ಪೋಸ್ಟ್‌ಗಳು

ಆಗಸ್ಟ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಿಳೆಯರ ಪೇಟ ಧರಿಸಿ ಮೆರವಣಿಗೆಗೆ ಮೆರಗು ತಂದ ಬಳ್ಳಾರಿ ಘಟಕದ ನುಲಿಯ ಚಂದಯ್ಯ ಜಯಂತಿಯ ಆಚರಣೆ

ಇಮೇಜ್
ಪೇಟ ಧರಿಸಿ ಮೆರವಣಿಗೆಗೆ ಮೆರಗು ತಂದ ಮಹಿಳೆಯರಿಗೆ  ಅಭಿನಂದನೆ ಅಖಿಲ ಕರ್ನಾಟಕ ಕುಳವ ಮಹಾಸಂಘ (ರಿ)ಮಹಿಳೆಯರಿಗೆ ಪ್ರೋತ್ಸಾಹಿಸಿದ ಬಳ್ಳಾರಿ ನಗರ ಘಟಕಕ್ಕೆ ಸಂಘದ ವತಿಯಿಂದ ಅಭಿನಂದಿಸಲಾಯಿತು. ಬಳ್ಳಾರಿ:ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬಳ್ಳಾರಿ ಜಿಲ್ಲಾ ಘಟಕ ವತಿಯಿಂದ ಗುರುವಾರ ರಂದು ಶ್ರೀ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು. ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯ ಕಾರ್ಯಕ್ರಮವನ್ನು ಭಾವಚಿತ್ರದೊಂದಿಗೆ ಮುಖ್ಯ ರಸ್ತೆಗಳಲ್ಲಿ ಬ್ಯಾಂಡ್ ಸೆಟ್ ಡೋಲು ಕುಣಿತದೊಂದಿಗೆ ಮತ್ತು ಮಹಿಳೆಯರ ಪೇಟದೊಂದಿಗೆ ವಿಶೇಷವಾಗಿ ಕಾಣಿಸಿಕೊಂಡು ಮೆರವಣಿಗೆ ಮೆರುಗುತಂದರು ಸಮಸ್ತ ಕುಲಬಾಂಧವರು ಒಗ್ಗೂಡಿ ಅದ್ದೂರಿಯಾಗಿ  ಆಚರಿಸಲಾಯಿತು. 12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ ಬಗ್ಗೆ ಸಮುದಾಯದ ಮುಖಂಡರಾದ ಅಖಿಲ ಕರ್ನಾಟಕ ಕುಳುವ ಮಹಾಸಂಗದ ಖಜಾಂಚಿ ರಮಣಪ್ಪ ಭಜಂತ್ರಿ, ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಸ್ತ ಕುಳುವ ಸಮುದಾಯದ ಹಿರಿಯ ಪ್ರಮುಖ ಮುಖಂಡರು ಯುವಕರು ಉಪಸ್ಥಿತರಿದ್ದರು.

ಹೀರೆಹಡಗಲಿ ಯಲ್ಲಿ 916 ನೇ ನುಲಿಯ ಚಂದಯ್ಯ ಜಯಂತಿ ಆಚರಣೆ

ಇಮೇಜ್
ಹೀರೆಹಡಗಲಿ ಗ್ರಾಮದ ಕೊರಮ ಸಮಾಜದ ಆಶ್ರಯದಲ್ಲಿ ಶ್ರೀ ಶಿವಶರಣ ಕಾಯಕಯೋಗಿ ನೂಲಿ ಚಂದಯ್ಯ ಅವರ ಜಯಂತಿಯನ್ನು ಗುರುವಾರದಂದು ಸಂಭ್ರಮದಿಂದ ಸರಳವಾಗಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಕೊರಮ ಸಮಾಜದವರು ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು  ಈ ಸಂದರ್ಭದಲ್ಲಿ ಕೊರಮ ಸಮುದಾಯದ ಎಲ್ಲಾ ಮುಖಂಡರು ಈ ನೂಲಿ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಎಲ್ಲರೂ ಕಾಯಕ ಮಾಡಲೇಬೇಕು ಎಂದು ತಮ್ಮ ವಚನಗಳ ಮೂಲಕ . ನುಲಿಯ ಚಂದಯ್ಯನ ರವರು

ಇಮೇಜ್
  ಎಲ್ಲರೂ ಕಾಯಕ ಮಾಡಲೇಬೇಕು ಎಂದು ತಮ್ಮ ವಚನಗಳ ಮೂಲಕ . ನುಲಿಯ ಚಂದಯ್ಯನ ರವರು ನಮ್ಮ ಸಮುದಾಯದ ಆದರ್ಶ ಪಿತಾಮಹ ಎಂದರೆ ತಪ್ಪಾಗಲಾರದು. ಗುರುವಾದಡೂ ಚರಸೇವೆಯ ಮಾಡಬೇಕು. ಲಿಂಗವಾದಡೂ ಚರಸೇವೆಯ ಮಾಡಬೇಕು. ಜಂಗಮವಾದಡೂ ಚರಸೇವೆಯ ಮಾಡಬೇಕು. ಕಾಯಕದಿಂದ ಯಾರು ಹೊರತಲ್ಲ.  ಕಾಯಕದ ಮಹತ್ವವನ್ನು ಸಾರಿದ ಮಹಾನ್ ಕಾಯಕಯೋಗಿಗಳಾದ ನೂಲಿ ಚಂದಯ್ಯನವರ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಮಹಾನ್ ವ್ಯಕ್ತಿ ಗಳಲ್ಲಿ ಒಬ್ಬರಾದ ನಮ್ಮ ಸಮುದಾಯ ಕಾಯಕಯೋಗಿ ಶಿವಶರಣರು ಬಸವಣ್ಣನವರ ದೀಕ್ಷೆ ಪಡೆದು ಅವರ ತತ್ವಗಳ ಆಧಾರದ ಮೇಲೆ ಕಾಯಕವೇ ನಿಜವಾದ ಮುಕ್ತಿ ನೀಡುತ್ತದೆ ಎಂಬುದನ್ನು ಅರಿತು ದಿನವು ಕಾಯಕ ಮಾಡುತ್ತಾ ತಮ್ಮ ಜೀವನವನ್ನು ಕಾಯಕದಲ್ಲೇ ಕಳೆದು ನಮ್ಮಂತಹ ಸಾವಿರ ಜನರಿಗೆ ಕಾಯಕದ ಕಲ್ಪನೆಯನ್ನು ಬಿತ್ತಿದ ಮಹಾನ್ ಯೋಗಿಗಳಿಗೆ ಕೋಟಿ ಕೋಟಿ ನಮನಗಳು. ಗುರುವಾರ ಗ್ರಾಮ ಪಂಚಾಯಿತಿ  ಚಿಕ್ಕ ಕೊಟ್ನೇಕಲ್ ನಲ್ಲಿ ಹಾಗೂ ನಮ್ಮ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಮಾನ್ವಿ ತಾಲೂಕು ಆಡಳಿತ ಮಂಡಳಿಯಲ್ಲಿ ಕೂಡ ಆಚರಣೆ ಮಾಡಲಾಯಿತು . ನಂತರ ನೂಲಿಯ ಚಂದಯ್ಯ ನವರ ಕೆಲವು ಆದರ್ಶವಾದ ವಿಚಾರಗಳನ್ನು ನಮ್ಮಲ್ಲಿ  ಅಳವಡಿಸಿಕೊಂಡರೇ ನಮ್ಮ ಜೀವನವು ಸುಗಮವಾಗಿ ಸಾಗುತ್ತದೆ. ಎಂಬ ಮಾತುಗಳನ್ನು ಆಡಿ ಈ ಒಂದು ಜಯಂತ್ಸೋವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಲಿಂಗಸುಗೂರು ಬಿಜೆಪಿ ಕಛೇರಿಯಲ್ಲಿ ನೂಲಿಯ ಚಂದಯ್ಯ ಜಯಂತಿ ಆಚರಣೆ

ಇಮೇಜ್
   ಭಾರತೀಯ ಜನತಾ ಪಾರ್ಟಿ ಲಿಂಗಸುಗೂರು ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕಯೋಗಿ ನೂಲಿ ಚಂದಯ್ಯ ಜಯಂತಿಯನ್ನು ಗುರುವಾರ ರಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಾನಪ್ಪ ಡಿ ವಜ್ಜಲ್ ರವರ ಸಮ್ಮುಖದಲ್ಲಿ ಆಚರಿಸಲಾಯಿತು.* *ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ಪಕ್ಷದ ಪ್ರಮುಖ ಮುಖಂಡರು ಜೊತೆಯಲ್ಲಿದ್ದರು*ಸಮಾಜದ ಮುಖಂಡರಾದ ಶ್ರೀ ದುರುಗಪ್ಪ ಉಪಾಧ್ಯಕ್ಷರು ಕೊರಮ ಸಮಾಜ ಶ್ರೀ ತಿಮ್ಮಪ್ಪ ಕರಡಕಲ ಯಲ್ಲಪ್ಪ ಆನೆಹೂಸರು ಸಾಬಣ್ಣ KSRTC, ಅಖಿಲ ಕರ್ನಾಟಕ ಕುಳವ ಮಹಾಸಂಘ (ರಿ) ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಹುಚ್ಚೇಶ್ವರ ಭಜಂತ್ರಿ ಉಪಸ್ಥಿತರಿದ್ದರು ಹಾಗೂ ಸಮಾಜದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಮುಖ ಉಪಸ್ಥಿತರಿದ್ದರು.

ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ - ಆರ್ ಬಸನಗೌಡ

ಇಮೇಜ್
  ಸಿಂಧನೂರು 01 ಸೆ.ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರ ಹೊಮ್ಮುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮವೇ ಪ್ರತಿಭಾ ಕಾರಂಜಿ ಎಂದು ಮಸ್ಕಿಯ ಶಾಸಕ ಆರ್ ಬಸವಗೌಡ ತುರ್ವಿಹಾಳ ಹೇಳಿದರು.     ತಾಲ್ಲೂಕಿನ ಕುರುಕುಂದಾ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನವಾಡ ಶಾಲೆಯಲ್ಲಿ ತಿಡಿಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ನಡೆಯಿತು.         ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರದಂದು ಏರ್ಪಡಿಸಿದ್ದ 2023 - 24 ನೇ ಸಾಲಿನ ತಿಡಿಗೋಳ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು     ಸರಕಾರ ಶಾಲೆಯ ಮಕ್ಕಳ ಅವರ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಆಯೋಜಿಸಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಹಾಗೂ   ಮಕ್ಕಳು ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಮಾತನಾಡಿದರು. ದಿವ್ಯ ಸಾನಿಧ್ಯವನ್ನು ಶ್ರೀ ಶೇಖರಯ್ಯ ಸ್ವಾಮಿ ಹಾಗೂ ಶ್ರೀ ಸಿದ್ದಮಲ್ಲಯ್ಯ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಯ ಅಧ್ಯಕ್ಷರಾದ ಫಕೀರಪ್ಪ ಗಿಣಿವಾ

*ಕಾಯಕದಲ್ಲಿ ಕೈಲಾಸಕಂಡ ಮಹಾನ ಶರಣ ಶ್ರೀ ನುಲಿಯ ಚಂದಯ್ಯ*

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ ಆಗಸ್ಟ್ 31 : - ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಆಗಸ್ಟ್ 31ರಂದು ನಗರದ ಸಾಹಿತ್ಯ ಭವನದಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಕಾಯಕದಲ್ಲಿ ಕೈಲಾಸಕಂಡ ಮಹಾನ ಶರಣರು ಶ್ರೀ ನುಲಿಯ ಚಂದಯ್ಯನವರು. ತಮ್ಮ ವಚನಗಳ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ಶ್ರಮಿಸಿದ್ದಾರೆ. ಲಿಂಗನಿಷ್ಟೆಗಿಂತ ಕಾಯಕ ನಿಷ್ಟೆ ಮೇಲು ಎಂದು ಅವರು ಸಾರಿದ್ದಾರೆ. ತನು, ಮನ, ದನದಿಂದ ವಚನಸಾಹಿತ್ಯಕ್ಕೆ ಶ್ರಮ ವಹಿಸಿದ್ದಾರೆ. ತಮ್ಮ ಕಾಯಕವಾದ ನೂಲು ತಯಾರಿಕೆಯಿಂದ ಬಂದಂತಹ ದುಡ್ಡಿನಿಂದ ಲಿಂಗ ಜಂಗಮರಿಗೆ ಪ್ರಸಾದವ ಮಾಡಿಸುತ್ತಿದ್ದರು. ಇಂತಹ ಮಹನಿಯರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸುವುದರ ಜೊತೆಗೆ ಅವುಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು. ಕಾರಟಗಿಯ ಶಿಕ್ಷಕರಾದ ಜಗದೀಶ ಭಜಂತ್ರಿ ಅವರು ಶ್ರೀ ನುಲಿಯ ಚಂದಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಕಲೆ, ಸಾಹಿತ್ಯ, ವೈವಿದ್ಯಮಯ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ರಾಜ್ಯದ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹ ಕಾಲ 12ನೇ ಶತಮಾನ. ಇದು ಒಂದು ಸುವರ್ಣಯುಗವಾಗಿದೆ. ಜಗಜೋತಿ ಬಸವೇಶ್ವರರು ಹಾಗೂ ಅನೇಕ

ಮಧುಗಿರಿ ಯಲ್ಲಿ ಶ್ರೀ ಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ

ಇಮೇಜ್
  ಶ್ರೀ ಶರಣ ನುಲಿಯ ಚಂದಯ್ಯ ನವರ 916 ನೇ ಜಯಂತೋತ್ಸವ ವನ್ನು ಮಧುಗಿರಿ ತಹಸೀಲ್ದಾರ್ ರವರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಾಹೇಬರು ಹಾಗೂ AKMS ಮಧುಗಿರಿ ಘಟಕದ ಅಧ್ಯಕ್ಷರಾದ HMT ಈಶ್ವರಯ್ಯ ನವರು ತಾಲ್ಲೂಕು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಗುರುಸ್ವಾಮಿ ನವರು ಜಂಟಿ ಕಾರ್ಯದರ್ಶಿಗಳಾದ B N ಜಗದೀಶ್ (ಡ್ರಾಮಾ ಸೀನ್ಸ್) ಗೋವಿಂದರಾಜು ಹಾಗೂ ಮಧುಗಿರಿ ತಾಲ್ಲೂಕಿನ ಎಲ್ಲಾ AKMS ಪದಾಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ-ಪುರಸ್ಕಾರ

ಇಮೇಜ್
   ವರದಿ-  ಮಂಜುನಾಥ್ ಕೋಳೂರು ಕೊಪ್ಪಳ   ಕೊಪ್ಪಳ ಅಗಸ್ಟ್30 : - ನಗರದ ಡಾ. ಬಿ .ಆರ್ ಅಂಬೇಡ್ಕರ್ ಸಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಇತ್ತೀಚಿಗೆ ಸಾಹಿತ್ಯ ಭವನದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸ್ಥೆ ಮತ್ತು ವೇದಿಕೆ ಪರವಾಗಿ 2022 -23 ಪ್ರಸಕ್ತ ಸಾಲಿನಲ್ಲಿ ಜರುಗಿದ ಎಸ್. ಎಸ್ .ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. 2018- 19 ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ನಡೆಸಿರುವಂತ ಪ್ರತಿಷ್ಠಿತ ಶಾಲೆಗೆ ಆಯ್ಕೆ ಮಾಡುವ ಪ್ರವೇಶ ಪೂರಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರತಿಷ್ಠಿತ ಶಾಲೆಗಳಾದ ನಗರದ ಎಸ್. ಎಫ್. ಎಸ್ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆಗೆ ಆಯ್ಕೆಯಾದಂತ ವಿದ್ಯಾರ್ಥಿಗಳಾದ ಕಿರಣ್ ಕುಮಾರ್ ಚಿದಾನಂದಪ್ಪ ಹೊಸಮನಿ , ಚರಣ್ ಮಂಜುನಾಥ ಕೋಳೂರು, ಸಂಜನಾ ಮಲ್ಲೇಶ್ ಬುಲ್ಟಿ, ಸ್ನೇಹ ಸಿದ್ದಪ್ಪ ಮೇದಾರ್, ವೀಣಾ ಹುಲುಗಪ್ಪ ಮೇದಾರ್, ವರ್ಷ ಹುಲಿಗೆಶ ಮೇದರ್, ಕಾಶಿನಾಥ್ ಮೇದರ್, ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ವಿದ್ಯಾರ್ಥಿ ಎಂ. ಡಿ. ಶಮಿ ಉದ್ದಿನ್ ಅಹ್ಮದ್ ಪರವಾಗಿ ತಂದೆಯಾದ ಇಮ್ತಿಯಾಜ್ ಅಹ್ಮದ್ ರವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. 2023 -24ನೇ ಸಾಲಿನ ಪ್ರಸಕ್ತ

ಜಿಲ್ಲಾ ಮಟ್ಟಕ್ಕೆ ಆಯ್ಕೆ

ಇಮೇಜ್
ಕೊಟ್ಟೂರಿನ ಶಟಲ್ ಬ್ಯಾಟ್ಮಿಟನ್ ಒಳಾಂಗಣದಲ್ಲಿ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಾಲಕಿಯರ ತಂಡ ಕೂಡ್ಲಿಗಿ ತಾಲೂಕು ಮಟ್ಟದ ಶಟಲ್ ಬ್ಯಾಟ್ಮಿಟನ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡದ ಆಟಗಾರರಾದ ಕುಮಾರಿ ರಾಜೇಶ್ವರಿ ಎಂ ಬಿ , ಚಿನ್ಮಯಿ ಸಿ ಎಚ್ ಎಂ ತಂಜೀಮ್ ಸೃಷ್ಟಿ ಬಿ ಆರ್, ನಾಜೀಫ ಇವರಿಗೆ ಯು ಪಿ ಹಸನ್ ವಿಸ್ಡಮ್ ಎರಾ ಮತ್ತು ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರು,ಗೋಪಾಲಕೃಷ್ಣಮುಖ್ಯ ಗುರುಗಳು,ಪ್ರದೀಪ್ ಕುಮಾರ್ ಸಿ ದೈಹಿಕ ಶಿಕ್ಷಕರು ಹಾಗೂ ಎಲ್ಲಾ ಸಹ ಶಿಕ್ಷಕರು ಶುಭ ಕೋರಿದರು.

ನುಲಿಯ ಚಂದಯ್ಯ, ಬ್ರಹ್ಮಶ್ರೀ ನಾರಾಯಣ್ ಗುರು ಜಯಂತಿ ಆಚರಣೆ

ಇಮೇಜ್
  ಕೂಡ್ಲಿಗಿ: ತಾಲೂಕಿನ ಕಾನ ಹೊಸಹಳ್ಳಿ ನಾಡ ಕಛೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣ್ ಗುರುಗಳ ಭಾವಚಿತ್ರಕ್ಕೆ ಪುಷ್ಪಗಳನ್ನ ಸಲ್ಲಿಸಿ ಸರಳವಾಗಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಕಚೇರಿ ಸಿಬ್ಬಂದಿ ಅನಿತಾ ಪೂಜಾರ್  ಗುರುಗಳ ಭಾವಚಿತ್ರಕ್ಕೆ ಪುಷ್ಪಗಳನ್ನ ಸಲ್ಲಿಸಿ ಮಾತನಾಡಿ ನಾರಾಯಣ ಗುರುಗಳ ತತ್ವ ಆದರ್ಶಗಳನ್ನ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ, ಆಗ ಮಾತ್ರ ನಮ್ಮ ಜೀವನಕ್ಕೆ ನಿಜವಾದ ಅರ್ಥ ಬರುವುದು ಸಮಾನತೆಯ ಹರಿಕಾರರಾಗಿ ಮೌಲ್ಯತೆ ಅಂಧಕಾರವನ್ನು ಅನಿಷ್ಠ ಪದ್ಧತಿಗಳನ್ನು ತೆಗೆದುಹಾಕುವಲ್ಲಿ ಅವರ ತತ್ವ ಸಿದ್ಧಾಂತ ಸರ್ವಕಾಲಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು. ಈ ವೇಳೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್ ವೀರೇಶ್ ಮಾತನಾಡಿ 12ನೇ ಶತಮಾನದ ಕಲ್ಯಾಣದ ವೈಚಾರಿಕ ಕಾಂತ್ರಿಯ ಹರಿಕಾರ ಬಸವಸಾಧಿ ಪ್ರಮಥರ ಸಮಾಕಾಲೀನರೂ, ಕಲ್ಯಾಣದ ಸ್ವತಃ ಕಾಯಕ ಮತ್ತು ದಾಸೋಹಕ್ಕೆ ಮಾದರಿಯಾದ ಶ್ರೇಷ್ಠ ಕಾಯಕ ಶಿವಶರಣ ಶ್ರೀ ನುಲಿಯ ಚಂದಯ್ಯನವರ ಗುರುತಿಸಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾಡಕಚೇರಿ ಸಿಬ್ಬಂದಿ ಸಿದ್ದೇಶ್, ಮಂಜುನಾಥ್, ಎಲ್ ಗೀತಾ, ಗ್ರಾಮ ಒನ್ ಕಚೇರಿಯ ಆಪರೇಟರ್ ಹೇಮಂತ್, ನಡಲು ಮನೆ ತಿಪ್ಪೇಸ್ವಾಮಿ, ಸತೀಶ್, ಫೋಟೋ ನಾಗರಾಜ್, ಕುಂಬಾರ್ ಹನುಮಂತಪ್ಪ ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

