕ್ಕಾಗಿ, ಸಮಾಜಕ್ಕಾಗಿ ಮತ್ತು ಈ ಸಮಾಜವು ವಿಜಯಪುರ ಜಿಲ್ಲೆ ಮುಧೋಳ್ ತಾಲೂಕಿನ  ಹಲಗಲಿ ಗ್ರಾಮದ ನಾಲ್ಕು ಜನ ಬೇಡರ ಪಡೇ ತಮ್ಮ ಆಯುಧಗಳು ಗೋಸ್ಕರ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಸಿದ ಮೊದಲ ಗ್ರಾಮವಾಗಿದೆ ಎಂದರೆ ತಪ್ಪಾಗಲಾರದು ಎಂದು ಈ ಬಗ್ಗೆ ವಿಶೇಷವಾಗಿ  ಉಪನ್ಯಾಸ ನೀಡಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು,  ಹಾಗೂ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾರ್ತಿಕ.ವಿ ತಹಶೀಲ್ದಾರರು  ಮಾತನಾಡಿ ಉತ್ತಮ ಸಮಾಜಕ್ಕೆ ಮುಂದಿನ ಪೀಳಿಗೆಗೆ ರಾಮಾಯಣ ಬಗ್ಗೆ ತಿಳಿಯಬೇಕಾಗಿದೆ ಮತ್ತು ನಮ್ಮ ಭಾರತ ದೇಶವು ವಿವಿಧ ಭಾಷೆಯ ಆಚಾರ ವಿಚಾರ ಧರ್ಮದಿಂದ ಕೂಡಿದ ದೇಶವಾಗಿದ್ದು ಸಂವಿಧಾನದ ಅಡಿಯಲ್ಲಿ ಎಲ್ಲಾ ಸಮುದಾಯಗಳು ಒಗ್ಗಟ್ಟಿನಿಂದ ಹೋಗಬೇಕು ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್, ಪಟ್ಟಂ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಎಡಿ ನರೇಗಾ ವಿಜಯಕುಮಾರ್, ಶರಣಪ್ಪ ಸೊಬರದ ಕಛೇರಿ ಅಧೀಕ್ಷಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕೂಡ್ಲಿಗಿ, ಅಂಜಿನಪ್ಪ ವಾಲ್ಮೀಕಿ ಸಮಾಜದ ಮ

"ಟಿಕೆಟ್ ಕೊಡಿಸುವಂತೆ ನಂಬಿಸಿ 2 ಕೋಟಿ 3 ಲಕ್ಷ ವಂಚನೆ ಆರೋಪಿಯ ವ್ಯಕ್ತಿ ಬಂಧನ"

ಇಮೇಜ್
ರೇವಣಸಿದ್ದಪ್ಪ ಆರೋಪಿಯನ್ನು ಬಂಧಿಸುವಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ತಂಡ ಯಶಸ್ವಿ  ಕೊಟ್ಟೂರು:ಚೈತ್ರ ಕುಂದಾಪುರ ಪ್ರಕರಣ ತರಹದಂತೆ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ 2023ರ ಚುನಾವಣೆಯ ಬಿಜೆಪಿ ಟಿಕೆಟ್ ಕೊಡಿಸುವಂತೆ ನಂಬಿಸಿ 2ಕೋಟಿ 3 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚನೆ ಮಾಡಿದ ಪ್ರಮುಖ ಆರೋಪಿ ಬೆನಕನಹಳ್ಳಿ ರೇವಣಸಿದ್ದಪ್ಪ ಎಂಬ ವ್ಯಕ್ತಿ ವಿರುದ್ಧ ವಂಚನೆಗೊಳಗಾದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ರವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಇದರ ಸಂಬಂಧ ಆರೋಪಿಯು ತಲೆಮಾರಿಸಿಕೊಂಡು ಪರಾರಿಯಾಗಿದ್ದನು ಈತನನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಹಾಗೂ ಕೂಡ್ಲಿಗಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ತಳವಾರ, ನೇತೃತ್ವದಲ್ಲಿನ ಸಬ್ ಇನ್ಸ್ಪೆಕ್ಟರ್ ಪ್ರಕಾಶ (ಗುಡೇಕೋಟೆ ) ಧನಂಜಯ (ಕೂಡ್ಲಿಗಿ ) ಕೊಟ್ಟೂರು ಪೊಲೀಸ್ ಠಾಣೆಯ ಪೇದೆಗಳಾದ ಬಸವರಾಜ್, ವಿರುಪಾಕ್ಷ ಗಡ್ಡಿ, ವಿರೇಶ್, ಆರಾಧ್ಯ, ಈ ತಂಡವು ಕಳೆದ ವಾರದಿಂದಲೂ ನಿರಂತರವಾಗಿ ಸಂಚಾರ ಕೈಗೊಂಡು ಆರೋಪಿ ರೇವಣಸಿದ್ದಪ್ಪ ನವರು  ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವೃಕ್ಷ ಮಾತೆಯ ಹೆಸರಿನಲ್ಲಿ ಕುಂಭ ಬರೆಸಿದ ಪರಿಸರ ಪ್ರೇಮಿ ಸಿದ್ದಯ್ಯ ಹೆಸರೂರು

