ಪ್ರಾಣಿ ಪಕ್ಷಿಗಳ ದಾಹ ನೀಗಿಸಿ : ಮಂಜುನಾಥ್ ಬಿಜ್ಜಳ್

ಮಸ್ಕಿ : ಬೇಸಿಗೆಯ ಸಂದರ್ಭದಲ್ಲಿ ಪಕ್ಷಿಗಳ ನೀರಿನ ದಾಹವನ್ನು ನೀಗಿಸುವ ಉದ್ದೇಶದಿಂದ ಅರವಟ್ಟಿಗೆ ಕಟ್ಟುವ ಸಲುವಾಗಿ 141 ನೇ ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನದ ಮೂಲಕ ಮನೆ ಮನೆಗಳಲ್ಲಿ ಅರವಟ್ಟಿಗೆ ಕಟ್ಟುವ ಜಾಗೃತಿ ಅಭಿಯಾನಕ್ಕೆ ಮಸ್ಕಿಯ ಬಸವೇಶ್ವರ ನಗರದ ಪುಟ್ಟರಾಜ ಗವಾಯಿ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು.

ಇದೆ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದ ಶುಭೋದಯ ವಾಕಿಂಗ್ ಟೀಮ್ ಗೆಳೆಯರ ಬಳಗದ ಅಧ್ಯಕ್ಷರಾದ ಮಂಜುನಾಥ್ ಬಿಜ್ಜಳ್ ಅವರು ಬೇಸಿಗೆ ಆರಂಭವಾಗಿದೆ. ಈ ಸಂಧರ್ಭದಲ್ಲಿ ನೀರಿನ ಸಮಸ್ಯೆ ಎನ್ನುವುದು ಸಾಮಾನ್ಯ ಆಗಿರುತ್ತದೆ. ಮನುಷ್ಯರು ತಮ್ಮ ನೀರಿನ ದಾಹ ಹೇಗೋ ನಿವಾರಣೆ ಮಾಡಿಕೊಂಡು ಜೀವಿಸುತ್ತಾರೆ. ಆದರೆ ಪ್ರಾಣಿ ಪಕ್ಷಿಗಳಿಗೆ ಇದು ಸ್ವಲ್ಪ ಕಷ್ಟವಾಗುತ್ತೆ. ಪ್ರಾಣಿ ಪಕ್ಷಿಗಳ ದಾಹ ನೀಗಿಸುವದು ಮತ್ತು ಅವುಗಳನ್ನು ರಕ್ಷಣೆ ಮಾಡುವದು ನಮ್ಮೆಲ್ಲರ ಹೊಣೆ ಆಗಿದೆ. ಆದ್ದರಿಂದ ಎಲ್ಲರೂ ದಯವಿಟ್ಟು ತಮ್ಮ ತಮ್ಮ ಮನೆಗಳ ಮೇಲೆ ನೀರು ಹಾಗೂ ಆಹಾರವನ್ನು ಪೂರೈಕೆ ಮಾಡಿ ಎಂದರು. ಮತ್ತು ಈ ಕಾರ್ಯಕ್ಕೆ ಅಭಿಯಾನ ಆರಂಭಿಸಿದ ಅಭಿನಂದನ್ ಸಂಸ್ಥೆಯ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಶುಭವಾಗಲಿ ಎಂದು ಹರಸಿದರು.

ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಹೂವಿನಭಾವಿ, ಭರತ್ ದೇಶಮುಖ್, ವಿರೇಶ ಕಮತರ್, ಪರಶುರಾಮ ಕೊಡಗುಂಟಿ, ಮಲ್ಲಿಕಾರ್ಜುನ ಉದ್ಬಾಳ, ಸೋಮಶೇಖರ್ ಸಿರವಾರ ಮಠ, ಸಿದ್ಧಾರೆಡ್ಡಿ ಗಿಣಿವಾರ, ಮಹಾಂತೇಶ ಎಚ್, ರಾಮಣ್ಣ ಹಂಪರಗುಂದಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