*ಶಿವಶರಣ ನುಲಿಯ* *ಚಂದಯ್ಯ ಜಯಂತಿ ಬಳ್ಳಾರಿಯಲ್ಲಿ ಬೃಹತ್ ಮೆರವಣಿಗೆ ಮೂಲಕ ಆಚರಣೆ*

ಇಮೇಜ್
ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬೆಂಗಳೂರು(ರಿ) ಕೊರಚ ಕೊರಮ ಕೊರವ ಸಮುದಾಯಗಳ ಒಕ್ಕೂಟ ವತಿಯಿಂದ ಅದ್ದೂರಿಯಾಗಿ ನುಲಿಯ ಚಂದಯ್ಯ ಜಯಂತಿ ಆಚರಣೆ  ಬಳ್ಳಾರಿ ಜಿಲ್ಲಾ ಮತ್ತು ಬಳ್ಳಾರಿ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ನುಲಿಯ ಚಂದಯ್ಯ 916ನೇ ಜಯಂತಿ ಕಾರ್ಯಕ್ರಮ ಬೃಹತ್ ಮೆರವಣಿಗೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶಂಕರ್ ಬಂಡೆ ವೆಂಕಟೇಶ್ ಮತ್ತು ನಗರ ಅಧ್ಯಕ್ಷರಾದ ಶ್ರೀ ಹೆಚ್ ಕೆ ಹೆಚ್ ಹನುಮಂತಪ್ಪ ರವರುಈಗಿನ ಕಾಲದಲ್ಲಿ ಎಷ್ಟು ಸಾಧನೆ ಮಾಡಿದರು. ಸ್ಮರಣೆ ಮಾಡಿಕೊಳ್ಳುವುದು ಅಪರೂಪ ಬಸವಣ್ಣ ಕಾಲದಲ್ಲಿ ನಿಷ್ಟೆಯಿಂದ ಕಾಯಕವನ್ನು ಮಾಡಿದ ಕುಳುವ ನುಲಿಯ ಚಂದಯ್ಯ ನವರ 916ನೇಜಯಂತಿ ಕಾರ್ಯಕ್ರಮ ಮಾಡುತ್ತಿರುವುದು ಹಬ್ಬ, ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಬಹಳ ಸಂತಸ ವಿಷಯ ಹಾಗೂ ಅವರ ಕಾಯಕ ನಿಷ್ಟೆಯನ್ನು ನಾವು ನೀವು ಸೇರಿ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡೋಣ ಮುಂದಿನ ಪೀಳಿಗೆಯಲ್ಲಿ ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಸಿದಗ ಮಾತ್ರ ಇಂತಹ ಶರಣರ ಜಯಂತಿ ಕಾರ್ಯಕ್ರಮ ಎಲ್ಲರೂ ಸೇರಿ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನುಡಿದರು. ನಂತರ ರಾಜ್ಯ ಖಜಾಂಚಿ ರಮಣಪ್ಪ ಭಜಂತ್ರಿ ಮಾತನಾಡಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಅಸ್ತಿತ್ವಕ್ಕೆ ಬಂದ ನಂತರ ಸುಮಾರು ವರ್ಷಗಳ ರಾಜ್ಯ ಸಂಘವು ಹೋರಾಟ ಮಾಡಿ ಸರ್ಕಾರ ಗಮನ ಸೆಳೆದು ಶಿವಶರಣೆ ನುಲಿಯ ಚಂದಯ್ಯ ಜಯಂತಿ ಆಚರಣೆ ಸರ್ಕಾರಿ ವತಿಯಿಂದ ಆಚರಿಸಲು ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ.ಈ

ಪಾವಗಡದಲ್ಲಿ ಶ್ರೀ ಶರಣ ನೂಲಿಯ ಚಂದಯ್ಯ ಜಯಂತಿ ಆಚರಣೆ

ಇಮೇಜ್
ಪಾವಗಡ ಪಟ್ಟಣದಲ್ಲಿ ಶ್ರೀ ಶರಣ ನೂಲಿಯ ಚಂದಯ್ಯ ಚಂದಯ್ಯ  ನವರ 916 ಜಯಂತೋತ್ಸವವನ್ನು ತಾಲೂಕು ಆಫೀಸಿನಲ್ಲಿ ಗುರುವಾರ ಆಚರಣೆ ಮಾಡಲಾಯಿತು ತಾಲೂಕಿನಲ್ಲಿ ಇರತಕ್ಕಂತಹ ಸಮಸ್ಯೆಗಳನ್ನು ತಹಸಿಲ್ದಾರ್ ರವರ ಸನ್ನಿಧಾನಕ್ಕೆ ಮೆಮರಾಂಡಮ್ ಕೊಡುವುದರ ಮೂಲಕ ಸಭೆ ಯಶಸ್ವಿಯಾಗಿ ನಡೆಸಲಾಯಿತು  ಈ ಸಭೆಯಲ್ಲಿ ತಾಲೂಕು ಅಧ್ಯಕ್ಷರಾದಂತಹ ಕೆ ಗಂಗಪ್ಪ ಉಪಾಧ್ಯಕ್ಷರಾದಂತಹ ನಾಗರಾಜು ಪ್ರಧಾನ ಕಾರ್ಯದರ್ಶಿಯಾದಂತಹ ಕೆ ವೀರಭದ್ರಪ್ಪನವರು ಕಾರ್ಯದರ್ಶಿಯಾದಂತಹ ಹನುಮಂತ ರಾಯಪ್ಪ R ಖಜನ್ಸಿ ನಾಗರಾಜಪ್ಪ ಗಂಗರಾವ್ ಈರಣ್ಣ AKMS ನ ಸದಸ್ಯರುಗಳು ಅಕ್ಕ ತಂಗಿಯರು ಅಣ್ಣ-ತಮ್ಮಂದಿರು ಎಲ್ಲರೂ ಸೇರಿ ಈ ದಿವಸ ಶ್ರೀ ನೂಲಿ ಚಂದಯ್ಯ ನವರ ಜಯಂತೋತ್ಸವವನ್ನು ಆಚರಿಸಲಾಯಿತು ಈ ಸವಿ ಯಶಸ್ವಿಯಾಗಿ ನಡೆಯಲು ಕಾರಣರಾದ ತಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು ಅರ್ಪಿಸುತ್ತಿದ್ದೇನೆ  ಕೆ ಗಂಗಪ್ಪ AKMS ಅಧ್ಯಕ್ಷರು ಪಾವಗಡ ತಿಳಿಸಿದರು. 

ಮುನಿರಾಬಾದ್ ನಾಗರಿಕ ಸ್ನೇಹ ಸೌಹಾರ್ದ ಸಭೆ

ಇಮೇಜ್
  ವರದಿ ಕರೀಮ್ ಸಾಬ್ ಕೊಪ್ಪಳ  ಮುನಿರಾಬಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಸುನಿಲ್ ಕುಮಾರ್ ಎಚ್, ಕಾನೂನು ಸುವ್ಯವಸ್ಥೆ ಹಾಗೂ ರಕ್ಷಣೆ ಸಂಬಂಧಪಟ್ಟಂತೆ, ನಾಗರಿಕ ಸ್ನೇಹ ಸೌಹಾರ್ದ ಸಭೆ ನಡೆಸಿದರು, ಕೊಪ್ಪಳ ತಾಲ್ಲೂಕಿನಲ್ಲಿ ಶ್ರಿ ಹುಲಿಗೆಮ್ಮ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡುಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ ಇಲ್ಲಿ ಬರುವ ಜನರ  ಪಾಕೆಟ್ ಕಳ್ಳತನ ಸರ ಕಳ್ಳತನ ತಡೆಗಟ್ಟುವಿಕೆಯ ಪ್ರಮುಖ ಕಾರಣವಾಗಿದೆ ಹಾಗೂ ಕೆಲವು ಗ್ರಾಮಗಳಲ್ಲಿ ಹಲವು ಸಂದರ್ಭಗಳಲ್ಲಿ ಮನೆಗೆ ಬೇಗ ಹಾಕಿ ಹೋಗಲೇಬೇಕಾದ ಅನಿವಾರ್ಯತೆ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತೆ ಈ ಸಂದರ್ಭದಲ್ಲಿ ಮನೆ ಕಳ್ಳತನ ಹೆಚ್ಚು, ಆಗುವಿಕೆ ತಡೆಗಟ್ಟುವುದು, ಹಾಗೂ ಕಳ್ಳತನ ಪ್ರಕರಣಗಳು ತಡೆಗಟ್ಟುವಿಕೆಗೆ ಸ್ಥಳೀಯ ಯುವಕರ ಸಹಕಾರ ಅಗತ್ಯತೆ ಇರುತ್ತದೆ, ಸಭೆಯಲ್ಲಿ ಸುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಯುವಕರು ಸಭೆಯಲ್ಲಿ ಭಾಗವಹಿಸಿ, ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಂದ ಕಾನೂನಿನ ಸಲಹೆಗಳನ್ನು ಪಡೆದುಕೊಂಡರು,

