ಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಲು ರೈತರ ಒತ್ತಾಯ

ಮಸ್ಕಿ : ತಾಲೂಕಿನ ಸುಮಾರು 10622 ಹೆಕ್ಟೇರ್ ನಲ್ಲಿ ರೈತರು ಜೋಳ ಹಾಗೂ ಹೈಬ್ರಿಡ್ಡ ಜೋಳ ಬೆಳೆದಿದ್ದು, ಅಂದಾಜು ಒಂದು ಹೆಕ್ಟೇರ್ ಗೆ 43.75 ಕ್ವಿಂಟಾಲ್ನಷ್ಟು ಫಸಲು ಬೆಳೆದಿದ್ದು.

ಕೆಲ ರೈತರು ಕಡಿಮೆ ಬೆಲೆ ಆದರೂ ಪರವಾಗಿಲ್ಲ ಮೊದಲು ಮಾರಾಟವಾಗಲಿ ಎಂಬ ಉದ್ದೇಶದಿಂದ ಈಗಾಗಲೇ ಮಾರಾಟ ಮಾಡಿದ್ದಾರೆ. ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಿದರೆ ಮಾರಾಟಕ್ಕೆ ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯ.

ಖರೀದಿ ಕೇಂದ್ರಕ್ಕೆ ಬೇಡಿಕೆ ಮಸ್ಕಿ ತಾಲೂಕಿನ ವ್ಯಾಪ್ತಿಯ ಖರೀದಿ ಕೇಂದ್ರ ಗಳನ್ನು ತೆರೆದರೆ ರೈತರಿಗೆ ಅನುಕೂಲ ವಾಗುತ್ತದೆ ಎಂಬ ಉದ್ಧೇಶದಿಂದ ಪ್ರತಿ ಭಟನೆ ಮಾಡಿ ಸರಕಾರದ ಗಮನ ಸೆಳೆಯಲು ಮನವಿ ಪತ್ರವನ್ನು ಶನಿವಾರ ರಾಯಚೂರು ಆಪರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

ನಂತರ ಮಾತನಾಡಿದ ರೈತ ಬಸವ ಲಿಂಗ ಹೂವಿನ ಭಾವಿ, ಮಸ್ಕಿ ತಾಲೂಕಿನ ವ್ಯಾಪ್ತಿಯ ಜೋಳ ಕೇಂದ್ರಗಳನ್ನು ತೆರೆದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಈಗಾಗಲೇ ಬೇರೆ ಬೇರೆ ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ ಆದರೆ ಮಸ್ಕಿ ತಾಲೂಕಿಗೆ ಇನ್ನು ಜೋಳದ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ ಯಾಕೆ ತಾರತಮ್ಯ ಮಾಡುತ್ತಿದ್ದಾರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೊತ್ತಾಗುತ್ತ ಇಲ್ಲ ಇನ್ನು ಮುಂದೆ ಆದರೂ ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಜೋಳ ಖರೀದಿ ಕೇಂದ್ರ ಮಾಡುವವರು ಕೇಂದ್ರ ಸರಕಾರ

ನಿಗದಿ ಮಾಡಿರುವ ಬೆಲೆ ನೀಡಿ ಖರೀದಿ ಮಾಡಿದರೆ ರೈತರಿಗೆ ನಷ್ಟ ಆಗುವುದಿಲ್ಲ. ಜೋಳವನ್ನು ರೈತರಿಂದ ಖರೀದಿ ಮಾಡಿ ರೈತರಿಗೆ ನೀಡುವುದರಿಂದ ರೈತರಿಗೆ ನಷ್ಟ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ವೆಂಕಟರಾಯ ಗೌಡ ಪಾಟೀಲ್, ಗೋವಿಂದ ರೆಡ್ಡಿ ಪಾಟೀಲ್, ಅಮರೇಗೌಡ ಪಾಟೀಲ್, ಶರಣಪ್ಪ ಕರೆಕಲ್, ವೆಂಕಟೇಶ್ ಪಾಟೀ ಲ್, ಶರಣಪ್ಪ ಗೌಡ, ಈಶಪ್ಪ ಕಂದಗಲ್, ಪಂಪಾಪತಿ ಗುಂಡದ, ಶಿವರಾಜ ಕರೆಕಲ್ ಹಾಗೂ ಇತರರು ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