ಇಮೇಜ್
ಮಸ್ಕಿ : ಭ್ರಮರಾಂಬಾ ದೇವಿಯ ಪುರಾಣ ಕಾರ್ಯಕ್ರಮ ಹಾಗೂ ದಸರಾ  ಜಂಬೂ ಸವಾರಿ ಕಾರ್ಯಕ್ರಮ ಅಂಗವಾಗಿ ಕುಂಭ ಮೆರವಣಿಗೆಯ ನಿಮಿತ್ತ ಕುಂಭದ ಚೀಟಿಯ ಹೆಸರಿನಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರನ್ನು ಬರೆಯಿಸುವ ಮೂಲಕ ವಿಭಿನ್ನತೆ ಮೆರೆದಿದ್ದಾರೆ. ಮಸ್ಕಿ ಪಟ್ಟಣದಾದ್ಯಂತ ಶ್ರೀ ಭ್ರಮರಾಂಬಾ ದೇವಿಯ ಪುರಾಣ ಕಾರ್ಯಕ್ರಮ ಹಾಗೂ ದಸರಾ  ಜಂಬೂ ಸವಾರಿ ಕಾರ್ಯಕ್ರಮ ಅಂಗವಾಗಿ ಕುಂಭ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಮಸ್ಕಿ ತಾಲೂಕಿನ ಪರಿಸರ ಪ್ರೇಮಿಗಳಾದ ಸಿದ್ದಯ್ಯ ಹೆಸರೂರು ಮಸ್ಕಿ ಅವರು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರು ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಮಸ್ಕಿಯ ಶ್ರೀ ಬ್ರಮರಾಂಭ ದೇವಿಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಾಣ ಮಹಾಮಂಗಲ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ನಡೆಯುವ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಕುಂಭ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕುಂಭ ಮೆರವಣಿಗೆಯ ಹೆಸರಿನಲ್ಲಿ ಸಾಲುಮರದ ತಿಮ್ಮಕ್ಕನವರು ಆದಷ್ಟೂ ಶೀಘ್ರವಾಗಿ ಗುಣಮುಖರಾಗಿ ಆಗಮಿಸಲೆಂದು ಕುಂಭದ ಚೀಟಿಯನ್ನು ಬರೆಯಿಸಿದ್ದಾರೆ. ಇಂದು ಜರುಗಿದ ಬ್ರಮರಾಂಬ ದೇವಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ವೃಕ್ಷ ಮಾತೇ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಕುಂಭವನ್ನು ಮಹಿಳೆ ಹೊತ್ತು ಒಳ್ಳೆಯದಾಗಲಿ ಎಂದು ಕುಂಭ ಹೊತ್ತಿದ್ದಾರೆ.ಪರಿಸರ ಪ್ರೇಮಿ ಸಿದ್ಧಯ್ಯ ಹೆಸರೂರು ಇವರಿಗೆ

ಅಭ್ಯರ್ಥಿಗಳ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಸಿ ಆದೇಶ ಪತ್ರ ನೀಡುವಂತೆ : ಮನವಿ

