ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಪ್ರಶಸ್ತಿಗೆ ಶ್ರೀಮತಿ ವಿಜಯರಾಣಿ ಆಯ್ಕೆ.*

ಇಮೇಜ್
*ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ಬೆಂಗಳೂರು* ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈ ನಾಡಿನ ಮಹಿಳಾ ಸಾಧಕೀಯರನ್ನು ಗುರುತಿಸಿ ಕೊಡ ಮಾಡಲ್ಪಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಪ್ರಶಸ್ತಿಗೆ ರಾಯಚೂರು ಜಿಲ್ಲೆಯಿಂದ ಮಹಿಳಾ ಸಾಧಕಿ ಮತ್ತು ಸಮಾಜ ಸೇವಕಿ ಶ್ರೀಮತಿ *ವಿಜಯ ರಾಣಿ* ಅವರು ಆಯ್ಕೆಯಾಗಿದ್ದಾರೆ. ಶ್ರೀಮತಿ ವಿಜಯರಾಣಿ ಅವರು 99ನೆ ಇಸವಿಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಜೊತೆಗೆ BDDS ಬಳ್ಳಾರಿ ಸಂಸ್ಥೆ ಜೊತೆಗೆ ಸಾಕ್ಷರತಾ ರಾತ್ರಿ ಶಾಲೆ ಕಲಿಕೆ ಜೊತೆಗೆ ಸ್ವಯಂಸೇವಕರಾಗಿ ಕೆಲಸ ನಿರ್ವಹಣೆ,2005/06 ನೆ ಸಾಲಿನಲ್ಲಿ ಶಾಂತಿ ಪ್ರಗತಿ ಸಂಸ್ಥೆ ಕೇಂದ್ರ ಧಾರವಾಡ ಸಂಯುಕ್ತಾಕ್ಷರದಲ್ಲಿ ಬಾಲ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸ ಸ್ವಯಂಸೇವಕರಾಗಿ ಕೆಲಸ ನಿರ್ವಹಣೆ, ಮಹಿಳೆಯರಿಗೆ ಸ್ವ ಸಹಾಯ ಸಂಘಗಳ ರಚನೆ,2007/08 ನೆ ಸಾಲಿನಲ್ಲಿ ಮಹಿಳೆಯರಿಗಾಗಿ ವಿಶೇಷ ಅಕ್ಷರ ಜ್ಞಾನ ಹಾಗೂ ಪರಿಹಾರ ಬೋಧನಾ ಕಾರ್ಯಕ್ರಮಗಳ ಆಯೋಜನೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ನಡೆದಂತಹ ಮಹಿಳೆಯರ ಮೇಲಿನ ಹಲವಾರು ಅತ್ಯಾಚಾರಗಳು,ದೌರ್ಜನ್ಯಗಳು,ಹಿಂಸೆಗಳ ವಿರುದ್ಧ ಸಾವಿರಾರು ಮಹಿಳೆಯರನ್ನು ಒಟ್ಟುಗೂಡಿಸಿ ಹೋರಾಡಿ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ. ರಾಜ್ಯಾದ್ಯಂತ ಮಹಿಳೆಯರಿಗಾಗಿ ನಿರಂತರ ಹೋರಾಟಗಳು,ನೊಂದ ಮಹಿಳೆಯರಿಗೆ ನಿರಂತರ ಸ್ಪಂದನೆ,ಸಾಂತ್ವನ,ಆಶ್ರಯ ಹೀಗೆ ಸಾವಿರಾರು ಮಹಿಳೆಯರ ಪರವಾಗಿ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂದುವರೆದ ಕಳಪೆ ಕಾಮಗಾರಿ;ಎತ್ತ ಸಾಗುತ್ತಿದೆ ರಸ್ತೆ ವಿಭಜಕ ಮತ್ತು ಚರಂಡಿ ಕಾಮಗಾರಿ

ಇಮೇಜ್
ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ : ಪಟ್ಟಣದಲ್ಲಿ ಕೈಗೊಂಡಿರುವ ರಸ್ತೆ ವಿಭಜಕ ಮತ್ತು ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಗತಿಪರ ಒಕ್ಕೂಟ ಸಂಘಟನೆ ಮಸ್ಕಿ ವತಿಯಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನುಗುಂದ ಇವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು ಆದರೆ ಇಲ್ಲಿಯವರೆಗೂ ಕಳಪೆ ಕಾಮಗಾರಿಯ ಬಗ್ಗೆ ಯಾವುದೇ ರೀತಿಯ ವರದಿಯು ಸಲ್ಲಿಕೆ ಆಗಿದಿಯೋ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.  ಹೌದು ಪಟ್ಟಣದ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗಿನ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿ, ಕಳಪೆ ಮಟ್ಟದ ಸಿಮೆಂಟ್ ಮತ್ತು ಅಗತ್ಯ ಪ್ರಮಾಣದ ಕಬ್ಬಿಣದ ಸರಳುಗಳನ್ನು ಬಳಸದೇ ಹಾಗೂ ಕಪ್ಪು ಮಣ್ಣು ಇರುವ ಸ್ಥಳಗಳನ್ನು ಮರಮ್ ಬಳಸದೇ ಮತ್ತು ಅಗತ್ಯಕ್ಕೆ ತಕ್ಕಂತೆ ನೀರಿನ ಕ್ಯೂರಿಂಗ್ ಮಾಡದೆ ಇರುವುದರಿಂದಾಗಿ ಕಾಮಗಾರಿಯ ಪ್ರಾರಂಭದ ಹಂತದಲ್ಲಿ ಚರಂಡಿ ಕಾಮಗಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅತ್ಯಂತ ಕಳಪೆ ಮಟ್ಟದಲ್ಲಿ ಈ ಕಾಮಗಾರಿ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಂಘಟನೆಗಳು ಆರೋಪ ಮಾಡಿದ್ದವು. ಈ ಚರಂಡಿ ಕಾಮಗಾರಿಯಿಂದಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂಬ ಆರೋಪ ಸಂಘಟನೆಗಳಿಂದ ಹಾಗೂ ಸಾರ್ವಜನಿಕರಿಂದ ಕೇಳಿ ಬಂದಿತ್ತು ಕುಲಂಕುಷವಾಗಿ ತನಿಖೆ ಮಾಡಿ ಕಳಪೆಯಾಗಿರುವ ಕಾಮಗಾರಿಯನ್ನು ತೆರವುಗೊಳಿಸಿ ಅದೇ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಬಹುಮುಖ್ಯ : ಸಿದ್ಧರಾಮ ಕಲ್ಮಠ

ಇಮೇಜ್
ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಭಾಗದಿಂದ ಪರೀಕ್ಷಾ ದಿಕ್ಸೂಚಿ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ಧರಾಮ ಕಲ್ಮಠ ಮಾತನಾಡಿ ಕುವೆಂಪು ಜನ್ಮದಿನ-ವಿಶ್ವಮಾನವ ದಿನಾಚರಣೆಗೆ ಶುಭ ಕೋರಿದರು, ಇಂಗ್ಲೀಷ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಅರ್ಥೈಸಿಕೊಂಡರೆ ಬಹಳ ಸುಲಭದ ವಿಷಯ, ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಗಾರವನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಅಂಕಗಳಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಬಹುಮುಖ್ಯ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪದವಿ ಪ್ರಾಚಾರ್ಯ ಡಾ.ಎಂ. ರವಿಕುಮಾರ್ - ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷನ್ನು ಸುಲಭಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹಾಗೂ ಯಾವುದೇ ವಿಷಯಗಳು ಸುಲಭ ಮತ್ತು ಕಷ್ಟ ಅಲ್ಲ ವಿದ್ಯಾರ್ಥಿಗಳ ಗ್ರಹಿಕೆ ಮತ್ತು ಹಿತಾಸಕ್ತಿಯ ಮೇಲೆ ಅವಲಂಬಿಸಿದೆ,ವಿದ್ಯಾರ್ಥಿಗಳು ಈ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಗೆ ಸಂಬಂಧಪಟ್ಟಂತೆ ವಿಶೇಷ ಉಪನ್ಯಾಸವನ್ನು ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹೊಸಪೇಟೆಯ ವಿಜಯನಗರ ಪದವಿ-ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಶ್ರೀ ಶರಣಬಸವ ಇಂಗ್ಲಿಷ್ ಭ

ಗುರು ಸಿದ್ಧೇಶ್ವರ ಬೃಹನ್ಮಠ ದಿಂದ ಹಂಪರಗುಂದಿಗೆ ಸನ್ಮಾನ

ಇಮೇಜ್
ಮಸ್ಕಿ: ಗುಳೇದಗುಡ್ಡದ ಶ್ರೀ ಜಗದ್ಗುರು ಗುರು ಸಿದ್ಧೇಶ್ವರ ಬೃಹನ್ಮಠದ ಪಟ್ಟಶಾಲಿ ನೇಕಾರ ಗುರುಪೀಠದ ವಾರ್ಷಿಕೋತ್ಸವ ಹಾಗು ಧಾರ್ಮಿಕ ಸಭೆಯಲ್ಲಿ ಅಪರೂಪದ ಸಮಾಜ ಸೇವಕ ರಾಮಣ್ಣ ಹಂಪರಗುಂದಿ ಯವರಿಗೆ ಶ್ರೀ ಮಠದಿಂದ ಸನ್ಮಾನಿಸಿ ಗೌರವಿಸಿದರು. ಪರಮಪೂಜ್ಯ ಶ್ರೀ ಜಗದ್ಗುರು ಶ್ರೀ ಬಸವಸ್ವಾಮಿ ಪಟ್ಟದೊಡೆಯರು ಮಾತನಾಡಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ರಾಯಚೂರು ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ ಇವರು ಆರಂಭಿಸಿದ ಸಂಡೇ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯ ನಾಡಿನ ಯುವಕರಿಗೆ ಮಾದರಿ ಸೇವಾ ಕಾರ್ಯವಾಗಿದೆ ಹಾಗೂ ಅಭಿನಂದನ್ ಸ್ಪೂರ್ತಿ ಧಾಮವನ್ನು ಸ್ಥಾಪಿಸಿ ಅನಾಥ ಹಾಗೂ ಬಡ ಮಕ್ಕಳ ಪಾಲಿಗೆ ಸಂಜೀವಿನಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅದಕ್ಕಾಗಿ ನಮ್ಮ ಮಠದಿಂದ ರಾಮಣ್ಣ ಹಂಪರಗುಂದಿ ಯವರಿಗೆ ಗೌರವ ಅರ್ಪಿಸಲಾಯಿತು ಎಂದರು. ಈ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಸಂಜೀವ ಚಂದ್ರಶೇಖರ ಗೌರ, ಎಸ್ ಜಿ ನಂಜಯ್ಯನಮಠ, ಉಪನ್ಯಾಸಕ ಸಹಜನಂದ ಕೆಂಗಲಗುತ್ತಿ, ಹಾಗೂ ಹಲವಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಗರಸಭೆ ಉಪ ಚುನಾವಣೆ: ಅಬೇದಾಬೇಗಂ ಗೆಲುವು

