ನಂಬಿದ ಭಕ್ತರನ್ನು ಸನ್ಮಾರ್ಗ ದೆಡೆಗೆ ನಡೆಸುವ ಶಿವಶರಣ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ



ಕೊಟ್ಟೂರು : ಕಾಯಕಯೋಗಿ ಕೊಟ್ಟೂರೇಶ್ವರರು, ಶಿವನ ಆಜ್ಞೆಯಂತೆ ಈ ನಾಡಿನಲ್ಲಿ ನೆಲೆಸಿದ ಸ್ವಾಮಿಯೂ ಅಂದಿನ ಶಿಕಾಪೂರವನ್ನು ತನ್ನ ಕಾಯಕಸಿದ್ಧಿಗಾಗಿ ಕೊಟ್ಟೂ ಎಂಬ ಪದನಾಮ ಹೊಂದಿ ಈ ಕ್ಷೇತ್ರವನ್ನು ಸರ್ವತೋಮುಖವಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ತಮ್ಮ ಅಗೋಚರ ಶಕ್ತಿಗಳಿಂದ ಪವಾಡ ಸೃಷ್ಟಿಸುವ ಮೂಲಕ ಜಾತಿ, ವರ್ಣ, ಭೇದವನ್ನು ಮೆಟ್ಟಿನಿಂತು ಧಾರ್ಮಿಕತೆಯ ಮುಖಾಂತರ ಸಾಮಾಜಿಕ ಬದಲಾವಣೆಯ ಕನಸು ಕಂಡ ನಿಜಶರಣ ಕೊಟ್ಟೂರೇಶ್ವರ ಸ್ವಾಮಿ, ಮೂರ್ಕಲ್ ಮಠದಲ್ಲಿ ಭಕ್ತರಿಗೆ ಶಿವನೊಲಮೆಯ ಆಧ್ಯಾತ್ಮಿಕ ತತ್ವ ಚಿಂತನೆ ಬೋಧಿಸಿದರೆ, ಹಿರಿಯ ಮಠದಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದರು. ತೊಟ್ಟಿಲಿ ಮಠದಲ್ಲಿ ಸಂತಾನ ಭಾಗ್ಯ ನೀಡಿದ. ಗಚ್ಚಿನ ಮಠದಲ್ಲಿ ಜೀವಂತ ಸಮಾಧಿಯಾದ ಮಹಾಶರಣ. ಶಿಲ್ಪಕಲಾ ವೈಭವ ಹೊಂದಿರುವ ನಾಲ್ಕು ಮಠಗಳಲ್ಲಿಯೂ ಕೊಟ್ಟೂರೇಶನ್ನೇ ನೆಲೆ ನಿಂತಿದ್ದಾನೆ. ಅಘಣೀತ ಪವಾಡ ಪುರುಷನೀತ.

 12ನೇ ಶತಮಾನದಲ್ಲಿ ಭೂಲೋಕದಲ್ಲಿ ಅನಾಚಾರ ಅಧರ್ಮ,ಮೌಡ್ಯತೆ ತಾಂಡವಾಡುತ್ತಿದ್ದವು , ಇವುಗಳನ್ನು ಮೆಟ್ಟಿ ನಿಂತು ಮನುಕುಲಕ್ಕೆ ಕಾಯಕ ನಿಷ್ಠೆ, ದಯೇ, ಪರೋಪಕಾರ , ಸಹ ಬಾಳ್ವೆಯ ಮೂಲ ಮಂತ್ರವನ್ನು ಭಕ್ತ ಲೋಕಕ್ಕೆ ತೋರಿಸಿಕೊಟ್ಟು ನಂಬಿದ ಭಕ್ತರನ್ನು ಸನ್ಮಾರ್ಗದೆಡೆಗೆ ನಡೆಸಿದ ಸಿದ್ದಿ ಪುರುಷ ಇವರು.