ಕಂಪ್ಲಿಯಲ್ಲಿ ಶಿವಶರಣ ನೂಲಿ ಚಂದಯ್ಯ ಜಯಂತಿ ಆಚರಣೆ

ಇಮೇಜ್
ಕಂಪ್ಲಿ ಪಟ್ಟಣದ ಕೊರುಚ ಸಮಾಜದ ಆಶ್ರಯದಲ್ಲಿ ಶಿವಶರಣ ನೂಲಿ ಚಂದಯ್ಯ ಅವರ ಜಯಂತಿಯನ್ನು ಈಚೆಗೆ ಸಂಭ್ರಮದಿಂದ ಸರಳವಾಗಿ ಆಚರಿಸಲಾಯಿತು  ನೂಲಿ ಚಂದಯ್ಯ ಅವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರುಚ ಸಮಾಜದ ತಾಲ್ಲೂಕು ಸಲಯಾಗಾರ ಗಂಗಾಧರ್ ಅವರು ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ‘ಪ್ರತಿಯೊಂದು ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ನೀಡಲು ಸಾಧ್ಯವಿದೆ. ಸಮಾಜದವರು ಮೂಲ ವೃತ್ತಿ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು  ಈ ಸಂದರ್ಭದಲ್ಲಿ ಕೊರುಚ ಸಮುದಾಯದ ಎಲ್ಲಾ ಮುಖಂಡರು ಈ ನೂಲಿ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

"ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯ"

ಇಮೇಜ್
12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ  ಕೊಟ್ಟೂರಿನಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬೆಂಗಳೂರು(ರಿ) ಕೊರಚ ಕೊರಮ ಕೊರವ ಸಮುದಾಯಗಳ ಒಕ್ಕೂಟ ರಾಜ್ಯ ಪದಾಧಿಕಾರಿ ಹಾಗೂ ತಾಲೂಕು ಅಧ್ಯಕ್ಷರ ವತಿಯಿಂದ ಸರಳವಾಗಿ ನುಲಿಯ ಚಂದಯ್ಯ ಜಯಂತಿ ಆಚರಣೆ  ಕೊಟ್ಟೂರು:ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯನ್ನು ಗುರುವಾರ ರಂದು ಬೆಳಿಗ್ಗೆ 11ಗಂಟೆಗೆ ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು. ನಂತರ ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯ ಕಾರ್ಯಕ್ರಮದಲ್ಲಿ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು. ರಾಜ್ಯದಲ್ಲಿ ಕೊರಮ, ಕೊರಚ ಕೊರವ ಸಮುದಾಯಕ್ಕೆ ಸೇರಿದ ಲಕ್ಷಾಂತರ ಮಂದಿ ಇದ್ದು, 12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲೀನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ ಕಾಯಕ ನಿಷ್ಠೆಯನ್ನು ಸಾರಿದ ಮಹಿಮಾ ಪುರುಷ ಎಂದರು. ಮೂಲತಃ ವಿಜಯಪುರ ಜಿಲ್ಲೆ ಹಿರೇಶಿವಣಗಿಯಲ್ಲಿ ಕ್ರಿ.ಶ.1107ರಲ್ಲಿ ಜನಿಸಿದ ನುಲಿಯ ಚಂದಯ್ಯ, ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಕ್ರಿ.ಶ.1160ರಲ್ಲಿ ಕಲ್ಯಾಣದ ಶಿವಾನುಭವ ಮಂಟಪಕ್ಕೆ ಸೇರಿದರು. ನಂತರ ಕಲ್ಯಾಣದಲ್ಲಾದ ರಾಜಕೀಯ ವಿಪ್ಲವದಿಂದ ತಮ್ಮ ವಚನಸಾಹಿತ್ಯದ ಕಟ್ಟನ್ನು

ರಾಹುಲ್ ಗಾಂಧಿ ಪರ ಶೇ.62 ಜನರ ಒಲವಿದೆ!

ಇಮೇಜ್
  ಬ್ಯುರೊ:ಭಾರತೀಯ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಪರ ಅದೆಷ್ಟು ಬ್ಯಾಟಿಂಗ್ ಮಾಡುತ್ತವೆ ಮತ್ತು ಉಳಿದ ನಾಯಕರ ಪರ ಕಿಂಚಿತ್ತೂ ಪ್ರಚಾರ ಮಾಡಬಯಸುವುದಿಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. www.pewresearch.org  ಮಾಡಿದ ಸಮೀಕ್ಷೆ ಪ್ರಕಾರ ಮೋದಿ ಪರ ಶೇ.80ರಷ್ಟು ಜನ ಇದ್ದಾರೆ ಎಂದು ಹೇಳಿವೆ. ಆದರೆ, ಇದುವರೆಗೆ ಮಾಧ್ಯಮಗಳು ಪಪ್ಪು ಎಂದು ಹೇಳುತ್ತಿದ್ದ ರಾಹುಲ್ ಗಾಂಧಿ ಪರ ಶೇ.62ರಷ್ಟು ಜನ ಇದ್ದಾರೆ ಎಂಬುದನ್ನು ಮಾತ್ರ ಹೇಳಿಲ್ಲ! ಹೌದು ಇದು ನಿಜ ಅಮೇರಿಕಾ ಮೂಲದ ಸಂಸ್ಥೆಯೊಂದು ಕೈಗೊಂಡ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಹುದೆ? ಎಂಬ ಪ್ರಶ್ನೆಗೆ ಶೇ.55ರಷ್ಟು ಜನ ಅತಿ ಅವಶ್ಯ ಎಂದಿದ್ದಾರೆ. ಶೇ.20ರಷ್ಟು ಜನ ಬೇಡವೇ ಬೇಡ ಎಂದಿದ್ದಾರೆ. ಶೇ.24 ಜನ ಪರವಾಗಿಲ್ಲ ಆದರೆ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ಪರ ಶೇ.62ರಷ್ಟು ಮತ ಬಂದಿವೆ ಎಂದು ಇದೇ ಸಂಸ್ಥೆ ವರದಿ ಮಾಡಿದೆ. ಆದರೆ, ಬಹಳ ಮಾಧ್ಯಮಗಳು ಇದನ್ನು ಮರೆಮಾಚಿವೆ. ಸಂಶೋಧನಾ ಸಂಸ್ಥೆ ಮಾಡಿರುವ ಸಮೀಕ್ಷೆ ಪ್ರಕಾರ 100 ಜನರ ಪೈಕಿ 26 ಜನ ರಾಹುಲ್ ಗಾಂಧಿ ಪ್ರಧಾನಿ ಆಗಲೇಬೇಕು ಎಂದಿದ್ದಾರೆ. ಆದರೆ ತಪ್ಪಿಲ್ಲ ಎಂದು ಶೇ.36ರಷ್ಟು ಜನ ಒಪ್ಪಿದ್ದಾರೆ. ಶೇ.34ರಷ್ಟು ಜನ ಬೇಡವೇ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಲವು ಜನ ಇಬ್ಬರ ಪರ ಒಲವು ತೋರಿದ್ದಾರೆ ಪರಿಣಾಮ ಶೇಕಡಾವಾರು ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಮಲ್ಲಿಕಾರ್ಜುನ್ ಖರ್ಗೆ ಪರ

ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಮೆರವಣಿಗೆ

ಇಮೇಜ್
ಬಳ್ಳಾರಿ:ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬೆಂಗಳೂರು, ಕೊರಚ ಕೊರಮ ಕೊರವ ಸಮುದಾಯಗಳ ಒಕ್ಕೂಟದಿಂದ ಜಿಲ್ಲಾ ಮತ್ತು ನಗರ ಘಟಕ ವತಿಯಿಂದ  ಹಮ್ಮಿಕೊಂಡಿದ್ದ  ಶಿವಶರಣ ನುಲಿಯ ಚಂದಯ್ಯ 916ನೇ ಜಯಂತಿ ಕಾರ್ಯಕ್ರಮ ಪ್ರಯುಕ್ತ ಬೃಹತ್ ಮೆರವಣಿ ನಡೆಯಿತು.   ಮೆರವಣಿಗೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶಂಕರ್ ಬಂಡೆ ವೆಂಕಟೇಶ್ ಮತ್ತು ನಗರ ಅಧ್ಯಕ್ಷ ಎಚ್.ಕೆ.ಎಚ್ ಹನುಮಂತಪ್ಪ, ಈಗಿನ ಕಾಲದಲ್ಲಿ ಎಷ್ಟು ಸಾಧನೆ ಮಾಡಿದರು ಸ್ಮರಣೆ ಮಾಡಿಕೊಳ್ಳುವುದು ಅಪರೂಪ ಬಸವಣ್ಣ ಕಾಲದಲ್ಲಿ ನಿಷ್ಟೆಯಿಂದ ಕಾಯಕವನ್ನು ಮಾಡಿದ ಕುಳುವ ನುಲಿಯ ಚಂದಯ್ಯ ನವರ 916ನೇಜಯಂತಿ ಕಾರ್ಯಕ್ರಮ ಮಾಡುತ್ತಿರುವುದು ಹಬ್ಬ, ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಬಹಳ ಸಂತಸ ವಿಷಯ ಹಾಗೂ ಅವರ ಕಾಯಕ ನಿಷ್ಟೆಯನ್ನು ನಾವು ನೀವು ಸೇರಿ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡೋಣ ಮುಂದಿನ ಪೀಳಿಗೆಯಲ್ಲಿ ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಸಿದಗ ಮಾತ್ರ ಇಂತಹ ಶರಣರ ಜಯಂತಿ ಕಾರ್ಯಕ್ರಮ ಎಲ್ಲರೂ ಸೇರಿ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನುಡಿದರು. ನಂತರ ರಾಜ್ಯ ಖಜಾಂಚಿ ರಮಣಪ್ಪ ಭಜಂತ್ರಿ ಮಾತನಾಡಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಅಸ್ತಿತ್ವಕ್ಕೆ ಬಂದ ನಂತರ ಸುಮಾರು ವರ್ಷಗಳ ರಾಜ್ಯ ಸಂಘವು  ಹೋರಾಟ ಮಾಡಿ ಸರ್ಕಾರ ಗಮನ ಸೆಳೆದು ಶಿವಶರಣೆ ನುಲಿಯ ಚಂದಯ್ಯ ಜಯಂತಿ ಆಚರಣೆ ಸರ್ಕಾರಿ ವತಿಯಿಂದ ಆಚರಿಸಲು ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ.ಈ ಸಾಧನೆ ಕರ್ನಾಟಕದಲ್ಲಿ ನಮ್ಮ ಜನಾಂಗದ ಹೆಮ್ಮೆಯ ವಿಷ

