ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಸಂಕುಲ ಉಳಿಸುವ ಸದುದ್ದೇಶ ಹೊಂದಿರುವ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ : ಆದಪ್ಪ
ಮಸ್ಕಿ : ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಘಟಕದ ಆವರಣದಲ್ಲಿ ಸಾರಿಗೆ ಇಲಾಖೆ ಹಾಗೂ ವನಸಿರಿ ಫೌಂಡೇಶನ್
ಮಸ್ಕಿ ತಾಲೂಕ ಘಟಕದ ಸಹಯೋಗದೊಂದಿಗೆ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅಭಿಯಾನ ಕಾರ್ಯಕ್ರಮವನ್ನು ಮಸ್ಕಿ ಸಾರಿಗೆ ನಿಗಮ ಘಟಕದ ವ್ಯವಸ್ಥಾಪಕರಾದ ಆದಪ್ಪ ಮಣ್ಣಿನ ಅರವಟ್ಟಿಗೆಗಳಿಗೆ ಕಾಳು ನೀರು ಹಾಕಿ ಚಾಲನೆ ನೀಡಿ ಮಾತನಾಡಿ ಮಸ್ಕಿ ವನಸಿರಿ ಫೌಂಡೇಶನ್ ಘಟಕದ ವತಿಯಿಂದ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳನ್ನು ಬದುಕಿಸುವ ಸದುದ್ದೇಶದಿಂದ ಪಕ್ಷಿಗಳಿಗೆ ಬದುಕಲು ಧಾನ್ಯಗಳು ಮತ್ತು ನೀರನ್ನು ಒದಗಿಸುವ ಕಾರ್ಯ ತುಂಬಾ ಶ್ಲಾಘನೀಯ.ನಮ್ಮ ಸಾರಿಗೆ ಘಟಕದ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇನೆ.ಜೊತೆಗೆ ಇಂತಹ ಒಂದು ಮಹತ್ವಾಕಾಂಕ್ಷೆಯ ಕಾರ್ಯದಲ್ಲಿ ಸಾರ್ವಜನಿಕರು ಭಾಗಿಯಾಗಿ ಪಕ್ಷಿ ಸಂಕುಲವನ್ನು ಮತ್ತು ವನಸಿರಿಯನ್ನು ಉಳಿಸಿ ಬೆಳಸುವ ಕಾರ್ಯವನ್ನು ನಾವುಗಳೆಲ್ಲರೂ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ವನಸಿರಿ ಫೌಂಡೇಶನ್ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರ,ಆದಪ್ಪ ಘಟಕ ವ್ಯವಸ್ಥಾಪಕರು,ಸಂಗಮೇಶ, ಪಾರು ಪತ್ತೇಗಾರರು ಸೋಮಶೇಖರ್, ಪಾಳೇಮುಖ್ಯಸ್ಥರು ನಾಗರಾಜ ಆದಪ್ಪ ಚಾಲಕ ಮಲ್ಲಪ್ಪ ಕಿರಿಯ ಸಹಾಯಕ
ಶರೀಫ್ ಚಾಲಕರು,ರಮೇಶ್ ಮರಡ್ಡಿ ಗಂಗಾಧರ್ ಪತ್ತಾರ್ ಹಾಗೂ ಸಾರಿಗೆ ಘಟಕದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು,ವನಸಿರಿ ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