 ಸಾಮಾಜಿಕವಾಗಿ ಧಾರ್ಮಿಕವಾಗಿ ಅತ್ಯುನ್ನತ ಸ್ಥಾನಕ್ಕೇರಿದ ಶರಣ ಗುರು ಬಸವರಾಜೇಂದ್ರ ನಿಜ ನಾಮಾಂಕಿತ ಮೂಲೆನಲ್ಲಿ ವೈಯಕ್ತಿಕ ಬದುಕಿನ ವಿವರಗಳು ಇಂದಿಗೂ ದುರ್ಲಬ

 ಋಷಿ ಮೂಲ ನದಿ ಮೂಲವಸ್ತು ನಿಗೂಢವಾಗಿದೆ. ಕೊಟ್ಟೂರೇಶ್ವರ ಸ್ವಾಮಿಯ ತತ್ವದರ್ಶನಕ್ಕೆ ಸಾಕ್ಷಿಯಾಗಿ ರಥೋತ್ಸವಕ್ಕೂ ಮುನ್ನ ಇಲ್ಲಿನ ಹರಿಜನ ಮಹಿಳೆಯಿಂದ ದೀಪದ ಆರತಿ ಬೆಳಗಿದ ನಂತರವೇ ಕ್ಕೆ ನೀಡುವ ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿರುವುದು ವಿಶೇಷ.

 ಈ ನಾಡಿನಲ್ಲಿ ಸಂಸ್ಕೃತಿ ಸಂಸ್ಕಾರದ ಅರಿವಿಲ್ಲದ ದುರುಳರ ಮನದಲ್ಲಿದ್ದ ಅಸುಯೆ, ಮೌಡ್ಯತೆ ದ್ವೇಷ ಭಾವನೆಗಳನ್ನು ಹೊಡೆದೋಡಿಸಿ, ಕಾಯಕ ನಿಷ್ಠೆಯನ್ನು ನಂಬಿದ ಲಕ್ಷಾಂತರ ಭಕ್ತರಿಗೆ ದಾನ ಧರ್ಮ ಪರೋಪಕಾರದ ಗುಣಗಳ ಜೊತೆಗೆ ಸಭಾಳ್ವೆಯಿಂದ ಬದುಕಲು ನಿಜ ಸಂದೇಶವನ್ನು ಸಾರಿದವರು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕ್ಷೇತ್ರಧಿಪತಿ ಬವರೋಗ ನಿವಾರಕ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಶ್ರೀ ಕ್ಷೇತ್ರ ದೇಗುಲಗಳ ನಾಡು ವಿಶೇಷ ಧಾರ್ಮಿಕ ಪರಂಪರೆ ಕೇಂದ್ರ ಬಿಂದುವಾಗಿದ್ದು ಪರಶಿವನ ಪುಣ್ಯಸ್ಥಳ ಎಂಬುವುದು....!