ಇಮೇಜ್
ಮಸ್ಕಿ : ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2022 ರ ಅಂತಿಮ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಸಿ ಆದೇಶ ಪತ್ರ ನೀಡುವಂತೆ ಮಾಜಿ ಸಚಿವ ಬಯ್ಯಾಪುರ ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ರವರಿಗೆ ಮನವಿಯನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿ ರವಿ ಚುಕ್ಕನಹಟ್ಟಿ ರವರು ಕಲ್ಯಾಣ ಕರ್ನಾಟಕ ಭಾಗದ GPSTR 2022 ರ ಅಂತಿಮ ಪಟ್ಟಿಯಲ್ಲಿ ಇರುವ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರ ಕೊರತೆ ತೀವ್ರವಾಗಿದ್ದು ಹಲವು ಶಾಲೆಗಳಲ್ಲಿ ಶೂನ್ಯ ಶಿಕ್ಷಕರ ಸಂಖ್ಯೆ ಇರುವುದು ಮತ್ತು ಇತ್ತೀಚೆಗೆ ನಡೆದ ಇಲಾಖಾ ವರ್ಗಾವಣೆ ಪ್ರಕ್ರಿಯೆಯಿಂದ ಈ ಸಮಸ್ಯೆ ತೀವ್ರವಾಗಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಸುಮಾರು 5000 ಶಿಕ್ಷಕರ ಹುದ್ದೆಗಳು ಖಾಲಿ ಇರುತ್ತದೆ ಹಾಗೂ ಈ ಕಾರಣಕ್ಕಾಗಿ ನಮ್ಮ ಭಾಗ ಶೈಕ್ಷಣಿಕವಾಗಿ ಹಿಂದೆ ಉಳಿದಿರುವ ವಾಸ್ತವತೆ ತಮ್ಮ ಗಮನಕ್ಕೆ ಇರುತ್ತದೆ ಎಂದರು.  ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯಿಂದ ನಮ್ಮ ಭಾಗದ ಜಿಲ್ಲೆಗಳನ್ನು ಬಿಟ್ಟು ಇತರ ಜಿಲ್ಲೆಗಳಲ್ಲಿ (NHK) ಕೌನ್ಸಲಿಂಗ್ ಪ್ರಕ್ರಿಯೆ ನಡೆಯುತ್ತಿರುವಂತೆ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೂ ಸ್ಥಳನಿಯುಕ್ತಿ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ ನಮ್ಮ ಭಾಗದ ಕೆಲವು ಜಿಲ್ಲೆಗಳಿಗೆ ಸಂಬಂಧಿಸಿದಂತೆ KAT ಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಸದರಿ ಪ್ರಕ

ಪಟ್ಟಣ ಪಂಚಾಯಿತಿ ವತಿಯಿಂದ" ಮನೆ ಬಾಗಿಲಿಗೆ" ಕಾರ್ಯಕ್ರಮ

ಇಮೇಜ್
ಕೊಟ್ಟೂರು ಪಟ್ಟಣ ಪಂಚಾಯಿತಿ ವತಿಯಿಂದ ದಿನಾಂಕ: 26.10.2023 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.30 ರವರೆಗೆ ಬಸವೇಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು, ಆಸ್ತಿ ತೆರಿಗೆ, ನೀರಿನ ತೆರಿಗೆ, ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಮಾಸಿಕ ಬಾಡಿಗೆ ಶುಲ್ಕ, ಉದ್ದಿಮೆ ಪರವಾನಿಗೆ ಮತ್ತು ನವೀಕರಣ ಶುಲ್ಕ ಪಾವತಿಕೊಳ್ಳಲಾಯಿತು. ಮಾನ್ಯ ಯೋಜನಾ ನಿರ್ದೇಶಕರು , ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯನಗರ ರವರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು,  ಅದರಂತೆ ಆಸ್ತಿ ತೆರಿಗೆ ರೂ.3.10 ಲಕ್ಷ ಹಾಗೂ ನೀರಿನ ತೆರಿಗೆ 0.42 ಲಕ್ಷ ವಸೂಲಿ ಮಾಡಲಾಯಿತು. ನಂತರ ಮಾನ್ಯ ಜಿಲ್ಲಾಧಿಕಾರಿಗಳು ನಮೂನೆ-3 ಗಳನ್ನು ಆಸ್ತಿ ಮಾಲೀಕರ ಮನೆಗೆ ತಲುಪಿಸುವಂತೆ ಸೂಚಿಸಿದ ಪ್ರಕಾರ ಪಟ್ಟಣದ ಸ್ಲಮ್ ಏರಿಯಾ ಇಂದಿರಾ ನಗರ ಕಾಲೋನಿಯ ಒಟ್ಟು 25 ಆಸ್ತಿ ಮಾಲೀಕರ ಮನೆಗಳಿಗೆ ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯನಗರ ಮತ್ತು ಮುಖ್ಯಾಧಿಕಾರಿಗಳು , ಪಟ್ಟಣ ಪಂಚಾಯಿತಿ ಕೊಟ್ಟೂರು ಇವರು ಖುದ್ದು ಬೇಟಿ ನೀಡಿ ನಮೂನೆ-3 (ಖಾತಾ ನಕಲು) ನ್ನು ವಿತರಿಸಲಾಯಿತು.