ಗೃಹ ಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ

ಇಮೇಜ್
ಕಾನ ಹೊಸಹಳ್ಳಿ: ರಾಜ್ಯ ಸರಕಾರದ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಲೂರು ಗ್ರಾ.ಪಂ ಸಹಯೋಗದಲ್ಲಿ ಆಲೂರು ಪಂಚಾಯಿತಿಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಲೂರು ಗ್ರಾ.ಪಂ ಅಧ್ಯಕ್ಷೆ ಉಮಾದೇವಿ ಅಂಜಿನಪ್ಪ, ಅವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರದ ಐದು ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದ್ದು ಈ ಯೋಜನೆ ಮೂಲಕ ಕುಟುಂಬದ ಮಹಿಳೆಗೆ ತಿಂಗಳಿಗೆ ರೂ.2000 ಹಣ ಸಿಗಲಿದೆ, ಸರಕಾರದ ವತಿಯಿಂದ ಚಾಲನೆ ಆದ ಬಳಿಕ ಫಲಾನುಭವಿಗಳ ಖಾತೆಗೆ ಹಣ ಜಮಾವಣೆ ಆಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಮಾದೇವಿ ಅಂಜಿನಪ್ಪ, ಉಪಾಧ್ಯಕ್ಷರು ಚೌಡಮ್ಮ ಕರಿಬಸಪ್ಪ, ಪಿಡಿಒ ಮಂಜುನಾಥ, ನೂಡಲ್ ಅಧಿಕಾರಿ ಪ್ರಾಣೇಶ್ ರಾವ್ ಸೇರಿದಂತೆ ಗ್ರಾ.ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು, ಮಹಿಳಾ ಒಕ್ಕೂಟ ಮತ್ತು ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರುಣದೇವನನ್ನು ಬರಮಾಡಿಕೊಳ್ಳಲು ವಾಸುದೇವರ ಮೆರವಣಿಗೆ

ಇಮೇಜ್
  ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾ.ಪಂ ವ್ಯಾಪ್ತಿಯ ತಾಯಕನಹಳ್ಳಿ ಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಜಾತಿಬೇಧ ಮರೆತು ಹಿಂದು ಸಂಪ್ರದಾಯದಂತೆ ವಾಸುದೇವರ ಮದುವೆ ಮಾಡಿದ್ದಾರೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತಿರುವ ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಶೇಂಗಾ ಬೆಳೆಗಳು ಚನ್ನಾಗಿ ಬೆಳೆದಿದ್ದು ಕೆಲ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಇನ್ನು ಕೆಲವು ಹೂ ಬಿಡುವ ಹಂತದಲ್ಲಿ ಇದ್ದು, ಈಗ ಅವಶ್ಯವಾಗಿ ಮಳೆಯು ಬೇಕಾಗಿದೆ. ಆದರೆ ಮಳೆಯೂ ಸರಿಯಾದ ಸಮಯಕ್ಕೆ ಬಂದಿಲ್ಲವಾದ್ದರಿಂದ ಗ್ರಾಮದ ಮುಖಂಡರು, ಯುವಕರು ಜೋಡಿ ಕತ್ತೆಗಳನ್ನು ಹಿಡಿದು ತಂದು ಅವುಗಳನ್ನು ತೊಳೆದು ಸ್ವಚ್ಛಗೊಳಿಸಿ ಮದುವೆ ಸಿಂಗಾರ ಮಾಡಿ ಕತ್ತೆಗಳಿಗೆ ಮದುವೆ ಮಾಡಿ ಸಂಪ್ರದಾಯ ಬದ್ಧವಾಗಿ ಮದುವೆಯಲ್ಲಿ ಅನುರಿಸುವ ಎಲ್ಲ ಪದ್ಧತಿಗಳನ್ನು ಇಲ್ಲಿ ಮಾಡಿದ್ದಾರೆ. ಕತ್ತೆಗಳ ಮೆರವಣಿಗೆ ಮಾಡಿದರೆ ಮಳೆ ಬರಬಹುದೆಂಬ ಜನರಲ್ಲಿ ನಂಬಿಕೆ ಇರುವುದರಿಂದ ಇಂಥದ್ದೊಂದು ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಯುವಕರು ಮೆರವಣಿಗೆಯಲ್ಲಿ ಭಾಗವಸಿದ್ದರು.

ದಾವಣಗೆರೆ ಗಡಿಯಾರ ಕಂಬದ ಇತಿಹಾಸ ತಿಳಿಯಿರಿ

ಇಮೇಜ್
  ಗಡಿಯಾರ ಕಂಬದ ಇತಿಹಾಸ ತಿಳಿದಿದೆಯೇ? ದಾವಣಗೆರೆ:ಗಂಟೆಗೊಮ್ಮೆ ಎಷ್ಟು ಗಂಟೆ ಆಗಿದೆ ಎಂಬುದನ್ನು ಢನ್ ಢನ್ ಸದ್ದು ಮಾಡಿ ಸಾರುವ ನಮ್ಮ ನಗರದ ಹಳೆಯ ಭಾಗದಲ್ಲಿರುವ ಗಡಿಯಾರ ಕಂಬದ ಇತಿಹಾಸ ಬ್ರಿಟಿಷ್ ಕಾಲದಿಂದ ಆರಂಭ ಆಗುತ್ತದೆ. ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್ ನವರ ಈ ಕಂಬದ ನಿಮನಕ್ಕೆ 1931ರಲ್ಲಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಅಡಿಗಲ್ಲು ಹಾಕಿದ್ದರು. 1931ರಿಂದ 30 ವರ್ಷಗಳ ಕಾಮಗಾರಿ ನಡೆಯಿತು. 1961ರಲ್ಲಿ ಕಾಮಗಾರಿ ಪೂರ್ಣ ಆಗಿ ಉದ್ಘಾಟನೆ ನೆರವೇರಿತು. ಅಂದಿನ ಸ್ಥಳೀಯ ಶಾಸಕರಾಗಿದ್ದ ಸುಬ್ರಮಣ್ಯ ಅವರು ಗಡಿಯಾರ ಕಂಬದ ಲೋಕಾರ್ಪಣೆ ನೆರವೇರಿಸಿದ್ದರು. ಕಾಲ ನಂತರದಲ್ಲಿ ಏಕಾಏಕಿ ಗಡಿಯಾರ ಸದ್ದು ಮಾಡುವುದನ್ನು ನಿಲ್ಲಿಸಿ ಬಿಟ್ಟಿತು. ತುಂಬಾ ವರ್ಷಗಳ ಕಾಲ ಸದ್ದು ನಿಲ್ಲಿಸಿದ ಗಡಿಯಾರ ಕಂಬ ಮತ್ತೆ ಸದ್ದು ಮಾಡಲು ಎಸ್.ಎಸ್. ಮಲ್ಲಿಕಾರ್ಜುನ್ ಬರಬೇಕಾಯಿತು. ಮತ್ತೆ ಅದಕ್ಕೆ ಸದ್ದು ಬಂದಿದ್ದು 2002 ರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮತ್ತೆ ಈ ಗಡಿಯಾರ ಕಂಬಕ್ಕೆ ಕಾಯಕಲ್ಪ ಸಿಕ್ಕಿತು. ಎಚ್ ಎಂ ಟಿ ಸಹಾಯದೊಂದಿಗೆ ಹೊಸ ಗಡಿಯಾರವನ್ನು ಕಂಬಕ್ಕೆ ಅಳವಡಿಸಲಾಯಿತು. ಇದೀಗ ಗಡಿಯಾರ ಚೆನ್ನಾಗಿ ಕೆಲಸ ಮಾಡುತ್ತಿದೆ.

ಕಾನೂನನ್ನು ಅರಿತು ಜೀವನ ಪಾವನಾಗಿಸಿಕೊಳ್ಳಲು: ಗೌರವಾನ್ವಿತ ಶ್ರೀ ಕೋಟೆಪ್ಪ ಕಾಂಬಳೆ ಪ್ರಧಾನ ಸಿವಿಲ್ ನ್ಯಾಯಾಧೀಶರು

ಇಮೇಜ್
  ಸಿಂಧನೂರು :ಆ 26. ಗೊರೇಬಾಳ ಗ್ರಾಮದಲ್ಲಿ ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಮೂರನೇ ದಿನ ನಡೆದ ಎನ್ ಎನ್ ಎಸ್ ಕಾರ್ಯಕ್ರಮದಲ್ಲಿ ಗೌರವನ್ವಿತ ಶ್ರಿ ಕೊಟೆಪ್ಪ ಕಾಂಬಳೆ ಸಾಹೇಬರು  ಭಾರತ ಭವ್ಯ ಭವಿಷ್ಯತ್ತಿನ ಡಾಕ್ಟರ, ನ್ಯಾಯಾಧೀಶರು, ಮುಖ್ಯ ಮಂತ್ರಿ, ಪ್ರಧಾನ ಮಂತ್ರಿ, ವಿಶ್ವ ಚೆಸ್ ಚಾಂಪಿಯನ್ ಕ್ರೀಡಾಪಟುಗಳೇ.....ಆಗುವ ನಮ್ಮೆಲ್ಲಾ ವಿದ್ಯಾರ್ಥಿಗಳೇ ಎಂದು ಮಾತನ್ನು ಆರಂಭಿಸುತ್ತಾ ಈ ಸಮಾಜದಲ್ಲಿ ಎಲ್ಲವೂ ಇದೆ, ಕೆಟ್ಟದ್ದು ಇದೆ, ಒಳ್ಳೆಯದು ಇದೆ, ಆದ್ರೆ ನಾವು ಕೇವಲ ಒಳ್ಳೆಯದಕ್ಕೆ ಮಾತ್ರ ತಲೆಯಲ್ಲಿ ತೆಗೆದುಕೊಳ್ಳಬೇಕು, ಕೆಟ್ಟದ್ದನ್ನು ಬಿಡಬೇಕು, ಎಂದರು.  ಪ್ರಜಾಪ್ರಭುತ್ವದ ಕುರಿತು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ಮತನಾಡಿದ ಅವರು ಭಾರತದಲ್ಲಿ ನಾವು ಹುಟ್ಟಿನಿಂದ ಸಾಯುವವರೆಗೆ ಕಾನೂನನ್ನು ಪಾಲನೆ ಮಾಡಬೇಕು ಅದಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಇನ್ನೆರಡು ವರ್ಷಗಳಲ್ಲಿ ಮದುವೆ ಆಗುವವರು ಇದ್ದಾರೆ ಅದಕ್ಕಾಗಿ ಮದುವೆ ಕಾನೂನಿನ ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು ಮೊದಲು ಮದುವೆಗೆ ಒಂದು ಗಂಡು, ಒಂದು ಹೆಣ್ಣು ಬೇಕು, ಹುಡುಗನಿಗೆ 21, ಹುಡಿಗಿದೆ 18 ವಯಸ್ಸು ಆಗಿರಬೇಕು, ಈಗಾಗಲೇ ಮದುವೆ ಆಗಿರಬಾರದು, ಬಾಲ್ಯ ವಿವಾಹದಿಂದ ಎಸ್ಟೆಲ್ಲ ಅನಾಹುತ ಗಳು ಇದಾವೆ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಮಾತನಾಡಿದರು, ಕಾನೂನುಗಳನ್ನು ಮನೆಮದ್ದಾಗಿ ಇಟ್ಟುಕೊಂ

ಹುಚ್ಚು ನಾಯಿ ಹಾವಳಿ: ಭಯಬೀತರಾದ ಜನತೆ. ಒಂದೇ ದಿನ 11 ಜನರಿಗೆ ಕಚ್ಚಿದ ಹುಚ್ಚು ನಾಯಿ, ಹಿಡಿಯಲು ಹರಸಾಹಸ.