 ಅಂದಿನ ಶಿಕಾಪುರ ಎಂಬ ಸ್ಥಳವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಿ ತನ್ನ ಪವಾಡಗಳ ಮೂಲಕ ನೆಲೆಯನ್ನಾಗಿಸಿಕೊಂಡು ಶ್ರೀ ಗುರು ಕೊಟ್ಟೂರೇಶ್ವರ ಮೂಲ ಹೆಸರು ಶ್ರೀ ಗುರು ಬಸವರಾಜೇಂದ್ರ ಇವರು ಮಾನವ ಕುಲಕ್ಕೆ ಒಂದೇ ಎಂಬ ಮನೋಭಾವನೆಯಿಂದ ನಿಜ ಪವಾಡಗಳನ್ನು ಜನರಿಗೆ ತಿಳಿಸುತ್ತಾ. ಈ ಪುಣ್ಯಸ್ಥಳಕ್ಕೆ ಬರುವ ಜನರನ್ನು ಅತಿಥಿ ಸತ್ಕಾರ ಮಾಡುವುದರ ಜೊತೆಗೆ ದವಸ ಧಾನ್ಯಗಳನ್ನು ದಾನ ಮಾಡುವಂತೆ ಉತ್ತೇಜಿಸಿದ ಅವರು ಕೊಡುವ ಊರು ಕೊಟ್ಟೂರು ಎಂದು ಹೆಸರುವಾಯಿತು ಎನ್ನುತ್ತಾರೆ ಈ ಊರಿನ ಹಿರಿಯರು. ಮೂಲ ನಕ್ಷತ್ರ ಕೆಟ್ಟುದ್ದು ಎನ್ನುವ ಜನರಿಗೆ ಶ್ರೀ ಗುರುವಿನ ಮಹಾ ರಥೋತ್ಸವವನ್ನು ಅಂದೆ ಶುಭಗಳಿಗೆ ಎಂದು ಅಂದ ಮನಸ್ಥಿತಿ ನರ ಮನುಷ್ಯರಿಗೆ ತಮ್ಮ ದಿಟ್ಟ ತತ್ವ ದರ್ಶನಗಳನ್ನು ಮನ ಒಕ್ಕೂವಂತೆ ತನ್ನ ಧಾರ್ಮಿಕಕ್ಕೆ ಅಡಿಗಲ್ಲು ಸ್ಥಾಪಿಸಿ, ಲೋಕ ಕಲ್ಯಾಣಕ್ಕಾಗಿ ಈ ಉತ್ಸವವನ್ನು ಅಂದೆ ದೈವ ಆಜ್ಞೆಯಂತೆ ನಡೆಯುತ್ತಿರುವುದು ಈ ಆಧುನಿಕ ಯುಗ ತೋರಿಸಿಕೊಟ್ಟ ಮಹಾನ್ ತಪಸ್ವಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ.

 ಶ್ರೀ ಸ್ವಾಮಿಯ ರಥೋತ್ಸವಕ್ಕೆ ಕರ್ನಾಟಕ ಸಿರಿಯಂತೆ ನೆರೆ ರಾಜ್ಯಗಳಿಂದ ಮತ್ತು ಹಲವಾರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ತಮ್ಮ ತಮ್ಮ ಊರುಗಳಿಂದ ಕಾಲಾಡಿಗೆಯಲ್ಲಿಯೇ ನಡೆದುಕೊಂಡು ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ವೈಭವದಿಂದ ಜರುಗುತ್ತದೆ. ಶ್ರೀ ಸ್ವಾಮಿಗೆ ಕೊಟ್ಟೂರಿನಲ್ಲಿ ನಾಲ್ಕು ಮಠಗಳು ಇರುವುದು ವಿಶೇಷ, ಮೂರ್ಕಲ್ ಮಠ, ಹಿರೇಮಠ ತೊಟ್ಟಿಲು ಮಠ, ಹಾಗೂ ಗಚ್ಚಿನ ಮಠ ಎಂಬ ಪ್ರಮುಖ ದೇವಸ್ಥಾನಗಳಿದ್ದು, ಗಚ್ಚಿನಮಠದಲ್ಲಿ ದೆಹಲಿ ಸುಲ್ತಾನ ಅಕ್ಬರ್ ಚಕ್ರವರ್ತಿಯು ಸ್ವಾಮಿಗೆ ಕಾಣಿಕೆಯಾಗಿ ಮಣಿ ಮಂಚವನ್ನು ಉಡುಗೊರೆಯಾಗಿ ನೀಡಿದ್ದಾನೆ. ಆ ಮಣಿ ಮಂಚೂ ಈಗಲೂ ಶ್ರೀ ಸ್ವಾಮಿಯ ಜೀವಂತ ಸಮಾಧಿಯ ಗಚ್ಚಿನ ಮಠದಲ್ಲಿ ಕಾಣಬಹುದು. ಭೂಲೋಕದಲ್ಲಿ ಅನಾಚಾರ ಅಧರ್ಮ ಮೌಡ್ಯತೆ ತಾಂಡವಾಡುತ್ತಿದ್ದವು. ಇವುಗಳನ್ನು ಮೆಟ್ಟಿನಿಂತು ಮನುಕುಲಕ್ಕೆ ಕಾಯಕ ನಿಷ್ಠೆಯ ಪರೋಪಕಾರ ಸಹಬಾಳ್ವೆಯ ಮೂಲಮಂತ್ರವನ್ನು ಭಕ್ತ ಲೋಕಕ್ಕೆ ತೋರಿಸಿಕೊಟ್ಟು ನಂಬಿದ ಭಕ್ತರನ್ನು ಸನ್ಮಾರ್ಗದಡೆಗೆ ನಡೆಸಿ ಪವಾಡಪುರುಷ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ. ಸಾಮಾಜಿಕವಾಗಿ ಧಾರ್ಮಿಕವಾಗಿ ಅತ್ಯುನ್ನತ ಸ್ಥಾನಕ್ಕೇರಿದ ಶರಣ ಗುರು ಬಸವರಾಜೇಂದ್ರರ ನಿಜನಾಮಂಕಿತ ವೈಯಕ್ತಿಕ ಬದುಕಿನ ವಿವರಗಳು ಇಂದಿಗೂ ದುರ್ಲಬ.

