ಸದ್ದಿಲ್ಲದೇ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಿದ ಗುಡಿಸಲಿ ಕುಟುಂಬ

ಮಸ್ಕಿ : ಬೇಸಿಗೆ ಕಾಲ ಆರಂಭವಾಗಿ ಜನರು ಹನಿ ನೀರಿಗಾಗಿ ಪರದಾಟ ನಡೆಸುವಂತಾಗಿದೆ ಇಂತಹ ಸಮಯದಲ್ಲಿ ಕನಕ ವೃತ್ತದ ಹತ್ತಿರ ಗುಡಿಸಲಿ ಕುಟುಂಬದ ಸದಸ್ಯರು ಸಾರ್ವಜನಿಕರಿಗೆ ನೀರಿನ ದಾಹ ನೀಗಿಸಲು ಸದ್ದಿಲ್ಲದೇ ಶುದ್ಧ ಕುಡಿಯುವ ನೀರಿನ ಆರವಟ್ಟಿಗೆ ಆರಂಭಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

 ಸಾರ್ವಜನಿಕರಿಗೆ ಅನುಕೂಲ : ಕನಕ ವೃತ್ತದ ಬಳಿ ಆರಂಭಿಸಿರುವ ನೀರಿನ ಅರವಟ್ಟಿಗೆಯಿಂದ ಹೆಚ್ಚು ಶಾಲಾ ಮಕ್ಕಳಿಗೆ ಹಾಗೂ ಕಾರ್ಮಿಕರಿಗೆ ಅನುಕೂಲವಾಗಿದ್ದು, ಪ್ರತಿ ದಿನ 20 ಲೀಟರ್ ಗಳ 8 ರಿಂದ 10 ನೀರಿನ ಬಾಟಲ್ ಗಳು ಬಳಕೆ ಯಾಗುತ್ತಿದೆ ಎಂದು ಗುಡಿಸಲಿ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ಇನ್ನು ಹೆಚ್ಚು ಬಳಕೆಯಾದರೂ ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನೂ ಹೆಚ್ಚು ಬಾಟಲ್ ಗಳನ್ನು ತಂದು ಇಡಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*