*ಬೆಸ್ಟ್ ಪಬ್ಲಿಕ್ ಶಾಲೆ ಸಾಮಾಜಿಕ ಕಳಕಳಿಯುಳ್ಳ ಶಾಲೆಯಾಗಿದೆ:ದಂಡಗುಂಡಪ್ಪ ತಾತ*

*ಮಸ್ಕಿ* ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ಇರುವ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಜಂಗಮರಹಳ್ಳಿಯ ದಂಡಗುಂಡಪ್ಪ ತಾತನವರು ಉದ್ಘಾಟಿಸಿ ನಂತರ ಮಾತನಾಡುತ್ತಾ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಅಕ್ಷರ ಕಲಿಸುವ ಕೆಲಸ ಮಾಡುವ ಜೊತೆಗೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಅನೇಕ ಮಹನಿಯರನ್ನು ಗುರುತಿಸುವ ಜವಬ್ದಾರಿ ಮಾಡುತ್ತಿರುವುದು ಹೆಮ್ಮೆಯ ವಿಷಯ, ಇಂದು ಈ ಒಂದು ವೇದಿಕೆಯಲ್ಲಿ ನಲವತ್ತಕ್ಕೂ ಹೆಣ್ಣು ಮಕ್ಕಳು ಹಾಗೂ ಗ್ರಾಮ ಪಂಚಾಯತಿಯ ಡಿ ದರ್ಜೆಯ ನೌಕರರನ್ನು ಸನ್ಮಾನಿಸಿ ಸತ್ಕರಿಸುವ ಗುರುತರ ಕೆಲಸ ಹೀಗಾಗಿ ಶ್ರೇಷ್ಠವಾಗಿದೆ ಹೀಗಾಗಿ ಯಾವಾಗಲೂ ಬೆಸ್ಟ್ ಪಬ್ಲಿಕ್ ಶಾಲೆ ಸಮಾಜದ ನಡುವೆ ಸಹಾಯ ಸಹಕಾರ ಮಾಡುವ ದೊಡ್ಡ ಸಂಸ್ಥೆಯಾಗಿದೆ ಎಂದು ದಂಡಗುಂಡಪ್ಪ ತಾತ ಜಂಗಮರಹಳ್ಳಿ ಹೇಳಿದರು. ಹಾಗೆ ಕಳೆದ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಾಲಕರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಗದ್ದೆಪ್ಪ, ಉಪಾಧ್ಯಕ್ಷ ಶೇಖರಪ್ಪ ಯದ್ದಲದಿನ್ನಿ, ಸುಭಾಷ್ ಸಿಂಗ್, ಬಸವರಾಜ ವಡಗೇರಿ, ರವಿ ದೇಸಾಯಿ, ಪತ್ರಕರ್ತರಾದ ಹುಸೇನಬಾಷ, ಸಿದ್ದಾರ್ಥ ಪಾಟೀಲ್, ಸಿದ್ದಲಿಂಗಪ್ಪ, ರವಿಕುಮಾರ್, ಕೃಷ್ಣಮೂರ್ತಿ, ಕುಮಾರ ಮಸ್ಕಿ, ದೇವೆಂದ್ರ, ಕುಪ್ಪಣ್ಣ, ಇನ್ನಿತರರು ಇದ್ದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