ಋಷಿ ಮೂಲ ನದಿ ಮೂಲ ದಷ್ಟು ನಿಗೂಢವಾಗಿದೆ. ಅವನಾರಾದ, ಇವನಾರವ, ಎಲ್ಲದಿರಯ್ಯ, ಇವ ನಮ್ಮವ ಅನಮ್ಮವ ಎಂದೆನಿಸಿರಯ್ಯ, ಎನ್ ಬಸವಣ್ಣವನ ನುಡಿಯಂತೆ ಕೊಟ್ಟೂರೇಶ್ವರ ಸ್ವಾಮಿಯ ತತ್ವ ಆದರ್ಶಕ್ಕೆ ಸಾಕ್ಷಿಯಾಗಿದೆ. ರಥೋತ್ಸವಕ್ಕೂ ಮುನ್ನ ಇಲ್ಲಿನ ಹರಿಜನ ಮಹಿಳೆಯರಿಂದ ದೀಪದ ಆರತಿ ಬೆಳಗಿದ ನಂತರವೇ ರಥೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿದೆ.


 ಕೊಟ್ಟೂರು ಕ್ಷೇತ್ರವನ್ನು ಸರ್ವತೋಮುಖವಾಗಿ ಪರಿವರ್ತನೆ ಗೊಳಿಸುವ ನಿಟ್ಟಿನಲ್ಲಿ ತಮ್ಮ ಪವಾಡದ ಮೂಲಕ ವರ್ಣ,ಭೇದವನ್ನು ಮೆಟ್ಟಿನಿಂತು ಮುಖಾಂತರ ಸಾಮಾಜಿಕ ಬದಲಾವಣೆ ಕನ ಕಂಡ ನಿಜಶರಣ ಕೊಟ್ಟೂರೇಶ್ವರ ಸ್ವಾಮಿ.


 ಶಿವನ ಆಜ್ಞೆಯಂತೆ ಭೂಲೋಕಕ್ಕೆ ಆಗಮಿಸಿ ತಮ್ಮ ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಮ್ಮ ಪವಾಡದ ಮೂಲಕ ತಿದ್ದಿ ಮಾನವ ಕುಲ ಒಂದೇ ಎಂದು ಜಗತ್ತಿಗೆ ಸಾರಿದ ಸಿದ್ದಿಪುರುಷರು ಕೂಲಹಳ್ಳಿ ಗೋಣಿ ಬಸವೇಶ್ವರ, ಹರಪನಹಳ್ಳಿ ಕೆಂಪೇಶ್ವರ, ಅರಸೀಕೆರಿ ಕೋಲಶಾಂತೇಶ್ವರ, ಕೊಟ್ಟೂರಿನ ಕೊಟ್ಟೂರೇಶ್ವರ ಇವರೈವರು ಪಂಚಾಗಣಧೀಶರರು ಕೊಟ್ಟೂರೇಶ್ವರ ಈ ನಡೆ ನುಡಿಗೆ ಮೆಚ್ಚಿದ ದೆಹಲಿ ಸುಲ್ತಾನ ಅಕ್ಬರ್ ಮಣಿ ಮಂಚವನ್ನು ನೀಡಿ ಪರಮ ಭಕ್ತನಾಗಿದದ್ದು ಇತಿಹಾಸ.

