ಎಸ್.ಎ.ವಿ.ಟಿ ಹಾಗೂ ಪಾಲಿಟೆಕ್ನಿಕ್ ಕಾಲೇಜ್ ಗಳ ಕೊಠಡಿಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ ಶಾಸಕ - ಡಾ. ಶ್ರೀನಿವಾಸ್. ಎನ್. ಟಿ.
ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೆ ಹೆಚ್ಚು ವರಿ ಕೊಠಡಿಗಳ ನಿರ್ಮಾಣ ಅಂಗವಾಗಿ ಮಾನ್ಯಶಾಸಕರು ಶನಿವಾರ ರಂದು " ಭೂಮಿಪೂಜೆ " ನೆರವೇರಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೋಧನ ವಿಷಯ ವಾಗಿ ಮಾತನಾಡಿದರು. ಹಾಗೂ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಹೊಗಿ ವಿದ್ಯಾಭ್ಯಾಸ ಮಾಡಲು ಹೋಗುವವರು ನಮ್ಮ ಕ್ಷೆತ್ರದ ವಿದ್ಯಾರ್ಥಿಗಳು ನಮ್ಮ ಕ್ಷೆತ್ರದಲ್ಲಿ ಓದಲಿ ಎನ್ನುವ ಉದ್ದೇಶದಿಂದ ಕಾಲೇಜುಗಳಿಗೆ ಬೇಕಾಗುವ ಬೋಧನಾ ಕೊಠಡಿಗಳನ್ನು ಒದಗಿಸಿ ಕೊಡಲು ಈ ದಿನ ಬೆಳಗಿನ ಜಾವ ಮಾನ್ಯ ಉನ್ನತ ಶಿಕ್ಷಣ ಸಚಿವರ ಜೊತೆಗೆ ಚರ್ಚಿಸಿದಾಗ ಅವರು ಸಂತಸ ವ್ಯಕ್ತಪಡಿಸಿ ಶುಭಾಶಯಗಳು ತಿಳಿಸಿದ್ದಾರೆ ಎಂದರು.
ಪಟ್ಟಣದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಕಾಲ್ನಡಿಗೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ, ಊಟ , ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೆಲವು ಭಾಗದಲ್ಲಿ ಕಾಂಪೌಂಡ್ ನಿರ್ಮಾಣ ಕುಂಠಿತವಾಗಿರುವುದಕ್ಕೆ ಭೂಮಿ ಸಮಸ್ಯೆಯ ತೊಡಕು ಆಗಿರುವುದನ್ನು ಆಲಿಸಿ ಕೂಡಲೇ ಅಧಿಕಾರಿಗಳಿಗೆ ಗಮನಕ್ಕೆ ತಂದು ಸರ್ವೇ ಮಾಡಿಕೊಡಲು ಹೇಳಿದರು.
ಈ ಸಂದರ್ಭದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರು ಪಕ್ಷದ ಕಾರ್ಯ ಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