ಇಮೇಜ್
  ಹುಚ್ಚು ನಾಯಿ ಹಾವಳಿ: ಭಯಬೀತರಾದ ಜನತೆ. ಒಂದೇ ದಿನ 11 ಜನರಿಗೆ ಕಚ್ಚಿದ ಹುಚ್ಚು ನಾಯಿ, ಹಿಡಿಯಲು ಹರಸಾಹಸ.    ಹಟ್ಟಿ ಚಿನ್ನದ ಗಣಿ. 30.08. ಹಟ್ಟಿ ಪಟ್ಟಣ ಕಾಮನ ಕಲ್ಲೂರ್ ಕ್ರಾಸ್ನಿಂದ ಹಳೆ ಪಂಚಾಯಿತಿ ಮಾರ್ಗವಾಗಿ ಓಡಾಡುತ್ತಿರುವ ಸಾರ್ವಜನಿಕರ ಮೇಲೆ ಹೆಚ್ಚಿನ ಸುಮಾರು 11ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು ಉಳಿದ ಏಳು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಗಾಯಗೊಂಡ ನಾಲ್ವರು ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಸ್ಥಳ ಪರಿಶೀಲಿಸಿದ ಹಟ್ಟಿ ಪೊಲೀಸ್ ಸಿಬ್ಬಂದಿಗಳು. ಹುಚ್ಚುನಾಯಿ ಹಾವಳಿ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಾವಿಸಿದ ಹೊಟ್ಟೆ ಠಾಣೆಯ ಪೊಲೀಸ್ ಅಧಿಕಾರಿ ಪ್ರಕಾಶ್ ಮಳೆ ಮತ್ತು ಸಂಗಡಿಗರು ಸ್ಥಳ ಪರಿಶೀಲಿಸಿ ಹುಚ್ಚು ನಾಯಿ ಇರುವುದನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಜಾಗೃತಿ ಮೂಡಿಸಿ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವವರು ಬಹಳ ಎಚ್ಚರದಿಂದಿರಬೇಕು ಕಾರಣ ಹುಚ್ಚುನಾಯಿ ಇನ್ನೂ ಸಿಕ್ಕಿರುವುದಿಲ್ಲ, ಇರುವುದರಿಂದ ಹುಡುಕುವ ಪ್ರಯತ್ನಗಳು ನಡೆಯುತ್ತಿದೆ ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ಸಂದೇಶ ನೀಡುವ ಮೂಲಕ ಜಾಗ್ರುತ ಗೊಳಿಸುತ್ತಿದ್ದಾರೆ, ಇದೇ ವೇಳೆ ಪೊಲೀಸ್ ಅ

100 ಬೆಂಗಳೂರಿನ ಜಿತೋ ನಾರ್ತ್ ಚಾಪ್ಟರ್ ನಿಂದ “ರಂಗ್ ದೇ ಬಸಂತಿ” ಕಾರ್ಯಕ್ರಮ – ಕಾರ್ಗಿಲ್ ವೀರ ಯೋಧರು ಭಾಗಿ

ಇಮೇಜ್
  ಬೆಂಗಳೂರು; ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ದೇಶದ ಗುರಿಗಳನ್ನು ತಲುಪುವ ಉದ್ದೇಶದಿಂದ ಅಂತರರಾಷ್ಟ್ರೀಯ ಜೈನ್ ವ್ಯಾಪಾರ ಸಂಘಟನೆಯ ಬೆಂಗಳೂರು ಉತ್ತರ ವಿಭಾಗದಿಂದ “ರಂಗ್ ದೇ ಬಸಂತಿ” ವೈಭವದ ದೇಶ ಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ಕಾರ್ಗಿಲ್ ವೀರರಾದ ನವೀನ್ ನಾಗಪ್ಪ, ಹವಲ್ದಾರ್ ವಿ. ಗುಮ್ಕರ್ ಮತ್ತಿತರರು ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದ ವೀರ ಯೋಧರು, ಸ್ವಾತಂತ್ರ್ಯ ಸೇನಾನಿಗಳು ಮತ್ತಿತರರು ಪಾಲ್ಗೊಂಡಿದ್ದರು. ದೇಶ ಭಕ್ತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳಿಗೆ ವೇದಿಕೆ ಸಾಕ್ಷಿಯಾಯಿತು. ಗೀತ ರಚನೆಕಾರ, ರಾಷ್ಟ್ರ ಪ್ರಶಸ್ತಿ ವಿಜೇತ ಮನೋಜ್ ಮುಂತಶೀರ್ ಶುಕ್ಲಾ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರಗು ತಂದಿತು. ಮನೋಜ್ ಮುಂತಶೀರ್ ಶುಕ್ಲಾ ಮಾತನಾಡಿ, ಜೈನ ಸಮುದಾಯ ಅಹಿಂಸೆಗೆ ಆದ್ಯತೆ ನೀಡಿದ್ದು, ಸಮಾಜದಲ್ಲಿ ಆರ್ಥಿಕ ಅಸಮಾನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸಮಾಜ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದು ಹೇಳಿದರು. ಜಿತೋ ಸಂಘಟನೆಯ ನಿರ್ದೇಶಕರಾದ ವಿನೋದ್ ಜೈನ್, ಹಿತೇಶ್ ಪರ್ಲೇಚ, ಬೆಂಗಳೂರು ಜಿತೋ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಕಾಶ್ ಸಿಂಘ್ವಿ, ಶ್ರೀಪಾಲ್ ಖವೆರ್ಸಾ, ಅಶೋಕ್ ನಗೋರಿ, ಕೆಕೆಜಿ ವಲಯದ ಪ್ರಧಾನ ಕಾರ್ಯದರ್ಶಿ ದಿಲೀಪ್ ಜೈನ್, ಬೆಂಗಳೂರು ಜಿತೋ ಉತ್ತರ ವಿಭಾಗದ ಸಂಘಟನೆಯ

ಕುಳುವ ನುಲಿಯ ಚಂದ್ರಯ್ಯ ಅವರ 916 ನೇ ಜಯಂತಿ ; ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

ಇಮೇಜ್
  ಬೆಂಗಳೂರು: ಕಾಯಕಯೋಗಿ ಶರಣ ಶ್ರೀ ಕುಳುವ ನುಲಿಯ ಚಂದಯ್ಯನವರ ರಾಜ್ಯಮಟ್ಟದ 916ನೇ ಜಯಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೆಪಿಸಿಸಿ ಮುಖಂಡರು ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಿತಿ ರಾಜ್ಯ ಸಂಚಾಲಕರಾದ ಜಿ. ಪಲ್ಲವಿ ಮನವಿ ಮಾಡಿದ್ದಾರೆ.  ರಾಜ್ಯಾದ್ಯಾಂತ ಜಿಲ್ಲಾ, ತಾಲ್ಲೂಕು ಆಡಳಿತದ ಜೊತೆಗೂಡಿ ಜಯಂತಿ ಆಚರಿಸುತ್ತಿದ್ದು, ಇದನ್ನು ಅರ್ಥಪೂರ್ಣಗೊಳಿಸಬೇಕು. 12ನೇ ಶತಮಾನದ ಕಲ್ಯಾಣದ ವೈಚಾರಿಕ ಕಾಂತ್ರಿಯ ಹರಿಕಾರರಾದ ಬಸವಸಾಧಿ ಪ್ರಮಥರ ಸಮಾಕಾಲೀನರೂ, ಕಲ್ಯಾಣದ ಸ್ವತಃ ಕಾಯಕ ಮತ್ತು ದಾಸೋಹಕ್ಕೆ ಮಾದರಿಯಾದ ಶ್ರೇಷ್ಠ ಕಾಯಕ ಹಠಯೋಗಿ ಎಂದು ಜನ ಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಕೊರಮ-ಕೊರಚ ಸಮುದಾಯದ ಜನ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ನವಿಶೇಷ ಅಥಿತಿಯಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.   ನೂಲಿನ ಹುಣ್ಣಿಮೆ ದಿನದಂದು ರಾಜ್ಯಾದ್ಯಾಂತ 31 ಜಿಲ್ಲಾ ಮತ್ತು ವಿವಿಧ ತಾಲ್ಲೂಕು ಕೇಂದ್ರಸ್ಥಾನದಲ್ಲಿ ಸರ್ಕಾರ ಆಯೋಜಿಸುವ ಜ

ಕೊಟ್ಟೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ ಬಂಧನ

ಇಮೇಜ್
ಕೊಟ್ಟೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಬಂಧನವಾಗಿದೆ. ರಾಂಪುರ ಗ್ರಾಮದ ಹೆಚ್.ಮೂಗಣ್ಣ ತಂದೆ ಅಂಜಿನಪ್ಪ ಆದಿ ಕರ್ನಾಟಕ ಜನಾಂಗ ಇವರು ನೀಡಿದ ದೂರಿನನ್ವಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆ ೩೦೭, ೩೨೩, ೩೨೪, ೩೪೧, ೪೨೭, ೫೦೪, ೫೦೬ ರನ್ವಯ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಫಿರ್ಯಾದುದಾರರಾದ ಹೆಚ್.ಮೂಗಣ್ಣ ಇವರನ್ನು ಆರೋಪಿ ವೆಂಕಟೇಶ್ ನಾಯ್ಕ ಎನ್ನುವವರು ಮಂಗಳವಾರ ರಾತ್ರಿ ೮.೩೦ ಗಂಟೆಗೆ ಟ್ರ್ಯಾಕ್ಟರ್‌ಗೆ ಅಳವಡಿಸುವ ಟ್ರ್ಯಾಲಿಯನ್ನು ಪ್ರತಿ ತಿಂಗಳಿಗೆ ೬೦೦೦/- ನಂತೆ ಫಿರ್ಯಾದಿಯ ಅಣ್ಣನಿಗೆ ಬಾಡಿಗೆ ಕೊಟ್ಟಿದ್ದು ೨ ತಿಂಗಳ ಬಾಡಿಗೆಯನ್ನು ಕೊಡದೇ ಮುಂದಿನ ತಿಂಗಳು ಕೊಡುತ್ತೇನೆಂದು ಹೇಳಿದ್ದಕ್ಕೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಕೊಂದುಬಿಡುತ್ತೇನೆಂದು ಫಿರ್ಯಾದುದಾರನಿಗೆ ಒದ್ದು, ಫಿರ್ಯಾದಿಯ ಮೊಬೈಲ್ ಎಸೆದು ಮಾರಣಾಂತಿಕ ಹಲ್ಲೆ ಮಾಡಿದ ಕಾರಣಕ್ಕಾಗಿ ಬುಧವಾರ ಪ್ರಕರಣ ದಾಖಲಾಗಿದೆ. ಕೊಟ್ಟೂರು ಪಿ.ಎಸ್.ಐ. ಗೀತಾಂಜಲಿ ಶಿಂಧೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಾಗೂ ಮುಂದಿನ ವಿಚಾರಣಾ ತನಿಖೆಯನ್ನು ಕೈಗೊಂಡಿದ್ದಾರೆ.