 ಕೊಟ್ಟೂರೇಶ್ವರ ಸ್ವಾಮಿಯ ಮೂರ್ಕಲ್ ಮಠದಲ್ಲಿ ಭಕ್ತರಿಗೆ ಶಿವನೊಲಮೆಯ ಆಧ್ಯಾತ್ಮಿಕ ತತ್ವ ಚಿಂತನೆ ಬೋಧಿಸಿದರೆ, ಹಿರೇಮಠದಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದರು, ತೊಟ್ಟಿಲು ಮಠದಲ್ಲಿ ಸಂತಾನ ಭಾಗ್ಯ ನೀಡಿ, ಗಚ್ಚಿನ ಮಠದಲ್ಲಿ ಜೀವಂತ ಸಮಾಧಿಯಾದ ಮಹಾಶರಣ ಶಿಲ್ಪಕಲಾ ವೈಭವ ಹೊಂದಿರುವ ನಾಲ್ಕು ಮಠದಲ್ಲಿಯೂ ಕೊಟ್ಟೂರೇಶ್ವರನೇ ನೆಲೆ ನಿಂತಿದ್ದಾನೆ.

 ಅಘಣಿತ ಅಘಟ ಪವಾಡ ಪುರುಷನೀತ 17ನೇ ಶತಮಾನದ ಮಧ್ಯ ಕರ್ನಾಟಕದಲ್ಲಿ ಉದಯಿಸಿದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕ್ಷೇತ್ರವನ್ನು ಪಾವನಗೊಳಿಸಿದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ವೈಭವದ ಅರ್ಥಪೂರ್ಣ ಈ ರಥೋತ್ಸವವು ಇದೆ ಫೆಬ್ರವರಿ 4 ರ ಸೋಮವಾರದಂದು ಮೂಲ ನಕ್ಷತ್ರದಲ್ಲಿ ಜರುಗುವುದನ್ನು ರಥೋತ್ಸವವನ್ನು ಆರಂಭಗೊಳಿಸಲು ಸಾಕ್ಷಾತ್ ಶಿವನೇ ಕೈಲಾಸದಿಂದ ಬರುವನೆಂಬುವುದು ಅಸಂಖ್ಯಾತರ ಭಕ್ತರ ನಂಬಿಕೆ.

 ಪಾದಯಾತ್ರ ಬರುವ ಭಕ್ತಾದಿಗಳಿಗೆ ಕೊಟ್ಟೂರಿನಲ್ಲಿ ಪ್ರಸಾದದ ಮಹಾಪೂರವೇ ನಡೆಯುತ್ತದೆ.

 ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ವಿಶೇಷ ಏನೆಂದರೆ ರಾಜ್ಯದ ಮೂಲೆ ಮೂಲೆಗಳಿಂದ ತಮ್ಮ ಕಾಲ್ನಡಿಗೆ ಮೂಲಕ ಈ ರಥೋತ್ಸವಕ್ಕೆ ಬರುವುದು ವಿಶೇಷವಾಗಿದೆ. ಶಿವಮೊಗ್ಗ,ದಾವಣಗೆರೆ, ಚಿತ್ರದುರ್ಗ ಧಾರವಾಡ, ಹುಬ್ಬಳ್ಳಿ ಗದಗ, ಬಾಗಲಕೋಟೆ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪ್ರತಿ ಪ್ರತಿವರ್ಷವೂ ರಸ್ತೆ ಉದ್ದಕ್ಕೂ ಬರುವ ಪಾದಯಾತ್ರೆಗಳನ್ನು ನೋಡಿದರೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಉತ್ಸವವಿರಬೇಕು ಎಂದೆನಿಸುವುದು ಶ್ರೀ ಸ್ವಾಮಿಯ ಈ ಮಹೋತ್ಸವ ನೋಡಿದರೆ ಕಾಲ್ನಡಿಗೆಯಲ್ಲಿ ಬರುವ ಭಕ್ತರು ದಾರಿ ಉದ್ದಕ್ಕೂ ಭಜನೆ ಮೂಲಕ ದೇವರ ನಾಮ ಮಂತ್ರವನ್ನು ಬಾಯಲ್ಲಿ ಗುನುಗುತ್ತಾ ಕೊಟ್ಟೂರು ಕ್ಷೇತ್ರದ ಕಡೆ ಆಗಮಿಸುತ್ತಿರುವ ದೃಶ್ಯವೂ ಮನಮೋಹಕವಾಗಿರುತ್ತದೆ.

 ಅತಿಥಿಸತ್ಕಾರ ಎಂಬ ಭಾರತ ದೇಶದಲ್ಲಿ ಸಂಸ್ಕಾರವಾಗಿದೆ ಅತಿಥಿ ಸಂಸ್ಕಾರ ಎನ್ನುವ ಕೊಟ್ಟೂರಿನ ಪ್ರತಿಯೊಬ್ಬ ಜನರಲ್ಲಿ ಮನೆ ಮಾಡಿದೆ. ಅತಿಥಿ ಸಂಸ್ಕಾರ ಮಾಡುವ ಸ್ವಾಮಿಯ ಭಕ್ತರ ಸಂಖ್ಯೆ ವರ್ಷ ವರ್ಷಕ್ಕೆ ಗಣನೀಯವಾಗಿ ಏರುತ್ತಿದೆ. ಅನೇಕ ವರ್ಷಗಳಿಂದ ಇಲ್ಲಿನ ಜನರು ಕೊಟ್ಟೂರು ಎಂಟು ಕಿಲೋಮೀಟರ್ ಇರುವಂತೆ ಪಾದೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಉಚಿತ ಎಳನೀರು, ಕಲ್ಲಂಗಡಿ ಹಣ್ಣು,ಪಾನಕ ಮೋಸಂಬಿ ಬಾಳೆಹಣ್ಣು ಕಿತ್ತಲೆ ಊಟ ಪಾಯ್ಸ, ಮೊಸರನ್ನ, ವಿವಿಧ ಪ್ರಸಾದ ವ್ಯವಸ್ಥೆ ನಡೆಸುತ್ತಾರೆ. ಹಾಗೂ ಉಚಿತವಾಗಿ ವೈದ್ಯಕ ಸೇವೆ ಮೆಡಿಕಲ್ ಶಾಪ್ ಪಾದಯಾತ್ರೆಗಳ ಸೇವೆಗೆ ಟೋಂಕ ಕಟ್ಟಿ ನಿಲ್ಲುವ ಜನರ ನಿಸ್ವಾರ್ಥ ಭಕ್ತಿ ನೋಡಿದರೆ, ಇದು ನಿಜಕ್ಕೂ ಕೊಟ್ಟೂರೇಶ್ವರ ಸ್ವಾಮಿಯ ಪವಾಡವೇ ಸರಿ. ಶ್ರೀ ಗುರು ಕೊಟ್ಟೂರೇಶ್ವರ ಭಕ್ತಿಯಿಂದ ಸ್ಮರಿಸಿದರೆ ಸರ್ವ ಕಷ್ಟಗಳು ಪರಿಹಾರವಾಗುತ್ತದೆ ಎಂಬುದು ಲಕ್ಷಾಂತರ ಭಕ್ತರ ನಂಬಿಕೆಯಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