ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ : ಕಲಾವಿದರ ಆರೋಪ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ : ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮೊರಮನಳ್ಳಿ ಜಿಲ್ಲೆಗೆ ಆಗಮಿಸಿದ ದಿನಗಳಿಂದ ಅಂದರೆ ೨೦೨೧ ರಿಂದ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆ ಮೂಲ ಕಲಾವಿಧರಿಗೆ ಸಂಪೂರ್ಣವಾಗಿ ಅನ್ಯಾಯವಾಗುತ್ತಿದ್ದು ಮತ್ತು ಇವರು ತಮಗೆ ಅನುಕೂಲವಾಗುವ ಕೆಲವು ಕಲಾವಿದರನ್ನು ಹಿಡಿದುಕೊಂಡು ಇಲಾಖೆಗೆ ಬಂದ ಹಣವನ್ನು ದೋಚುತ್ತಿದ್ದಾರೆ ಇವರ ಮೇಲೆ ತನಿಖೆಗೆ ಆದೇಶಿಸಬೇಕು ಮತ್ತು ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಎಂದು ಕಲಾವಿದರಾದ ಬಾಷು ಹಿರೇಮನಿ,ನಾಗರಾಜು ಶ್ಯಾವಿ,ಅಲ್ಲಾಬಕ್ಷಿ ವಾಲಿಕಾರ ಮತ್ತೀತರರು ಆಗ್ರಹಿಸಿದ್ದಾರೆ.
ಅವರು ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ೨೦೨೪ ರಲ್ಲಿ ಕನಕಗಿರಿ ಉತ್ಸವ,ಆನೆಗುಂದಿ ಉತ್ಸವದಲ್ಲಿ ಕುಷ್ಟಗಿ ತಾಲೂಕಿನ ಒಬ್ಬ ಕಲಾವಿಧರ ಕುಟುಂಬಕ್ಕೆ ೩ ಕಾರ್ಯಕ್ರಮಗಳನ್ನು ಎರಡೂ ವೇದಿಕೆಗಳಲ್ಲಿ ನೀಡಿರುತ್ತಾರೆ ಮತ್ತು ಗಂಗಾವತಿಯ ಅನೇಕ ಕುಟುಂಬಗಳಿಗೆ ಒಂದು ಕುಟುಂಬಕ್ಕೆ ೩ ಕಾರ್ಯಕ್ರಮಗಳಂತೆ ೫ ಕುಟುಂಬಗಳಿಗೆ ಕಾರ್ಯಕ್ರಮಗಳನ್ನು ನೀಡಿರುತ್ತಾರೆ,೨೦೨೩-೨೪ ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ತಮಗೆ ಅನುಕೂಲವಾಗುವ ಕಲಾವಿಧರಿಗೆ ಕಾರ್ಯಕ್ರಮಗಳನ್ನು ನೀಡಿ ಕೇವಲ ಸೆಪ್ಟೆಂಬರ್, ಅಕ್ಟೋಬರ್ ಎರಡು ತಿಂಗಳಲ್ಲಿ ೧೧ ಲಕ್ಷ ರೂಪಾಯಿ ಹಣವನ್ನು ಬಳಸಿರುತ್ತಾರೆ. ನವೆಂಬರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಮಾಡಿದ ಕಲಾವಿಧರಿಗೆ ಸಂಭಾವನೆ ನೀಡಿಲ್ಲ. ಹೆಚ್ಚಿನ ಅನುದಾನದಲ್ಲಿ ನೀಡುತ್ತೇವೆ ಎಂದು ಹೇಳುತ್ತಾರೆ,ಇಲಾಖೆಯಿಂದ ಪ್ರತಿ ವರ್ಷ ನಡೆಯುವ ಸರ್ಕಾರದ ಆಯೋಜನೆ ಕಾರ್ಯಕ್ರಮಗಳನ್ನು ತರಾತುರಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ಮತ್ತು ಮುಖ್ಯ ಕಲಾವಿಧರಿಗೆ ಹೊರತುಪಡಿಸಿ ತಮಗೆ ಮನ ಬಂದತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಕೇವಲ ದಾಖಲಾತಿಗಳನ್ನು ಸರ್ಕಾರಕ್ಕೆ ಮತ್ತು ಇಲಾಖೆಗೆ ಮತ್ತು ಪತ್ರಿಕಾ ಮಾಧ್ಯಮದವರಿಗೆ ನೀಡಿ ತರಾತುರಿಯಲ್ಲಿ ಕಾರ್ಯಕ್ರಮಗಳೆಲ್ಲವನ್ನೂ ಮಾಡಿದ್ದಾರೆ. ಉದಾಹರಣೆಗೆ ಕೊಪ್ಪಳ ಜಾತ್ರೆಯ ದಿನದಂದು ಸಂಸ್ಕೃತಿಕ ಸೌರಭ ಕಾರ್ಯಕ್ರಮ ನೀಡಿರುವುದು ನಮ್ಮ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರ ಗಮನ ಅಲ್ಲಿರುವುದರಿಂದ ಈ ಕಾರ್ಯಕ್ರಮವನ್ನು ಸಾಹಿತ್ಯ ಭವನದಲ್ಲಿ ನಡೆಸಿದ್ದಾರೆ ಇದೇ ರೀತಿ ಎಲ್ಲಾ ಆಯೋಜಿತ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಇವರ ಮೇಲೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ರಾಮಚಂದ್ರಪ್ಪ ಉಪ್ಪಾರ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