ಕಠಿಣ ಕಾನೂನು ಕ್ರಮ ಜರುಗಿಸಲು ಅಂಗವಿಕಲರ ಸಂಘ ಒತ್ತಾಯ



ಮಸ್ಕಿ : ಲಿಂಗಸ್ಗೂರು ನಗರದ ಸಹಾಯಕ ಆಯುಕ್ತರ ಕಚೇರಿ ಮುಂಭಾಗ ಸಹಾಯಕ ಆಯುಕ್ತರು ಲಿಂಗಸ್ಗೂರು  ಇವರ ಮುಖಾಂತರ ಪೋಲೀಸ್ ವರಿಷ್ಠಾಧಿಕಾರಿಗಳು ರಾಯಚೂರು ಇವರಿಗೆ ಅಂಗವಿಕಲರ ತಾಲೂಕ ಸಮಿತಿ ವತಿಯಿಂದ ಅನಗವಿಕಲ ಮಹಿಳೆಗೆ ಮಾರಣಾಂತಿಕ ಹಲ್ಲೆ ಮತ್ತು ಅತ್ಯಾಚಾರ ಮಾಡಲು ಪ್ರಯತ್ನಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಶುಕ್ರವಾರ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಒತ್ತಾಯಿಸಿತು.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮ್ಯಾದರಾಳ ತಾಂಡಾದ ಅಂಗವಿಕಲ ಕುಟುಂಬದ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಮತ್ತು ಅತ್ಯಾಚಾರ ಮಾಡಲು ಪ್ರಯತ್ನಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.

 ಸಂಬಂದಿಸಿದಂತೆ ಈ ಮೂಲಕ ತಮ್ಮ ಮಸ್ಕಿ ತಾಲೂಕಿನ ಮ್ಯಾದರಾಳ ತಾಂಡಾದಲ್ಲಿ ದಿನಾಂಕ 18-02-2024 ರಂದು ಬೆಳಗ್ಗೆ ಸುಮಾರು 9-30 ಗಂಟೆಗೆ ಹಾಡ ಹಗಲಿನಲ್ಲಿಯೇ ಅಂಗವಿಕಲ ದಂಪತಿಗಳಾದ ಕಂಟೆಪ್ಪ ಮತ್ತು ಕಾಳಮ್ಮರ ಮಗಳಾದ ಶಾರದ ಒಬ್ಬಳೆ ಇರುವುದನ್ನು ಗುರುತಿಸಿಕೊಂಡು ಸುಮಾರು 7-8 ಮಂದಿ ಆಕೆಯನ್ನು ಅತ್ಯಾಚಾರ ಎಸಗಲು ಮುಂದಾಗಿದ್ದು, ಅತ್ಯಾಚಾರ ವಿರೋಧಿಸಿದಾಗ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಆಗಷ್ಟೇ ಬಂದು ಬಿಡಿಸಲು ಯತ್ನಿಸಿದ ಅಂಗವಿಕಲೆ ತಾಯಿ ಕಾಳಮ್ಮ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಅಪರಾಧ ಸಂಖ್ಯೆ 0020/2024 ಮೂಲಕ  IPC-1860 ಕಾಯ್ದೆಯ ವಿವಿಧ ಕಾಲಂ ಗಳಾದ (511,504, 143, 147, 149, 376, 448, 307, 324 )ಅಡಿಯಲ್ಲಿ 

ಪ್ರಥಮ ವರ್ತಮಾನ ವರದಿ ದಾಖಲಿಸಿರುತ್ತಾರೆ. FIR ದಾಖಲಿಸಿ 12 ದಿನಗಳಾದರು ಇಲ್ಲಿಯವರೆಗೆ ಅದೇ ಗ್ರಾಮದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಪರಾಧಿಗಳನ್ನು ಠಾಣಾಧಿಕಾರಿಗಳು ಬಂಧಿಸಿರುವುದಿಲ್ಲ. ಜಿಲ್ಲೆಯ ಎಲ್ಲೆಡೆ ಅಂಗವಿಕಲರ  ದೈಹಿಕ ದೌರ್ಬಲ್ಯ ಹಾಗೂ ಆರ್ಥಿಕ ದುರ್ಬಲತೆಯನ್ನು ಕಾಮುಕರು ದುರ್ಬಳಕೆ ಮಾಡಿಕೊಳ್ಳುತ್ತೀದ್ದು, ಜಿಲ್ಲೆಯಲ್ಲಿ ಅಂಗವಿಕಲರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ.ಆದ್ದರಿಂದ ಜಿಲ್ಲೆಯ ಅಂಗವಿಕಲರ ರಕ್ಷಕರಾದ ತಾವುಗಳು ಶೀಘ್ರದಲ್ಲಿ ಸದರಿ ಪ್ರಕರಣದ ಎಲ್ಲಾ ಅಪರಾಧಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಿ ಹಾಗೂ ಅನ್ಯಾಯಕೊಳ್ಳಗಾದ ಅಂಗವಿಕಲ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಆದೇಶಿಸಬೇಕು ಹಾಗೂ ನೊಂದ ವಿಕಲಚೇತನರ ಕುಟುಂಬಕ್ಕೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಜಿಲ್ಲೆಯ ಅಂಗವಿಕಲರ ಪರವಾಗಿ ಸಹಾಯಕ ಆಯುಕ್ತರು ಲಿಂಗಸ್ಗೂರು  ಇವರ ಮುಖಾಂತರ ಪೋಲೀಸ್ ವರಿಷ್ಠಾಧಿಕಾರಿಗಳು ರಾಯಚೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸುರೇಶ್ ಪಿ. ಭಂಡಾರಿ ಮುದಗಲ್ ರಾಜ್ಯ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಅಸ್ಕಿಹಾಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಅಜಮಲ್ ಅಹಮದ್ ಮುದುಗಲ್ ತಾಲೂಕ ಅಧ್ಯಕ್ಷರು, ವಿರುಪಾಕ್ಷಯ್ಯ ಕಾಳಾಪುರ್, ಅಮರೇಶ್ ಪಾಟೀಲ್, ರೋಸ್ ಮೇರಿ, ದುರ್ಗರಾಜ, ಶಿವಕುಮಾರ್, ಪರಶುರಾಮ, ಅಬ್ದುಲ್ ಸಾಬ್ ಅಂಕುಶದೊಡ್ಡಿ, ಕಾಡಪ್ಪ,ಸಂಗಮೇಶ್ ಸೇರಿದಂತೆ ಅಂಗವಿಕಲ ತಾಲೂಕ ಸಮಿತಿಯ ಸದಸ್ಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