ಪದವೀಧರ ಮತದಾರರು ನೊಂದಣಿ ಮಾಡಿಸಲು ಜಾಗೃತಿ ಜಾಥಾ

ಇಮೇಜ್
ಕೊಟ್ಟೂರು:ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ದಿನಾಂಕ: 01.11.2020ಕ್ಕಿಂತ ಹಿಂದೆ ಪದವಿಯನ್ನು ಪೂರ್ಣಗೊಳಿಸಿದ ತಾಲೂಕಿನಲ್ಲಿರುವ ಪದವೀಧರ ಮತದಾರರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಜಾಗೃತಿ ಜಾಥವನ್ನು ನಡೆಸಲಾಯಿತು. ದಿನಾಂಕ: 06.11.2023 ರಂದು ಕೊನೆಯ ದಿನವಾಗಿದ್ದು, ಇಂದು ವಿಶೇಷ ನೊಂದಣಿ ಅಭಿಯಾನವಾಗಿರುತ್ತದೆ. ಹಾಗೂ 30.10.2023 ರಂದು ವಿಶೇಷ ನೊಂದಣಿ ಅಭಿಯಾನ ದಿನವಾಗಿರುತ್ತದೆ. ಕಾರಣ ಅರ್ಹ ಪದವೀಧರರು ನಮೂನೆ-18 ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪದವಿ ಮುಗಿಸಿದ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಎಪಿಕ್ ಕಾರ್ಡ್ ಗಳನ್ನು ದೃಢೀಕರಿಸಿ ಸಲ್ಲಿಸಲು ತಿಳಿಸಿದರು. ಜಾಥದಲ್ಲಿ ವೈ ರವಿಕುಮಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ನಸರುಲ್ಲಾ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ , ಬಸವರಾಜ ಪ್ರಾಂಶುಪಾಲು ಸರ್ಕಾರಿ ಸಂ ಪ ಪೂ ಕಾಲೇಜ್, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಶಶಿಧರ ಮೈದೂರು ಸ್ವೀಪ್ ಅಧಿಕಾರಿ, ಅಜ್ಜಪ್ಪ ಸಿ, ಶಿವಕುಮಾರ್ ಡಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಾವಿರ ಗಿಡ ನೆಟ್ಟು ಟ್ಯಾಂಕರ್ ಮೂಲಕ ನೀರುಣಿಸುವಿಕೆ