'ಗೃಹಲಕ್ಷ್ಮಿ' ಯೋಜನೆಗೆ ಚಾಲನೆ ನೀಡಿದ 'ರಾಹುಲ್ ಗಾಂಧಿ' ; ಇಂದಿನಿಂದಲೇ ಯಜಮಾನಿಯರ ಖಾತೆಗೆ 2 ಸಾವಿರ ಹಣ ಜಮಾ

ಇಮೇಜ್
ಮಸ್ಕಿ : ಪಟ್ಟಣದ ಭ್ರಮರಾಂಬ ದೇವಾಸ್ಥಾನದ ಸಭಾಂಗಣದಲ್ಲಿ ಗೃಹಲಕ್ಷ್ಮಿ' ಯೋಜನೆಗೆ ರಾಜ್ಯದ ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಸ್ತ ಕಾಂಗ್ರೆಸ್ ಹೈ ಕಮಾಂಡ್ ನಾಯಕರಿಂದ ಅಧಿಕೃತವಾಗಿ ಚಾಲನೆ ನೀಡುವ ನೇರ ಪ್ರಸಾರದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಂತರ ಗೃಹಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ ಅಧಿಕೃತ ಚಾಲನೆ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಸಂವಿದಾನ ಪೂರ್ವ ಪೀಠಿಕೆ ಓದಲಾಯಿತು ಇದೇ ವೇಳೆ ನೇರ ಪ್ರಸಾರ ವೀಕ್ಷಕರು ಎದ್ದು ನಿಂತು ಗೌರವ ಸೂಚಿಸಿದರು.ನಂತರ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಗೃಹಲಕ್ಷ್ಮಿ' ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಮೂಲಕ ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಇಂದಿನಿಂದಲೇ ಪ್ರತಿ ತಿಂಗಳು 2000 ಹಣ ಮನೆ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಲಿದೆ.ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸಲು ಭ್ರಮರಾಂಬ ಸಭಾಂಗಣದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು.  ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ 2000 ರೂ ನೀಡುವ 'ಗೃಹಲಕ್ಷ್ಮಿ' ಯೋಜನೆಗೆ ಡಿಜಿಟಲ್ ಬಟನ್ ಒತ್ತುವ ಮೂಲಕ ಚಾಲನೆ ನ

ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢಗೊಳ್ಳಿ:ತಹಶೀಲ್ದಾರ್ ಅಮರೀಶ್ ಜಾಲಹಳ್ಳಿ"

ಇಮೇಜ್
  "ಗೃಹಲಕ್ಷ್ಮಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಿ" ಕೊಟ್ಟೂರು : ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯ್ತಿ ಸಹಯೋಗದೊಂದಿಗೆ ಬುಧವಾರ ಏರ್ಪಡಿಸಿದ್ದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ಕಾರದ  ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ವಿಡೀಯೋ ಮುಖಾಂತರ ಲೈವ್ ದೃಶ್ಯಗಳನ್ನು ಬಿತ್ತರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ತಹಶೀಲ್ದಾರ್ ಅಮರೀಶ್ ಜಾಲಹಳ್ಳಿ ಅವರು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ  ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢಗೊಳ್ಳಿರಿ ಎಂದು   ಹೇಳಿದರು. "ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢಗೊಳ್ಳಿ:ತಹಶೀಲ್ದಾರ್ ಅಮರೀಶ್ ಜಾಲಹಳ್ಳಿ" ತಾಲೂಕಿನಾದ್ಯಂತ, ಗ್ರಾಮಾಂತರ ಪ್ರದೇಶದಿಂದ 19,674 ಹಾಗೂ ಪಟ್ಟಣದಿಂದ  5,041 ಒಟ್ಟು ತಾಲ್ಲೂಕಿನಿಂದ 24,715 ಅರ್ಜಿ ಸಲ್ಲಿಕೆಯಾಗಿವೆ ಎಂದರು. ಗ್ರಾಮೀಣ ಪ್ರದೇಶದಿಂದ 13,994 ಹಾಗೂ ಪಟ್ಟಣದಿಂದ 3,412  ಒಟ್ಟು 17,406 ಅರ್ಜಿದಾರರಿಗೆ ಮಂಜೂರಾಗಿದ್ದು ಬಾಕಿ ಫಲಾನುಭವಿಗಳಿಗೆ ತಾಂತ್ರಿಕ ದೋಷದಿಂದ ತಿರಸೃತವಾಗಿದ್ದು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅವರಿಗೂ ಸಹ ಸೌಲಭ್ಯ ದೊರೆಯುತ್ತದೆ ಎಂದರು. ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಕಾರ್ಯಕ್ರಮಕ್ಕೆ  ಸಾವಿರಾರು ಫಲಾನುಭವಿಗಳಾದ ಮಹಿಳೆಯರು   ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮಕ್ಕೆ  ಪಾಲ್ಗೊಂಡಿದ್

ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ

ಇಮೇಜ್
ಕೊಟ್ಟೂರು:ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆಯನ್ನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರು ಬುಧವಾರ ಲೋಕ ಅರ್ಪಣೆ ಮಾಡಿದರು  ಈ ಇನ್ನೆಲೆಯಲ್ಲಿ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ವಿಡೀಯೋ ಮುಖಾಂತರ ಲೈವ್ ದೃಶ್ಯಗಳನ್ನ ಚಾಲನೆ ಮಾಡುವುದನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಹಳ್ಳಿಯ ಗ್ರಾಮಸ್ಥರಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಯಶಸ್ವಿಯಾಗಿ ನೆಡೆದ ಈ ಕಾರ್ಯಕ್ರಮದಲ್ಲಿ ಕೆ ಅಯ್ಯನಹಳ್ಳಿ ಪಂಚಾಯತ್ ಅಭಿರುದ್ದಿ ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು, ಸರ್ವ ಸದಸ್ಯರು, ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿದ್ದಲಿಂಗ ಸ್ವಾಮಿ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಪತ್ರಿಕೆಗೆ ತಿಳಿಸಿದರು 

*ನನ್ನ ಮಣ್ಣು ನನ್ನ ದೇಶ*ಅಭಿಯಾನಕ್ಕೆ ತಾಲೂಕಿನ 14 ಗ್ರಾಮ ಪಂಚಾಯಿತಿಗಳಿಂದ ಮಣ್ಣನ್ನು ಸಂಗ್ರಹ

ಇಮೇಜ್
ಕೊಟ್ಟೂರು ತಾಲೂಕು ಪಂಚಾಯಿತಿ ವತಿಯಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಭಾಗವಾಗಿ ತಾಲೂಕಿನ 14 ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಳಸದ ಮೂಲಕ ತಾಲೂಕು ಪಂಚಾಯಿತಿಯ ಮಾನ್ಯ ಸಹಾಯಕ ನಿರ್ದೇಶಕರಾದ ವಿಜಯಕುಮಾರ್ ಸರ್ ಅವರು ನೆಹರು ಯುವ ಕೇಂದ್ರದ ಪ್ರತಿ ನಿಧಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಗಸ್ಟ್ 15 ರ ಪ್ರಯುಕ್ತ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ಆಚರಿಸಲಾಗಿದೆ. ಇದರ ಪ್ರಯುಕ್ತವಾಗಿ ಪಂಚಪ್ರಾಣ ಪ್ರತಿಜ್ಞೆ,  ಅಮೃತ ವನ, ಸಸಿನಾಟಿ, ಯೋಧರಿಗೆ ನಮನ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಿದ ಮಣ್ಣನ್ನು ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾ ಪುಷ್ಪಲತಾ, ವಿಷಯ ಪಾಲಕರಾದ ರೂಪಾ, ಚಂದ್ರಶೇಖರ್, ಪ್ರಭಾಕರ್, ನೇತ್ರಾವತಿ,  ತಾಂತ್ರಿಕ ಸಂಯೋಜಕರಾ ಶ್ರೀಕಾಂತ್, ಐಇಸಿ ಸಂಯೋಜಕರಾದ ಪ್ರಭು ಕುಮಾರ್, ಎಂಐಎಸ್ ಸಂಯೋಜಕರಾದ ನೇತ್ರಾವತಿ, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕ ವೀರೇಶ್, ಮೆಹಬೂಬ್, ರಾಮಮೂರ್ತಿ, ನಾಗಣ್ಣ, ನಂದೀಶ ಪಾಲ್ಗೊಂಡಿದ್ದರು.