ಇಮೇಜ್
ಸಿಂಧನೂರು. ಡಿ-30 ಸಿಂಧನೂರು ನಗರಸಭೆಯ ವಾರ್ಡ್ ನಂ-22ಕ್ಕೆ ನಡೆದ ಉಪ ಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಅಬೇದಾಬೇಗಂ ಗಂ. ಮುನೀರಪಾಷಾ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ವೀರೇಶ ಗೋನವಾರ ತಿಳಿಸಿದರು. ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಹಿಂದಿನ ಸದಸ್ಯರಾದ ಮುನೀರಪಾಷಾ ಇವರು ನಿಧನ ಹೊಂದಿದ ಪ್ರಯುಕ್ತ ಒಂದು ಸ್ಥಾನಕ್ಕೆ ಇದೇ ದಿನಾಂಕ: 27-12-2023ರಂದು ಉಪ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಅಬೇದಾಬೇಗಂ ಗಂ. ಮುನೀರಪಾಷಾ, ಬಿಜೆಪಿಯಿಂದ ಮಲ್ಲಿಕಾರ್ಜುನ ಕಾಟಗಲ್, ಜೆಡಿಎಸ್‌ನಿಂದ ಎಂ.ಮಹಿಬೂಬ, ಎಸ್‌ಡಿಪಿಐನಿಂದ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಸ್ಪರ್ಧಿಸಿದ್ದರು.  ಚಲಾವಣೆಯಾದ ಒಟ್ಟು 1150 ಮತಗಳ ಪೈಕಿ, ಅಬೇದಾಬೇಗಂ ಗಂ. ಮುನೀರಪಾಷಾ ಅವರು 744, ಮಲ್ಲಿಕಾರ್ಜುನ ಕಾಟಗಲ್ ಅವರಿಗೆ 105, ಎಂ.ಮಹಿಬೂಬ ಅವರಿಗೆ 266, ಅಬ್ದುಲ್ ರಿಯಾಜ್ ಬುಡ್ಡಣ್ಣಿ ಅವರು 29 ಮತಗಳನ್ನು ಪಡೆದರೆ, 06-ಮತಗಳು ನೋಟಾಕ್ಕೆ ದಾಖಲಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಅಬೇದಾಬೇಗಂ ಅವರು 478 ಮತಗಳ ಅಂತರದಿAದ ಗೆಲವು ಸಾಧಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ರಾಮದಾಸ ತಿಳಿಸಿದರು. ಮತ ಎಣಿಕೆ : ಇಂದು ಬೆಳಿಗ್ಗೆ 8.15ಕ್ಕೆ ಆರಂಭವಾದ ಮತ ಎಣಿಕೆ ಕಾರ್ಯ ಬೆಳಿಗ್ಗೆ 8.40ಕ್ಕೆ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಹೆಚ್.ಚಂದ್ರಶೇಖರ, ಚುನಾವಣಾ ಶಾಖೆಯ ರಾ

*ಕೂಡ್ಲಿಗಿ:ಡಾ"ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ- ಡಾ"ಬಿ.ಆರ್.ಅಂಬೇಡ್ಕರ್ ಸಂಘದಿಂದ ಚಿಂತನೆ ಕಾರ್ಯಕ್ರಮ*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಡಾ"ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ, ಡಿ29ರಂದು, ಡಾ"ಬಿ.ಆರ್.ಅಂಬೇಡ್ಕರ್ ಸಂಘದಿಂದ ಶಾಲೆಯಲ್ಲಿ ಅಂಬೇಡ್ಕರ್ ರವರ ಚಿಂತನೆ 2023ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು . ಡಾ" ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಹೆಚ್.ಕೃಷ್ಣಪ್ಪ ಮಾತನಾಡಿ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಚಿಂತನಾ ಆಲೋಚನೆಗಳು ಸಾಮಾಜಿಕ ಕಾಳಜಿಯುಳ್ಳವಾಗಿದ್ದವು. ಅವರು ಸಂವಿಧಾನ ಬರೆಯುವಾಗ, ಸುಮಾರು 300 ಹೆಚ್ಚು ಜನ ರಾಷ್ಟ್ರಕಂಡ ಮೇಧಾವಿಗಳ ಸಲಹೆಯನ್ನು ಪಡೆಯುತ್ತಾರೆ. ಅವರ ಸಲಹೆ ಸೂಚನೆಗಳನ್ನು ಆಲೋಚಿಸಿ ನಂತರ ಪರಾಮರ್ಶಿಸಿ, ಸಂವಿಧಾನವನ್ನು ಯೋಚಿಸಿ ಚಿಂತನೆ ಮಾಡಿ ನಿರ್ಣಯಿಸಿ ಸಂವಿಧಾನ ರಚನೆ ಮಾಡುತ್ತಾರೆ. ಡಾ"ಬಿ.ಆರ್.ಅಂಬೇಡ್ಕರ್ ರವರು ದೇಶದಲ್ಲಿ ಹಿಂದುಳಿದ ಹಾಗೂ ದಲಿತರ ಬಗ್ಗೆ ಮುಂದಾಲೋಚನೆ ಬಗ್ಗೆ ನೂರಿತು ಶಿಕ್ಷಣಕ್ಕೆ ಹೆಚ್ಚಿನ ಹೊತ್ತನ್ನು ಕೊಟ್ಟು ರು ಎಂದು ಮಾತನಾಡಿದರು, ಅಂತ: ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿರುತ್ತಾರೆ. ಬ್ರಿಟಿಷರ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನಾ ಪ್ರಾಧಾನ್ಯತೆ ನೀಡುತ್ತಿರಲಿಲ್ಲ, ಅಂಬೇಡ್ಕರ್ ರವರು ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶಿಕ್ಷಣಕ್ಕೆ ಆದ್ಯತೆ ನೀಡಿದರು. ವಿದ್ಯಾರ್ಥಿಗಳು ಪಾಠ್ಯಕ್ರಮವನ್ನು ಆಲಿಸುವುದು ಮಾತ್ರವಲ್ಲ, ಎಲ್ಲಿ ಏಕೆ ಏನು ಎಂಬ ಪ್ರಶ

ಚನ್ನಮಲ್ಲ ಶ್ರೀಗಳ 68ನೇ ಜಾತ್ರಾ ಮಹೋತ್ಸವ : ಪುರಾಣ ಕಾರ್ಯಕ್ರಮ

ಇಮೇಜ್
ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದ ಶ್ರೀ ಶ್ರೀ ಶ್ರೀ ಚನ್ನಮಲ್ಲ ಮಹಾ ಸ್ವಾಮೀಜಿಗಳ 68 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಆರನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮ ಜರಗಿತು. ಶುಕ್ರವಾರ ಹೋಮ ಕಾರ್ಯಕ್ರಮ, ಮುಂಡರಗಿ ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ಅನ್ನದಾನೀಶ್ವರ ಶ್ರೀಗಳಿಂದ ಶ್ರೀಶ್ರೀಶ್ರೀ ಚನ್ನಮಲ್ಲ ಮಹಾ ಸ್ವಾಮೀಜಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲ್ಲಿನ ಶಿಲೆ ಸ್ಥಾಪನೆ ಸಾಯಂಕಾಲ ಪಲ್ಲಕ್ಕಿ ಹೊತ್ತು, ಕಳಸ ಹೊತ್ತ ಮಹಿಳೆಯರು ಭಕ್ತಿ ಭಾವದಿಂದ ಶ್ರೀಮಠದ ಸುತ್ತು ಹಾಕಿದರು.  ಸಾಯಂಕಾಲ 6 ಗಂಟೆ ಯಿಂದ ಆರಂಭವಾಗುವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪ್ರವಚನಕಾರರು ಹಾಗೂ ತಬಲ, ಸಂಗೀತಾ ಪೆಟ್ಟಿಗೆ ವಾದ್ಯಕರಿಂದ ನೆರೆದ ಗ್ರಾಮದ ಜನತೆಯ ಮನ ಮುಟ್ಟುವ ಬಗೆಯಲ್ಲಿ ಅರ್ಥಗರ್ಭಿತವಾಗಿ ನೆರವೇರಿಸಿಕೊಟ್ಟರು.  ನಂತರ ಮೊದಲಿಗೆ ಶ್ರೀಗಳ ಪಾದ ಪೂಜೆ ಮಾಡಿ ಚನ್ನವೀರಪ್ಪ ತಂದೆ ಬಸಣ್ಣ ಭೂಮೋಜಿ ಸಾಕೀನ್ ಸಿಂಧನೂರು (ಮೆದಿಕಿನಾಳ) ಇವರ ಕುಟುಂಬದವರು ಮೊದಲನೇ ತುಲಾಭಾರ ಸೇವೆ ಸಲ್ಲಿದರೆ ವಿಶ್ವನಾಥ ತಂದೆ ವಿರೇಶಪ್ಪ ಚನ್ನಹಳ್ಳಿ ಸಾಕೀನ್ ಸಿಂಧನೂರು, ಇವರ ಕುಟುಂಬದ ಸರ್ವ ಸದಸ್ಯರು ಎರಡನೇ ತುಲಾಭಾರ ಸೇವೆ ಸಲ್ಲಿಸಿದರು. ನಂತರ ಸರ್ವ ಭಕ್ತರು ಡಾಕ್ಟರ ಶ್ರೀ ಶ್ರೀ ಶ್ರೀ ಚನ್ನಮಲ್ಲ ಸ್ವಾಮೀಜಿ ರವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಅಂದಿನ ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಕಾರ್ಯಕ್ರಮದಲ್ಲಿ  ಶ್ರೀ ವೇ

