ಕುಡಿಯುವ ನೀರಿಗಾಗಿ ಕಂದಗಲ್ಲು ಗ್ರಾಮ ಪಂಚಾಯಿತಿ ಗ್ರಾಮಸ್ಥರು ಪರದಾಟ
ಕೊಟ್ಟೂರು: ತಾಲ್ಲೂಕಿನ ಕಂದಗಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಜನಪ್ರತಿನಿಧಿಗಳು ಹಾಗೂ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಜನರು ಕುಡಿಯುವ ನೀರಿಗಾಗಿ ಸರತಿ ಸಾಲಿನಲ್ಲಿ ನಿಂತು ನೀರು ಹಿಡಯಬೇಕಾಗಿದೆ. ಗ್ರಾಮದ ಜನತೆ ಕೆಲಸಗಳನ್ನು ಬಿಟ್ಟು ನೀರು ಹಿಡಿಯುವಂತಹ ಪರಿಸ್ಥಿತಿ ದಿನ ನಿತ್ಯ ಕಾಣಬಹುದಾಗಿದೆ.
ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದರೂ ಸ್ಥಳೀಯ ಆಡಳಿತದ ನಿರ್ಲಕ್ಷತನದಿಂದ ಜನತೆ ಯೋಜನೆಗಳಿಂದ ವಂಚಿತರಾಗುವಂತಾಗಿದೆ ಎಂದು ತಿಮ್ಮಲಾಪುರ ಕಲ್ಯಾಣಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ನಳಗಳಲ್ಲಿ ಸಮರ್ಪಕವಾಗಿ ನೀರಿನ ಪೂರೈಕೆಯಾಗದ ಕಾರಣ ಜನತೆ ಗ್ರಾಮದ ಸಮೀಪದಲ್ಲಿರುವ ಜಮೀನುಗಳಲ್ಲಿರುವ ಕೊಳವೆ ಬಾವಿಗಳಿಂದ ಸುಡುವ ಬಿಸಿಲಿನಲ್ಲಿ ನೀರು ತಂದು ಜೀವನ ಮಾಡುವಂತಾಗಿದೆ ಎಂದು ಗ್ರಾಮದ ಬಸಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.
ತಿಮ್ಮಲಾಪುರದ ಸಮುದಾಯ ಾರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿನ ಅಭಾವದಿಂದ ರೋಗಿಗಳು ಹಾಗೂ ಚಿಕಿತ್ಸೆಗೆ ಬರುವವರು ದಾಹದಿಂದ ಬಳಲುವಂತಹ ಪರಿಸ್ಥಿತಿ ಕಂಡರೂ ಗ್ರಾಮ ಪಂಚಾಯ್ತಿ ನಿರ್ಲಕ್ಷತನ ತೋರುತ್ತದೆ ಎಂದು ಚಿಕಿತ್ಸೆಗೆ ಬಂದ ಬಸವರಾಜ್ ಅಸಮಧಾನ ವ್ಯಕ್ತಪಡಿಸಿದರು.
ಕೂಡಲೇ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೂಡಲೇ ನೀರು ಪೂರೈಕೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟಕ್ಕೆ ಇಳಿಯುವುದಾಗಿ ಗ್ರಾಮಸ್ಥರು ಹಾಗೂ ಸಿಪಿಐ ತಾಲೂಕು ಕಾರ್ಯದರ್ಶಿ ಕೆ ರೇಣುಕಮ್ಮ ಎಚ್ಚರಿಸಿದ್ದಾರೆ.
ಕೊಟ್ -1
ಕೊಟ್ಟೂರು ತಾಲ್ಲೂಕಿನ ಕಂದಗಲ್ಲು ಗ್ರಾಮದಲ್ಲಿ ಜನತೆ ನೀರಿಗಾಗಿ ಸರತಿ ಸಾಲಿನಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದು ಕಲ್ಯಾಣಮ್ಮ ತಿಮ್ಮಲಾಪುರ ಇವರು ತಾಲೂಕು ಮಹಿಳಾ ಮುಖಂಡರು ಪತ್ರಿಕೆಗೆ ಹೇಳಿಕೆ ನೀಡಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