ಬರ ನಿರ್ವಹಣೆ ಹಿನ್ನೆಲೆ-ಬೆಳೆ ಪರಿಸ್ಥಿತಿ ಖುದ್ದು ಅವಲೋಕಿಸಿದ ಜಿಲ್ಲಾಧಿಕಾರಿ - ನಲಿನ್ ಅತುಲ್

ಇಮೇಜ್
  ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ ಆಗಸ್ಟ್ 29:- ಕಂದಾಯ ಇಲಾಖೆಯ ಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಆ- 28 ರಿಂದ ಆರಂಭಗೊಂಡು ಆ- 31ರವರೆಗೆ ನಡೆಯಲಿರುವ ಬರ ನಿರ್ವಹಣೆ ಹಿನ್ನೆಲೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆ- 29ರಂದು ಖುದ್ದು ಪರಿಶೀಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆ, ತಹಸೀಲ್ದಾರರು, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಕುಕನೂರ ತಾಲೂಕಿನ ತಳಕಲ್, ಬನ್ನಿಕೊಪ್ಪ ಮತ್ತು ಇಟಗಿ ಗ್ರಾಮಗಳಿಗೆ, ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಮತ್ತು ಬಂಡಿ ಗ್ರಾಮಗಳಿಗೆ, ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ಚಳಗೇರಿ ಸೇರಿದಂತೆ ಇನ್ನೀತರ ಗ್ರಾಮಗಳ ರೈತರ ಜಮೀನಿಗೆ ತೆರಳಿ ಬೆಳೆ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದರು. ತಳಕಲ್ ಗ್ರಾಮದ ರೈತರಾದ ತಿಮ್ಮಾರೆಡ್ಡಿ ಹುನಗುಂದ ಅವರ ಈರುಳ್ಳಿ ಬೆಳೆ, ಮುದಿಯಪ್ಪ ಅವರ ಮುಸುಕಿನ ಜೋಳದ ಬೆಳೆ, ಇಟಗಿ ಗ್ರಾಮದ ರೈತರಾದ ಮಂಜುಯ್ಯ ಸಶಿಮಠ ಅವರ ಈರುಳ್ಳಿ ಬೆಳೆ, ಕಮಲಾಕ್ಷಿ ಅವರ ಮುಸುಕಿನ ಜೋಳದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಹಾನಿಯಾದ ಪ್ರಮಾಣವನ್ನು ಜಿಲ್ಲಾಧಿಕಾರಿಗಳು ಅವಲೋಕಿಸಿದರು. ಯಲಬುರ್ಗಾ, ಕುಷ್ಟಗಿ ತಾಲೂಕುಗಳಲ್ಲಿನ ರೈತರ ಜಮೀನಿಗೆ ಸಹ ತೆರಳಿ ಮೆಕ್ಕೆಜೋಳ, ಸಜ್ಜೆ, ತೊಗರಿ, ಹತ್ತಿ ಮತ್ತು ಶೇಂಗಾ ಬೆಳೆಗಳು ಸಹ ತೇವಾಂಶ ಕೊರತೆಯಿಂದಾಗಿ

ನರೇಂದ್ರ ಮೋದಿಜಿ ಹಾಗೂ ರೈಲ್ವೆ ಸಚಿವರ ದೂರದೃಷ್ಟಿಯಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆ ಕಾರ್ಯನುಷ್ಠಾನವಾಗಿದೆ ----ಸಂಗಣ್ಣ ಕರಡಿ

ಇಮೇಜ್
   *ಕೊಪ್ಪಳ ಮಾರ್ಗವಾಗಿ ಮುಂಬೈ, ಸೊಲ್ಲಾಪುರಕ್ಕೆ ರೈಲ್ವೆ ಸಂಚಾರ ಆರಂಭ- ರೈಲು ವಿಸ್ತರಣೆಗೆ ಸಂಸದರು ಹಸಿರು ನಿಶಾನೆ * ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ ಆಗಸ್ಟ್ 29:-- ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ಸಂಚರಿಸಲಿರುವ ಮುಂಬೈ-ಗದಗ ಹಾಗೂ ಸೊಲ್ಲಾಪುರ-ಗದಗ ರೈಲುಗಳ ಸೇವೆ ವಿಸ್ತರಣೆಗೆ ಆ-29ರಂದು ವಿದ್ಯುಕ್ತ ಚಾಲನೆ ಸಿಕ್ಕಿತು. ಈ ಎರಡು ರೈಲುಗಳು ಹೊಸದಾಗಿ ಕೊಪ್ಪಳ ಮಾರ್ಗವಾಗಿ ಸಂಚರಿಸುವುದಕ್ಕೆ ಸಂಸದರಾದ ಕರಡಿ ಸಂಗಣ್ಣ ಅವರು ಕೊಪ್ಪಳ ಮತ್ತು ಹುಲಗಿ ನಿಲ್ದಾಣಗಳಲ್ಲಿ ಹಸಿರು ನಿಶಾನೆ ತೋರಿದರು. ಎರಡೂ ನಿಲ್ದಾಣಗಳಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ರೈಲು ಸೇವೆ ವಿಸ್ತರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಸಂಸದರು ಭಾಗಿಯಾದರು. ಮುಂಬೈ-ಗದಗ ಹಾಗೂ ಸೊಲ್ಲಾಪುರ-ಗದಗ ರೈಲುಗಳ ಸೇವೆಯನ್ನು ಕೊಪ್ಪಳದವರೆಗೆ ವಿಸ್ತರಿಸಬೇಕು ಎಂಬುದು ಬಹಳ ದಿನಗಳ ಈ ಭಾಗದ ಜನರ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಸಾಕಾರಗೊಂಡಿದೆ. ಗದಗ, ಹುಬ್ಬಳ್ಳಿವರೆಗೆ ಪ್ರಯಾಣಿಸಿ ಪುಣೆ ಸೊಲ್ಲಾಪುರಗೆ ಹೋಗುವುದು ಇನ್ಮುಂದೆ ತಪ್ಪಲಿದೆ. ಈ ಎರಡು ರೈಲ್ವೆ ಸೇವೆಗಳ ವಿಸ್ತರಣೆಯಿಂದಾಗಿ ಜಿಲ್ಲೆಯ ಜನ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಸಮಯ ಸಾಕಷ್ಟು ಉಳಿತಾಯವಾಗಲಿದೆ. ಹೊಸಪೇಟೆ ರೈಲ್ವೆ ಹೋರಾಟ ಸಮಿತಿ ಹಾಗೂ ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಸಂಸದರ ಮನವಿಗೆ ಸ್

ಪ್ರತಿಭೆಗಳನ್ನು ಅನಾವರಣಗೊಳಿಸಿ,ಪ್ರೊತ್ಸಾಹಿಸಿ : ಬಸಪ್ಪ ತನಿಖೆದಾರ

ಇಮೇಜ್
  ಮಸ್ಕಿ, ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಜಂಗಮರಹಳ್ಳಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಹಾಲಾಪೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜಮ್ಮ ಗಂಡ ಮೌನೇಶ ಉದ್ಘಾಟಿಸಿದರು. ನಂತರ ಮಾತಮಾಡಿದ ಮಸ್ಕಿಯ ಪ್ರಭಾರಿ ಕ್ಷೇತ್ರ ಶಿಕ್ಷಣಾದಿಕಾರಿ ಬಸಪ್ಪ ತನಿಖೆದಾರ ಮಕ್ಕಳ ಪ್ರತಿಭೆ,ಕೌಶಲ್ಯಗಳನ್ನು ಗುರುತಿಸಲು ಸರಕಾರ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ, ಮತ್ತಿತರ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರಸಿದ್ದಿ ಪಡೆಯಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ದಂಡಗುಂಡಪ್ಪ ತಾತ,ಚಂದ್ರಮೌನೇಶ ತಾತ,ದೊಡ್ಡ ಮಲ್ಲಯ್ಯ ತಾತ, ವೀರಭದ್ರಪ್ಪ ತಾತ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬಸಮ್ಮ ಗಂಡ ಬಸವರಾಜ,ನಾಗಪ್ಪ ಬಿ ಆರ್ ಸಿ, ಸುರೇಶ ಬಿ ಆರ್ ಸಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ತಿರುಪತಿ ರಾಮತ್ನಾಳ, ಉಪಾಧ್ಯಕ್ಷೆ ರೇಣುಕಾ ಗಂಡ ಬಸವರಾಜ, ಎರಿತಾತ ಪಾಟೀಲ್, ಬಸವರಾಜಗೌಡ ಮಾ.ಪಾ , ಲಿಂಗರಾಜ ಪಾಟೀಲ್, ಜಗದೀಶ್ ಚಂದ್ರಸ್ವಾಮಿ, ಮಹಾಂತೇಶ ಅಂಗಡಿ,ಪ್ರದೀಪ್ ಪಾಟೀಲ್, ಹುಚ್ಚರಡ್ಡಿ ನಾಯಕ,ಹನುಮಂತಪ್ಪ ಚಲವಾದಿ,ರಾಮಣ್ಣ ನಾಯಕ, ಸಿ ಆರ್ ಪಿ ಪ್ರಶಾಂತಗೌಡ, ಶಿಕ್ಷಕರಾದ ಅರವಿಂದ್ ಪಾಟೀಲ್, ಸುಭಾಷ್ ಸಿಂಗ್, ಶಂಕರಗೌಡ, ಬಾಲಸ್ವಾಮಿ, ಮಂಜುನಾಥ,ವೆಂಕೊಬ ದೇವಪೂರ,ಹನುಮಂತರಾಯ ದೇಸಾಯಿ,ಚನ್ನವೀರ ಜೊ

ಕ್ರೀಡೆಯು ಚಿರಾಯುವಾಗಲಿ:ಸಿದ್ದರಾಮ ಕಲ್ಮಠ"

ಇಮೇಜ್
ಕೊಟ್ಟೂರು:ದೈಹಿಕ ಶಿಕ್ಷಣ ವಿಭಾಗದಲ್ಲಿ ಮೇಜರ್ ಧ್ಯಾನ್ ಚಂದ್ ರವರ ಹುಟ್ಟು ಹಬ್ಬವನ್ನು ಮಂಗಳವಾರ ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಕೇಕ್ ಕಟ್ ಮಾಡುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಠ *ಕ್ರೀಡೆಯು ಚಿರಾಯುವಾಗಲಿ* ಕ್ರೀಡೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತವೆ, ಮೊಬೈಲ್ಗಳ ಬಳಕೆಯನ್ನು ಕಡಿಮೆ ಮಾಡಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳಿಎಂದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬುವಂತವುಗಳು ಇವು ನಮ್ಮ ದೈನಂದಿನ ಜೀವನದ ಭಾಗವಾಗಿರ ಬೇಕೆಂದರು.                          ಇದೇ ಸಂದರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿ ವಿವಿಧ ಕ್ರೀಡಾಗಳಲ್ಲಿ ಭಾಗಿಯಾಗಿ ದ್ದಂತಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಕ್ರೀಡಾಪಟುಗಳು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಆಯೋಜಕರಾಗಿರುವಂತಹ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿರುವ ಡಾ. ಶಿವಕುಮಾರ್ ಸ್ವಾಗತ ಮತ್ತು ಪ್ರಾ