“ವಿಶ್ವಮಾನವ ದಿನಾಚರಣೆ”

ಇಮೇಜ್
ಕೊಟ್ಟೂರು ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಇಂದು “ವಿಶ್ವಮಾನವ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರರಾದ ಶ್ರೀ ಅಮರೇಶ್.ಜಿಕೆ ರವರು ಕುವೆಂಪುರವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿ, ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಹಾಗೂ ಮನುಕುಲದ ಒಳಿತಿಗೆ ಶ್ರಮಿಸಿದ ಅವರ ಕೊಡುಗೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪ್ರಭಾರೆ ಗ್ರೇಡ್-2 ತಹಶೀಲ್ದಾರರಾದ ಶ್ರೀಮತಿ ಲೀಲಾ ಎಸ್, ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ, ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ : ಶಬನಾ ಬೇಗಂ.ಎಂ

ಇಮೇಜ್
ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ : ವೈಜ್ಞಾನಿಕ ಸಂಶೋಧನಾ ಪರಿಷತ್ ನಡೆಸುವ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಈ ಬಾರಿ ಲಿಂಗಸಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ 3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕಿನ  ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಶಬನಾ ಬೇಗಂ.ಎಮ್ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು. ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದೇ ಕಳೆದ ಎರಡು ವರ್ಷಗಳಿಂದ ಈಗಾಗಲೇ ವೈಜ್ಞಾನಿಕ ಸಮ್ಮೇಳನ ನಡೆಸಲಾಗಿದೆ. ಈ ಬಾರಿಯೂ ಕೂಡ ಡಿಸೆಂಬರ್ 29, 30ರಂದು ಸಮ್ಮೇಳನ ನಡೆಯಲಿದೆ.3ನೇ ಸಮ್ಮೇಳನವನ್ನು ಪಟ್ಟಣದಲ್ಲಿ ನಡೆಸಲು ವೈಜ್ಞಾನಿಕ ಸಂಶೋಧನಾ ಪರಿಷತ್ ತೀರ್ಮಾನಿಸಿ ಅದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಭವ್ಯ ವೇದಿಕೆ: ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕೆ ವೇದಿಕೆ ಸಿದ್ದಗೊಂಡಿದೆ. 80x40 ಅಳತೆಯ ಸಮಾರಂಭದ ಮುಖ್ಯವೇದಿಕೆ, 10 ಸಾವಿರ ಗಣ್ಯರು ಹಾಗೂ ಸಾರ್ವಜನಿಕರು ಕೂರಲು ಆಸನದ ವ್ಯವಸ್ಥೆ ಊಟ ಹಾಗೂ ವಿವಿಧ ಮಳಿಗೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಬಂದವರಿಗೆ ಎರಡು ದಿನಗಳ ಕಾಲ ವಿವಿಧ ರುಚಿಕರವಾದ ಊಟದ ವ್ಯವಸ್ಥೆ ತಯಾರಿ ಮಾಡಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಚಾಲನೆ: 3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು, ಸಮ್ಮೇಳನದ ಸ

ಕಿಡಿಗೇಡಿಗಳ ದುಷ್ಕೃತ್ಯ ವಿರುದ್ಧ ಉನ್ನತ ಮಟ್ಟದ ತನಿಕೆಗೆ ಅಗ್ರಹ : ಸಂಗಮೇಶ್ ಬಾಗವಾಡಗಿ

ಇಮೇಜ್
 ವರದಿ - ಮಂಜುನಾಥ್ ಕೋಳೂರು ಕೊಪ್ಪಳ.   ಕೊಪ್ಪಳ ಡಿ 29 : - ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪದ ಪಂಪ ಸರೋವರ ಹತ್ತಿರ ಇರುವ ಅತಿಥಿಗೃಹ (ಕುಟೀರಕ್ಕೆ )ಯಾರೋ ಕಿಟಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದ್ದು, ಈ ಕೂಡಲೇ ವಿಚಾರಣೆ ಮಾಡಿ ಆರೋಪಿಗಳನ್ನು ಬಂಧಿಸಿ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಕೆ ಆರ್ ಪಿ ಪಕ್ಷದ ಜಿಲ್ಲಾಧ್ಯಕ್ಷ ಸಂಗಮೇಶ್ ಬಾಧವಾಡಗಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.  ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪ್ರಿಯತೆಯನ್ನು ಸಹಿಸದ ಕೆಲವು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯವರು ಈ ರೀತಿ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಉನ್ನರುಗಳಿಗೆ ಜನಾರ್ದನ್ ರೆಡ್ಡಿ ಅವರು ಹೆದರುವುದಿಲ್ಲ . ಅವರು ಕೈಗೊಳ್ಳುವ ಸಾರ್ವಜನಿಕ ಕೆಲಸಗಳು ಜನಪ್ರಿಯತೆಯನ್ನು ಪಡೆಯುತ್ತಿವೆ ಬಳ್ಳಾರಿ ಮಹಾನಗರ ಮಾದರಿಯಲ್ಲಿ ಗಂಗಾವತಿ ನಗರವನ್ನು ಅಭಿವೃದ್ಧಿಪಡಿಸುವಲ್ಲಿ ದಿಟ್ಟ ನಿರ್ಧಾರದೊಂದಿಗೆ ಹೆಜ್ಜೆ ನೀಡುತ್ತಿದ್ದಾರೆ ಎಂದು ಸಂಗಮೇಶ್ ಬಾಗವಾಡಗಿ ಮೆಚ್ಚುಗೆ ವ್ಯಕ್ತಪಡಿಸಿದರು.  ಇಂತಹ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಿದಾಗ ಮಾತ್ರ ನಿಜವಾದ ಸತ್ಯ ಹೊರಬರುತ್ತದೆ ಎಂದು ಹೇಳಿದ

ಲೋಕಸಭಾ ಚುನಾವಣೆ: ಕೆ ಆರ್ ಎಸ್ ಪಕ್ಷ ಸಂದರ್ಶನ --- ಆಶಾ ವೀರೇಶ್

ಇಮೇಜ್
ವರದಿ - ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ ಡಿ 29 : - ಮುಂಬರುವ ಲೋಕಸಭಾ ಚುನಾವಣೆಗೆ ಅಹ೯ ಹಾಗೂ ಆಸಕ್ತ ಅಭ್ಯರ್ಥಿಗಳ ಆಯ್ಕೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ( ಕೆ ಆರ್ ಎಸ್ ಪಕ್ಷ ) ಜನವರಿ 6 ಮತ್ತು 7 ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ನಮ್ಮ ಪಕ್ಷದ ಕಚೇರಿಯಲ್ಲಿ ಸಂದರ್ಶನ ಹಮ್ಮಿಕೊಂಡಿದೆ . ಚುನಾವಣೆಗೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು . ಯಾವ ರೀತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಅನ್ನೋದರ ಬಗ್ಗೆ ಇತ್ತೀಚಿಗೆ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ತೀರ್ಮಾನಿಸಲಾಗಿದ್ದು . ಇದಕ್ಕಾಗಿ ಸಂದರ್ಶನ ನಿಯೋಜನೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷೆ ಆಶಾ ವೀರೇಶ್ ನಗರದ ಪತ್ರಿಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂದರ್ಶನಕ್ಕೆ ಹಾಜರಾಗಲು ಹಾಲಿ ಸದಸ್ಯರಿಗೆ 5 ಸಾವಿರ ಹಾಗೂ ಈಗ ಪಕ್ಷ ಸೇರಿ ಸಂದರ್ಶನಕ್ಕೆ ಹಾಜರಾದಂತ ಆಕಾಂಕ್ಷಿಗಳಿಗೆ 10 ಸಾವಿರ ರೂಪಾಯಿ ಶುಲ್ಕವಿರುತ್ತದೆ . ತದನಂತರ ಪಕ್ಷದ ರಾಜ್ಯ ಸಮಿತಿ ನೇತೃತ್ವದಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮ ಗೊಳಿಸುತ್ತದೆ. ಇಂದಿನ ರಾಜಕಾರಣದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೇ ತುಂಬಿ ತುಳುಕಾಡುತ್ತಿದೆ . ನಮ್ಮ ಪಕ್ಷ ಇದೇ ವಿಷಯ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ ಎಂದು ಹೇಳಿದರು . ಅಭ್ಯರ್ಥಿಯಾಗ ಬಯಸುವ ಆಸಕ್ತರು 9611720802 ಈ ಮೊಬೈಲ್ ನಂಬರ್ ಗೆ ಸಂಪರ್ಕಿ

ಅಮರಶಿಲ್ಪಿ ಜಕಣಾಚಾರಿ ಜಯಂತಿ ಪೂರ್ವಭಾವಿ ಸಭೆ

ಇಮೇಜ್
ಮಸ್ಕಿ: ಹೊಸ ವರ್ಷದ ಆರಂಭದ ದಿನ ಜ.1ರಂದು ನಡೆಯಲಿರುವ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ ಸಂಬಂಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿರಸ್ತೇದಾರ್ ಆಖ್ತರ್ ಅಲಿ ಮಾತನಾಡಿ; ತಾಲೂಕಿನಲ್ಲಿ ಜಕಣಾಚಾರಿ ಜಯಂತಿಯನ್ನು ಅಚ್ಚುಕಟ್ಟಾಗಿ ನಡೆಸಲು ಸಾರ್ವಜನಿಕರ ಸಹಕಾರ ಅಗತ್ಯ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈ ಜೋಡಿಸಬೇಕು ಎಂದರು. ನಂತರ ವಿಶ್ವಕರ್ಮ ಸಮಾಜದ ಪಟ್ಟಣದ ಅಧ್ಯಕ್ಷ ಉದಯ ಕುಮಾರ ಪತ್ತಾರ ಮಾತನಾಡಿ; ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು ಎಲ್ಲಾ ರಾಷ್ಟೀಯ ಹಬ್ಬಗಳಲ್ಲಿ ಪಾಲ್ಗೊಳ್ಳಬೇಕು. ರಾಷ್ಟೀಯ ನಾಯಕರು ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಅಲ್ಲದೆ ಇಂತಹ ಸಭೆಗಳಿಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