ಇಮೇಜ್
ಮಸ್ಕಿ : ತಾಲೂಕಿನ ನಾಗಲದಿನ್ನಿಯ ತುಂಗಭದ್ರಾ ಕಾಲುವೆ ಯಿಂದ ಶಂಕರ್ ನಗರಕ್ಯಾಂಪ್ ಕ್ರಾಸ್ ವರೆಗೆ SFI ಸಂಘಟನೆ ಮಸ್ಕಿ ತಾಲೂಕು ಸಮಿತಿ ಮತ್ತು ಶ್ರೀ ಬಸವ ಸಂಸ್ಥೆ ವತಿಯಿಂದ 1000 ಗಿಡಗಳನ್ನು ನೆಟ್ಟು ಟ್ಯಾಂಕರ್ ಮೂಲಕ ನೀರುಣಿಸಲಾಯಿತು. ನಾಗಲದಿನ್ನಿಯ ತುಂಗಭದ್ರಾ ಎಡದಂಡೆ ಉಪ ಕಾಲುವೆಯಿಂದ ಶಂಕರ್ ನಗರಕ್ಯಾಂಪ್ ಕ್ರಾಸ್ ವರೆಗೆ SFI ಸಂಘಟನೆ ಮಸ್ಕಿ ತಾಲೂಕು ಸಮಿತಿ ಮತ್ತು ಶ್ರೀ ಬಸವ ಸಂಸ್ಥೆ ವತಿಯಿಂದ  ಬಿಸಿಲಿನ ನಾಡು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಿನ ಅಭಾವ ಹೆಚ್ಚು ಆದರೂ ಎದೆಗುಂದದೆ ಅರಣ್ಯ ಇಲಾಖೆಯ ಸಹಕಾರದಿಂದ 1000 ಸಸಿ ಗಿಡಗಳ್ಳನ್ನು ಹಚ್ಚಿ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸಿ ಪಾಲನೆ ಪೋಷಣೆ ಮಾಡಿದರು. ನಂತರ ಗಿಡ-ಮರಗಳನ್ನು ಸಂರಕ್ಷಣೆ ಮಾಡುವ ಮೂಲಕ ಪರಿಸರವನ್ನು ಉಳಿಸಿ ಎಂದು SFI ತಾಲೂಕು ಸಮಿತಿ ಅಧ್ಯಕ್ಷರು ಬಸವಂತ ಹಿರೇಕಡಬೂರು ಮತ್ತು ಶ್ರೀ ಬಸವ ಸಂಸ್ಥೆ ಅಧ್ಯಕ್ಷರಾದ ಯಂಕಪ್ಪ ಎಸ್ ಇಂಜಿನಿಯರ್ ಹಾಗೂ ಸಂಗಡಿಗರು ಪರಿಸರ ಪ್ರೇಮ ತೋರಿದ್ದಾರೆ. ಇದೇ ಸಂದರ್ಭದಲ್ಲಿ ಎಸ್ ಎಫ್ ಐ ಸಂಘಟನೆಯ ಪದಾಧಿಕಾರಿಗಳು,ಶ್ರೀ ಬಸವ ಸಂಸ್ಥೆಯ ಸದಸ್ಯರು ಸೇರಿದಂತೆ ಕಾರ್ಮಿಕರು ಇದ್ದರು.

ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಅಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮ

ಇಮೇಜ್
ಬಳ್ಳಾರಿ : ಬುಧವಾರ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಅಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮ ಅದ್ಬುತವಾಗಿ ಪ್ರದರ್ಶನ ನೀಡಲಾಯಿತು ಈ ಸಂದರ್ಭದಲ್ಲಿ ಬೆಳಗಾವಿ ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ಶ್ರೀ ವಿದ್ಯಾವತಿ ಭಜಂತ್ರಿ ಮೇಡಮ್ ಮತ್ತು ಜಾನಪದ ಕಲಾವಿದರಾದ ಎಮ್ಮಿಗನೂರು ಜಡೆಪ್ಪ, ಮಹಾಂತೇಶ ಹಗರಿ ಬೊಮ್ಮನಹಳ್ಳಿ, ಎರ್ರಿ ಸ್ವಾಮಿ ಶಿವು,ತಿರುಮಲ, ಉಪಸ್ಥಿತರಿದ್ದರು ಇಂತಿ ನಿಮ್ಮರಮಣಪ್ಪ ಭಜಂತ್ರಿ ಅಧ್ಯಕ್ಷರು ಅಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ

ವನ್ಯಜೀವಿಗಳ ರಕ್ಷಣೆ

ಇಮೇಜ್
ಕೊಟ್ಟೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕಂದಗಲ್ಲು-ತಿಮ್ಮಲಾಪುರ-ಚಿರಬಿ ಅರಣ್ಯ ಪ್ರದೇಶದಲ್ಲಿ ಪ್ರಸಕ್ತ ಬರಗಾಲವಿದ್ದು ಬಿಸಿಲಿನ ತಾಪಮಾನ ಕೂಡಾ ಹೆಚ್ಚಾಗಿದ್ದು ಅರಣ್ಯ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಅತೀ ಹೆಚ್ಚು ಕಾಡುವ ಭೀತಿ ಇದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಮಣ್ಣಿನ ಗುಂಡಿಗಳನ್ನು ನಿರ್ಮಾಣ ಮಾಡುವುದು ನೀರಿನ ತುಂಬಿಸುವಿಕೆಗಾಗಿ ಈಗಿನಿಂದಲೇ ವ್ಯವಸ್ಥೆ ಮಾಡುವುದು ಹಾಗೂ ಪಶು ಪಕ್ಷಿಗಳಿಗೆ ಕಾಳು ಕಡಿಗೆ ಕ್ರಮ ಕೈಗೊಳ್ಳುವಂತೆ. ಕೆ ಎಂ ಕೊಟ್ರೇಶ್,ಬಂಜಾರ್ ನಾಗರಾಜ್, ಎಲ್ಲಪ್ಪ, ಅರಣ್ಯ ಇಲಾಖೆಯವರಿಗೆ ಅಗ್ರಹಿಸಿದರು 

