ಮಸ್ಕಿ ಕೆರೆಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಭೇಟಿ
ಮಸ್ಕಿ : ಕುಡಿಯುವ ನೀರಿನ ಕೆರೆಗೆ ನೀರು ತುಂಬುವ ಕಾರ್ಯವನ್ನು ವೀಕ್ಷಣೆ ಮಾಡಿ ಸಾರ್ವಜನಿಕರಿಗೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಎಲ್ಲಾ ವಾಟರ್ ಮ್ಯಾನಗಳಿಗೆ ಯೋಜನೆ ರೂಪಿಸಿ ನೀರು ಪೂರೈಸಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮುಖ್ಯಾಧಿಕಾರಿಗೆ ಸೂಚಿಸಿದರು.
ಶನಿವಾರ ಪ್ರತಾಪ ಗೌಡ ಪಾಟೀಲ್ ಅವರು ಪುರಸಭೆಯ ಬಿಜೆಪಿ ಸದಸ್ಯರ ನಿಯೋಗದೊಂದಿಗೆ ಪಟ್ಟಣದಲ್ಲಿನ ಕುಡಿಯುವ ನೀರಿನ ಕೆರೆ ಹಾಗೂ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಕಾಲುವೆಯಲ್ಲಿ ನೀರು ಬಂದ್ ಆಗುವುದರೊಳಗಾಗಿ ಕೆರೆ ಭರ್ತಿ ಮಾಡಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು, ಈಗ ಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ಮಿತವಾಗಿ ಮಸ್ಕಿ ಪಟ್ಟಣದ ಎಲ್ಲ ಸಾರ್ವಜನಿಕರು ಬಳಸುವ ಮೂಲಕ ಬರುವ ದಿನಗಳಲ್ಲಿ ತೊಂದರೆಯಾಗದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಎಸ್.ಬಿ. ತೋಡಕರ್ ಅವರಿಗೆ ತಿಳಿಸಿದರು.
ಕೆರೆಯಲ್ಲಿ ಸಣ್ಣಪುಟ್ಟ ಸೋರಿಕೆ ಇದ್ದರೆ ಸರಿಪಡಿಸಿಕೊಳ್ಳಿ ಎಂದರು. ಪುರಸಭೆಯ ವಾರ್ಡ್ ಗಳಿಗೆ ಸರಿಯಾಗಿ ನೀರು ಕೊಡುವಂತೆ ಸಿಬ್ಬಂದಿಗೆ ಸೂಚಿಸಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಬಿ.ಎಚ್. ದಿವಟರ್, ಅಪ್ಪಾಜಿಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ,ಡಾ. ಪಂಚಾಕ್ಷರಯ್ಯ ಕಂಬಳಿಮಠ ಯಲ್ಲೋಜಿ ರಾವ್ ಕೋರೆಕರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ಉದ್ಬಾಳ, ಬಸವರಾಜ ಗುಡಿಹಾಳ, ಜಿ. ವೆಂಕಟೇಶ ನಾಯಕ, ಅಭಿಜಿತ್ ಮಾಲಿ ಪಾಟೀಲ್ ಮೌನೇಶ್ ನಾಯಕ್, ಆದಯ್ಯ ಸ್ವಾಮಿ ವೀರೇಶ್ ಪಾಟೀಲ್, ಅಶೋಕ್ ಠಾಕೂರು, ಲಕ್ಷ್ಮೀನಾರಾಯಣ ಶೆಟ್ಟಿ ಸಿದ್ದನಗೌಡ, ಮಂಜುನಾಥ ಮಾಟೂರು, ವೆಂಕಟೆರೆಡ್ಡಿ ಹೂವಿನಭಾವಿ, ಸತ್ಯನಾರಾಯಣ ಇಲ್ಲೂರು ಪುರಸಭೆ ಸದಸ್ಯರಾದ , ಮೌನೇಶ ಮುರಾರಿ, ಮಲ್ಲಯ್ಯ ಅಂಬಾಡಿ, ಮಲ್ಲಣ್ಣ ಬ್ಯಾಳಿ, ಭರತಶೇಠ್, ರಮೇಶ ಗುಡಿಸಲಿ, ಮಂಜುನಾಥ ನಂದ್ಯಾಳ , ಡಾ. ಸಂತೋಷ, ಮಸೂದ್ ಪಾಶ ಪ್ರಶಾಂತ್ ಮುರಾರಿ ಹುಲಿಗೇಶ್ ಮುರಾರಿ ಬಸವರಾಜ ಕೊಠಾರಿ ಈರೋಜಿ ಕೊರೇಕರ್ ಮುಖ್ಯಾಧಿಕಾರಿ ಎಸ್.ಬಿ. ತೋಡಕರ್, ಎಂಜನಿಯರ್ ಮೀನಾಕ್ಷಿ ಸೇರಿದಂತೆ ಪುರಸಭೆಯಲ್ಲಿನ ಬಿಜೆಪಿ ಸದಸ್ಯರು ಮುಖಂಡರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