ಮನುಷ್ಯನ ಅಧ್ಯಾತ್ಮ ಸರ್ವಶಾಸ್ತ್ರ ಶಿರೋಮಣಿ ಜೀವನದ ಸರ್ವ ಸಮಸ್ಯೆಗಳಿಗೆ ಸಂಜೀವಿನಿ ಭಗವದ್ಗೀತೆ -- ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು

ಇಮೇಜ್
ವರದಿ -- ಮಂಜುನಾಥ್ ಕೋಳೂರು  ಕೊಪ್ಪಳ ಕೊಪ್ಪಳ : -- ಮನುಷ್ಯನ ಜೀವನದ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಆಧ್ಯಾತ್ಮ ಶಕ್ತಿಯಿಂದ. ಅಂತಹ ಅಧ್ಯಾತ್ಮ ಜ್ಞಾನ ಹೊಂದಿರುವ ಭಗವದ್ಗೀತೆ ಸರ್ವಶಾಸ್ತ್ರ ಶಿರೋಮಣಿಯಾಗಿದೆ, ವರ್ತಮಾನ ಪ್ರಕ್ಷುಬ್ದ ಸಮಯದಲ್ಲಿ ಜೀವನದ ಸರ್ವ ಸಮಸ್ಯೆಗಳಿಗೆ ಸಂಜೀವಿನಿ ಭಗವದ್ಗೀತೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು.  ಅವರು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಏರ್ಪಡಿಸಿದ ಗೀತಾ ಜಯಂತಿ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಗೀತಾ ಜ್ಞಾನವು ಮೌಲ್ಯಯುಕ್ತ, ಕ್ರೋಧ ಮುಕ್ತ ಜೀವನ, ಕರ್ಮಯೋಗಿ ಜೀವನ, ಕಾಯ - ವಾಚಾ - ಮನಸ ಭಗವಂತನಿಗೆ ಸಮರ್ಪಿತ ಜೀವನ, ಸಮಸ್ಯೆ ಮುಕ್ತ ಜೀವನ ನಡೆಸಲು ಸತ್ ಪ್ರೇರಣೆಯನ್ನು ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ . ಅಲೆದಾಡುವ ಭಕ್ತನ ಮನಸ್ಸನ್ನು ಏಕೇಶ್ವರನಲ್ಲಿ ಏಕಾಗ್ರಗೊಳಿಸುವ ಶಕ್ತಿಯನ್ನು ತುಂಬುತ್ತದೆ ಶ್ರೀಮದ್ ಭಗವದ್ಗೀತಾ. ಸಂತುಷ್ಟವಾಗಿರುವುದೇ ನಮ್ಮ ಜೀವನದ ಸಫಲತೆ ಯಾವುದೇ ವಸ್ತು ಮತ್ತು ವ್ಯಕ್ತಿಗಳಿಂದ ಅಪೇಕ್ಷೆ ಮತ್ತು ನಿರೀಕ್ಷೆಯಿಲ್ಲದೆ ಸ್ವ-ಶಕ್ತಿಯಿಂದ , ಆತ್ಮ - ಶಕ್ತಿಯಿಂದ ಜೀವನದಲ್ಲಿ ಸಫಲರಾಗಬೇಕು. ಈ ರೀತಿ ಜೀವನ ನಡೆಸಲು ಗೀತೆ ಪ್ರೇರಣೆ ನೀಡುತ್ತದೆ ಎಂದು ರಾಜ ಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಗೀತಾ ಶ್ಲೋಕ ಹೇಳಿ ವಿವರಿಸಿ ಮನದಟ್ಟು ಮಾಡಿಸಿದರು.  ಕಾರ್ಯ

ಪಿಂಚಣಿ ಅದಾಲತ್ 25 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ

ಇಮೇಜ್
ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ : ತಾಲೂಕಿನ ಪಾಮನಕಲ್ಲೂರು ಹೋಬಳಿಯ ಯತಗಲ್ ಗ್ರಾಮದ ಮನೆ ಬಾಗಿಲಿಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜನೆಯ ಮಾಡಿ ಸ್ಥಳದಲ್ಲೇ 25 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಮಸ್ಕಿ ತಾಲೂಕಿನ ಕರ್ತವ್ಯನಿರತ ದಿನಗಳಲ್ಲಿಯೇ ಮರೆಯಲಾಗದ ದಿನ ಎಂದು ಡಾಕ್ಟರ್ ಮಲ್ಲಪ್ಪ ಕೆ ಗ್ರೇಡ್ 2 ತಹಶೀಲ್ದಾರ್ ಮಸ್ಕಿ ಸಂತೋಷ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಆದೇಶದಂತೆ ಬುಧವಾರ ಮನೆ ಬಾಗಿಲಿಗೆ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಂಗವಾಗಿ ಇಂದು ಯತಗಲ್ ಗ್ರಾಮದ ಬಡ ಕುಟುಂಬದ ಸೌಕರ್ಯ ವಂಚಿತ 25 ಕ್ಕೂ ಹೆಚ್ಚಿನ ಅರ್ಹ ಪಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ಸ್ಥಳದಲ್ಲಿಯೇ ವಿತರಿಸಿ ಮಾತನಾಡುತ್ತಾ ನನ್ನ ವೃತ್ತಿ ಜೀವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಸ್ಕಿ ತಾಲೂಕಿನ ಕರ್ತವ್ಯ ನಿರತ ದಿನಗಳಲ್ಲಿಯೇ ಮರೆಯಲಾಗದ ಸಂತೋಷದ ದಿನ ಯಾಕೆಂದರೆ ಇಂತಹ ಬಡ ಕುಟುಂಬದ ಜನತೆಯ ಮನೆ ಬಾಗಿಲಿಗೆ ಬಂದು ಅವರ ಕಷ್ಟವನ್ನು ಆಲಿಸಿ ಆದೇಶ ಪತ್ರವನ್ನು ವಿತರಿಸುವ ಕ್ಷಣ ಎಲ್ಲಿಲ್ಲದ ಸಂತೋಷ ತಂದಿದೆ ಎಂದು ಡಾಕ್ಟರ್ ಮಲ್ಲಪ್ಪ ಕೆ ಗ್ರೇಡ್ 2 ತಹಶೀಲ್ದಾರ್ ಮಸ್ಕಿ ರವರು ಹೇಳಿದರು.  ಇದೇ ಸಂದರ್ಭದಲ್ಲಿ ದೇವರಾಜ್ ಮಾನವಿ ಉಪ ತಹಶೀಲ್ದಾರ್ ಪಾಮನಕಲ್ಲೂರು ಹೋಬಳಿ, ಅರಳಪ್ಪ ಕಂದಾಯ ನಿರೀಕ್ಷಕರು ಪಾಮನಕಲ್ಲೂರು ಹೋಬಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸಾರ್ವಜನ

ಕಂದಗಲ್ಲು ಗ್ರಾಮ ಪಂಚಾಯಿತಿಯನ್ನು ಮೂಲ ಸ್ಥಳವಾದ ಗಜಾಪುರಕ್ಕೆ ವರ್ಗಾಯಿಸಲು : ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ರೇಣುಕಮ್ಮ ಒತ್ತಾಯ

ಇಮೇಜ್
ಕೊಟ್ಟೂರು ತಾಲ್ಲೂಕಿನ ಕಂದಗಲ್ಲು ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಗಜಾಪುರ ಗ್ರಾಮಕ್ಕೇ ಮಂಜೂರಾಗಿತ್ತು. ಆದರೆ ರಾಜಕೀಯ ಒತ್ತಡದ ಪರಿಣಾಮವಾಗಿ ಕಾರಣಾಂತರಗಳಿಂದ ಕಂದಗಲ್ಲುಗೆ ವರ್ಗಾಯಿಸಿಕೊಂಡಿದ್ದಾರೆ. ಇದರಿಂದ ಈ ಪಂಚಾಯಿತಿಯ ಸಾರ್ವಜನಿಕರು ಪಂಚಾಯಿತಿಗೆ ಹೋಗಲು ಬಸ್ ಸೌಲಭ್ಯವೇ ಇಲ್ಲದ ಕಂದಗಲ್ಲಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಆದರೆ ಮುಖ್ಯರಸ್ತೆ, ರಾಜ್ಯ ಹೆದ್ದಾರಿಯಲ್ಲಿರುವ ಗಜಾಪುರ ಗ್ರಾಮಕ್ಕೆ ಈ ಪಂಚಾಯಿತಿಯನ್ನು ವರ್ಗಾಯಿಸಿದರೆ ಗ್ರಾಮೀಣ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದಲ್ಲದೇ ಮೂಲಸ್ಥಳವಾದ ಗಜಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿ ಒಂದು ಗ್ರಂಥಾಲಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಿದೆ, ಈ ಗ್ರಾಮಕ್ಕೆ ಒಂದು ಗ್ರಂಥಾಲಯ ಮಂಜೂರು ಮಾಡಿ, ಗ್ರಾಮ ಪಂಚಾಯಿತಿಯನ್ನು ಗಜಾಪುರ ಗ್ರಾಮಕ್ಕೆ ವರ್ಗಾಯಿಸಬೇಕೆಂದು ಓದುಗರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.  ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಮಾಕನಡಕು ಮೂಲ ಗ್ರಾಮ ಪಂಚಾಯಿತಿಯಾಗಿದ್ದು, ಪಂಚಾಯಿತಿಯನ್ನು ಚಿಕ್ಕಜೋಗಿಹಳ್ಳಿಗೆ ವರ್ಗಾವಣೆಗೊಂಡಿದೆ. ಮಾಕನಡಕು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದ್ದು, ಈಗ ಅಲ್ಲಿನ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಗ್ರಾಮ ಪಂಚಾಯಿತಿಗೆ ಗ್ರಾಮೀಣ ಪ್ರದೇಶದ ಜನರು ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಅದೇ ರೀತಿ ಇದೂ ಸಹ ಆಗಬಹುದು. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ

ಬಂದಾತರ ನಿಹಾಲ್ 7ನೇ ವರ್ಷದ : ಪತ್ರಕರ್ತರ ಅಧ್ಯಕ್ಷರು ಶುಭ ಕೋರಿದರು : ಪತ್ರಿಕಾ ಬಳಗ

ಇಮೇಜ್
ಕೊಟ್ಟೂರು : ಹಬ್ಬವನ್ನು , ಅಜ್ಜ-ಅಜ್ಜಿ ಮತ್ತು ತಂದೆ-ತಾಯಿ, ಬಂದುಗಳು ಹಾಗೂ ಹಿತೈಷಿಗಳು ಸಂಭ್ರಮದಿಂದ ಆಚರಿಸುವ ಮೂಲಕ ಶುಭ ಹಾರೈಸಿದರು. ಹೊಳೆಯುವ ಚಂದ್ರನಂತೆ, ತಿಳಿ ನೀರಿನ ಅಲೆಯಂತೆ, ಮಲ್ಲಿಗೆಯ ಸುವಾಸನೆಯಂತೆ,ಅರಳಿದ ತಾವರೆಯಂತೆ ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ನಗುತಿರಲಿ. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ. ಇದರೊಟ್ಟಿಗೆ, ದೇಶ ಕಂಡ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು,  ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುವ ಮೂಲಕ,ಭಾರತ ದೇಶದ ಸಂವಿಧಾನಕ್ಕೆ ಮತ್ತು ಇಲ್ಲಿನ ಸಂಸ್ಕೃತಿಗೆ ಗೌರವ ಕೊಡುವ ಮೂಲಕ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ,ನಿನ್ನವರೊಂದಿಗೆ ಇಡೀ ದೇಶವೇ ಮೆಚ್ಚುವಂತಹ ಉತ್ತಮ ಕಾರ್ಯಗಳು ನಿನ್ನಿಂದ ನಡೆಯಲಿ ಎಂದು ಶುಭಕೋರಿದರು.

ಅಪರಾಧಗಳ ತಡೆಗೆ ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸಿ :ಪಿಎಸ್‌ಐ ಗೀತಾಂಜಲಿ ಶಿಂಧೆ

ಇಮೇಜ್
ಕೊಟ್ಟೂರು: ಪೋಲಿಸರು ಜನಸ್ನೇಹಿಗಳಾಗಿ ಜನರ ಪ್ರಾಣ, ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದು, ಅಪರಾಧಗಳ ತಡೆಗೆ ಸಾರ್ವಜನಿಕರು ಪೋಲಿಸರೊಂದಿಗೆ ಪರಸ್ಪರ ಸಹಕರಿಸಬೇಕು ಎಂದು ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಶಿಂಧೆ ಮಾತನಾಡಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪಟ್ಟಣದ ಶಾಲೆ, ಕಾಲೇಜ್, ಬಸ್ ನಿಲ್ದಾಣ ಹಾಗೂ ಸಂತೆ ಮಾರ್ಕೆಟ್ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು. ಯುವ ಪೀಳಿಗೆಯು ಮೋಜು ಮಸ್ತಿಗೆ ಬಿದ್ದು, ಕಾನೂನು ಪರಿಪಾಲನೆ ಪಾಲಿಸದೆ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದಿರಲು ಸೂಚಿಸಿದರು ಹಾಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತಾಳದೆ ಮಕ್ಕಳ ಚಲನವಲನಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು. ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರ, ಸರಗಳ್ಳರ ಹಾಗೂ ಮೊಬೈಲ್ ಕಳ್ಳರಿರುವುದು ಮತ್ತು ತಮ್ಮನ್ನು ಬೇರೆಡೆ ಸೆಳೆದು ಹಣದ ಬ್ಯಾಗ್ ದೋಚುವಂತದ್ದು, ಎಟಿಎಂ ಕಾರ್ಡ್ ಸೀಕ್ರೆಟ್ ನಂಬರ್ ಪಿನ್ ಕೋಡ್ ಹ್ಯಾಕರ್ ಇದ್ದು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು. ಮಹಿಳೆಯರು ಆಭರಣಗಳನ್ನು ಹೊರಗಡೆ ಕಾಣುವಂತೆ ಧರಿಸಿ ವಾಯುವಿಹಾರಕ್ಕೆ ತೆರಳಬೇಡಿ, ೪-೫ ದಿನಗಳು ಊರಿಗೆ ಹೋದರೆ ಮನೆಯಲ್ಲಿನ ಆಭರಣಗಳನ್ನು ಮತ್ತು ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್

ಯತ್ನಾಳ್ ಆರೋಪವನ್ನು ತನಿಖೆಗೆ ಒಳಪಡಿಸಿ:ವೆಂಕಟೇಶ್ ಹೆಗಡೆ

ಇಮೇಜ್
  ಬಳ್ಳಾರಿ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನ ಕಾಲದಲ್ಲಿ 40 ಸಾವಿರ ಕೋಟಿ ರೂ. ಹಗರಣ ಆಗಿರುವ ಕುರಿತು ಅದೇ ಪಕ್ಷದ ನಾಯಕ, ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಬೇಕು ಎಂದು ಕೆ ಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ಹಾಗೂ ಕೆಪಿಸಿಸಿ ರಾಜ್ಯ ಜಂಟಿ ಪ್ರಚಾರ ಸಮಿತಿ ಸಂಯೋಜಕ ವೆಂಕಟೇಶ್ ಹೆಗಡೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು  ಬಿಜೆಪಿ ಎಂತಹ ಲಜ್ಜೆಗೆಟ್ಟ ಸರ್ಕಾರ ನಡೆಸಿತು ಎಂಬುದು ಇದೀಗ ಯತ್ನಾಳ್ ಹೇಳಿಕೆಯಿಂದ ಬಯಲಾಗಿದೆ. ಕೊರೊನ ಕಾಲದಲ್ಲಿ ಜನ ಪಡಬಾರದ ಪಾಡು ಪಟ್ಟರು. ಅದೆಷ್ಟೋ ಜನ ಸಾವಿರಾರು ಕಿಲೋ ಮೀಟರ್ ನಡೆದುಕೊಂಡು ತಮ್ಮ ಊರು ತಲುಪಿದರು. ಹಸಿವಿನಿಂದ ಬಳಲಿದರು. ಲಸಿಕೆಗಾಗಿ ಪರದಾಡಿದರು. ಅದೆಷ್ಟೊ ಜನ ಕೊರೋನ ಕಾರಣಕ್ಕೆ ಸಾವಿಗೀಡಾದರು. ಇಷ್ಟೆಲ್ಲದರ ಮಧ್ಯೆ ಬಿಜೆಪಿ ಸರ್ಕಾರ ಹಣ ಲೂಟಿ ಮಾಡುವುದರಲ್ಲಿ. ತಲ್ಲೀನ ಆಗಿತ್ತು ಎಂಬುದು ನಿಜಕ್ಕೂ ನಾವೆಲ್ಲಾ ತಲೆ ತಗ್ಗಿಸುವ ವಿಚಾರ ಆಗಿದೆ. ಯತ್ನಾಳ್ ಅಂದೆ ಈ ವಿಷಯ ಬಯಲು ಮಾಡಿ ರಾಜ್ಯ ಸರ್ಕಾರದ ವಿರುದ್ದ ಮಾತನಾಡಬೇಕಿತ್ತು. ತಡವಾಗಿ ಆದರೂ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 224 ಜನ ಶಾಸಕರು ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಯಾವುದ

ಮಾದಾರ ಚನ್ನಯ್ಯ ರವರ 954 ನೇ ಜಯಂತಿ ಆಚರಣೆ

ಇಮೇಜ್
ಮಸ್ಕಿ : ಮಂಗಳವಾರ ಶಿವಶರಣ ಪ್ರಥಮ ವಚನಕಾರ ಬಸವಣ್ಣನವರ ಅನುಯಾಯಿ ಮಾದಾರ ಚನ್ನಯ್ಯ ರವರ 954 ನೇ ಜಯಂತಿಯನ್ನೂ ಫೋಟೋ ಪೂಜೆ ಮಾಡುವ ಮೂಲಕ ಆಚರಣೆ. ಮಸ್ಕಿಯ ಗಾಂಧೀನಗರದ ಅಂಬೇಡ್ಕರ್ ಪಾರ್ಕಿನಲ್ಲಿ ಶಿವಶರಣ ಪ್ರಥಮ ವಚನಕಾರ ಬಸವಣ್ಣನವರ ಅನುಯಾಯಿ ಮಾದಾರ ಚನ್ನಯ್ಯ ರವರ 954 ನೇ ಜಯಂತಿಯನ್ನು ಮಾಲಾರ್ಪಣೆ ಮಾಡುವ ಮೂಲಕ ತಾಲೂಕಿನ ಸಮಸ್ತ ದಲಿತ ಮುಖಂಡರ ಅಮ್ಮುಖದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರಾದ ಮೌನೇಶ್ ಜಿ ಮುರಾರಿ, ಪ್ರಶಾಂತ್ ಮುರಾರಿ, ಯಮನಪ್ಪ ಮುದ್ಗಲ್, ಮಲ್ಲಪ್ಪ ಗೋನಾಳ್, ಶ್ರೀಕಾಂತ್ ಮುರಾರಿ ,ಅಶೋಕ್ ಮುರಾರಿ, ಕಾಶೀಮ್ ಮುರಾರಿ, ಸಿದ್ದು ಮುರಾರಿ,ಬಾಲಸ್ವಾಮಿ ಜಿನ್ನಾಪೂರ, ಕಿರಣ್ ವಿ ಮುರಾರಿ, ಸಿದ್ದಪ್ಪ ಹೂವಿನಭಾವಿ, ವೆಂಕಟೇಶ್ ಮುರಾರಿ,ಗಂಗಾಧರ ಮುರಾರಿ, ದುರ್ಗರಾಜ್ ವಟಗಲ್, ಮೋಹನ್ ಮುರಾರಿ,ಪ್ರಶಾಂತ್ ಕೊಠಾರಿ,ಮಲ್ಲಿಕ್ ಕೋಠಾರಿ, ಲಕ್ಷ್ಮಣ್ ಕಡಬೂರ, ಹುಲೀಗೇಶ್ ಮುರಾರಿ ಮುಂತಾದವರು ಭಾಗವಹಿಸಿದ್ದರು.