ಉದ್ಯೋಗ ಖಾತ್ರಿ ಯೋಜನೆಯಡಿ ಮೇವು ಸಂಗ್ರಹಿಸುವಂತೆ: ರೈತ ಜಿ ಮಲ್ಲಿಕಾರ್ಜುನ್ ಆಗ್ರಹ

ಇಮೇಜ್
ಕೊಟ್ಟೂರು ತಾಲ್ಲೂಕು ವ್ಯಾಪ್ತಿ 14 ಗ್ರಾ.ಪಂ. ಹಾಗೂ ಕೊಟ್ಟೂರು ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿ ಮುಂಗಾರು ಬಿತ್ತನೆಗಾಗಿ ಮೆಕ್ಕೆಜೋಳವನ್ನು 30.600 ಎಕ್ಟರ್ ಬಿತ್ತನೆ ಮಾಡಿದ ರೈತರು ಸಕಾಲದಲ್ಲಿ ಮಳೆಬಾರದೇ ಹಸಿ ಬರಗಾಲದಿಂದ ಸಂಪೂರ್ಣವಾಗಿ ಬೆಳೆ ಬಾರದೇ ಇದ್ದು ರಾಜ್ಯ ಸರ್ಕಾರ ಕೊಟ್ಟೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದು, ಮುಂದಿನ ವರ್ಷ ಮುಂಗಾರು ಮಳೆಯಾಗುವವರೆಗೆ ಜಾನುವಾರುಗಳಿಗೆ ಮೇವಿನ ತೊಂದರೆ ಆಗುವುದರಿಂದ ರೈತಾಪಿ ವರ್ಗದ ಎತ್ತು-ಆಕಳು-ಎಮ್ಮೆ ರಾಸುಗಳಿಗೆ ಮೇವು ಪೂರೈಕೆ ಮಾಡದೇ ತಮ್ಮ ಜೀವನಕ್ಕೂ ತೊಂದರೆ ಇರುವುದರಿಂದ ಕಸಾಯಿಖಾನೆಗಳಿಗೆ ಮಾರಾಟ ಮಾಡುವುದನ್ನು ತಪ್ಪಿಸಲು ಈ ಭಾಗದ ಶಾಸಕರು ಕೂಡಲೇ ಸರ್ಕಾರದ ಗಮನ ಸೆಳೆದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಾರರಿಗೆ ಮೇವು ಕಟಾವು ಮಾಡಿಸಿ ರಾಸು ಸಾಕಾಣಿಕೆ ಮಾಡುವವರಿಗೆ ಮೇವು ಪೂರೈಕೆ ಮತ್ತು ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೇವು ಸಂಗ್ರಹಾಗಾರ ಮಾಡಿದಲ್ಲಿ ಮಾತ್ರ ರಾಸುಗಳು ಹೈನುಗಾರಿಕೆ ಮಾಡುವವರಿಗೆ ಅನುಕೂಲ ಮಾಡಿದಂತಾಗುತ್ತದೆ.ಎಂದು ಕಮ್ಯುನಿಸ್ಟ್ ಪಾರ್ಟಿ ಸಿಪಿಎಂಎಲ್ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಹೇಳಿದರು. ರಾಜ್ಯ ಬಿ.ಜೆ.ಪಿ. ಘಟಕ ಆಯಾ ಜಿಲ್ಲಾ ಘಟಕಗಳ ಅಧ್ಯಕ್ಷರು ಹಲಾಲ್-ಜಟ್ಕಾ-ಗೋವು ಸಂರಕ್ಷಣೆ ಅಂತಾ ಬೊಬ್ಬೆ ಹೊಡೆಯುವುದು ಬಿಟ್ಟು ಲೋಕಸಭಾ ಸದಸ್ಯರುಗಳ ಅನುದಾನದಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗ್ರಾ.ಪಂ. ಮಟ್ಟದಲ್ಲಿ ಮೇವು ಸಂಗ್ರಹಕ್