ಉಜ್ಜಯಿನಿ ಸದ್ಧರ್ಮ ಪೀಠವನ್ನು ಪ್ರವಾಸಿ ತಾಣವಾಗಿಸುವ ಯೋಜನೆಯೊಂದಿಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ : ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶೀನಿವಾಸ

ಇಮೇಜ್
ಕೊಟ್ಟೂರು: ತಾಲೂಕಿನ ಉಜ್ಜಯಿನಿಯಲ್ಲಿ ನಡೆದ ಲಿಂ.ಜಗದ್ಗುರು ಶ್ರೀ ಮರುಳಸಿದ್ದ ಶಿವಾಚಾರ್ಯರ ಪುಣ್ಯ ಸಂಸರಣೋತ್ಸವ, ಲಕ್ಷ ದೀಪೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು. ಜಾತಿ ಧರ್ಮವನ್ನು ಮೀರಿ ಸಮಾಜದಲ್ಲಿನ ಎಲ್ಲರನ್ನೂ ಒಂದೇ ಭಾವದಿಂದ ಕಂಡಿರುವುದು ಸದ್ಧರ್ಮ ಪೀಠ. ಶ್ರೀ ಪೀಠಕ್ಕೆ ಜರಿಮಲಿ ಪಾಳೆಗಾರರಾದಿಯಾಗಿ ಅನೇಕರು ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.  ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಹಂಪಿಯAತೆ ಸುಂದರ ಕಲಾಶಿಲ್ಪದೊಂದಿಗೆ ಕಂಗೊಳಿಸುತ್ತಿದೆ. ಪಂಚ ಪೀಠಗಳಲ್ಲಿನ ಸದ್ಧರ್ಮ ಪೀಠ ನಮ್ಮ ಭಾಗದಲ್ಲಿರುವುದು ಎಲ್ಲರ ಸುಕೃತವೂ ಆಗಿದೆ. ಶ್ರೀ ಪೀಠಕ್ಕೆ ನಿತ್ಯ ಹಾಗೂ ಜಾತ್ರ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೀಠದ ಮೂಲ ಸೌಕರ್ಯ ಅಭಿವೃದ್ದಿಯೊಂದಿಗೆ ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಲಿಂ.ಜಗದ್ಗುರು ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಭಕ್ತರಿಗಾಗಿ ಮಿಡಿಯುತ್ತಿದ್ದರು. ಅವರು ಪೀಠಕ್ಕೆ ಬಂದ ನಂತರ ನಿತ್ಯ ಪ್ರಸಾದ ಸೇರಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದರು. ಅಂತಹ ಜಗದ್ಗುರುಗಳ ಕೃಪೆಯೊಂದಿಗೆ ಇಂದಿನ ಜಗದ್ಗುರುಗಳ ಅವರ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಇದಕ್ಕೆ ಶಾಸಕನಾಗಿ ನಾನು ಎಲ್ಲ ಸಹಕಾರ

ಚನ್ನಮಲ್ಲ ಶ್ರೀಗಳ ಮಠದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ

ಇಮೇಜ್
ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದ ಶ್ರೀ ಶ್ರೀ ಶ್ರೀ ಚನ್ನಮಲ್ಲ ಮಹಾ ಸ್ವಾಮೀಜಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಎರಡನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮ ಜರಗಿತು. ಸೋಮವಾರ ಬೆಳಗ್ಗೆ ನೂತನ ರಥದ ಕಲ್ಲಿನ ಗಾಲಿಗಳನ್ನು ಟ್ರಾಕ್ಟರ್ ನಲ್ಲಿ ಹೊತ್ತು ಕಳಸ ಹೊತ್ತ ಮಹಿಳೆಯರು ಹಾಗೂ ವಾದ್ಯಗಳೊಂದಿಗೆ ಭಕ್ತ ಸಮೂಹ ಸಂಭ್ರಮ ಸಡಗರದಿಂದ ಮೆರವಣಿಗೆ ಮೂಲಕ ಬರಮಾಡಿಕೊಂಡರು.  ಸಾಯಂಕಾಲ 6 ಗಂಟೆ ಯಿಂದ ಆರಂಭವಾಗುವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪ್ರವಚನಕಾರರು ಹಾಗೂ ತಬಲ, ಸಂಗೀತಾ ಪೆಟ್ಟಿಗೆ ವಾದ್ಯಕರಿಂದ ನೆರೆದ ಗ್ರಾಮದ ಜನತೆಯ ಮನ ಮುಟ್ಟುವ ಬಗೆಯಲ್ಲಿ ಅರ್ಥಗರ್ಭಿತವಾಗಿ ನೆರವೇರಿಸಿಕೊಟ್ಟರು.  ನಂತರ ಮೊದಲಿಗೆ ಶ್ರೀಗಳ ಪಾದ ಪೂಜೆ ಮಾಡಿ ಮೊದಲನೇ ತುಲಭಾರ ಸೇವೆ ಬಸವರಾಜ್ ತಂದೆ ಈರಣ್ಣ ಸುಂಕದ ಕುಟುಂಬದವರು ಎರಡನೇ ತುಲಭಾರ ಸೇವೆ ಬಸವರಾಜ್ ತಂದೆ ಸಂಗಪ್ಪ ಬೊಮ್ಮನಾಳ( ಅಂಗಡಿ) ಇವರ ಕುಟುಂಬದವರು ಭಕ್ತಿಯಿಂದ ನೆರವೇರಿಸಿದರು. ನಂತರ ಸರ್ವ ಭಕ್ತರು ಡಾಕ್ಟರ ಶ್ರೀ ಶ್ರೀ ಶ್ರೀ ಚನ್ನಮಲ್ಲ ಸ್ವಾಮೀಜಿ ರವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಅಂದಿನ ಪ್ರಸಾದ ಸ್ವೀಕರಿಸಿದರು. ಮಂಗಳವಾರ ಕಾರ್ಯಕ್ರಮವು ತೊಟ್ಟಿಲ ಕಾರ್ಯಕ್ರಮ ಇರುತ್ತದೆ ಎಂದು ಪ್ರವಚನಕಾರರು ತಿಳಿಸಿದರು.ಮಂಗಳವಾರದ ದಾಸೋಹ ಸೇವೆಯನ್ನು ಶಿವಪ್ಪ ತೆಲಗರ್, ಉಮೇಶ್ ಕೆಇಬಿ ಕಲಮಂಗಿ, ದುರುಗನ ಗೌಡ ಪೋಲಿಸ್ ಪಾಟೀಲ್ ಮಾಡುವರು. ಇದೇ ಸಂದರ್ಭದಲ್ಲಿ ವೇದಿಕೆಯ ಕಾರ್ಯ

ವಿಜೃಂಭಣೆಯಿAದ ಜರುಗಿದ ಕಾರ್ತಿಕೋತ್ಸವ

ಇಮೇಜ್
  ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವಕ್ಕೆ ದೇವಸ್ಥಾನದ ಸ್ವಾಮಿಗಳು, ಅಧಿಕಾರಿಗಳು ಚಾಲನೆ ಕೊಟ್ಟೂರು : ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿAದ ಜರುಗಿತು. ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು. ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ಸುಟ್ಟರು. ಕಾರ್ತಿಕೋತ್ಸವಕ್ಕೆ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಅರ್ಚಕರು, ಧಾರ್ಮಿಕ ದತ್ತಿ ಇಲಾಖೆ ಎಸಿ ಗಂಗಾಧರಪ್ಪ, ದೇವಸ್ಥಾನ ಇಒ ಎಂ.ಡಿ.ಕೃಷ್ಣಪ್ಪ, ಶಾಸಕರು ಕೆ ನೇಮರಾಜ ನಾಯಕ್, ಎಂ ಎಂ ಜೆ ಹರ್ಷವರ್ಧನ್ ,ಹಾಗೂ ಮುಖಂಡರು, ದೇವಸ್ಥಾನದ ಸಿಬ್ಬಂದಿಯವರು ಇದ್ದರು. ಕಾರ್ತಿಕೋತ್ಸವ ಪ್ರಯುಕ್ತ ಬೆಳಗಿನಿಂದಲೇ ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿ ದರ್ಶನ ಪಡೆದರು.  ದೂರದ ಊರುಗಳಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಸ್ವಾಮಿಯ ತೊಟ್ಟಿಲುಮಠ, ಗಚ್ಚಿನಮಠಗಳಲ್ಲಿಯೂ ಭಕ್ತರು ಸ್ವಾಮಿ ಆರ್ಶೀವಾದ ಪಡೆದುಕೊಂಡರು. ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿ ದರ್ಶನ ಪಡೆದ ಭಕ್ತಾದಿಗಳಿಗೆ ಪೊಲೀಸ್ ಇಲಾಖೆಯ ನೇತೃತ

ಶ್ರೀ ಜಗದ್ಗುರು ಮರಳಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ.

ಇಮೇಜ್
  ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಲಿಂಗೈಕ್ಯ ಜಗದ್ಗುರು ಮರಳುಸಿದ್ದ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯಸ್ಮರಣೆ , ಸಾಮೂಹಿಕ ವಿವಾಹ , ಮತ್ತು ಸೋಮವಾರ ದಂದು ಶ್ರೀ ಜಗದ್ಗುರು ಮರಳಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ. ಕೊಟ್ಟೂರು: ಉಜ್ಜಿನಿಯ ಪ್ರತಿ ವರ್ಷದ ಪದ್ಧತಿಯಂತೆ ಉಜ್ಜಯಿನಿ ಸದ್ಧರ್ಮ ಪೀಠದ ಶೆಕ್ಷೇತ್ರನಾಥ ಶ್ರೀ ಜಗದ್ಗುರು ಮರಳುಸಿದ್ದೇಶ್ವರರ ಸೋಮವಾರ ದಂದು ಕಾರ್ತಿಕ ಲಕ್ಷ ದೀಪೋತ್ಸವ , ಲಿಂಗೈಕ್ಯ ಜಗದ್ಗುರು ಮರುಸಿದ್ದ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 12ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಭಾನುವಾರ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡಿತು. ಸಂಜೆಯ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖ ಅಧಿಕಾರಿಗಳಿಗೆ ಗೌರವಿಸಲಾಯಿತು ನಂತರ ಶಾಲಾ ಮಕ್ಕಳಿಂದ ಕಾರ್ಯಕ್ರಮವು ನೆರವೇರಿತು.  ಸೋಮವಾರ ಮುಂಜಾನೆಯಿಂದಲೇ ಜಗದ್ಗುರಗಳ ಕತೃ ಗದ್ದುಗೆಗೆ ಅಭಿಷೇಕ, ಹೋಮ ,ಪೂಜಾ ದಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಇದೇ ಸಂದರ್ಭದಲ್ಲಿ ಮೂರು ಜೋಡಿ ಸಾಮೂಹಿಕ ವಿವಾಹ ನಡೆದಿದ್ದು , ಸಹಸ್ರಾರು ಜನ ಕ್ಷೇತ್ರದ ಅಧಿ ದೇವತೆ ಶ್ರೀ ಜಗದ್ಗುರು ಮರಳುಸಿದ್ದೇಶ್ವರರ ಹಾಗೂ ಮಾತೆ  ಗೌರಿಯ, ಸರತಿ ಸಾಲಿನಲ್ಲಿ ಬಂದು ಆಶೀರ್ವಾದವನ್ನು ಪಡೆದರು.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೆ ನೇಮಿರಾಜ್ ನಾಯ್ಕ್ ಗೆಲುವಿಗೆ : ದೇವರ ಹರಕೆ ತೀರಿಸಿದ ಅಭಿಮಾನಿ ಶಾಂತೇಶ್

ಇಮೇಜ್
ಕೊಟ್ಟೂರು : ತಾಲೂಕು ಹ್ಯಾಳ್ಯಾ ಗ್ರಾಮದ ಶಾಂತೇಶ ಸುರಪುರ ಇವರು 2022-23ರ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶ್ರೀಯುತ ಕೆ ನೇಮಿರಾಜ್ ನಾಯ್ಕ್ ಗೆದ್ದರೆ ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕದ ದಿನ ಶ್ರೀ ಗುರು ಕೊಟ್ಟೂರೇಶ್ವರನ ದ್ವಾರಬಾಗಿಲಿನಿಂದ ಪಾದಗಟ್ಟಿಯವರೆಗೂ ಧೀಡ(ಸಾಷ್ಟಾಂಗ)ನಮಸ್ಕಾರ ಹಾಕುವದಾಗಿ ಬೇಡಿಕೊಂಡಿದ್ದರು. ಶ್ರೀ ಗುರು ಕೊಟ್ಟೂರೇಶ್ವರ ತಮ್ಮ ಹರಕೆಯನ್ನು ಈಡೇರಿಸಿದ್ದಕ್ಕಾಗಿ ಸೋಮವಾರ ಕುಟುಂಬ ಸಮೇತರಾಗಿ ಬಂದು ಶ್ರೀ ಗುರು ಕೊಟ್ಟೂರೇಶ್ವರನ ದ್ವಾರಬಾಗಿಲಿನಿಂದ ಪಾದಗಟ್ಟೆವರೆಗೂ ಧೀಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ತೀರಿಸಿ ದೇವರ ಆಶೀರ್ವಾದಕ್ಕೆ ಪಾತ್ರರಾದರು.

"ಗುಜ್ಜಲ ನಾಗರಾಜರವರಿಗೆ ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಲೋಕಸಭಾ ಟಿಕೆಟ್ ಕೊಡುವಂತೆ ಹಲವು ಸಂಘಟನೆಗಳು ಒತ್ತಾಯ"

ಇಮೇಜ್
ಕೊಟ್ಟೂರು : ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಪತ್ರಿಕಾಗೋಷ್ಠಿ ಕರೆದ ಉದ್ದೇಶ ಏನೆಂದರೆ ಸ್ಥಳೀಯರಿಗೆ ಪ್ರಾಮುಖ್ಯತೆ ಕೊಡುವಂತೆ ವಾಲ್ಮೀಕಿ ಪ್ರಮುಖ ಮುಖಂಡರು ಕರವೇ ಅಧ್ಯಕ್ಷರು ಒತ್ತಾಯಿಸಿದರು. ಶ್ರೀಯುತ ಹಿರಿಯ ಕಾಂಗ್ರೆಸ್ ಮುಖಂಡರು, ಹಿರಿಯ ವಕೀಲರು, ಆದ ಶ್ರೀ ಗುಜ್ಜಲ ನಾಗರಾಜ ರವರಿಗೆ  25ವರ್ಷದಿಂದ ಸೇವೆ ಮಾಡುತ್ತಾ ಬಂದಿದ್ದು ಇದುವರೆಗೂ ಸೇವೆಯಲ್ಲಿರುತ್ತಾರೆ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷದ ಕೆಲಸ ಹಾಗೂ ಚುನಾವಣೆಗಳನ್ನು ಮಾಡಿರುತ್ತಾರೆ. ಕಾರ್ಯಕರ್ತರನ್ನು ಹುಟ್ಟುಹಾಕಿ ಅನೇಕ ಜನ ಕಾಂಗ್ರೆಸ್ ಕಾರ್ಯಕರ್ತರು ಸಾಮಿನೇಶನ್ ಮತ್ತು ಪಕ್ಷದಲ್ಲಿ ವಿವಿಧ ಹುದ್ದೆ ಕೊಡಿಸಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಪಡಿಸಿರುತ್ತಾರೆ. ಶ್ರೀ ಗುಜ್ಜಲ ನಾಗರಾಜರವರು ಉತ್ತಮ ಸಂಘಟನಾಕಾರರಾಗಿ ಮತ್ತು ಸ್ಥಳೀಯವಾಗಿ ಎಲ್ಲಾ ಜಾತಿ ಜನಾಂಗದ ಜೊತೆ ಉತ್ತಮ ಒಡನಾಟ ಹೊಂದಿದ್ದು, ಜನರ ಜೊತೆ ಇರುತ್ತಾರೆ. ವಿಜಯನಗರ ಜಿಲ್ಲೆ ಹೋರಾಟ ಸಮಿತಿಯ ರುವಾರಿಗಳು, ಕನ್ನಡಪರ ಸಂಘಗಳಲ್ಲಿ ಕೆಲಸಮಾಡಿ ಉತ್ತಮ ಸಂಘಟನೆಯನ್ನು ಮಾಡಿ ಬಳ್ಳಾರಿ ಜಿಲ್ಲೆಯಲ್ಲಿ ಚಿರಪರಿಚಿತರು. ಆದ್ದರಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಗೆ ಈ ಬಾರಿ ಶ್ರೀಯುತೆ ಗುಜ್ಜಲ ನಾಗರಾಜರವರಿಗೆ ಕಾಂಗ್ರೆಸ್ ಪಕ್ಷದ ಟಿಕೇಟನ್ನು ನೀಡಬೇಕೆಂದು ಒತ್ತಾಯ ಮಾಡುತ್ತೇವೆ. ವಾಲ್ಮೀಕಿ ಜನಾಂಗದ ಮುಖಂಡರಾದ ಶ್ರೀಯುತ ಗುಜ್ಜಲ ನಾಗರಾಜರವರು ಸಮಾಜದ ಶೈ

ಅನುಚಿತವಾಗಿ ವರ್ತಿಸಿದ ಪ್ರಾಂಶುಪಾಲ ಹಾಗೂ ಸ್ಟಾಪ ನರ್ಸ್ ಅನ್ನು ವರ್ಗಾವಣೆ ಮಾಡುವಂತೆ ಕರವೇ ಮನವಿ

ಇಮೇಜ್
ಮಸ್ಕಿ : ಪಟ್ಟಣದ ಮುದುಗಲ್ ರಸ್ತೆ ಬಳಿ ಇರುವ ಮೊರಾರ್ಜಿ ದೇಸಾಯಿ ಎಸ್ಸಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಪ್ರಾಂಶುಪಾಲ ಹಾಗೂ ಸ್ಟಾಪ್ ನರ್ಸ್ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿ ವಸತಿ ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕರವೇ ಸಂಘಟನೆಯ ದುರ್ಗರಾಜ್ ವಟಗಲ್ ಹಾಗೂ ಆರ್. ಕೆ ನಾಯಕ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ವಸತಿ ಶಾಲೆಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು  ವಸತಿ ಶಾಲೆಯಲ್ಲಿರುವ ಸಮಸ್ಯೆಗಳು ಹೇಳಲು ಹೋದರೆ ನಿಮ್ಮ ಇಂಟರ್ನಲ್ ಮಾರ್ಕ್ಸ್ ಗಳನ್ನು ಕಟ್ ಮಾಡಿ ಟಿಸಿ ಕೊಟ್ಟು ಮನೆಗೆ ಕಳುಹಿಸುತ್ತೇನೆ ಎಂದು ಭಯ ಹುಟ್ಟಿಸುತ್ತಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ವಸತಿ ಶಾಲೆಯಲ್ಲಿ ಕಳೆದ ಆರು ತಿಂಗಳಿನಿಂದ ಶೌಚಾಲಯ ಹಾಗೂ ಸ್ನಾನದ ಕೋಣೆ ಸ್ವಚ್ಛ ಮಾಡದೆ ಇರುವುದರಿಂದ ವಾಸನೆ ಬರುತ್ತಿದೆ ಇದರಿಂದ ಬಹಳಷ್ಟು ಜನ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಪ್ರಥಮ ಚಿಕಿತ್ಸೆ ನೀಡುವಂತೆ ಸ್ಟಾಪ್ ನರ್ಸ್ ಅನ್ನು ಕೇಳಿದರೆ ಅವರು ಸ್ಪಂದಿಸುತ್ತಿಲ್ಲ. ಅವರು ಹೋಗಿ ಪ್ರಾಂಶುಪಾಲರ ಬಳಿ ದೂರು ನೀಡುತ್ತಾರೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ವಸತಿ ಶಾಲೆಯಲ್ಲಿ ಮೇನು ಚಾರ್ಟ್ ಪ್ರಕಾರ ಆಹಾರಗಳನ್ನು ನೀಡದೆ ಕ

ಪಾಲಕರ ಕನಸು ನನಸಾಗಿಸಲು ಶ್ರಮಿಸಿ : ಎನ್ ಎಸ್ ಬೋಸರಾಜ್

ಇಮೇಜ್
ಮಸ್ಕಿ : ಪಟ್ಟಣದಲ್ಲಿನ ಮೆಟ್ರಿಕ್ ನಂತರದ ಬಾಲಕರವಸತಿ ನಿಲಯ ನೂತನ ಕಟ್ಟಡ ಉದ್ಘಾಟಿಸಿ ಶನಿವಾರ ವೇದಿಕೆಯ ಮೇಲೆ ಮಾತನಾಡಿ ವಿದ್ಯಾರ್ಥಿಗಳು ಪಾಲಕರ ಕನಸು ನನಸಾಗಿಸಲು ಶ್ರಮಿಸಬೇಕು ಎಂದರು. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ನಿಲಯ ನಿರ್ಮಿಸಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ನಿಲಯಗಳ ವ್ಯವಸ್ಥೆ ಹಲವು ದಶಕಗಳ ಹಿಂದೆ ಗ್ರಾಮೀಣ ಭಾಗದ ಬಡ ಮತ್ತು ರೈತಾಪಿ ವರ್ಗದ ಮಕ್ಕಳು ಸಾರಿಗೆ ಬಸ್ ಮತ್ತು ವಸತಿ ನಿಲಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಲು ಹಂತ ಹಂತವಾಗಿ ಸರ್ಕಾರ ಸಾರಿಗೆ ಬಸ್ ಮತ್ತು ವಸತಿ ನಿಲಯಗಳ ವ್ಯವಸ್ಥೆ ಮಾಡುತ್ತ ಬರುತ್ತಿದೆ. ವಸತಿ ನಿಲಯಗಳಲ್ಲಿನ ಸೌವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದುಶ್ಚಟಗಳ ದಾಸರಾಗದೆ, ಜಗಳ, ದಬ್ಬಾಳಿಕೆ, ದೌರ್ಜನ್ಯವೆಸಗದೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚುತ್ತಿದ್ದರಿಂದ ಹೆಚ್ಚುವರಿಯಾಗಿ ವಸತಿ ನಿಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು. ಶಂಕುಸ್ಥಾಪನೆಗೊಂಡ ಸದರಿ ವಸತಿ ನಿಲಯ 5.ಕೋಟಿ ರೂ. ವೆಚ್ಚದಲ್ಲಿ 18 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು,150 ವಿದ್ಯಾರ್ಥಿಗಳು ವಸತಿ ಮಾಡಬಹುದಾಗಿದೆ

"ಚಿರಿಬಿ ಗ್ರಾಮದಲ್ಲಿ ರೈತ ದಿನಾಚರಣೆ, ಕಿಸಾನ್ ಕಾರ್ಯಕ್ರಮ"

ಇಮೇಜ್
  ಕೊಟ್ಟೂರು : ತಾಲ್ಲೂಕಿನ ಚಿರಿಬಿ ಗ್ರಾಮ ಪಂಚಾಯಿತಿಯಲ್ಲಿ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ಕೃಷಿ ಇಲಾಖೆಯವರು ಶನಿವಾರ ದಂದು ಹಮ್ಮಿಕೊಂಡಿದ್ದರು. ಕೃಷಿ ಅಧಿಕಾರಿಗಳಾದ ಶಾಮ ಸುಂದರ್ ಮಾತನಾಡಿ ರೈತ ಸಂಪರ್ಕ ಕೇಂದ್ರಕ್ಕೆ ನೇರವಾಗಿ ಬಂದು ನಮ್ಮನ್ನು ಭೇಟಿ ಮಾಡಿ ಸರ್ಕಾರದ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳಿ ಎಂದು ಹೇಳಿದರು. ಕೃಷಿ ಸಂಪನ್ಮೂಲ ಮಾತನಾಡಿ ತಿಪ್ಪೇಸ್ವಾಮಿ ರೈತರು ಬೆಳೆಯುವ ಬೆಳೆಯ ಬಗ್ಗೆ ವಿವರಣೆ ನೀಡಿದರು . ಜಿಲ್ಲಾ ಕಾರ್ಯಾಧ್ಯಕ್ಷ ಕೆ ಎಸ್ ಜಯಪ್ರಕಾಶ ನಾಯ್ಕ ಮಾತನಾಡಿ ಕೊಟ್ಟೂರು ತಾಲ್ಲೂಕಿನಲ್ಲಿ ಮೊದಲನೆ ಬಾರಿಗೆ ಕೃಷಿ ಇಲಾಖೆಯವರು ರೈತ ದಿನಾಚರಣೆಯನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷವಾಗಿದೆ.ಮತ್ತು  ಆಯುರ್ವೆದಿಕ್ ಔಷದಿಗೆ ಹೆಚ್ಚಿನ ಪ್ರಾಮುಖ್ಯತೆ ಕೂಡಿ ಎ೦ದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಖಾ, ಓಬಜ್ಜ ಉಪಾಧ್ಯಕ್ಷ ಗಂಗಾಧರ ಸದಸ್ಯರಾದ ಮೂಗನ ಗೌಡ್ರು, ಹನುಮಂತಪ್ಪ, ಭೀಮಪ್ಪ ,ವೀರಯ್ಯ ,ಅಶೋಕ,ತಾಲ್ಲೂಕು ಉಪಾದ್ಯಕ್ಷ ರಮೇಶನಾಯ್ಕ ರೈತರ ಸಮಸ್ಯೆಗಳನ್ನು ಹೇಳಿದರು. ತಾಲ್ಲೂಕು ಅಧ್ಯಕ್ಷ ಪಿ ಮಂಜುನಾಥ , ಜಿಲ್ಲಾ ಮುಖಂಡರಾದ ಕೊಟ್ರಯ್ಯಸ್ವಾಮಿ ಶೇಖರ ನಾಯ್ಕ, ನಿಲಕಂಠನ ಗೌಡ್ರು  ಕೃಷಿ ಇಲಾಖೆಯ ತಿಮ್ಮಣ್ಣ,  ಸಿಬ್ಬಂದಿ ವರ್ಗದವರಿದ್ದರು ಹಾಗೂ ಊರಿನ ಗ್ರಾಮಸ್ಥರಿದ್ದರು .

"ಶ್ರೇಷ್ಠ ಸಂವಿಧಾನ ನಮ್ಮದು : ಶ್ರೀ ಸಿದ್ದರಾಮ ಕಲ್ಮಠ"

ಇಮೇಜ್
ಕೊಟ್ಟೂರು : ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮ . ಸ್ವತಂತ್ರ ಸಾರ್ವಭೌಮ  ಭಾರತಕ್ಕೆ  ಅಡಿಪಾಯವೆಂದರೆ ನಮ್ಮ ಸಂವಿಧಾನ, ದೇಶದ ಜನರನ್ನು ನಮ್ಮನ್ನ ಆಳುವ ಸರ್ಕಾರದ  ರಚನೆಯನ್ನು ಇದು ನಿರ್ದಿಷ್ಟ ಪಡಿಸುತ್ತದೆ . ಪ್ರಜಾಪ್ರಭುತ್ವ , ಸಮಾಜವಾದ ಜಾತ್ಯಾತೀತ ಮತ್ತು ಸಮಗ್ರ ರಾಷ್ಟ್ರೀಯ ಪರಿಕಲ್ಪನೆಯನ್ನು ಹೊಂದಿರುವ ಜಗತ್ತಿನ ಅತ್ಯಂತ ಬೃಹತ್  ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ಎಂದು ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮ ಕಲ್ಮಠ ಹೇಳಿದರು. ಅವರು ಕೊಟ್ಟೂರೇಶ್ವರ ಮಹಾವಿದ್ಯಾಲಯ ‘ರಾಜ್ಯಶಾಸ್ತ್ರ ವಿಭಾಗ’ದಿಂದ ನಡೆದ ಸಂವಿಧಾನ ಮತ್ತು ಮಾನವ ಹಕ್ಕುಗಳು ಒಂದು ದಿನದ ವಿಚಾರ ಸಂಕಿರಣನ್ನು ಉದ್ಘಾಟಿಸಿ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ.  ಬಿ. ಆರ್. ಅಂಬೇಡ್ಕರ್ ಹಾಗೂ ಇತರ ಸಂವಿಧಾನ ಸಭೆಯ ಸದಸ್ಯರ ಪಾತ್ರ ವಿಶಿಷ್ಟವಾಗಿದೆ. ಅತಿ ದೊಡ್ಡ ಲಿಖಿತ ಸಂವಿಧಾನವು ನಮ್ಮದಾಗಿದ್ದು ಅದು ಪ್ರಜೆಗಳ ಹಕ್ಕು ಗಳು ಮತ್ತು ಕರ್ತವ್ಯಗಳನ್ನ ನಿರೂಪಿಸುತ್ತದೆ. ಬಹು ಸಂಸ್ಕೃತಿ ಆಚಾರ ವಿಚಾರಗಳ ನೆಲೆಯುಳ್ಳ ದೇಶದಲ್ಲಿ ಸರ್ವರಿಗೂ ಸಮಾನತೆ ಮತ್ತು ಸ್ವತಂತ್ರವು ನಮ್ಮ ಸಂವಿಧಾನದಿಂದ ಸಾಧ್ಯವಾಗಿದೆ ,ಸಂವಿಧಾನದ ಆಶಯದಂತೆ ನಡೆದಾಗ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಶ್ರೀ ಕೆ ಹೆಚ